• Home
  • »
  • News
  • »
  • trend
  • »
  • Viral Video: ಅಮ್ಮನ ಜೊತೆ ಸಿಂಹದ ಮರಿಯ ಕಣ್ಣಾಮುಚ್ಚಾಲೆ! ನೋಡಿ ಕ್ಯೂಟ್‌ ವಿಡಿಯೋ

Viral Video: ಅಮ್ಮನ ಜೊತೆ ಸಿಂಹದ ಮರಿಯ ಕಣ್ಣಾಮುಚ್ಚಾಲೆ! ನೋಡಿ ಕ್ಯೂಟ್‌ ವಿಡಿಯೋ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Animal Video: ಸಾಮಾಜಿಕ ಜಾಲತಾಣಗಳಲ್ಲಿ ಮನರಂಜನೆಗೆ ಕೊರತೆ ಇಲ್ಲ ಬಿಡಿ. ದಿನಕ್ಕೊಂದು ವಿಡಿಯೋ ವೈರಲ್ ಆಗ್ತಾ ಇರುತ್ತೆ. ಪ್ರಾಣಿಗಳ ವಿಡಿಯೋ ನೋಡೋಕೆ ಇನ್ನು ಮಜವಾಗಿರುತ್ತದೆ. ಇದೀಗ ಅಂತದ್ದೇ ಒಂದು ವಿಡಿಯೋ ಸಖತ್ ವೈರಲ್ ಆಗ್ತಾ ಇದೆ. ನೀವು ನೊಡಿ ಎಂಜಾಯ್ ಮಾಡಿ.

  • Share this:

ಪ್ರಾಣಿಗಳು (Animal) ಒಳ್ಳೆಯ ಮೂಡ್​ನಲ್ಲಿದ್ದಾಗ ಬಗೆ ಬಗೆಯ ಆಟ ಆಡುತ್ವೆ. ಅದರಲ್ಲೂ ತಾಯಿ (Mother) ಜೊತೆ ಅವುಗಳ ಮರಿ ಇದ್ದಾಗಲಂತೂ ಅವುಗಳ ಆಟ ಬಲು ಜೋರಾಗಿ ಇರುತ್ತೆ. ಮರಿಗಳ ಜೊತೆ ಅವು ಆಟ ಆಡೋದನ್ನ ನೋಡೋದು ತುಂಬಾನೇ ಚೆನ್ನಾಗಿರುತ್ತೆ. ಮುಗ್ದವಾಗಿ ತನಗೆ ಬಂದ ಹಾಗೆ ಆಟ ಆಡುವ ರೀತಿ ಎಂಥವರಿಗೂ ಇಷ್ಟವಾಗುತ್ತೆ. ಇಲ್ಲೊಂದು ಸಿಂಹದ ಪುಟ್ಟ ಮರಿ ಅಮ್ಮನ ಜೊತೆ ಕಣ್ಣಾಮುಚ್ಚಾಲೆ ಆಟ ಆಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ವಿಡಿಯೋವನ್ನು Yoda4ever ಎಂಬುವವರು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ ನಲ್ಲಿ ಶೇರ್‌ ಮಾಡಿದ್ದು ಇದು 2 ಮಿಲಿಯನ್ (Million)‌ ಗೂ ಹೆಚ್ಚು ವೀಕ್ಷಣೆ ಕಂಡಿದೆ. ಪ್ರಾಣಿಗಳ ತುಂಟಾಟದ ಈ ಕ್ಯೂಟ್‌ ವಿಡಿಯೋ (Video) ನೆಟ್ಟಿಗರ ಮನಸೆಳೆದಿದೆ.


ವೈರಲ್‌ ಆಗಿರೋ ವಿಡಿಯೋದಲ್ಲೇನಿದೆ?


ಈ ಸಿಂಹ ಹಾಗೂ ಅದರ ಮರಿಗಳ ಆಟದ ಮುದ್ದಾದ ವಿಡಿಯೋ ನೆಟ್ಟಿಗರ ಮನ ಸೆಳೆದಿದೆ. ವಿಡಿಯೋದಲ್ಲಿ ಸಿಂಹವೊಂದು ಸುಮ್ಮನೆ ಮಲಗಿರುತ್ತೆ. ಅದರ ಮುಂದೆ ಹಾಗೂ ಹಿಂದೆ ಎರಡು ಪುಟ್ಟ ಪುಟ್ಟ ಸಿಂಹದ ಮರಿಗಳು ಇರುತ್ವೆ.


ಆಗ ಸಿಂಹದ ಹಿಂದಿರುವ ಪುಟ್ಟ ಮರಿ ಅಮ್ಮನ ಹತ್ತಿರ ನಿಧಾನವಾಗಿ ಬರುತ್ತೆ. ಹಾಗೇ ಬಂದು ಫಟ್ಟನೆ ಸಿಂಹವನ್ನು ಮುಟ್ಟುತ್ತೆ. ಇದರ ಕಲ್ಪನೆಯೇ ಇಲ್ಲದೇ ಅತ್ತಿತ್ತ ನೋಡುತ್ತಿದ್ದ ಸಿಂಹ ಒಮ್ಮೆಲೇ ಗಾಬರಿ ಬಿದ್ದು ಎದ್ದು ನಿಂತು ಬಿಡುತ್ತೆ !


ಇದೇ ವೇಳೆ ಎದುರಿನಿಂದ ಕೂಡ ಮತ್ತೊಂದು ಚಿಕ್ಕ ಮರಿ ಅಮ್ಮನೆಡೆಗೆ ಮೆಲ್ಲನೆ ನಡೆದುಕೊಂಡು ಬರುತ್ತಿತ್ತು. ಆದ್ರೆ ಅಮ್ಮ ಹೆದರಿ ಎದ್ದು ನಿಂತಿದ್ದನ್ನು ನೋಡಿ ಅದೂ ಕೂಡ ಭಯಬಿದ್ದಿದ್ದು ಸುಳ್ಳಲ್ಲ.


ಕ್ಯೂಟ್‌ ವಿಡಿಯೋಕ್ಕೆ ಕಾಮೆಂಟ್‌ ಗಳ ಮಹಾಪೂರ!


ಈ ವೈರಲ್‌ ವಿಡಿಯೋಕ್ಕೆ ನೂರಾರು ಕಾಮೆಂಟ್‌ ಬಂದಿದ್ದು ಒಬ್ಬ, ಮಕ್ಕಳು ಯಾವುದೇ ಜಾತಿಯ ಹೊರತಾಗಿಯೂ ಮಕ್ಕಳಾಗುತ್ತಾರೆ ಎಂದಿದ್ದಾರೆ. ಇನ್ನೊಬ್ಬ ಮಕ್ಕಳು ನಮ್ಮನ್ನು ಹೆದರಿಸಿದಾಗ ನಾವೆಲ್ಲರೂ ಒಂದೇ ರೀತಿಯ ಪ್ರತಿಕ್ರಿಯೆ ನೀಡುತ್ತೇವೆ. ಒಮ್ಮೆ ಕೋಪ ಮಾಡಿಕೊಂಡರೂ ನಂತರ ತಣ್ಣಗಾಗುತ್ತೇವೆ ಎಂದಿದ್ದಾರೆ.


ಇದನ್ನೂ ಓದಿ: ನೀವು ಪ್ರಾಣಿ ಪ್ರಿಯರೇ? ಹಾಗಾದರೆ ಈ ಕ್ಷೇತ್ರ ನಿಮಗೆ ಸೂಕ್ತ


ಮತ್ತೊಬ್ಬ ಟ್ವಿಟ್ಟರ್‌ ಯೂಸರ್‌, ಮರಿಯ ಕ್ರಿಯೆಗಿಂತ ತಾಯಿಯ ಪ್ರತಿಕ್ರಿಯೆ ನೋಡಿ ನನಗೆ ಆಶ್ಚರ್ಯವಾಯ್ತು ಎಂದಿದ್ದಾರೆ. ಇನ್ನೊಬ್ಬರು, ಯಾರಾದರೂ ನೋಡುತ್ತಾರೇನೋ ಎಂಬಂತೆ ಅಮ್ಮ ಅತ್ತಿತ್ತ ನೋಡುವುದು ತುಂಬಾ ಮುದ್ದಾಗಿದೆ ಎಂದು ಕಾಮೆಂಟ್‌ ಮಾಡಿದ್ದಾರೆ.


ಇನ್ನು ಸಾಕಷ್ಟು ಜನರು ಈ ವಿಡಿಯೋ ತುಂಬಾ ಕ್ಯೂಟಾಗಿದೆ. ನನಗೆ ತುಂಬ ಇಷ್ಟವಾಯ್ತು ಅಂತೆಲ್ಲ ಕಾಮೆಂಟ್‌ ಮಾಡಿದ್ದಾರೆ. ಮನುಷ್ಯರಂತೆಯೇ ಪ್ರಾಣಿಗಳು ಬಗೆಬಗೆಯ ಆಟವಾಡುತ್ತವೆ.


ಈ ವಿಡಿಯೋದಲ್ಲಿರೋ ಆಟವಂತೂ ಮಕ್ಕಳ ಕಣ್ಣಾಮುಚ್ಚಾಲೆಯೇ ಆಗಿದೆ. ಥೇಟ್‌ ಮಕ್ಕಳಂತೆಯೇ ಇಲ್ಲಿ ಪುಟ್ಟ ಸಿಂಹದ ಮರಿ ತಾಯಿಯನ್ನು ಭಯಪಡಿಸಲು ನೋಡಿದೆ. ತಾಯಿಯೂ ನಾವುಗಳು ಬೆಚ್ಚುವಂತೆಯೇ ಬೆಚ್ಚಿ ಬಿದ್ದಿದೆ. ಇದನ್ನು ನೋಡುವುದೇ ಒಂದು ಖುಷಿ.



ಈಗಂತೂ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿರೋದ್ರಿಂದ ಇಂತಹ ಸಾಕಷ್ಟು ವಿಡಿಯೋಗಳು ವೈರಲ್‌ ಆಗುತ್ತವೆ. ಅದರಲ್ಲೂ ಪ್ರಾಣಿಗಳ ಆಟದಂತಹ ವಿಡಿಯೋಗಳನ್ನು ಜನರು ಹೆಚ್ಚಾಗಿ ಇಷ್ಟ ಪಡ್ತಾರೆ.


ಇದನ್ನೂ ಓದಿ: ರಾಣಿಯಂತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ 80ರ ಅಜ್ಜಿ!


ಇಲ್ಲಿ ಪ್ರಾಣಿಗಳಲ್ಲಿರೋ ಮುಗ್ದತೆ, ಅವು ಆಟ ವಾಡೋ ರೀತಿ, ಅವುಗಳ ಪ್ರತಿಕ್ರಿಯೆಗಳು ಜನರ ಮನಸ್ಸನ್ನು ಸೆಳೆಯುತ್ತವೆ. ಹೀಗಾಗಿ ಇಂತಹ ವಿಡಿಯೋಗಳು ಹೆಚ್ಚು ಜನರನ್ನು ತಲುಪುತ್ತವೆ.


ಇತ್ತೀಚಿಗೆ ಪುಟ್ಟ ಮಗುವಿನ ಜೊತೆ ಬೆಕ್ಕೊಂದು ಆಟವಾಡುವುದು, ಹುಲಿಯು ತನ್ನ ಮರಿಗಳ ಜೊತೆ ಆಟವಾಡುವುದು, ಸಿಂಹವೊಂದು ತನ್ನ ಮರಿಗಳನ್ನು ಕಾಪಾಡುವುದು, ಮಂಗಗಳು ಮರಿಗಳಿಂದ ಬೇರೆಯಾದಾಗ ವೇದನೆ ಅನುಭವಿಸುವುದು ಹೀಗೆ ಸಾಕಷ್ಟು ಪ್ರಾಣಿಗಳ ವಿಡಿಯೋಗಳ ಜನರ ಮನಮುಟ್ಟುತ್ತವೆ.

First published: