Viral Video: ಮಲಗಿರುವ ಸಿಂಹಿಣಿಯನ್ನು ಕೆಣಕಿದ ಸಿಂಹ; ಬಳಿಕ ಏನಾಯ್ತು? ಈ ವಿಡಿಯೋ ನೋಡಿ

ಸಿಂಹಿಣಿಗೆ ಕೀಟಲೆ ಮಾಡಿದ ಸಿಂಹ

ಸಿಂಹಿಣಿಗೆ ಕೀಟಲೆ ಮಾಡಿದ ಸಿಂಹ

ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಪ್ರಾಣಿಗಳು ಚಿಕ್ಕ ಪ್ರಾಣಿಗಳನ್ನು ಕೆಣುಕುವುದನ್ನು ನೋಡುತ್ತಿರುತ್ತೇವೆ.  ಅದರಲ್ಲೂ ಈ ಗಾಢ ನಿದ್ರೆಯಲ್ಲಿರುವಂತಹ ಪ್ರಾಣಿಗಳನ್ನು ಎಬ್ಬಿಸುವುದು ಒಂದೇ, ಪ್ರಾಣಕ್ಕೆ ಕುತ್ತು ತಂದುಕೊಳ್ಳುವುದು ಸಹ ಒಂದೇ. ಹೇಗೆ ಅಂತ ನೀವು ಕೇಳಬಹುದು, ಇಲ್ಲೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಹರಿದಾಡುತ್ತಿದೆ ನೋಡಿ.

ಮುಂದೆ ಓದಿ ...
  • Share this:

ಈ ಕಾಡು ಪ್ರಾಣಿಗಳಲ್ಲಿಯೇ ಸಿಂಹ (Lion) ಮತ್ತು ಹುಲಿ (Tiger) ಎಂದರೆ ಎಲ್ಲಾ ಇತರೆ ಪ್ರಾಣಿಗಳಿಗೂ ಒಂದು ರೀತಿಯ ಭಯ ಮತ್ತು ನಡುಕ. ಹಾಗಂದ ಮಾತ್ರಕ್ಕೆ ಹುಲಿ ಮತ್ತು ಸಿಂಹ ಕಾಡಿನಲ್ಲಿ ಏನೇ ಮಾಡಿದರೂ, ಎಷ್ಟೇ ಅಟ್ಟಹಾಸದಿಂದ ಮೆರೆದರೂ ಬೇರೆ ಪ್ರಾಣಿಗಳು (animal) ನೋಡಿಕೊಂಡು ಸುಮ್ಮನೆ ಇರುತ್ತವೆ ಮತ್ತು ಸಹಿಸಿಕೊಳ್ಳುತ್ತವೆ ಅಂತ ನೀವು ತಿಳಿದಿದ್ದರೆ, ಅದು ತಪ್ಪು. ಏಕೆಂದರೆ, ನಾವು ತುಂಬಾ ಹಿಂದೆನಿಂದಲೂ ನೀತಿ ಕಥೆಗಳಲ್ಲಿ ಮತ್ತು ನಿಜ ಜೀವನದಲ್ಲಿ ಹೇಗೆ ಚಿಕ್ಕ ಪ್ರಾಣಿಗಳ ಮೇಲೆ ಈ ದೊಡ್ಡ ಕಾಡು ಪ್ರಾಣಿಗಳು ದಬ್ಬಾಳಿಕೆ (Oppression) ನಡೆಸಿದಾಗ ಅಥವಾ ದಾಳಿ ಮಾಡಿದಾಗ, ಚಿಕ್ಕ ಪ್ರಾಣಿಗಳು ಹೇಗೆ ದೊಡ್ಡ ಪ್ರಾಣಿಗಳಿಗೆ ತಿರುಗೇಟು ನೀಡಬಹುದು ಅಂತ ತೋರಿಸಿವೆ.


ತಾನೇ ದೈತ್ಯ ಪ್ರಾಣಿ ಅಂತ ತಿಳಿದ ಆನೆಗೆ ಚಿಕ್ಕ ಇರುವೆ ಕಾಟ ಕೊಟ್ಟಿದ್ದ ಕಥೆ ಮತ್ತು ತಾನೇ ಬುದ್ದಿವಂತ ಅಂತ ತಿಳಿದ ಮೊಸಳೆಯ ಬಾಯಿಂದ ಉಪಾಯ ಮಾಡಿ ತಪ್ಪಿಸಿಕೊಂಡು ಜೀವ ಉಳಿಸಿಕೊಂಡ ಕೋತಿಯ ಕಥೆ ನಾವೆಲ್ಲಾರೂ ಚಿಕ್ಕವರಾಗಿದ್ದಾಗ ನಮ್ಮ ಹಿರಿಯರ ಬಾಯಿಂದ ಕೇಳಿಯೇ ಇರುತ್ತೇವೆ.


ಸಿಂಹಗಳ ವಿಡಿಯೋ ವೈರಲ್
ಹೀಗೆ ‘ಇದೇನು ಚಿಕ್ಕ ಪ್ರಾಣಿ, ಏನು ಮಾಡಿದರೂ ನಡೆಯುತ್ತೇ ಇದರ ಜೊತೆ’ ಅಂತ ಭಾವಿಸಿ ಅಹಂಕಾರದಲ್ಲಿದ್ದ ದೈತ್ಯ ಪ್ರಾಣಿಗಳಿಗೆ ಈಗ ಚೆನ್ನಾಗಿ ಅರ್ಥವಾಗಿದೆ. ಆದರೂ ಸಹ ಮಧ್ಯೆ ಮಧ್ಯೆ ನಾವು ಈ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಪ್ರಾಣಿಗಳು ಚಿಕ್ಕ ಪ್ರಾಣಿಗಳನ್ನು ಕೆಣುಕುವುದನ್ನು ನೋಡುತ್ತಿರುತ್ತೇವೆ.  ಅದರಲ್ಲೂ ಈ ಗಾಢ ನಿದ್ರೆಯಲ್ಲಿರುವಂತಹ ಪ್ರಾಣಿಗಳನ್ನು ಎಬ್ಬಿಸುವುದು ಒಂದೇ, ಪ್ರಾಣಕ್ಕೆ ಕುತ್ತು ತಂದುಕೊಳ್ಳುವುದು ಸಹ ಒಂದೇ. ಹೇಗೆ ಅಂತ ನೀವು ಕೇಳಬಹುದು, ಇಲ್ಲೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಹರಿದಾಡುತ್ತಿದೆ ನೋಡಿ.


ಇದನ್ನೂ ಓದಿ: Horse Viral News: ಈ ಕುದುರೆ ಮರಿಗೆ ಬಸ್ ಮೇಲಿನ ಚಿತ್ರವೇ ಅಮ್ಮ!


ಈ ಸಿಂಹಿಣಿ ಸಿಂಹಕ್ಕೆ ಏನು ಮಾಡಿತು ನೋಡಿ 
ಈ ವಿಡಿಯೋ ಸಿಂಹ ಮತ್ತು ಸಿಂಹಿಣಿಗೆ ಸಂಬಂಧಿಸಿದ್ದು, ಸಿಂಹಗಳು ಅಸಾಧಾರಣ ಪ್ರಾಣಿ ಮತ್ತು ಕಾಡಿನ ರಾಜ ಅಂತೆಲ್ಲಾ ನಾವು ಹೇಳುತ್ತೇವೆ. ಆದರೆ ಈ ವಿಡಿಯೋದಲ್ಲಿ ಸಿಂಹಕ್ಕೂ ಅವಾಜ್ ಹಾಕುವವರು ಇದ್ದಾರೆ ಅಂತ ಸಿಂಹಿಣಿ ತೋರಿಸಿದೆ ನೋಡಿ. ಇಲ್ಲಿ ಸಿಂಹಿಣಿಯೊಂದು ಸುಮ್ಮನೆ ತನ್ನ ಪಾಡಿಗೆ ತಾನು ಗಾಢ ನಿದ್ರೆಯಲ್ಲಿದ್ದರೆ, ಸಿಂಹ ಹಿಂದೆಯಿಂದ ಬಂದು ಕೀಟಲೆ ಮಾಡುವ ವಿಡಿಯೋವೊಂದು ಅಂತರ್ಜಾಲದಲ್ಲಿ ಈಗ ವೈರಲ್ ಆಗುತ್ತಿದೆ. ದಣಿದ ಸಿಂಹಿಣಿಯು ತನ್ನ ಮಧ್ಯಾಹ್ನದ ನಿದ್ರೆಯನ್ನು ಮಾಡಲು ಬಿಡಲಿಲ್ಲ, ಆಗ ನಿದ್ರೆಯಿಂದ ಎದ್ದ ಸಿಂಹಿಣಿ ಏನು ಮಾಡಿತು ನೀವೇ ನೋಡಿ.


[embed]https://youtu.be/kyJUQuaECrg[/embed]


22 ಸೆಕೆಂಡಿನ ವಿಡಿಯೋದಲ್ಲಿ ಸಿಂಹಿಣಿಯೊಂದು ಕಾಡಿನಲ್ಲಿ ಶಾಂತವಾಗಿ ನಿದ್ರಿಸುತ್ತಿರುವುದನ್ನು ನೋಡಬಹುದು ಮತ್ತು ಸಿಂಹ ಅದರ ತುದಿ ಕಾಲ್ಬೆರಳುಗಳು ಕಚ್ಚುವ ಮೂಲಕ ಅದನ್ನು ಎಬ್ಬಿಸಲು ಪ್ರಯತ್ನಿಸುತ್ತದೆ. ಸಿಂಹದ ಈ ಕೀಟಲೆ ಗಾಢ ನಿದ್ರೆಯಲ್ಲಿದ್ದ ಸಿಂಹಿಣಿಗೆ ಕೆಟ್ಟ ಕೋಪ ತರಿಸಿದೆ ಮತ್ತು ತಕ್ಷಣಕ್ಕೆ ಎದ್ದ ಸಿಂಹಿಣಿ ಯಾರು? ಏನು? ಅಂತ ನೋಡದೆ ಸಿಂಹದ ಮೇಲೆ ದಾಳಿ ಮಾಡಿ ಜೋರಾಗಿ ಘರ್ಜಿಸಿದನ್ನು ಇಲ್ಲಿ ನಾವು ನೋಡಬಹುದು.


ಸಿಂಹಿಣಿಯನ್ನು ನೋಡಿ  ಬೆಚ್ಚಿಬಿದ್ದ ಸಿಂಹ 
ಆಗ ಸಿಂಹವು ಸಿಂಹಿಣಿಯನ್ನು ನೋಡಿ ಒಂದು ಕ್ಷಣ ಬೆಚ್ಚಿ ಬೀಳುತ್ತದೆ ಮತ್ತು ಕೋಪೋದ್ರಿಕ್ತ ಸಿಂಹಿಣಿಯಿಂದ ಹಿಂದೆ ಸರಿಯಲು ಪ್ರಾರಂಭಿಸುತ್ತದೆ. ಇದರಿಂದ ಆ ಸಿಂಹಕ್ಕೆ ಮಲಗಿರುವಾಗ ಕೀಟಲೆ ಮಾಡಬಾರದು ಅಂತ ಪಾಠವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತದೆ. ಇದು ಮತ್ತೆ ಯಾವತ್ತೂ ಯಾವುದೇ ಸಿಂಹಿಣಿಯನ್ನು ಕೀಟಲೆ ಮಾಡುವುದಕ್ಕೆ ಹೋಗುವುದಿಲ್ಲ ಅಂತ ಅಂದಾಜಿಸಬಹುದು.


ಇದನ್ನೂ ಓದಿ:  Viral Video: ಮಹಿಳೆ ಸ್ನಾನ ಮಾಡ್ವಾಗ ಬಾತ್‌ ರೂಂ ಒಳಗೇ ಬಂತು ಹೆಬ್ಬಾವು! ಮುಂದೇನಾಯ್ತು ಅಂತ ವಿಡಿಯೋ ನೋಡಿ


ಈ ವಿಡಿಯೋವನ್ನು 'ಬಿಕೆಬಿಯುಸಿ' ಎಂಬ ಹೆಸರಿರುವ ಬಳಕೆದಾರರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು "ಸಿಂಹವು ಈ ರೀತಿ ತಮಾಷೆ ಮಾಡುತ್ತದೆ" ಎಂಬ ಶೀರ್ಷಿಕೆಯೊಂದನ್ನು ಸಹ ನೀಡಲಾಗಿದೆ. ಈ ವೀಡಿಯೋ 1,44,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 1,239 ಲೈಕ್ ಗಳನ್ನು ಸಹ ಗಳಿಸಿದೆ.

top videos
    First published: