ಕಾಡು ಪ್ರಾಣಿಗಳಲ್ಲಿಯೇ ಸಿಂಹ (Lion) ಮತ್ತು ಹುಲಿ (Tiger) ಎಂದರೆ ಇತರೆ ಎಲ್ಲಾ ಪ್ರಾಣಿಗಳಿಗೂ ಒಂದು ರೀತಿಯ ಭಯ ಮತ್ತು ನಡುಕ ಅಂತ ಹೇಳಬಹುದು. ಹಾಗಂದ ಮಾತ್ರಕ್ಕೆ ಹುಲಿ ಮತ್ತು ಸಿಂಹ ಕಾಡಿನಲ್ಲಿ ಏನೇ ಮಾಡಿದರೂ, ಎಷ್ಟೇ ಅಟ್ಟಹಾಸದಿಂದ ಮೆರೆದರೂ ಬೇರೆ ಪ್ರಾಣಿಗಳು ನೋಡಿಕೊಂಡು ಸುಮ್ಮನೆ ಇರುತ್ತವೆ ಮತ್ತು ಸಹಿಸಿಕೊಳ್ಳುತ್ತವೆ ಅಂತ ನೀವು ತಿಳಿದಿದ್ದರೆ, ಅದು ತಪ್ಪು. ಏಕೆಂದರೆ, ನಾವು ತುಂಬಾ ಹಿಂದೆನಿಂದಲೂ ನೀತಿ ಕಥೆಗಳಲ್ಲಿ ಮತ್ತು ನಿಜ ಜೀವನದಲ್ಲಿ ಹೇಗೆ ಚಿಕ್ಕ ಪ್ರಾಣಿಗಳ ಮೇಲೆ ಈ ದೊಡ್ಡ ಕಾಡು ಪ್ರಾಣಿಗಳು (Wild Animal) ದಬ್ಬಾಳಿಕೆ ನಡೆಸಿದಾಗ ಅಥವಾ ದಾಳಿ ಮಾಡಿದಾಗ, ಚಿಕ್ಕ ಪ್ರಾಣಿಗಳು ಹೇಗೆ ದೊಡ್ಡ ಪ್ರಾಣಿಗಳಿಗೆ ತಿರುಗೇಟು ನೀಡಬಹುದು ಅಂತ ತೋರಿಸಿವೆ. ತಾನೇ ದೈತ್ಯ ಪ್ರಾಣಿ ಅಂತ ತಿಳಿದ ಆನೆಗೆ ಚಿಕ್ಕ ಇರುವೆ ಕಾಟ ಕೊಟ್ಟಿದ್ದ ಕಥೆ ಮತ್ತು ತಾನೇ ಬುದ್ದಿವಂತ ಅಂತ ತಿಳಿದ ಮೊಸಳೆಯ ಬಾಯಿಂದ ಉಪಾಯ ಮಾಡಿ ತಪ್ಪಿಸಿಕೊಂಡು ಜೀವ ಉಳಿಸಿಕೊಂಡ ಕೋತಿಯ ಕಥೆ ನಾವೆಲ್ಲಾರೂ ಚಿಕ್ಕವರಾಗಿದ್ದಾಗ ನಮ್ಮ ಹಿರಿಯರ ಬಾಯಿಂದ ಕೇಳಿಯೇ ಇರುತ್ತೇವೆ.
ಹೀಗೆ ‘ಇದೇನು ಚಿಕ್ಕ ಪ್ರಾಣಿ, ಏನು ಮಾಡಿದರೂ ನಡೆಯುತ್ತೇ ಇದರ ಜೊತೆ’ ಅಂತ ಭಾವಿಸಿ ಅಹಂಕಾರದಲ್ಲಿದ್ದ ದೈತ್ಯ ಪ್ರಾಣಿಗಳಿಗೆ ಈಗ ಚೆನ್ನಾಗಿ ಅರ್ಥವಾಗಿದೆ. ಆದರೂ ಸಹ ಮಧ್ಯೆ ಮಧ್ಯೆ ನಾವು ಈ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಪ್ರಾಣಿಗಳು ಚಿಕ್ಕ ಪ್ರಾಣಿಗಳನ್ನು ಕೆಣುಕುವುದನ್ನು ನೋಡುತ್ತಿರುತ್ತೇವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ
ಇದನ್ನೂ ಓದಿ: ಮಕ್ಕಳಾದ್ರೂ ಓಕೆ, ಮುದುಕರಾದ್ರೂ ಓಕೆ; ಇಲ್ಲಿ ಯಾರು ಬೇಕಿದ್ರೂ ಕುಡಿಯಬಹುದು!
ಅದರಲ್ಲೂ ಈ ಗಾಢ ನಿದ್ರೆಯಲ್ಲಿರುವಂತಹ ಪ್ರಾಣಿಗಳನ್ನು ಎಬ್ಬಿಸುವುದು ಒಂದೇ, ಪ್ರಾಣಕ್ಕೆ ಕುತ್ತು ತಂದುಕೊಳ್ಳುವುದು ಸಹ ಒಂದೇ ಎಂದು ಹೇಳಬಹುದು. ಹೇಗೆ ಅಂತ ನೀವು ಕೇಳಬಹುದು, ಇಲ್ಲೊಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಹರಿದಾಡುತ್ತಿದೆ ನೋಡಿ.
ಈ ವೀಡಿಯೋ ಸಿಂಹ ಮತ್ತು ಸಿಂಹಿಣಿಗೆ ಸಂಬಂಧಿಸಿದ್ದು, ಸಿಂಹಗಳು ಅಸಾಧಾರಣ ಪ್ರಾಣಿ ಮತ್ತು ಕಾಡಿನ ರಾಜ ಅಂತೆಲ್ಲಾ ನಾವು ಹೇಳುತ್ತೇವೆ. ಆದರೆ ಈ ವೀಡಿಯೋದಲ್ಲಿ ಸಿಂಹಕ್ಕೂ ಅವಾಜ್ ಹಾಕುವವರು ಇದ್ದಾರೆ ಅಂತ ಸಿಂಹಿಣಿ ತೋರಿಸಿದೆ ನೋಡಿ. ಇಲ್ಲಿ ಸಿಂಹಿಣಿಯೊಂದು ಸುಮ್ಮನೆ ತನ್ನ ಪಾಡಿಗೆ ತಾನು ಗಾಢ ನಿದ್ರೆಯಲ್ಲಿದ್ದರೆ, ಸಿಂಹ ಹಿಂದೆಯಿಂದ ಬಂದು ಕೀಟಲೆ ಮಾಡುವ ವೀಡಿಯೋವೊಂದು ಅಂತರ್ಜಾಲದಲ್ಲಿ ಈಗ ವೈರಲ್ ಆಗುತ್ತಿದೆ. ಈ ಸಿಂಹವು ದಣಿದ ಸಿಂಹಿಣಿಯು ತನ್ನ ಮಧ್ಯಾಹ್ನದ ನಿದ್ರೆಯನ್ನು ಮಾಡಲು ಬಿಡಲಿಲ್ಲ, ಆಗ ನಿದ್ರೆಯಿಂದ ಎದ್ದ ಸಿಂಹಿಣಿ ಏನು ಮಾಡಿತು ನೀವೇ ನೋಡಿ.
ಇದನ್ನೂ ಓದಿ: ನಮೀಬಿಯಾದಿಂದ ಬಂದ ಚಿರತೆಗಳನ್ನು ಬಿಡಲು ಕುನೋ ಉದ್ಯಾನವನವೇ ಆಯ್ಕೆಯಾಗಿದ್ದೇಕೆ?
22 ಸೆಕೆಂಡಿನ ವೀಡಿಯೊದಲ್ಲಿ ಸಿಂಹಿಣಿಯೊಂದು ಕಾಡಿನಲ್ಲಿ ಶಾಂತವಾಗಿ ನಿದ್ರಿಸುತ್ತಿರುವುದನ್ನು ನೋಡಬಹುದು ಮತ್ತು ಸಿಂಹ ಅದರ ತುದಿ ಕಾಲ್ಬೆರಳುಗಳು ಕಚ್ಚುವ ಮೂಲಕ ಅದನ್ನು ಎಬ್ಬಿಸಲು ಪ್ರಯತ್ನಿಸುತ್ತದೆ. ಸಿಂಹದ ಈ ಕೀಟಲೆ ಗಾಢ ನಿದ್ರೆಯಲ್ಲಿದ್ದ ಸಿಂಹಿಣಿಗೆ ಕೆಟ್ಟ ಕೋಪ ತರಿಸಿದೆ ಮತ್ತು ತಕ್ಷಣಕ್ಕೆ ಎದ್ದ ಸಿಂಹಿಣಿ ಯಾರು? ಏನು? ಅಂತ ನೋಡದೆ ಸಿಂಹದ ಮೇಲೆ ದಾಳಿ ಮಾಡಿ ಜೋರಾಗಿ ಘರ್ಜಿಸಿದನ್ನು ಇಲ್ಲಿ ನಾವು ನೋಡಬಹುದು.
Watch: Lion Teases Lioness While Sleeping, Taught A Lesson - NDTV https://t.co/4cDq175mkC
— Dr.Bhoomireddy S N Reddy (@BhoomireddyN) September 17, 2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ