ಜಮೈಕಾದ ಮೃಗಾಲಯದಲ್ಲಿ (Jamaican Zoo) ಸಿಂಹವೊಂದು (Lion) ಝೂ ಸಿಬ್ಬಂದಿಯ ಬೆರಳನ್ನು ಕಚ್ಚಿಬಿಟ್ಟಿದೆ. ಪ್ರವಾಸಿಗರ ಮುಂದೆ ಸಿಂಹಕ್ಕೆ ಚೇಷ್ಟೆ ಮಾಡುತ್ತಿದ್ದ ಮೃಗಾಲಯದ ಸಿಬ್ಬಂದಿಯ (Zoo Staff) ಕೈಗೆ ಬಾಯಿ ಹಾಕಿದ ಸಿಂಹ ಪ್ರವಾಸಿಗರ ಮುಂದೆಯೇ ಸಿಬ್ಬಂದಿಯ ಬೆರಳನ್ನು ಕಚ್ಚಿ ಎಳೆದಾಡಿದೆ. ಸೇಂಟ್ ಎಲಿಜಬೆತ್‌ನಲ್ಲಿರುವ (Elizabeth) ಜಮೈಕಾ ಮೃಗಾಲಯದಲ್ಲಿ ಈ ಘಟನೆ ನಡೆದಿದೆ ಎಂದು ಜಮೈಕಾ ಅಬ್ಸರ್ವರ್ ವರದಿ ಮಾಡಿದೆ. ಸಿಂಹ, ಹೇಳಿ ಕೇಳಿ ಕಾಡಿನ ರಾಜ. ಅದು ಬೋನಿನಲ್ಲಿದ್ದರೂ ಸಿಂಹನೇ, ಹೊರಗೆ ಬಂದರೂ ಸಿಂಹನೇ. ಇಂತಹ ಭಯಾನಕ ಪ್ರಾಣಿ ಜೊತೆ ಎಷ್ಟು ಜಾಗರೂಕರಾಗಿದ್ದರು ಸಾಕಾಗುವುದಿಲ್ಲ. ಅದು ಬೋನಿನಲ್ಲಿದ್ದ ಮಾತ್ರಕ್ಕೆ ಸಾತ್ವಿಕ ಪ್ರಾಣಿ ಆಗುವುದಿಲ್ಲ.ಅದರ ರೋಷ, ಆವೇಶ ಅದರ ಹುಟ್ಟುಗುಣ. ಅದರ ಜೊತೆಗೆ ಚೆಲ್ಲಾಟ, ಹುಡುಗಾಟ ಯಾವ ಕಾರಣಕ್ಕೂ ಸಲ್ಲದು.
ಹೀಗಿರುವಾಗ ಪದೇ ಪದೇ ಕುಚೇಷ್ಟೇ ಮಾಡಿ ಅದನ್ನು ಕೆಣಕಿದರೆ ಸುಮ್ಮನ್ನೇ ಬಿಡುತ್ತಾ, ತನಗೆ ಇರಿಸು ಮುರಿಸು ಮಾಡಿದವರಿಗೆ ತಕ್ಕ ಶಿಕ್ಷೆ ನೀಡುತ್ತದೆ ಎನ್ನುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋನೇ ಸಾಕ್ಷಿ.
ವೈರಲ್ ಆದ ವೀಡಿಯೋದಲ್ಲಿ ಏನಿದೆ?
ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಕೆಂಪು ಬಟ್ಟೆ ಧರಿಸಿದ ಮೃಗಾಲಯದ ಸಿಬ್ಬಂದಿ ಒಬ್ಬ ಸಿಂಹದ ಬೋನಿನೊಳಗೆ ಕೈ ಹಾಕುತ್ತಾ ಅದನ್ನು ಅಣಕಿಸುವ ರೀತಿ ನಡೆದು ಕೊಂಡಿರುತ್ತಾನೆ. ಪ್ರವಾಸಿಗರು ಸಿಂಹವನ್ನು ವೀಕ್ಷಿಸುತ್ತಿರುವಾಗ ಅದನ್ನು ಕೊಂಚ ಆಟವಾಡಿಸಲು ಹೊರಗಿನಿಂದ ತನ್ನ ಕೈಯನ್ನು ಬೋನಿಗೆ ಹಾಕುತ್ತಾ ಸಿಂಹವನ್ನು ಒಂದೆರೆಡು ಬಾರಿ ತಿವಿದಿದ್ದಾನೆ. ಇದರಿಂದಾಗಿ ಕೊನೆಗೆ ಕುಪಿತಗೊಂಡ ಸಿಂಹ ಸಿಬ್ಬಂದಿ ಕೈ ಎಳೆದುಕೊಂಡು ಬೆರಳನ್ನು ಕಚ್ಚಿ ಹಿಡಿದಿದೆ.
ಪ್ರವಾಸಿಗರು ಸೆರೆಹಿಡಿದಿರುವ ಈ ದೃಶ್ಯಾವಳಿಗಳಲ್ಲಿ ಸಿಂಹವು ಆತನ ಕೈಯನ್ನು ಬಿಗಿ ಹಿಡಿದುಕೊಂಡು ಎಳೆದಾಡುತ್ತಿರುವುದನ್ನು ನೋಡಬಹುದು. ಜೂ ಸಿಬ್ಬಂದಿ ಎಷ್ಟೇ ಕಷ್ಟಪಟ್ಟರು ಸಿಂಹದ ಬಾಯಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಕೆಲ ಹೊತ್ತು ಅಲ್ಲಿಯೇ ಬಿಡಿಸಿಕೊಳ್ಳಲು ಒದ್ದಾಡುತ್ತಾನೆ. ನಂತರ ತನ್ನ ಶತಪ್ರಯತ್ನದಿಂದ ಹೇಗೋ ಅದರ ಬಿಗಿ ಹಿಡಿತದಿಂದ ತಪ್ಪಿಸಿಕೊಳ್ಳುತ್ತಾನೆ. ಆತ ಸಿಂಹದಿಂದ ತಪ್ಪಿಸಿಕೊಂಡು ನೆಲಕ್ಕೆ ಬೀಳುವವರೆಗಿನ ದೃಶ್ಯಾವಳಿಗಳನ್ನು ನಾವು ಈ ವೈರಲ್ ಆದ ವಿಡಿಯೋದಲ್ಲಿ ನೋಡಬಹುದು.
ಪ್ರತ್ಯಕ್ಷದರ್ಶಿ ಘಟನೆಯ ಬಗ್ಗೆ ಹೇಳಿದ್ದು ಹೀಗೆ
ಮೃಗಾಲಯದ ಪಾಲಕನೊಬ್ಬನ ಬಲಗೈ ಉಂಗುರದ ಬೆರಳನ್ನು ಸಿಂಹ ಕಿತ್ತು ಹಾಕಿರುವ ಭಯಾನಕ ಕ್ಷಣವನ್ನು ದಿಗ್ಭ್ರಮೆಗೊಂಡ ಸಾಕ್ಷಿಗಳು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ಸಿಂಹದ ಹಲ್ಲಿನ ಚೂಪುತನದ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಅದರ ಹಲ್ಲು ಮತ್ತು ಉಗುರುಗಳೇ ಅದರ ಶಕ್ತಿ. ಹೀಗಿರುವಾಗ ಸಿಂಹದ ಬಾಯಿಯಿಂದಲೇ ಕಚ್ಚಿಸಿಕೊಳ್ಳುವುದು ಹೇಗಿರುತ್ತದೆ ಹೇಳಿ, ನರಕದ ಬಾಗಿಲನ್ನು ಒಮ್ಮೆ ತಟ್ಟಿ ಬಂದತಾಗುತ್ತದೆ.
ಇದನ್ನೂ ಓದಿ: Dogsಗಳು ಕಂಡ ಕಂಡಲ್ಲಿ ಮೂತ್ರ ಮಾಡೊದೇಕೆ? ನಾಯಿ ಬುದ್ಧಿ ಬಗ್ಗೆ ತಜ್ಞರು ಹೇಳುವುದೇನು?
ಪ್ರತ್ಯಕ್ಷದರ್ಶಿಯೊಬ್ಬರು ಸ್ಥಳೀಯ ಸುದ್ದಿವಾಹಿನಿ ಜಮೈಕಾ ಅಬ್ಸರ್ವರ್‌ಗೆ ಸಿಂಹವು ಮನುಷ್ಯನ ಬೆರಳಿನ ಮೇಲ್ಭಾಗವನ್ನು ಕಚ್ಚಿದೆ ಎಂದು ಹೇಳಿದರು. "ಇದು ಸಂಭವಿಸಿದಾಗ, ನಾನು ಅದನ್ನು ತಮಾಷೆ ಎಂದು ಭಾವಿಸಿದೆ. ಅದರ ಗಂಭೀರತೆ ನನಗೆ ತಿಳಿದಿರಲಿಲ್ಲ. ಅವನು ನೆಲದ ಮೇಲೆ ಬಿದ್ದಾಗ ಅದು ನಿಜ ಎಂದು ಎಲ್ಲರೂ ಅರಿತುಕೊಂಡರು. ಎಲ್ಲರೂ ಭಯಭೀತರಾದೆವು” ಎಂದು ಸಿಂಹ ನೋಡಲು ಬಂದ ಪ್ರವಾಸಿಗರೊಬ್ಬರು ತಿಳಿಸಿದರು.
ಘಟನೆಯ ಬಗ್ಗೆ ಮಾಹಿತಿ ಕಲೆಹಾಕಿದ ಜಮೈಕಾ ಮೃಗಾಲಯ
ಸುಮಾರು 15 ಮಂದಿ ಮೃಗಾಲಯದ ಸಂದರ್ಶಕರ ಮುಂದೆ ಈ ದುರ್ಘಟನೆ ಸಂಭವಿಸಿದ್ದು, ಕೆಲವರು ದೃಶ್ಯವನ್ನು ಚಿತ್ರೀಕರಿಸುತ್ತಿದ್ದರು. ಗಾಯಗೊಂಡ ಝೂ ಕೀಪರ್ ಎದ್ದು ವಾಹನದ ಬಳಿಗೆ ನಡೆದು ಮೃಗಾಲಯದಿಂದ ಹೊರಟು ಹೋದರು ಎಂದು ವರದಿಗಳಾಗಿವೆ. ಹೇಳಿಕೆಯ ಪ್ರಕಾರ, ಜಮೈಕಾ ಮೃಗಾಲಯವು ಘಟನೆಯ ಬಗ್ಗೆ ಮಾಹಿತಿ ಕಲೆಹಾಕಿದ್ದು ಮತ್ತು ಗಾಯಗೊಂಡ ಸಿಬ್ಬಂದಿಗೆ ಸಹಾಯ ಮಾಡುವುದಾಗಿ ತಿಳಿಸಿದೆ.
Show off bring disgrace
The lion at Jamaica Zoo ripped his finger off. pic.twitter.com/Ae2FRQHunk
— Ms blunt from shi born 🇯🇲 “PRJEFE” (@OneciaG) May 21, 2022
"ಜಮೈಕಾ ಮೃಗಾಲಯದಲ್ಲಿ ಸಿಬ್ಬಂದಿ ವೀಡಿಯೊದಲ್ಲಿ ಪ್ರದರ್ಶಿಸಲಾದ ಕ್ರಮಗಳು ದುರಂತ ಮತ್ತು ಜಮೈಕಾ ಮೃಗಾಲಯದಲ್ಲಿ ಎಲ್ಲಾ ಸಮಯದಲ್ಲೂ ಅನುಸರಿಸಬೇಕಾದ ಸುರಕ್ಷತಾ ಕಾರ್ಯವಿಧಾನಗಳು ಮತ್ತು ನೀತಿಗಳನ್ನು ಪ್ರತಿನಿಧಿಸುವುದಿಲ್ಲ" ಎಂದು ಮೃಗಾಲಯದ ಆಡಳಿತ ಮಂಡಳಿ ತಿಳಿಸಿದೆ.
ಇದನ್ನೂ ಓದಿ: Money spider: ಭಾರತದಲ್ಲಿ ಮೊದಲ ಮನಿ ಸ್ಪೈಡರ್ ಪತ್ತೆ! ಅದೃಷ್ಟ ಬದಲಾಯಿಸೋ ಜೇಡ ಇದು
"ಇದು ಎಂದಿಗೂ ಸಂಭವಿಸದ ದುರದೃಷ್ಟಕರ ಘಟನೆಯಾಗಿದೆ ಮತ್ತು ಜಮೈಕಾ ಮೃಗಾಲಯ ಆತನಿಗೆ ಎಲ್ಲಾ ರೀತಿಯಲ್ಲೂ ನೆರವಾಗುತ್ತದೆ” ಎಂದು ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ