ಸಿಂಹವನ್ನು (Lion) ಕಾಡಿನ ರಾಜ ಎಂದು ಪರಿಗಣಿಸಲಾಗಿದೆ. ಅದರ ಶಕ್ತಿ ಮತ್ತು ಚುರುಕುತನದಿಂದಾಗಿ ಅದಕ್ಕೆ ಆ ಸ್ಥಾನಮಾನವನ್ನು ನೀಡಲಾಗಿದೆ. ಈ ಪ್ರಾಣಿ (Animal) ಯಾವುದೇ ಭಯವಿಲ್ಲದೆ ಕಾಡಿನಲ್ಲಿ ಸುತ್ತಾಡುತ್ತದೆ. ಕಾಡಿನಲ್ಲಿರುವ ಇತರ ಪ್ರಾಣಿಗಳು ಅವನ ಹತ್ತಿರವೂ ಬರುವುದಿಲ್ಲ. ಸಿಂಹವು ತನ್ನ ಶಕ್ತಿ ಮತ್ತು ಚುರುಕುತನದಿಂದ ತನ್ನ ಬೇಟೆಯನ್ನು ಹಿಡಿಯುತ್ತದೆ. ಕೋತಿ ತುಂಬಾ ಚೇಷ್ಟೆ. ನಿರಂತರವಾಗಿ ಚೇಷ್ಟೆಗಳನ್ನು ಆಡುತ್ತಾ ಇರುತ್ತದೆ. ಈಗ ಈ ಎರಡು ಪ್ರಾಣಿಗಳು ಮುಖಾಮುಖಿಯಾದಾಗ ಏನಾಗುತ್ತದೆ? ಅಂತಹ ಎರಡು ಪ್ರಾಣಿಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ (Social Media) ಬಹಳ ಜನಪ್ರಿಯವಾಗಿದೆ. ಈ ವೀಡಿಯೋ ನೋಡಿದ್ರೆ, ಅರೆ! ಇದು ಸಾಧ್ಯನಾ ಅಂತ ನೀವು ಮೂಗಿನ ಮೇಲೆ ಕೈಇಟ್ಟುಕೊಳ್ಳುತ್ತೀರ.
ಹೌದು. ಈ ಎರಡು ಪ್ರಾಣಿಗಳು ಒಟ್ಟಿಗೆ ಫ್ರೆಂಡ್ಸ್ ಆಗಿದ್ದಾರೆ ಅಂದ್ರೆ ನೀವು ನಂಬಲೇ ಬೇಕು. ಯಾಕಂದ್ರೆ ಸಿಂಹ ತನ್ನ ಅಹಂಕಾರದಿಂದ ಕಾಡಿನಲ್ಲಿಓಡಾಡುತ್ತಾ ಇರುತ್ತದೆ. ಯಾವ ಪ್ರಾಣಿಗಳಿಗೂ ಬಗ್ಗೋಲ್ಲ. ಆದ್ರೆ, ಈ ಕೋತಿಯಿಂದ ಆ ಒಂದು ಸಿಂಗವನ್ನು ಬಗ್ಗಿಸಲು ಸಾಧ್ಯವಾಯ್ತು ನೋಡಿ!
ಈ ವಿಡಿಯೋ ಡಾ. ವಿವೇಕ್ ಬಿಂದ್ರಾ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು "The spirit of doing something can make you ride a lion" ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋದಲ್ಲಿ ಸಿಂಹದ ಬೆನ್ನ ಮೇಲೆ ಕೋತಿ ಕುಳಿತಿರುವುದನ್ನು ನಾವು ಕಾಣಬಹುದು. ಸಿಂಹವೊಂದು ಕಾಡಿನಲ್ಲಿ ಓಡಾಡುತ್ತಿದೆ. ಕೋತಿಯು ತಿರುಗುತ್ತಿರುವ ಸಿಂಹವನ್ನು ನೋಡಿ ತನ್ನ ಬೆನ್ನಿನ ಮೇಲೆ ಹಾರುತ್ತದೆ. ಕುತೂಹಲಕಾರಿಯಾಗಿ, ಸಿಂಹವು ಪ್ರತಿಕ್ರಿಯಿಸದೆ ನಡೆಯುವುದನ್ನು ಮುಂದುವರೆಸಿದೆ. ಆಗ ಯಾವ ಕೋತಿಯು ಬಹಳ ಆರಾಮವಾಗಿ ಕುಳಿತು ಸಿಂಹದ ಮೇಲೆ ಸವಾರಿ ಮಾಡುತ್ತದೆ ಹೇಳಿ? ಇದನ್ನು ನೋಡಿದರೆ ಕೋತಿ ಕಾಡಿನ ರಾಜನೋ, ಸಿಂಹವು ಮಂಗನ ಸೇವಕನೋ ಅನ್ನಿಸುತ್ತದೆ.
ಇದನ್ನೂ ಓದಿ: ಕಣ್ಣುಚ್ಚಿ ಕಣ್ಣು ಬಿಡೋದ್ರೊಳಗೆ 7 ಕೋಟಿ ಮೌಲ್ಯದ 5 ಕಾರು ಮಾಯ! ಕಳ್ಳರ ಕರಾಮತ್ತಿಗೆ ಪೊಲೀಸರೇ ಶಾಕ್!
ಈ ವೀಡಿಯೋದಲ್ಲಿ ಸಿಂಹ ಮತ್ತು ಮಂಗ ಚಿತ್ರಿಸಿರುವ ದೃಶ್ಯ ಹೆಚ್ಚಾಗಿ ನಡೆಯುವುದಿಲ್ಲ. ಸಿಂಹದ ಬೆನ್ನಿನ ಮೇಲೆ ಕುಳಿತುಕೊಳ್ಳಲು ಎಷ್ಟು ಧೈರ್ಯ ಬೇಕು ಎಂದು ನಾವು ಊಹಿಸಬಹುದು. ಹಾಗಾಗಿ ಮಂಗನ ಧೈರ್ಯ ಮೆಚ್ಚುವಂತದ್ದು. ಕೋತಿಯ ಸಾಹಸಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
कुछ कर गुजरने का जज्बा आपको शेर की सवारी भी करवा सकता है 😂#ViralVideo #ViralPost pic.twitter.com/dayEtINC3E
— Dr. Vivek Bindra (@DrVivekBindra) December 7, 2022
ಹತ್ತು ಸಾವಿರಕ್ಕಿಂತ ಹೆಚ್ಚು ಲೈಕ್ಸ್ ಗಳಿಸಿದೆ ಜೊತೆಗೆ ಬರೀ ಕಾಮೆಂಟ್ಗಳು ಕೂಡ ಬಂದಿವೆ. ನೀವು ಈ ವಿಡಿಯೋವನ್ನು ನೋಡಿದಾಗ ಗೊತ್ತಾಗುತ್ತೆ ಈ ಎರಡು ಪ್ರಾಣಿಗಳು ಫ್ರೆಂಡ್ಸ್ ಆಗಿದ್ದಾರಾ ಅಂತ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ