Smoking Effect: ನಿಮ್ಮ ಅಜ್ಜ ಸಿಗರೇಟ್ ಸೇದಿದ್ದರಿಂದಲೇ ನೀವಿಷ್ಟು ದಪ್ಪಗಿರೋದಂತೆ!

ತಂದೆಯ ಅಜ್ಜ ಪ್ರೌಢಾವಸ್ಥೆಗೆ ಮುಂಚೆಯೇ ಧೂಮಪಾನವನ್ನು ಪ್ರಾರಂಭಿಸಿದ್ದರೆ ಅದು ಮೊಮ್ಮಗಳ ಮೇಲೆ ಪರಿಣಾಮ ಬೀರಿದ್ದು ಗೊತ್ತಾಗಿದೆ. ಈ ಕ್ಷೇತ್ರದಲ್ಲಿನ ಹಿಂದಿನ ಅಧ್ಯಯನಗಳು ಸಂತಾನೋತ್ಪತ್ತಿ ಮಾಡುವ ಮೊದಲು ಕೆಲವು ರಾಸಾಯನಿಕಗಳಿಗೆ ಪುರುಷರು ಒಡ್ಡಿಕೊಳ್ಳುವುದರಿಂದ ಅವುಗಳ ಸಂತತಿಯ ಮೇಲೆ ಪರಿಣಾಮ ಬೀರಬಹುದು ಎಂದು ತೋರಿಸಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನೀವು ಸಿಗರೇಟ್ (cigarette) ಸೇದುತ್ತೀರಾ? ಪದೇ ಪದೇ ಹೊಗೆ ಬಿಡೋ ಅಭ್ಯಾಸ ಇದೆಯಾ? ನೀವು ಪ್ರೌಢಾವಸ್ಥೆಗೆ ತಲುಪುವ ಮುನ್ನವೇ ಈ ಚಟ (Bad habits) ಪ್ರಾರಂಭ ಮಾಡಿಕೊಂಡಿದ್ದೀರಾ? ಹಾಗಿದ್ರೆ ನೀವು ಹುಷಾರಾಗಿರಬೇಕು. ಜೊತೆಗೆ ನಿಮ್ಮ ಮೊಮ್ಮಕ್ಕಳೂ (grand children’s) ಹುಷಾರಾಗಿ ಇರಲೇ ಬೇಕು. ಯಾಕೆಂದ್ರೆ ನೀವು ಬಿಟ್ಟ ಹೊಗೆ ನಿಮ್ಮ ಮಕ್ಕಳನ್ನಲ್ಲ, ಅವರ ಮಕ್ಕಳನ್ನು ಅಂದರೆ ನಿಮ್ಮ ಮೊಮ್ಮಕ್ಕಳನ್ನು ಅಪಾಯಕ್ಕೆ ದೂಡುವ ಸಾಧ್ಯತೆ ಇದೆಯಂತೆ. ಇಂಥದ್ದೊಂದು ಆಘಾತಕಾರಿ ಮಾಹಿತಿ (Survey) ಇದೀಗ ಹೊರ ಬಿದ್ದಿದೆ. ನೀವೀಗ ಸಿಗರೇಟ್ ಸುಡುವ ಚಟ ಶುರು ಮಾಡಿಕೊಂಡಿದ್ದರೆ ಇಂದೇ, ಈಗಲೇ, ಈ ಸುದ್ದಿ ಓದಿದ ಕ್ಷಣದಿಂದಲೇ ಬಿಡುವುದು ಒಳಿತು. ಇಲ್ಲವಾದರೆ ಮುಂದೆ ನಿಮ್ಮ ಮೊಮ್ಮಕ್ಕಳು ಪಶ್ಚಾತ್ತಾಪ ಪಡಬೇಕಾಗುತ್ತದೆ. Smoking is injuries to health ಅನ್ನೋದನ್ನು ಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ.

ಆಘಾತಕಾರಿ ಮಾಹಿತಿ ನೀಡಿದ ಸಂಶೋಧಕರು

ವಿದೇಶಗಳಲ್ಲಿ ಈ ಕುರಿತಂತೆ ಈ ಹಿಂದಿನಿಂದಲೂ ಸಂಶೋಧನೆಗಳು ನಡೆಯುತ್ತಲೇ ಇವೆ. ಯಾರೋ ಒಬ್ಬ ವ್ಯಕ್ತಿ ಸಿಗರೇಟ್ ಸೇರಿದರೆ, ಆತನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ವಿಚಿತ್ರ ಎಂದರೆ ಆತನು ಬಿಟ್ಟ ಹೋಗೆ ಸೇವಿಸುತ್ತಾ ಪಕ್ಕದಲ್ಲಿದ್ದ ವ್ಯಕ್ತಿಯ ಆರೋಗ್ಯದ ಮೇಲೂ ಆ ಹೊಗೆ ಪರಿಣಾಮ ಬೀರುತ್ತದೆ. ಇದೀಗ ಸಂಶೋಧನೆಯ ಪ್ರಕಾರ ಸಿಗರೇಟ್ ಅಥವಾ ಯಾವುದೇ ಧೂಮಪಾನದ ಹೊಗೆಯ ಎಫೆಕ್ಟ್ ನಿಮ್ಮನ್ನಷ್ಟೇ ಅಲ್ಲ, ನಿಮ್ಮ ಮೊಮ್ಮಕ್ಕಳನ್ನೂ ಕಾಡುತ್ತದೆ ಎನ್ನುತ್ತಿದೆ.

ಹೆಣ್ಣು ಮಕ್ಕಳ ಮೇಲೆ ಪರಿಣಾಮ ಹೆಚ್ಚು

ಹೆಣ್ಣು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಇಂತಹ ಮತ್ತೊಂದು ಆಘಾತಕಾರಿ ವಿಚಾರವನ್ನು ಸಂಶೋಧನೆ ಬಹಿರಂಗಪಡಿಸಿದೆ. ಪ್ರೌಢಾವಸ್ಥೆಗೆ ಮುನ್ನ ಅಜ್ಜ ಅಥವಾ ಮುತ್ತಜ್ಜರು ಧೂಮಪಾನ ಮಾಡಲು ಪ್ರಾರಂಭಿಸಿದ್ದಲ್ಲಿ, ಅವರ ಮೊಮ್ಮಕ್ಕಳಲ್ಲಿ, ಅದರಲ್ಲೂ ಮೊಮ್ಮಗಳಲ್ಲಿ ದೇಹದ ಕೊಬ್ಬನ್ನು ಹೆಚ್ಚಿಸಿರುವುದು ಕಂಡುಬಂದಿದೆ. ಯುನೈಟೆಡ್ ಕಿಂಗ್‌ಡಂನಲ್ಲಿ 90 ರ ದಶಕದ 30 ವರ್ಷದ ಮಕ್ಕಳನ್ನು ಅಧ್ಯಯನ ಮಾಡಿದ ಸಂಶೋಧನೆಯಲ್ಲಿ ಹೊಸ ವಿವರಗಳನ್ನು ಬಹಿರಂಗಪಡಿಸಲಾಗಿದೆ. ಬ್ರಿಟನ್ ನ ಬ್ರಿಸ್ಟಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇಂಥದ್ದೊಂದು ಸಂಶೋಧನೆ ನಡೆಸಿದ್ದಾರೆ.

ಇದನ್ನೂ ಓದಿ: Smoking: ಧೂಮಪಾನ ತ್ಯಜಿಸಲು ಇಲ್ಲಿದೆ ಸುಲಭವಾದ ಮಾರ್ಗ, ಟ್ರೈ ಮಾಡಿದವ್ರಿಗೆ ಯಶಸ್ಸು ಸಿಕ್ಕಿದ್ಯಂತೆ!

ತಂದೆಯ ಅಜ್ಜ ಪ್ರೌಢಾವಸ್ಥೆಗೆ ಮುಂಚೆಯೇ ಧೂಮಪಾನವನ್ನು ಪ್ರಾರಂಭಿಸಿದ್ದರೆ ಅದು ಮೊಮ್ಮಗಳ ಮೇಲೆ ಪರಿಣಾಮ ಬೀರಿದ್ದು ಗೊತ್ತಾಗಿದೆ. ಈ ಕ್ಷೇತ್ರದಲ್ಲಿನ ಹಿಂದಿನ ಅಧ್ಯಯನಗಳು ಸಂತಾನೋತ್ಪತ್ತಿ ಮಾಡುವ ಮೊದಲು ಕೆಲವು ರಾಸಾಯನಿಕಗಳಿಗೆ ಪುರುಷರು ಒಡ್ಡಿಕೊಳ್ಳುವುದರಿಂದ ಅವುಗಳ ಸಂತತಿಯ ಮೇಲೆ ಪರಿಣಾಮ ಬೀರಬಹುದು ಎಂದು ತೋರಿಸಿದೆ. ಆದಾಗ್ಯೂ, ಈ ವಿದ್ಯಮಾನವು ಮಾನವರಲ್ಲಿ ಇದೆಯೇ ಮತ್ತು ಯಾವುದೇ ಸ್ಪಷ್ಟವಾದ ಪರಿಣಾಮಗಳನ್ನು ಇತರ ಅಂಶಗಳಿಂದ ಹೆಚ್ಚು ಸುಲಭವಾಗಿ ವಿವರಿಸಬಹುದೇ ಎಂಬ ಬಗ್ಗೆ ಅನುಮಾನಗಳಿವೆ.

ಈ ಹಿಂದೆಯೂ ಹಲವು ಬಾರಿ ಸಂಶೋಧನೆ

ಮಾನವರಲ್ಲಿ ಪ್ರಿಪ್ಯುಬರ್ಟಲ್ ಮಾನ್ಯತೆಗಳ ಪರಿಣಾಮಗಳನ್ನು ಸಂಶೋಧಿಸಲು ಬ್ರಿಸ್ಟಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು 14 ಸಾವಿರಕ್ಕೂ ಹೆಚ್ಚು ವ್ಯಕ್ತಿಗಳಲ್ಲಿ ಆಗಿರುವ ಪರಿಣಾಮವನ್ನು ಅಧ್ಯಯನ ಮಾಡಿದ್ದರು. ಅವರ ಪೂರ್ವಜರು ಬಾಲ್ಯದಲ್ಲಿ (13 ರಿಂದ 16 ವರ್ಷ ವಯಸ್ಸಿನವರು ಧೂಮಪಾನ ಮಾಡಲು ಪ್ರಾರಂಭಿಸಿದವರಿಗೆ ಹೋಲಿಸಿದರೆ, 13 ವರ್ಷಕ್ಕಿಂತ ಮುಂಚೆಯೇ ಅವರ ತಂದೆಯ ಅಜ್ಜ ಅಥವಾ ಮುತ್ತಜ್ಜರು ಧೂಮಪಾನ ಮಾಡಲು ಪ್ರಾರಂಭಿಸಿದ್ದ ಮಹಿಳೆಯರಲ್ಲಿ ಹೆಚ್ಚಿನ ದೇಹದ ಕೊಬ್ಬುಕಂಡು ಬಂದಿದ್ದವು.

ಇದನ್ನೂ ಓದಿ: Smoking: ಧೂಮಪಾನದಿಂದ ದೂರ ಇರಬೇಕಾ..? ಹಾಗಿದ್ರೆ ಪ್ರತಿನಿತ್ಯ ಈ ಆಹಾರ ಸೇವಿಸಿ

ಪುರುಷರಲ್ಲಿ ಈ ರೀತಿಯ ಯಾವುದೇ ಪರಿಣಾಮಗಳು ಅಷ್ಟಾಗಿ ಕಂಡು ಬಂದಿಲ್ಲ. ಮಕ್ಕಳು ಅಧಿಕ ತೂಕ ಹೊಂದಲು ಒಂದು ಕಾರಣವೆಂದರೆ ಅವರ ಪೂರ್ವಜರ ಜೀವನಶೈಲಿ ಅಂತ ತಂಡದ ಪ್ರಮುಖ ಸಂಶೋಧಕ, ಲೇಖಕ ಪ್ರೊಫೆಸರ್ ಜೀನ್ ಗೋಲ್ಡಿಂಗ್ ಹೇಳಿದ್ದಾರೆ. ಪ್ರಸ್ತುತ ಆಹಾರ ಶೈಲಿಯಿಂದಲೂ ಈಗ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಅಂತ ಅವರು ತಿಳಿಸಿದ್ದಾರೆ.
Published by:Annappa Achari
First published: