ಟ್ರಾಫಿಕ್​ ಪೊಲೀಸ್​ ದಂಡ ವಿಧಿಸಿದ್ದಕ್ಕಾಗಿ ಈತ ಮಾಡಿದ್ದೇನು ಗೊತ್ತೇ?

ಲೈನ್​ ಮ್ಯಾನ್​ ವೃತ್ತಿಯನ್ನು ನಿರ್ವಹಿಸುತ್ತಿದ್ದ ಶ್ರೀನಿವಾಸ್​ ಎಂಬಾತ ಹೆಲ್ಮೆಟ್​​ ಧರಿಸದೆ ಬೈಕ್​ ಚಲಾಯಿಸಿದ್ದಾರೆ. ಇದನ್ನು ಕಂಡು ಟ್ರಾಫಿಕ್​ ಪೊಲೀಸರು ಹೆಲ್ಮೆಟ್​​ ಧರಿಸದೇ ಪ್ರಯಾಣ ಮಾಡಿದಕ್ಕಾಗಿ 500 ರೂ. ದಂಡ ವಿಧಿಸಿದ್ದಾರೆ.

news18
Updated:August 2, 2019, 7:39 PM IST
ಟ್ರಾಫಿಕ್​ ಪೊಲೀಸ್​ ದಂಡ ವಿಧಿಸಿದ್ದಕ್ಕಾಗಿ ಈತ ಮಾಡಿದ್ದೇನು ಗೊತ್ತೇ?
ಟ್ರಾಫಿಕ್​ ಪೊಲೀಸ್​
  • News18
  • Last Updated: August 2, 2019, 7:39 PM IST
  • Share this:
ಸಾಮಾನ್ಯವಾಗಿ ಟ್ರಾಫಿಕ್​ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಾಗ​ ಜನ ಅವರನ್ನು ರಿಕ್ವೆಸ್ಟ್​ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ದಂಡ ವಸೂಲಿ ಮಾಡಿದ ಪೊಲೀಸರಿಗೆ ಹಿಡಿಶಾಪ ಹಾಕಿಕೊಂಡು ಹೋಗುತ್ತಾರೆ. ಆದರೆ ಉತ್ತರ ಪ್ರದೇಶದಲ್ಲೊಬ್ಬ ವ್ಯಕ್ತಿ ಟ್ರಾಫಿಕ್​​ ಪೊಲೀಸರಿಂದ ದಂಡ ಕಟ್ಟಿಸಿಕೊಂಡು, ಸ್ಟೇಷನ್​ ಕರೆಂಟ್​ ಕಟ್​ ಮಾಡಿ ಜಿದ್ದು ತೀರಿಸಿಕೊಂಡಿದ್ದಾನೆ.

ಲೈನ್​ ಮ್ಯಾನ್​ ವೃತ್ತಿಯನ್ನು ನಿರ್ವಹಿಸುತ್ತಿದ್ದ ಶ್ರೀನಿವಾಸ್​ ಎಂಬಾತ ಹೆಲ್ಮೆಟ್​​ ಧರಿಸದೆ ಬೈಕ್​ ಚಲಾಯಿಸಿದ್ದಾರೆ. ಇದನ್ನು ಕಂಡು ಟ್ರಾಫಿಕ್​ ಪೊಲೀಸರು ಹೆಲ್ಮೆಟ್​​ ಧರಿಸದೇ ಪ್ರಯಾಣ ಮಾಡಿದಕ್ಕಾಗಿ 500 ರೂ. ದಂಡ ವಿಧಿಸಿದ್ದಾರೆ. ಇದರಿಂದ ಸಿಟ್ಟುಗೊಂಡಿದ್ದ ಶ್ರೀನಿವಾಸ್​ ಸಮೀಪದ ಪೊಲೀಸ್​​ ಠಾಣೆಯ ವಿದ್ಯುತ್​ ಕಟ್​ ಮಾಡಿದ್ದಾರೆ.

ಇದನ್ನೂ ಓದಿ: ಇಂಡೋನೇಷಿಯಾದಲ್ಲಿ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ

ಈ ಸನ್ನಿವೇಷಕ್ಕೆ ಸಮರ್ಥನೆ ನೀಡಿದ ಲೈನ್​ಮ್ಯಾನ್​ ಶ್ರಿನಿವಾಸ್​, ಪ್ರಯಾಣಿಕರು ರೂಲ್ಸ್​ ಫಾಲೋ ಮಾಡಿ ಎಂದು ಹೇಳುತ್ತೀರಾ. ಇಲ್ಲವಾದಲ್ಲಿ ದಂಡ ಹಾಕುತ್ತೀರ. ಆದರೆ ನಿಮ್ಮ ಠಾಣೆಯ ವಿದ್ಯುತ್​ ಬಿಲ್​ ಬರೋಬ್ಬರಿ 6 ಲಕ್ಷಕ್ಕೂ ಅಧಿಕವಿದೆ. ಬಿಲ್​ ಪಾವತಿಸಿ ವಿದ್ಯುತ್​ ಪಡೆಯಿರಿ ಎಂದು ಪೊಲೀಸರಿಗೆ ಕಾನೂನು ಪಾಲನೆಯ ಪಾಠ ಮಾಡಿದ್ದಾನೆ. ನಂತರ ಪೊಲೀಸ್​ ಅಧಿಕಾರಿಗಳು ವಿದ್ಯುತ್​ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಎರಡು ಇಲಾಖೆಯ ಅಧಿಕಾರಿಗಳು ಮಾತನಾಡಿದ ಬಳಿಕ, ಠಾಣೆಗೆ ವಿದ್ಯುತ್​​​ ಶಕ್ತಿ ನೀಡಿದ್ದಾರೆ
First published:August 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...