ಜೊಮ್ಯಾಟೋ ಸ್ಥಾಪಕ ದೀಪೆಂದರ್ ಗೋಯೆಲ್ ಈಗ ಭಾರತದ ಶ್ರೀಮಂತ ವ್ಯಕ್ತಿ ಹೇಗೆ ಗೊತ್ತೇ?

ನಾವು ಯಶಸ್ವಿಯಾಗುತ್ತೇವೆಯೇ ಅಥವಾ ವಿಫಲವಾಗುತ್ತೇವೆಯೇ ಎಂಬುದು ನನಗೆ ತಿಳಿದಿಲ್ಲ - ನಾವು ಖಂಡಿತವಾಗಿಯೂ ಶ್ರಮ ಹಾಕಿ ಪ್ರಯತ್ನಪಡುತ್ತೇವೆ ಮತ್ತು ಉತ್ತಮವಾದುದನ್ನೇ ಜನರಿಗೆ ಒದಗಿಸುತ್ತೇವೆ" ಎಂದು ಗೋಯಲ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ದೀಪೇಂದರ್​ ಗೋಯಲ್​

ದೀಪೇಂದರ್​ ಗೋಯಲ್​

 • Share this:

  ಜೊಮ್ಯಾಟೋ ಕಂಪೆನಿಯ ಷೇರು ಮೌಲ್ಯ ಶೇ 66%  ಏರಿಕೆಯಿಂದಾಗಿ ಸಂಸ್ಥೆಯ ಸ್ಥಾಪಕರಾದ ದೀಪೆಂದರ್ ಗೋಯೆಲ್ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊಮ್ಯಾಟೋದಲ್ಲಿ ಪ್ರಸ್ತುತ 4.7% ಷೇರನ್ನು ಇವರು ಹೊಂದಿದ್ದು $650 ಮಿಲಿಯನ್ ಮೌಲ್ಯದ ಆಸ್ತಿಯನ್ನು ದೀಪೆಂದರ್ ಹೊಂದಿದ್ದಾರೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಸೂಚ್ಯಂಕ ತಿಳಿಸಿದೆ.


  368 ಮಿಲಿಯನ್‌ಗಿಂತಲೂ ಹೆಚ್ಚಿನ ಮೂಲ ಆದಾಯವನ್ನು ಅವರು ಹೊಂದಿದ್ದು ಇದನ್ನು ಬಳಸಿದಲ್ಲಿ ಕಂಪೆನಿಯಲ್ಲಿ ಇವರ ಪಾಲು ಇನ್ನೂ ದುಪ್ಪಟ್ಟಾಗುತ್ತದೆ. ಇದರ ಮಾರುಕಟ್ಟೆ ಬಂಡವಾಳ $13.3 ಬಿಲಿಯನ್ ಆಗಿದೆ.


  $80 ಬಿಲಿಯನ್ ಮೌಲ್ಯದ ಆಸ್ತಿ ಹೊಂದಿರುವ ಮುಕೇಶ್ ಅಂಬಾನಿಗೆ ಹೋಲಿಸಿದರೆ ಇದು ತುಂಬಾ ಚಿಕ್ಕ ಮೊತ್ತವಾದರೂ ದೇಶದ ಅತಿ ಶ್ರೀಮಂತ ಆರಂಭಿಕ ಔದ್ಯೋಗಿಗಳ ಪಟ್ಟಿಯಲ್ಲಿ ಇವರು ಪ್ರಮುಖರಾಗಿದ್ದಾರೆ. ಬೈಜೂಸ್‌ನ ಸ್ಥಾಪಕರಾಗಿರುವ ವೈಜು ರವೀಂದ್ರನ್ $1 ಬಿಲಿಯನ್ ಮೌಲ್ಯವನ್ನು ಹೊಂದಿ ಉನ್ನತ ಸ್ಥಾನದಲ್ಲಿದ್ದರೆ ಪೇಟಿಎಂ ನ ವಿಜಯ್ ಶೇಖರ್ ಶರ್ಮ, ಫ್ಲಿಪ್‌ಕಾರ್ಟ್‌ನ ಸಹಸ್ಥಾಪಕರಾದ ಸಚಿನ್ ಬನ್ಸಾಲ್ ಹಾಗೂ ಬಿನ್ನಿ ಬನ್ಸಾಲ್ ಈ ಗುಂಪಿಗೆ ಸೇರ್ಪಡೆಯಾಗಿದ್ದಾರೆ.


  ಗೋಯಲ್​ ಅವರ ತಂದೆ ಶಿಕ್ಷಕರು, ಗೋಯಲ್ 2008 ರಲ್ಲಿ ಜೊಮ್ಯಾಟೋವನ್ನು ಸ್ಥಾಪಿಸಿದರು. ಅತ್ಯಂತ ವೇಗವಾಗಿ ಬೆಳೆದ ಈ ಸಂಸ್ಥೆ ಭಾರತೀಯ ಸ್ಟಾರ್ಟ್​ಅಪ್​ ಉದ್ಯಮದಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದುಕೊಂಡಿದೆ.


  ಶುಕ್ರವಾರ ಬ್ಲಾಗ್ ಒಂದರಲ್ಲಿ ಗೋಯೆಲ್ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದು ನಮಗಿಂದು ಅತ್ಯಂತ ಮಹತ್ವಪೂರ್ಣ ದಿನ ಎಂದು ತಿಳಿಸಿದ್ದಾರೆ. ಜೊತೆಗೆ ಗೋಯೆಲ್ ಅವರು ಭಾರತದ ಅಂತರ್ಜಾಲ ವ್ಯವಸ್ಥೆಗೆ ಧನ್ಯವಾದ ಅರ್ಪಿಸಿದ್ದು ನಾವಿಂದು ಈ ಸ್ಥಾನಕ್ಕೆ ತಲುಪಲು ಇದು ಕೂಡ ಕಾರಣವಾಗಿದೆ ಎಂದು ಸ್ಮರಿಸಿದ್ದಾರೆ.


  ಭಾರತೀಯ ಅಂತರ್ಜಾಲದ ಮೂಲಕ ನಾವು ಯುವ ಪೀಳಿಗೆಯನ್ನು ಬೇಗ ತಲುಪಿದೆವು, ದೇಶದ ಚಿಲ್ಲರೆ ಹೂಡಿಕೆದಾರರಿಗೆ ಒಂದು ಅವಕಾಶವನ್ನು ನೀಡಿತು ನಮ್ಮ ಸಂಸ್ಥೆ. ಆರಂಭದಲ್ಲಿ ಜನರು ನಮ್ಮ ಕಂಪೆನಿಯ ಬಗ್ಗೆ ಸಾಕಷ್ಟು ಆಸಕ್ತಿ ತೋರಿಸಿದರು ಇದು ನಮಗೆ ಉತ್ಸಾಹವನ್ನು ಉಂಟು ಮಾಡಿತು.


  ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಗಣಿತ ಮತ್ತು ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾದ ಗೋಯೆಲ್ ಒಂದು ದಿನ ಪಿಜ್ಜಾ ಆರ್ಡರ್‌ ಮಾಡಿ ನಿರಾಶೆಗೊಂಡಿದ್ದರು. ಅಂದು ಅವರಿಗೆ ಆನ್‌ಲೈನ್ ಮೂಲಕ ಆಹಾರ ತಲುಪಿಸುವ  ಪರಿಕಲ್ಪನೆ ಮನದಲ್ಲಿ ಮೂಡಿತು. ಪದವಿ ಪಡೆದು ಬೈನ್ ಏಂಡ್ ಕೊ ಗೆ ಸೇರಿಕೊಂಡಾಗ ಕಂಪನಿಯ ಕೆಫೆಟೇರಿಯಾದಲ್ಲಿ ಸಹೋದ್ಯೋಗಿಗಳಿಗೆ ಎಂದು ಮೀಸಲಾದ ಸೀಮಿತ ಮೆನು ಮತ್ತು ಹತ್ತಿರದ ರೆಸ್ಟೋರೆಂಟ್‌ಗಳಲ್ಲಿ ಸಿಗುವ ಆಹಾರದ ಬಗ್ಗೆ  ಮಾತನಾಡುವುದನ್ನು ನೋಡಿದ್ದರು, ಆಗ ಮತ್ತಷ್ಟು ಇವರಲ್ಲಿ ಇದ್ದ ಆಸೆ ಚಿಗುರಿತು.


  ಗೋಯಲ್ ಮತ್ತು ಸಹೋದ್ಯೋಗಿ ಪಂಕಜ್ ಚಡ್ಡಾ ಅವರು ನೆರೆಹೊರೆಯ ಕೆಫೆಗಳು ಮತ್ತು ರೆಸ್ಟೋರೆಂಟ್‌ಗಳ ಮೆನುಗಳನ್ನು ಫೋನ್ ಸಂಖ್ಯೆಗಳೊಂದಿಗೆ ಅಪ್‌ಲೋಡ್ ಮಾಡಲು ಪ್ರಾರಂಭಿಸಿದರು. ಇವರ ಸಹೋದ್ಯೋಗಿಗಳಿಂದಲೇ ಇದಕ್ಕೆ ಭಾರಿ ಯಶಸ್ಸು ಕಂಡಿತು, ಅವರು ಹೀಗೆ ಸಾಹಸೋದ್ಯಮಕ್ಕೆ ಚಾಲನೆ ನೀಡಿದರು. ದೆಹಲಿ ವಿಶ್ವವಿದ್ಯಾಲಯದಲ್ಲಿ ಅವರ ಪತ್ನಿ ಕೆಲಸ ಪಡೆದ ನಂತರ, ಗೋಯಲ್ ಪೂರ್ಣ ಸಮಯದ ಉದ್ಯಮಶೀಲತೆಯನ್ನು ಪಡೆಯಲು ಉದ್ಯೋಗ ತ್ಯಜಿಸಿದರು.ಕೆಲಸ ತ್ಯಜಿಸಿ, ಜೊಮಾಟೋ ಸಾಹಸಕ್ಕೆ ಕೈ ಹಾಕಿದರು.


  ಈ ಸೇವೆಯು ತ್ವರಿತವಾಗಿ ಜನರನ್ನು ಸೆಳೆಯಿತು ಮತ್ತು ಇನ್ಫೊ ಎಡ್ಜ್ ಇಂಡಿಯಾ ಲಿಮಿಟೆಡ್‌ನ ಉದ್ಯಮಿ ಹಾಗೂ ಹೂಡಿಕೆದಾರರಿಂದ ಹಾಗೂ ಸಂಜೀವ್ ಬಿಖ್‌ಚಂದಾನಿ ಅವರಿಂದ ಆರಂಭಿಕ 1 ಮಿಲಿಯನ್ ಹಣವನ್ನು ಬಂಡವಾಳವಾಗಿ ಪಡೆದುಕೊಂಡರು. ಜೊಮ್ಯಾಟೋ ಎಂಬ ಹೆಸರಿನಿಂದ ಆರಂಭವಾದ ಸಂಸ್ಥೆಗೆ ಜಾಗತಿಕ ಹೂಡಿಕೆದಾರರಾದ ಸಿಕ್ವೊಯ ಕ್ಯಾಪಿಟಲ್, ಟೈಗರ್ ಗ್ಲೋಬಲ್ ಮ್ಯಾನೇಜ್‌ಮೆಂಟ್ ಮತ್ತು ಜ್ಯಾಕ್ ಮಾ'ಸ್ ಆಂಟ್ ಗ್ರೂಪ್ ಕಂ ಬೆಂಬಲಿಗರಾಗಿ ಸೇರಿಕೊಂಡರು.


  ದೆಹಲಿಯ ಹೊರವಲಯದಲ್ಲಿರುವ ಗುರ್‌ಗಾವ್ ಮೂಲದ ಜೊಮ್ಯಾಟೋ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಿತು, ಟರ್ಕಿ, ಬ್ರೆಜಿಲ್, ನ್ಯೂಜಿಲೆಂಡ್ ಮತ್ತು ಇಂಡೋನೇಷ್ಯಾ ಸೇರಿದಂತೆ 19 ದೇಶಗಳಲ್ಲಿ 100 ನಗರಗಳಲ್ಲಿ ಟೇಬಲ್ ಬುಕಿಂಗ್, ಹೋಮ್ ಡೆಲಿವರಿ ಮತ್ತು ರೆಸ್ಟೋರೆಂಟ್ ಮತ್ತು ನೈಟ್​ ಲೈಫ್​ ಮಾರ್ಗದರ್ಶಿಯಾಗಿ ತನ್ನ ಉದ್ಯಮ ಕ್ಷೇತ್ರವನ್ನು ವಿಸ್ತರಿಸಿದೆ.


  ಇದನ್ನು ಓದಿ: ನಾನು ರಾಜ್​ ಕುಂದ್ರಾ ಅವರನ್ನ ಭೇಟಿಯಾಗಿಲ್ಲ, ಅವು ಅಶ್ಲೀಲ ಚಿತ್ರಗಳೂ ಅಲ್ಲ: ಆರೋಪಿ ತನ್ವೀರ್​ ಹಶ್ಮಿ ಹೇಳಿಕೆ

  ನಾವು ಯಶಸ್ವಿಯಾಗುತ್ತೇವೆಯೋ ಅಥವಾ ವಿಫಲವಾಗುತ್ತೇವೆಯೋ ಎಂಬುದು ನನಗೆ ತಿಳಿದಿಲ್ಲ - ನಾವು ಖಂಡಿತವಾಗಿಯೂ ಶ್ರಮ ಹಾಕಿ ಪ್ರಯತ್ನ ಪಡುತ್ತೇವೆ ಮತ್ತು ಉತ್ತಮವಾದುದನ್ನೇ ಜನರಿಗೆ ಒದಗಿಸುತ್ತೇವೆ" ಎಂದು ಗೋಯಲ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: