Life After Death: ಅಕಾಲಿಕ ಮರಣ ಹೊಂದಿದವರು ಭೂತ-ಪ್ರೇತಗಳಾಗುತ್ತಾರಾ? ಸಾವಿನ ಬಳಿಕವೂ ಜೀವನ ಇದೆಯಾ? ಉತ್ತರ ಇಲ್ಲಿದೆ

ಪ್ರಪಂಚದಲ್ಲಿ ನಿಜವಾಗಿಯೂ ಭೂತ-ಪ್ರೇತಗಳು ಇವೆಯಾ? ಈ ಪ್ರಶ್ನೆಗೆ ಸಂಬಂಧಿಸಿದಂತೆ ಜಗತ್ತಿನಲ್ಲಿ ಹಲವು ಸಂಶೋಧನೆಗಳು ನಡೆದಿವೆ. ಆದರೆ ಇದುವರೆಗೆ ಯಾರೂ ಸಹ ಇದಕ್ಕೆ ಸರಿಯಾದ ಉತ್ತರ ಕಂಡುಹಿಡಿಯಲು ಆಗಿಲ್ಲ. ಆದರೆ ಈ ರಹಸ್ಯಗಳಿಗೆಲ್ಲಾ ಗರುಡ ಪುರಾಣ(Garuda Purana)ದಲ್ಲಿ ಉತ್ತರಗಳಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಈ ಭೂಮಿ(Earth) ಮೇಲೆ ಹುಟ್ಟಿದ ಪ್ರತಿಯೊಂದು ಜೀವಕ್ಕೂ ಅಂತ್ಯ(End)ವಿದೆ. ಎಲ್ಲರಿಗೂ ಸಾವಿದೆ. ಸಾವಿ(Death)ನಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಕೆಲವರಿಗೆ ಸಾವು ನಿಧಾನವಾಗಿ ಬರಬಹುದು ಅಷ್ಟೇ. ಮತ್ತೆ ಕೆಲವರಿಗೆ ತುಂಬಾ ಬೇಗ ಬಂದುಬಿಡುತ್ತೆ. ಅಪಘಾತ(Accident), ಆತ್ಮಹತ್ಯೆ(Suicide) ಮಾಡಿಕೊಂಡವರು ನಿಜಕ್ಕೂ ಭೂತ(Ghost)ವಾಗಿ ಕಾಡುತ್ತಾರಾ? ಇಲ್ಲ ಸಿನಿಮಾ(Movie), ಧಾರಾವಾಹಿ(Serials)ಗಳಲ್ಲಿ ತೋರಿಸಿದಂತೆ ಸತ್ತಮೇಲೂ ಇಲ್ಲೇ ಪ್ರೇತಗಳಂತೆ ಸುತ್ತುತ್ತಿರುತ್ತಾ? ಈ ಭೂಮಿ ಮೇಲೆ ನಾವು ಬುದುಕುತ್ತಿರುವುದು ಬಾಡಿಗೆ ಮನೆಯಲ್ಲಿದ್ದಂತೆ, ಸತ್ತಮೇಲೆ ಸೇರಬೇಕು ಸ್ವಂತ ಮನೆಗೆ. ಆದರೆ ಅಕಾಲಿಕ ಸಾವನ್ನಪ್ಪಿದವರು ದೆವ್ವ, ಭೂತಗಳಾಗಿ ಕಾಡುತ್ತಾರೆ ಅನ್ನೋ ಮಾತುಗಳನ್ನು ಕೇಳುತ್ತಿರುತ್ತೇವೆ.

    ಕೆಲ ವೈರಲ್​ ವಿಡಿಯೋಗಳಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದಾಗ ರಸ್ತೆ ಮಧ್ಯೆ ನಿಂತಿರುವ ದೆವ್ವ(Ghost)ಗಳು ನಿಜವಾಗಲೂ ಅಸಲಿಯಾ? ಅಥವಾ ಕಣ್ಣೀರು ಹಾಕುತ್ತಾ ವಿಚಿತ್ರ ಶಬ್ಧ ಕೇಳುವುದು ಸತ್ಯಾನಾ? ಮತ್ತೊಬ್ಬರ ಮೈ ಮೇಲೆ ಸತ್ತವರು ಬಂದು ಮಾತನಾಡುವುದು ನಿಜನಾ? ಪ್ರಪಂಚದಲ್ಲಿ ನಿಜವಾಗಿಯೂ ಭೂತ-ಪ್ರೇತಗಳು ಇವೆಯಾ? ಈ ಪ್ರಶ್ನೆಗೆ ಸಂಬಂಧಿಸಿದಂತೆ ಜಗತ್ತಿನಲ್ಲಿ ಹಲವು ಸಂಶೋಧನೆಗಳು ನಡೆದಿವೆ. ಆದರೆ ಇದುವರೆಗೆ ಯಾರೂ ಸಹ ಇದಕ್ಕೆ ಸರಿಯಾದ ಉತ್ತರ ಕಂಡುಹಿಡಿಯಲು ಆಗಿಲ್ಲ. ಆದರೆ ಈ ರಹಸ್ಯಗಳಿಗೆಲ್ಲಾ ಗರುಡ ಪುರಾಣ(Garuda Purana)ದಲ್ಲಿ ಉತ್ತರಗಳಿವೆ.

    ಸಾವಿನ ಬಳಿಕವೂ ಜೀವನ, ಗರುಡ ಪುರಾಣದಲ್ಲಿರೋದೇನು?

    ಈ ಬಗ್ಗೆ ಹಿಂದಿನಿಂದಲೂ ಹಲವು ಸಂಶೋಧನೆಗಳು ನಡೆದಿವೆ. ಆದರೆ ಇದುವರೆಗೂ ಇದು ರಹಸ್ಯವಾಗಿಯೇ ಉಳಿದಿದೆ. ಒಬ್ಬ ವ್ಯಕ್ತಿಯು ದೇಹವನ್ನು ತೊರೆದಾಗ ಮಾತ್ರ ಸಾವಿನ ನಂತರದ (Life After Death) ಜೀವನವನ್ನು ಅರಿತುಕೊಳ್ಳಬಹುದು ಎಂದು ಜನರು ಹೇಳುತ್ತಾರೆ. ಆದರೆ, ಒಬ್ಬ ವ್ಯಕ್ತಿಯು ಮೃತಪಟ್ಟ ಬಳಿಕ ಸಾವಿನ ನಂತರ ಜೀವನದ ಅನುಭವವನ್ನ ಹೇಗೆ ಹೇಳಿಕೊಳ್ಳುತ್ತಾನೆ. ಆದರೆ ಗರುಡ ಪುರಾಣದಲ್ಲಿ ಆತ್ಮ, ಚೈತನ್ಯ ಮತ್ತು ಸೂಕ್ಷ್ಮ ಆತ್ಮದ ನಡುವಿನ ವ್ಯತ್ಯಾಸವನ್ನು ಹೇಳಲಾಗಿದೆ. ಸಾವಿನ ಸಮಯ ಹಾಗೂ ನಂತರದ ವಿಚಾರಗಳನ್ನು ಇದರಲ್ಲಿ ಉಲ್ಲೇಖಿಸಲಾಗಿದೆ.

    ಅಕಾಲಿಕ ಮೃತಪಟ್ಟವರು ದೆವ್ವಗಳಾಗುತ್ತಾರಾ?

    ಗರುಡ ಪುರಾಣದ ಪ್ರಕಾರ, ಅಪಘಾತ, ಕೊಲೆ, ಆತ್ಮಹತ್ಯೆ ಅಕಾಲಿಕವಾಗಿ ಸಾಯುವವರ ಆತ್ಮಗಳು ನಂತರ ಪ್ರೇತಗಳಾಗುತ್ತವೆ ಎಂದು ಹೇಳಲಾಗಿದೆ. ಪ್ರೀತಿ ಕೋಪ, ಕಾಮ , ದ್ವೇಷ, ಹಸಿವು ಈ ರೀತಿಯ ಕೆಲ ಆಸೆಗಳು ಸತ್ತ ಮೇಲೂ ಆತ್ಮಕ್ಕೆ ಬೇಕಂತೆ. ಹೀಗಾಗಿ ಅದನ್ನು ಮತ್ತೆ ಪಡೆಯಲು ಸತ್ತ ನಂತರವೂ ಭೂತ- ಪ್ರೇತಗಳಾಗುತ್ತವೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

    ಭೂತ- ಪ್ರೇತಗಳಿಗೂ ಶ್ರೇಣಿಗಳಿವೆಯಂತೆ

    ಗರುಡ ಪುರಾಣದ ಪ್ರಕಾರ, ಯಾವಾಗ ಆತ್ಮವು ಭೌತಿಕ ದೇಹದಲ್ಲಿ ವಾಸಿಸುತ್ತದೆಯೋ, ಆಗ ಅದನ್ನು ಜೀವಾತ್ಮ ಎಂದು ಕರೆಯಲಾಗುತ್ತದೆ. ಅದು ಸೂಕ್ಷ್ಮ ಶರೀರವನ್ನು ಪ್ರವೇಶಿಸಿದಾಗ, ಅದನ್ನು ಸೂಕ್ಷ್ಮ ಆತ್ಮ ಎಂದು ಕರೆಯಲಾಗುತ್ತದೆ. ಇದೇ ವೇಳೆ, ಕಾಮ ಮತ್ತು ಬಯಕೆಯ ದೇಹವನ್ನು ಪ್ರವೇಶಿಸಿದ ನಂತರ, ಅದನ್ನು ಆತ್ಮದ ಆತ್ಮ ಎಂದು ಕರೆಯಲಾಗುತ್ತದೆ. ಅವುಗಳನ್ನು ಯಮ, ಶಾಕಿನಿ, ಡಾಕಿನಿ, ಮಾಟಗಾತಿ, ಭೂತ, ಪ್ರೇತ, ರಾಕ್ಷಸ ಮತ್ತು ರಕ್ತಪಿಶಾಚಿ ಎಂದು ಕರೆಯಲಾಗುತ್ತದೆ. ಮತ್ತೊಂದೆಡೆ ಕೆಲ ಆತ್ಮಗಳು ತಮ್ಮ ಒಳ್ಳೆಯ ಕೆಲಸವನ್ನು ಪೂರ್ಣಗೊಳಿಸಲು ಸಾವಿನ ಬಳಿಕವೂ ಮತ್ತೊಂದು ದೇಹ ಸೇರಿ ಆ ಕೆಲಸವನ್ನೂ ಪೂರ್ಣಗೊಳಿಸುತ್ತೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ

    ವರದಿ - ವಾಸುದೇವ್​. ಎಂ
    Published by:Latha CG
    First published: