news18-kannada Updated:February 23, 2021, 3:00 PM IST
ಎಲ್ಐಸಿ
ಭಾರತದ ಜೀವ ವಿಮಾ ನಿಗಮವು (ಎಲ್ಐಸಿ) ಸುರಕ್ಷತೆ ಮತ್ತು ಉಳಿತಾಯ ಸಂಯೋಜನೆಯನ್ನು ಒಳಗೊಂಡ ಹೊಸ ಎಲ್ಐಸಿ ಬಿಮಾ ಜ್ಯೋತಿ ಎಂಬ ನೂತನ ಯೋಜನೆಯನ್ನು ಪರಿಚಯಿಸಿದೆ. ನಾನ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್, ಲಿಮಿಟೆಟ್ ಪ್ರೀಮಿಯಂ ಪೇಮೆಂಟ್, ಇಂಡಿವಿಜ್ಯುವಲ್, ಲೈಫ್ ಇನ್ಶೂರೆನ್ಸ್ ಸೇವಿಂಗ್ಸ್ ಪ್ಲಾನ್ ಇದಾಗಿದೆ. ವಿಮೆಯ ರಕ್ಷಣೆಯ ಜೊತೆಗೆ ಉಳಿತಾಯದ ಸಾಧನವಾಗಿಯೂ ವಿಮೆದಾರರು ಇದನ್ನು ಬಳಸಬಹುದಾಗಿದೆ.
ಈ ಯೋಜನೆಯು ಪಾಲಿಸಿದಾರರಿಗೆ ಯೋಜನೆಯ ಅವಧಿಯ ಅಂತ್ಯದಲ್ಲಿ ಒಂದಷ್ಟು ಮೊತ್ತವನ್ನು ನೀಡುವ ಖಾತರಿ ಒದಗಿಸುತ್ತದೆ. ಅಲ್ಲದೆ ಯೋಜನೆಯ ಅವಧಿಯಲ್ಲಿ ಪಾಲಿಸಿದಾರ ಮರಣ ಹೊಂದಿದ್ದಲ್ಲಿ ಆತನ ಕುಟುಂಬಕ್ಕೆ ಹಣಕಾಸಿನ ಬೆಂಬಲವನ್ನು ನೀಡಲಿದೆ. ಪ್ರತಿ ಪಾಲಿಸಿ ವರ್ಷದ ಅಂತ್ಯದ ವೇಳೆಗೆ 1 ಸಾವಿರ ರೂ. ಕನಿಷ್ಠ ಖಾತರಿ ಹಣಕ್ಕೆ 50 ರೂ.ನಂತೆ ಹೆಚ್ಚುವರಿ ಮೊತ್ತವನ್ನು ನೀಡಲಾಗುವುದು. ಕನಿಷ್ಠ ಖಾತರಿ ಮೊತ್ತ 1 ಲಕ್ಷ ರೂ. ಇದ್ದು, ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ.
ಪಾಲಿಸಿಯ ಅವಧಿ ಮತ್ತು ಪಿಪಿಟಿ
ಈ ಪಾಲಿಸಿಯನ್ನು 15 ರಿಂದ 20 ವರ್ಷಗಳ ಅವಧಿಗೆ ತೆಗೆದುಕೊಳ್ಳಬಹುದು. ಪ್ರೀಮಿಯಂ ಪಾವತಿಯ ಅವಧಿ(ಪಿಪಿಟಿ) ಕನಿಷ್ಠ ಅವಧಿ 5 ವರ್ಷ. ಅಂದರೆ 15 ವರ್ಷಗಳ ಪಾಲಿಸಿ ಅವಧಿಗೆ ಪಿಪಿಟಿ 10 ವರ್ಷಗಳು ಮತ್ತು 16 ವರ್ಷಗಳ ಪಾಲಿಸಿಗೆ ಪಿಪಿಟಿ 11 ವರ್ಷಗಳು ಇರುತ್ತದೆ.
ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಪೋಟ ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ ಗಣಿ ಸಚಿವ ಮುರುಗೇಶ್ ನಿರಾಣಿ
ಕನಿಷ್ಠ ಖಾತರಿಯ ಮೊತ್ತ
ಈ ವಿಮೆಯಲ್ಲಿ ಕನಿಷ್ಠ ಖಾತರಿಯ ಮೊತ್ತ 1 ಲಕ್ಷ ರೂ. ಆಗಿದ್ದು, ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ.
ವಯಸ್ಸಿನ ಮಿತಿ
ಈ ಯೋಜನೆ ಪಡೆಯಲು ಕನಿಷ್ಠ 90 ದಿನಗಳ ವಯಸ್ಸಿನಿಂದ ಗರಿಷ್ಠ 60 ವರ್ಷ ವಯಸ್ಸಿನ ತನಕ ವಯೋಮಿತಿ ಇದೆ. ಮೆಚ್ಯುರಿಟಿ ಪಡೆಯಲು ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು ಹಾಗೂ ಗರಿಷ್ಠ ಮೆಚ್ಯುರಿಟಿ ಮುಕ್ತಾಯದ ವಯಸ್ಸು 75 ವರ್ಷಗಳಾಗಿವೆ. ವಾರ್ಷಿಕ, ಅರ್ಧವಾರ್ಷಿಕ, ತ್ರೈಮಾಸಿಕ, ಮಾಸಿಕ ಆಧಾರದಲ್ಲಿ ಪ್ರೀಮಿಯಂ ಪಾವತಿಸಬಹುದು. ಇದಕ್ಕೆ ಸಾಲ ಸೌಲಭ್ಯವೂ ಸಿಗಲಿದೆ.
ರಿಟರ್ನ್ ಹೋಲಿಕೆ
ಪ್ರಮುಖ ಬ್ಯಾಂಕುಗಳು ಈಗ ಸ್ಥಿರ ಠೇವಣಿ (ಎಫ್ಡಿ) ದರವನ್ನು ವಾರ್ಷಿಕ ಶೇ.5 ರಿಂದ 6ರಷ್ಟು ನೀಡುತ್ತಿದ್ದರೆ, ಪ್ರತಿ ಸಾವಿರಕ್ಕೆ 50 ರೂ. ಮೂಲ ಖಾತರಿ ಮೊತ್ತ ನೀಡುವ ಈ ಯೋಜನೆ ನಿಮಗೆ ಹೆಚ್ಚಿನ ಲಾಭ ನೀಡುತ್ತದೆ ಮತ್ತು ಅದು ತೆರಿಗೆ ಮುಕ್ತವಾಗಿರುತ್ತದೆ. ಏಕೆಂದರೆ ತೆರಿಗೆ ಲೆಕ್ಕಾಚಾರವನ್ನು ಬೇಸಿಕ್ ಸಮ್ ಅಶುರ್ಡ್ ಮೊತ್ತದ ಮೇಲೆ ಮಾಡಲಾಗುತ್ತದೆ ಹೊರತು ಪ್ರೀಮಿಯಂ ಮೊತ್ತದ ಮೇಲೆ ಅಲ್ಲ.
ಖಾತರಿ ಮೊತ್ತ
ಉದಾಹರಣೆಗೆ 30 ವರ್ಷದ ವ್ಯಕ್ತಿಯು 15 ವರ್ಷಗಳ ಪಾಲಿಸಿ ಅವಧಿಗೆ 10 ಲಕ್ಷ ರೂ.ಗಳ ಮೂಲ ಮೊತ್ತದ ಯೋಜನೆ ಆಯ್ಕೆ ಮಾಡಿಕೊಂಡರೆ ವಾರ್ಷಿಕ ಪ್ರೀಮಿಯಂ 10 ವರ್ಷಗಳವರೆಗೆ ಪಾವತಿಸಬೇಕಾದದ್ದು 82,545 ರೂ. ಈ ಸಂದರ್ಭದಲ್ಲಿ ಅದಕ್ಕೆ ಸೇರ್ಪಡೆಯಾಗುವ ಖಾತರಿ ಮೊತ್ತ 15 ವರ್ಷಗಳವರೆಗೆ ವರ್ಷಕ್ಕೆ 50 ಸಾವಿರ ರೂ. ಅಥವಾ ಮುಕ್ತಾಯದ ನಂತರ ಒಟ್ಟು 7.50 ಲಕ್ಷ ರೂ. ಸಿಗುತ್ತದೆ.
ರಿಟರ್ನ್ ಲೆಕ್ಕಾಚಾರ
ಯೋಜನೆಯ ಅವಧಿ ಮುಕ್ತಾಯದ ಬಳಿಕ ಸಿಗುವ ಒಟ್ಟು ಮೌಲ್ಯವು 7.50 ಲಕ್ಷ ರೂ. ಜೊತೆಗೆ 10 ಲಕ್ಷ ರೂ. (7.50 ಲಕ್ಷ ರೂ. + 10 ಲಕ್ಷ ರೂ.) ಅಥವಾ 17.50 ಲಕ್ಷ ರೂ. ಆಗುತ್ತದೆ. ಆದ್ದರಿಂದ ವಾರ್ಷಿಕ ರಿಟರ್ನ್ ಅಥವಾ ಇಂಟರ್ನಲ್ ರೇಟ್ ಆಫ್ ರಿಟರ್ನ್ (ಐಆರ್ ಆರ್) - ಪ್ರತಿ ವರ್ಷದ ಆರಂಭದಲ್ಲಿ ಪ್ರೀಮಿಯಂ ಪಾವತಿಯೊಂದಿಗೆ 10 ವರ್ಷಗಳವರೆಗೆ ಮತ್ತು 15ನೇ ವರ್ಷದ ಕೊನೆಯಲ್ಲಿ 17.50 ಲಕ್ಷ ರೂ. ಮೊತ್ತ ಅಂದರೆ ಈ ಯೋಜನೆಯಿಂದ ನಿಮಗೆ ಶೇ.7.215 ರಷ್ಟು ರಿಟರ್ನ್ ಸಿಗುತ್ತದೆ.
ತೆರಿಗೆ ರಹಿತ ರಿಟರ್ನ್
ಆದಾಯವು ತೆರಿಗೆ ಮುಕ್ತವಾಗಿರುವುದರಿಂದ ಈ ಯೋಜನೆ ಶೇ.30ರಷ್ಟು ತೆರಿಗೆ ವ್ಯಾಪ್ತಿಯಲ್ಲಿ ಒಬ್ಬ ವ್ಯಕ್ತಿಗೆ ಶೇ.10.31ರಷ್ಟು ತೆರಿಗೆ ವಿಧಿಸಬಹುದಾದ ಎಫ್ಡಿ ಬಡ್ಡಿಗೆ ಮತ್ತು ಶೇ.20ರಷ್ಟು ತೆರಿಗೆ ವ್ಯಾಪ್ತಿಯಲ್ಲಿ ಒಬ್ಬ ವ್ಯಕ್ತಿಗೆ ವಿಧಿಸುವ ಶೇ.9.02ರಷ್ಟು ತೆರಿಗೆಗೆ ಸಮನಾಗಿರುತ್ತದೆ.
ಲೈಫ್ ಕವರ್
ಇದಲ್ಲದೆ ಆಕರ್ಷಕ ದರದೊಂದಿಗೆ ಎಲ್ಐಸಿ ಬೀಮಾ ಜ್ಯೋತಿ ಸಹ ಲೈಫ್ ಕವರ್ ನೀಡುತ್ತದೆ.
ಒಟ್ಟಿನಲ್ಲಿ ಬಿಮಾ ಜ್ಯೋತಿಯಿಂದ ಸಾಕಷ್ಟು ಲಾಭಗಳಿವೆ. ಇದರಿಂದ ಪಾಲಿಸಿದಾರರಿಗೆ ವಿಮೆ ಸಿಗಲಿದೆ. ಜೊತೆಗೆ ಉಳಿತಾಯದ ಮಾರ್ಗ ದೊರೆಯಲಿದೆ. ಭವಿಷ್ಯ ಕೂಡಾ ಸೇಫ್ ಆಗಿರುತ್ತದೆ. ನಿಮ್ಮ ಪ್ರಿಮಿಯಂ ದುಡ್ಡಿಗೆ ಈ ಯೋಜನೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ.
Published by:
Latha CG
First published:
February 23, 2021, 3:00 PM IST