PMVVY: ಈ ಪ್ರಧಾನ ಮಂತ್ರಿ ಯೋಜನೆಯಡಿ ತಿಂಗಳಿಗೆ 10,000 ರೂ. ಪಿಂಚಣಿ ಪಡೆಯಬಹುದು..ಮಾಹಿತಿ ಇಲ್ಲಿದೆ

LIC Pradhan Mantri Vaya Vandana Yojana: ಈ ಯೋಜನೆಯನ್ನು ಎಲ್‌ಐಸಿ ವೆಬ್‌ಸೈಟ್ ಅಥವಾ ಆಫ್‌ಲೈನ್ ಮೂಲಕ ಖರೀದಿಸಬಹುದು. ಮಾರ್ಚ್ 31, 2020 ರಂದು ಮುಚ್ಚಿದ್ದ PMVVY ಅನ್ನು ಇತ್ತೀಚೆಗೆ ಸರ್ಕಾರವು ಮೂರು ಹಣಕಾಸು ವರ್ಷಗಳವರೆಗೆ ಮಾರ್ಚ್ 2023 ರವರೆಗೆ ವಿಸ್ತರಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Earn upto Rs 10000 monthly: ಇಳಿ ವಯಸ್ಸಿನಲ್ಲಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿರುವುದು ಆತ್ಮವಿಶ್ವಾಸದಿಂದ, ನೆಮ್ಮದಿಯಿಂದ ಬಾಳಲು ನೆರವಾಗುತ್ತದೆ. ಬದುಕಿನ ಸಂಜೆಯಲ್ಲಿ ಹಣವಿಲ್ಲದೇ ಒದ್ದಾಡುವುದು ನಿಜಕ್ಕೂ ಶೋಚನೀಯ. ದುಡಿಯುವ ಚೈತನ್ಯ ಇಲ್ಲದಾಗ ಕೈಗೆ ಹಣ ಬರುವಂತೆ ಮಾಡಿಕೊಳ್ಳುವುದೇ ಬುದ್ಧಿವಂತರ ಲಕ್ಷಣ. ಇದಕ್ಕಾಗಿ ಒಂದಿಷ್ಟು ಮುಂದಾಲೋಚನೆ, ತಾಳ್ಮೆ ಮುಖ್ಯ. ಹಣಕಾಸಿನ ವಿಷಯದಲ್ಲಿ ನಿಮ್ಮ ಕೈ ಬಿಗಿಯಾಗಿದ್ದರೆ, ಎಂದಿಗೂ ಬೇರೆಯವರ ಎದುರು ಕೈ ಚಾಚುವ ಪರಿಸ್ಥಿತಿ ಬರುವುದಿಲ್ಲ. ಅಂಥ ಪರಿಸ್ಥಿತಿ ಬರದಂತೆ ನೋಡಿಕೊಳ್ಳಲು ಕೆಲ ಯೋಜನೆಗಳಿವೆ. ಅವುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ನೆಮ್ಮದಿಯಾಗಿ ಹಿರಿಯ ನಾಗರಿಕರಾಗಿ.

ಎಲ್‌ಐಸಿ ಪ್ರಧಾನ ಮಂತ್ರಿ ವಯ ವಂದನ ಯೋಜನೆ (PMVVY) ಹಿರಿಯ ನಾಗರಿಕರಿಗೆ ಅಂದರೆ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪಿಂಚಣಿ ಯೋಜನೆಯಾಗಿದೆ. ಈ ಯೋಜನೆ 10 ವರ್ಷಗಳವರೆಗೆ ಖಾತರಿಯ ಪಿಂಚಣಿ ನೀಡುತ್ತದೆ. ಪಿಎಂವಿವಿವೈ ಭಾರತೀಯ ಜೀವ ವಿಮಾ ನಿಗಮ (LIC) ನೀಡುವ ಹಿರಿಯ ನಾಗರಿಕರಿಗಾಗಿ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ನೀವು ವಾರ್ಷಿಕ ಶೇ. 7.40 ದರದಲ್ಲಿ ಬಡ್ಡಿ ಆದಾಯವನ್ನು ಗಳಿಸಬಹುದು.  ಈ ಯೋಜನೆಯನ್ನು ಎಲ್‌ಐಸಿ ವೆಬ್‌ಸೈಟ್ ಅಥವಾ ಆಫ್‌ಲೈನ್ ಮೂಲಕ ಖರೀದಿಸಬಹುದು. ಮಾರ್ಚ್ 31, 2020 ರಂದು ಮುಚ್ಚಿದ್ದ PMVVY ಅನ್ನು ಇತ್ತೀಚೆಗೆ ಸರ್ಕಾರವು ಮೂರು ಹಣಕಾಸು ವರ್ಷಗಳವರೆಗೆ ಮಾರ್ಚ್ 2023 ರವರೆಗೆ ವಿಸ್ತರಿಸಿದೆ.

ಎಲ್ಐಸಿ ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯ ವಿವರ (LIC Pradhan Mantri Vaya Vandana Yojana - Eligibility and features)

ಕನಿಷ್ಠ 60 ವರ್ಷ ವಯೋಮಿತಿಯನ್ನು ಹೊಂದಿರುವ ಯಾರಾದರೂ ಈ ಪಾಲಿಸಿಯನ್ನು ಖರೀದಿಸಬಹುದು. ಪಿಎಂವಿವಿವೈ ಎನ್ನುವುದು ಹಿರಿಯ ನಾಗರಿಕರಿಗೆ ಪಿಂಚಣಿ ಯೋಜನೆಯಾಗಿದ್ದು, ಇದು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ 10 ವರ್ಷಗಳ ಅವಧಿಗೆ ಖಾತರಿಯ ಆದಾಯವನ್ನು ನೀಡುತ್ತದೆ.

PMVVY - ಕನಿಷ್ಠ ಮತ್ತು ಗರಿಷ್ಠ ಪಿಂಚಣಿ  (PMVVY - Minimum and Maximum Pension)

ಕನಿಷ್ಠ ಪಿಂಚಣಿ (Minimum Pension)

  • ತಿಂಗಳಿಗೆ 1,000 ರೂ.

  • ಪ್ರತಿ ತ್ರೈಮಾಸಿಕಕ್ಕೆ 3,000 ರೂ.

  • ಅರ್ಧ ವರ್ಷಕ್ಕೆ 6,000 ರೂ.

  • ವರ್ಷಕ್ಕೆ 12,000 ರೂ


ಗರಿಷ್ಠ ಪಿಂಚಣಿ  (Maximum Pension)

  • ತಿಂಗಳಿಗೆ 9,250 ರೂ.

  • ಪ್ರತಿ ತ್ರೈಮಾಸಿಕಕ್ಕೆ 27,750 ರೂ

  • ಪ್ರತಿ ಅರ್ಧ ವರ್ಷಕ್ಕೆ 55,500 ರೂ.

  • ವರ್ಷಕ್ಕೆ 1,11,000 ರೂ.


ಪ್ರತಿ ಹಿರಿಯ ನಾಗರಿಕರಿಗೆ ಅನುಮತಿಸಲಾದ ಒಟ್ಟು ಪಿಂಚಣಿ ಮೊತ್ತವು ಗರಿಷ್ಠ ಪಿಂಚಣಿ ಮಿತಿಯನ್ನು ಮೀರಬಾರದು.

ಇದನ್ನೂ ಓದಿ: Post Office Scheme: ಫೋಸ್ಟ್ ಆಫೀಸ್​​ನಲ್ಲಿ ಕೇವಲ 100 ರೂ. ಹೂಡಿಕೆ ಮಾಡಿ 5 ವರ್ಷದಲ್ಲಿ ₹20 ಲಕ್ಷ ಗಳಿಸಿ

ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯ ಲಾಭಗಳು (Benefits of Pradhan Mantri Vaya Vandana Yojana)

  1. 10 ವರ್ಷಗಳ ಪಾಲಿಸಿ ಅವಧಿ ಪೂರ್ಣಗೊಂಡ ನಂತರ ಸಂಪೂರ್ಣ ಮೊತ್ತವನ್ನು (ಅಂತಿಮ ಪಿಂಚಣಿ ಮತ್ತು ಖರೀದಿ ಬೆಲೆ ಸೇರಿದಂತೆ) ಪಾವತಿಸಲಾಗುತ್ತದೆ.

  2. ಖರೀದಿ ಬೆಲೆಯ 75% ವರೆಗಿನ ಸಾಲವನ್ನು ತುರ್ತು ಪರಿಸ್ಥಿತಿಗಳಲ್ಲಿ ಮೂರು ವರ್ಷಗಳ ನಂತರ ಪಡೆಯಬಹುದು.

  3. ವೈದ್ಯಕೀಯ ತುರ್ತುಸ್ಥಿತಿಗಳಿಂದಾಗಿ (ನೀವು ಹಾಗೂ ನಿಮ್ಮ ಸಂಗಾತಿ), ಚಂದಾದಾರರು ಖರೀದಿ ಬೆಲೆಯ 98% ಅನ್ನು ಹಿಂಪಡೆಯಬಹುದು.

  4. ಪಿಂಚಣಿಯ ಮೊದಲ ಕಂತನ್ನು 1 ವರ್ಷ, 6 ತಿಂಗಳು, 3 ತಿಂಗಳು ಅಥವಾ 1 ತಿಂಗಳ ನಂತರ ಖರೀದಿಸಿದ ದಿನಾಂಕದಿಂದ ಪಿಂಚಣಿ ಪಾವತಿಯ ವಿಧಾನವನ್ನು ಅವಲಂಬಿಸಿ ಪಾವತಿಸಬೇಕು. ಅಂದರೆ ವಾರ್ಷಿಕ, ಅರ್ಧ ವಾರ್ಷಿಕ, ತ್ರೈಮಾಸಿಕ ಅಥವಾ ಮಾಸಿಕ ಕ್ರಮವಾಗಿ ಪಾವತಿಸಬೇಕು

  5. ಪಿಂಚಣಿ ಪಾವತಿಗಳನ್ನು ಚಂದಾದಾರರು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಪಡೆಯಬಹುದು. ಚಂದಾದಾರರ ಸಾವಿನ ಸಂದರ್ಭದಲ್ಲಿ ಯೋಜನೆಯ ಖರೀದಿ ಬೆಲೆಯನ್ನು ಕಾನೂನುಬದ್ಧ ವಾರಸುದಾರರಿಗೆ ಹಿಂತಿರುಗಿಸಲಾಗುತ್ತದೆ.

Published by:Kavya V
First published: