LIC Policy Revival: ನಿಮ್ಮ ಎಲ್​ಐಸಿ ಪಾಲಿಸಿ ಲ್ಯಾಪ್ಸ್ ಆಗಿದ್ದರೆ ಅದನ್ನು ಮತ್ತೆ ಬಳಸುವಂತೆ ಮಾಡಬಹುದು, ಹೀಗೆ ಮಾಡಿ

LIC Policy Lapse: ಅನೇಕರು ಮೊದಲ ಒಂದೆರಡು ಅಥವಾ ಕೆಲವು ಕಂತುಗಳನ್ನು ಕಟ್ಟಿದ ನಂತರ ಎಲ್​ಐಸಿ ಪ್ರೀಮಿಯಂ ಕಟ್ಟುವುನ್ನು ನಿಲ್ಲಿಸಿಬಿಡುತ್ತಾರೆ. ಒಂದೆರಡು ವರ್ಷಗಳ ನಂತರ ಮತ್ತೆ ಆರ್ಥಿಕ ಪರಿಸ್ಥಿತಿ ಸ್ವಲ್ಪ ಉತ್ತಮ ಎನಿಸಿದಾಗ ಅರ್ಧಕ್ಕೆ ಬಿಟ್ಟುಹೋಗಿದ್ದ ಪಾಲಿಸಿಯನ್ನು ಮತ್ತೆ ಮುಂದುವರೆಸಬಹುದಾ ಎಂದು ಆಲೋಚಿಸುತ್ತಾರೆ. ಇನ್ನು ಕೆಲ ದಿನಗಳವರಗೆ LIC ಈ ವಿಶೇಷ ಅವಕಾಶ ಒದಗಿಸಿಕೊಟ್ಟಿದೆ.

LIC

LIC

  • Share this:
ಎಲ್ಲರೂ LIC Policyಗಳನ್ನು ಭವಿಷ್ಯದ ಭದ್ರತೆಯಾಗಿಯೇ ಕೊಳ್ಳುತ್ತಾರೆ. ಬೇರೆ ಯಾವುದೇ ಉಳಿತಾಯ ಯೋಜನೆ ಮಾಡದೇ ಇದ್ರೂ ಕನಿಷ್ಟ ಒಂದು ಎಲ್​ಐಸಿ ಪಾಲಿಸಿ ಆದ್ರೂ ಇರ್ಲಿ ಅನ್ನೋದು ಅನೇಕರ ಅನಿಸಿಕೆ. ಹಾಗಾಗಿ ತಮ್ಮ ತಮ್ಮ ಆರ್ಥಿಕ ಶಕ್ತಿಗೆ ಅನುಸಾರವಾಗಿ ಬಹುತೇಕರು ಎಲ್​ಐಸಿ ಪಾಲಿಸಿಗಳನ್ನು ಕೊಳ್ಳುತ್ತಾರೆ. ಕೊಂಡಾಗ ಇರುವ ಉತ್ಸಾಹಕ್ಕೆ ಅನೇಕ ಬಾರಿ ವರ್ಷ ಕಳೆದಂತೆ ಹಣ ಬಲ ಕೂಡಿ ಬರುವುದಿಲ್ಲ. ಹಾಗಾಗಿ ಅನೇಕರು ಮೊದಲ ಒಂದೆರಡು ಅಥವಾ ಕೆಲವು ಕಂತುಗಳನ್ನು ಕಟ್ಟಿದ ನಂತರ ಎಲ್​ಐಸಿ ಪ್ರೀಮಿಯಂ ಕಟ್ಟುವುನ್ನು ನಿಲ್ಲಿಸಿಬಿಡುತ್ತಾರೆ. ಒಂದೆರಡು ವರ್ಷಗಳ ನಂತರ ಮತ್ತೆ ಆರ್ಥಿಕ ಪರಿಸ್ಥಿತಿ ಸ್ವಲ್ಪ ಉತ್ತಮ ಎನಿಸಿದಾಗ ಅರ್ಧಕ್ಕೆ ಬಿಟ್ಟುಹೋಗಿದ್ದ ಪಾಲಿಸಿಯನ್ನು ಮತ್ತೆ ಮುಂದುವರೆಸುವ ಬಗ್ಗೆ ಆಲೋಚಿಸುತ್ತಾರೆ. ಆದರೆ ಅದನ್ನು ಹಾಗೇ ಅರ್ಧಕ್ಕೆ ಬಿಟ್ಟಿದ್ದರಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಭಾವಿಸಿ ಮತ್ತೆ ಹೊಸಾ ಪಾಲಿಸಿಯನ್ನೇ ಕೊಳ್ಳುತ್ತಾರೆ ಅನೇಕರು.

ಇಂಥಾ ಅನೇಕರಿಗೆ ಪ್ರಯೋಜನವಾಗುವಂಥಾ ವ್ಯವಸ್ಥೆ ಮಾಡಿದೆ ಎಲ್​ ಐ ಸಿ. ಆಗಸ್ಟ್ 23ರಿಂದ 2 ತಿಂಗಳ ಕಾಲ ಹೀಗೆ ಅರ್ಧಕ್ಕೆ ಬಿಟ್ಟ ಪಾಲಿಸಿಗಳಿಗೆ ಮರುಜೀವ ಕೊಡುವ ಅವಕಾಶ ಮಾಡಿಕೊಟ್ಟಿದೆ ಎಲ್​ಐಸಿ. aಕ್ಟೋಬರ್ 22, 2021ರವರಗೆ ಈ ಸೌಕರ್ಯ ಇರಲಿದ್ದು ತಡವಾಗಿ ಪ್ರೀಮಿಯಂ ಕಟ್ಟಿದ್ದಕ್ಕೆ ಯಾವುದೇ ದಂಡ ಇರುವುದಿಲ್ಲ ಎಂದು ಎಲ್​ಐಸಿ ತಿಳಿಸಿದೆ.

ಅರ್ಧಕ್ಕೆ ನಿಂತ ಎಲ್​ಐಸಿ ಪಾಲಿಸಿಗೆ ಮರುಜನ್ಮ ನೀಡುವುದು ಹೇಗೆ?

ಮೊದಲ ಬಾರಿಗೆ ನೀವು ಪ್ರೀಮಿಯಂ ತಪ್ಪಿಸಿಕೊಂಡ ದಿನಾಂಕದಿಂದ 5 ವರ್ಷಗಳವರಗೆ ಪಾಲಿಸಿಗೆ ಮರುಜನ್ಮ ನೀಡುವ ಅವಕಾಶ ಇರುತ್ತದೆ. ಹಾಗಾಗಿ 5 ವರ್ಷದೊಳಗೆ ಅರ್ಧಕ್ಕೆ ಬಿಟ್ಟ ಯಾವುದೇ ಪಾಲಿಸಿ ಇದ್ದರೂ ತಪ್ಪದೇ ಅದನ್ನು ಮತ್ತೆ ಆರಂಭಿಸೋ ಅವಕಾಶ ಇದೆ. ಆದ್ರೆ ಇದರಲ್ಲಿ ಟರ್ಮ್ ಅಶೂರೆನ್ಸ್ ಮತ್ತು ಹೈ ರಿಸ್ಕ್ ಪ್ಲಾನ್​ಗಳನ್ನು ಹೊರತುಪಡಿಸಲಾಗಿದೆ.

ಇದನ್ನೂ ಓದಿ: Bank Loan: ಬ್ಯಾಂಕಿನಿಂದ ಲೋನ್ ಬೇಕಾ? ಹಾಗಿದ್ರೆ ಈ ದಾಖಲೆಗಳನ್ನು ರೆಡಿ ಇಟ್ಕೊಳ್ಳಿ.. ಯಾವ ಲೋನ್​ಗೆ ಯಾವ ಡಾಕ್ಯುಮೆಂಟ್ಸ್? ಇಲ್ಲಿದೆ ಫುಲ್ ಡೀಟೆಲ್ಸ್

ಕಳೆದ ಸುಮಾರು 2 ವರ್ಷಗಳಿಂದ ಕೊರೊನಾದಿಂದಾಗಿ ಎಲ್ಲೆಡೆ ಸಾಕಷ್ಟು ಅನಾಹುತಗಳಾಗಿವೆ. ಇಂಥಾ ಸಂದರ್ಭದಲ್ಲಿ ಜನರಿಗೆ ಅನುಕೂಲ ಮಾಡಿಕೊಡುವಂಥಾ ಕ್ರಮ ಕೈಗೊಂಡಿದೆ ಎಲ್​ಐಸಿ. ಆದ್ದರಿಂದ ಯಾವುದೇ ಕಾರಣದಿಂದ ನಿಮ್ಮ ಎಲ್​ಐಸಿ ಪಾಲಿಸಿ ಅರ್ಧಕ್ಕೆ ನಿಂತಿದ್ರೆ ಈ ಎರಡು ತಿಂಗಳಲ್ಲಿ ಅದಕ್ಕೆ ಮರುಜೀವ ಕೊಡಿ. ಇಂದಲ್ಲ ನಾಳೆ ಎಲ್​ಐಸಿ ಪಾಲಿಸಿಗಳು ಭವಿಷ್ಯದ ಭದ್ರತೆಗೋ ಹೂಡಿಕೆಗೋ ಬಳಕೆಯಾಗುತ್ತವೆ. ಆರೋಗ್ಯ ಸಂಬಂಧಿ ಎಲ್​ಐಸಿ ಪಾಲಿಗಳಿಗೂ ಇದು ಅನ್ವಯ ಎಂದು ತಿಳಿಸಲಾಗಿದೆ. ಹಾಗಾಗಿ ಬೇಗನೇ ಈ ಪ್ರಯೋಜನ ಪಡೆದುಕೊಳ್ಳುವುದು ಒಳಿತು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: