ಈ ಕಾಡು ಪ್ರಾಣಿಗಳು (Wild Animals) ತಮ್ಮ ಬೇಟೆಯನ್ನು ಹೇಗೆ ಚಾಣಾಕ್ಷತನದಿಂದ ಬೇಟೆಯಾಡುತ್ತವೆ (hunting) ಎಂದು ನೋಡುವುದು ತುಂಬಾನೇ ರೋಮಾಂಚನಕಾರಿ ಮತ್ತು ಭಯಾನಕವಾಗಿರುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕೆಲವೊಂದು ಕಾಡು ಪ್ರಾಣಿಗಳಂತೂ ಚಿಕ್ಕ ಪ್ರಾಣಿಗಳು (Small Animals) ಕಾಡಿನಲ್ಲಿ ಎಲ್ಲಿಯೇ ಅಡಗಿ ಕುಳಿತರೂ ಸಹ ಅವುಗಳನ್ನು ವಾಸನೆಯಿಂದಲೇ ಹುಡುಕಿಕೊಂಡು ಹೋಗಿ ಬೇಟೆಯಾಡುತ್ತವೆ. ಇನ್ನೂ ಕೆಲವು ಕಾಡು ಪ್ರಾಣಿಗಳು ಮರದ (Tree) ಮೇಲೆ ಕುಳಿತ ಚಿಕ್ಕ ಪ್ರಾಣಿಗಳನ್ನು ಸಹ ಬಿಡುವುದಿಲ್ಲ, ಮರ ಹತ್ತಿ ಅವುಗಳ ಮೇಲೆ ಹಾರಿ ಅವುಗಳನ್ನು ಕೆಳಗೆ ಎಳೆದುಕೊಂಡು ಬಂದು ಕಿತ್ತು ತಿನ್ನುತ್ತವೆ.
ಕೋತಿಮರಿಯನ್ನು ಬೇಟೆಯಾಡುವ ಚಿರತೆ
ಅಬ್ಬಬ್ಬಾ.. ಕೇಳುವುದಕ್ಕೆ ಇದು ಎಷ್ಟು ಭಯಾನಕ ಅನ್ನಿಸುತ್ತದೆ ಅಲ್ಲವೇ? ಹೌದು.. ಇಲ್ಲೊಂದು ಇಂತಹದೇ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿಯೇ ಹರಿದಾಡುತ್ತಿದೆ ನೋಡಿ. ಈ ಅಪರೂಪದ ದೃಶ್ಯವನ್ನು ಮಧ್ಯಪ್ರದೇಶದ ಪನ್ನಾ ಹುಲಿ ಮೀಸಲು ಪ್ರದೇಶದಲ್ಲಿ ಸೆರೆಹಿಡಿಯಲಾಗಿದೆ, ಅಲ್ಲಿ ಚಿರತೆಯೊಂದು ಮರಿ ಕೋತಿಯನ್ನು ಬೇಟೆಯಾಡುತ್ತಿರುವುದನ್ನು ಕಾಣಬಹುದು. ಬೇಟೆಯ ವಿಡಿಯೋವನ್ನು ಖುದ್ದು ಪನ್ನಾ ಹುಲಿ ಮೀಸಲು ಪ್ರದೇಶದವರೆ ಸಾಮಾಜಿಕ ಮಾಧ್ಯಮವಾದ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಇದೀಗ ಸಿಕ್ಕಾಪಟ್ಟೆ ವೈರಲ್ ಸಹ ಆಗುತ್ತಿದೆ.
ಮಂಗನಿಗಾಗಿ ಮರದಿಂದ ಮರಕ್ಕೆ ಹಾರುವ ಚಿರತೆ
ಈ ದೃಶ್ಯಾವಳಿಯಲ್ಲಿ, ಚಿರತೆಯೊಂದು ಮರಿ ಕೋತಿಯನ್ನು ಹಿಡಿಯಲು ಒಂದು ದೊಡ್ಡ ಮರವನ್ನು ಏರುವುದನ್ನು ಮತ್ತು ಅಷ್ಟೇ ವೇಗದಲ್ಲಿ ಆ ಮರದಿಂದ ಪಕ್ಕದಲ್ಲಿರುವ ಇನ್ನೊಂದು ಮರಕ್ಕೆ ಜಿಗಿಯುವುದನ್ನು ನಾವು ನೋಡಬಹುದು. ಚಿರತೆಯೊಂದು ಆ ಮರಿ ಕೋತಿಯನ್ನು ಹಾರಿ ತನ್ನ ಬಾಯಲ್ಲಿ ಹಿಡಿದುಕೊಂಡು ಸಾಕಷ್ಟು ಎತ್ತರದಿಂದ ಕೆಳಗೆ ಬೀಳುವುದನ್ನು ವಿಡಿಯೋದಲ್ಲಿ ನೋಡಬಹುದು. ಅಷ್ಟು ಮೇಲಿಂದ ಬಿದ್ದರೂ ಸಹ ಚಿರತೆಗೆ ಮಾತ್ರ ಏನು ಆಗಿಲ್ಲ ಮತ್ತು ತನ್ನ ಬಾಯಲ್ಲಿದ್ದಂತಹ ಆ ಬೇಟೆಯನ್ನು ಮಾತ್ರ ಬಿಡಲಿಲ್ಲ ಎಂದು ಹೇಳಬಹುದು.
ಇದನ್ನೂ ಓದಿ: Snake: ಅಪರೂಪದ ಎರಡು ತಲೆಯ ಮೊಟ್ಟೆ ಭಕ್ಷಕ ಹಾವು ಪತ್ತೆ! ಫೋಟೋ ವೈರಲ್
ಟ್ವಿಟ್ಟರ್ ಅಲ್ಲಿ ವೈರಲ್ ಆಯಿತು ಚಿರತೆ ವಿಡಿಯೋ
"ಇದು ತುಂಬಾನೇ ಅಪರೂಪದ ದೃಶ್ಯ, ಚಿರತೆಯೊಂದು ಮರದ ಮೇಲೆ ಜಿಗಿಯುವ ಮೂಲಕ ಮರಿ ಕೋತಿಯನ್ನು ಬೇಟೆಯಾಡುವುದನ್ನು ನೋಡಬಹುದು" ಎಂದು ಪನ್ನಾ ಹುಲಿ ಮೀಸಲು ಪ್ರದೇಶದವರು ಟ್ವೀಟ್ ಮಾಡಿದ್ದಾರೆ.
ಜೂನ್ 28 ರಂದು ಈ ವಿಡಿಯೋವನ್ನು ಹಂಚಿಕೊಂಡಾಗಿನಿಂದ, ಈ ವಿಡಿಯೋವು 5,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 250 ಕ್ಕೂ ಹೆಚ್ಚು ಲೈಕ್ ಗಳನ್ನು ಸಹ ಗಳಿಸಿದೆ. ಟ್ವಿಟರ್ ಬಳಕೆದಾರರು ಈ ವಿಡಿಯೋ ತುಣುಕಿನಿಂದ ಕುತೂಹಲ ಮತ್ತು ಭಯಭೀತರಾಗಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಇದಕ್ಕೆ ನೆಟ್ಟಿಗರು ಹೇಳಿದ್ದೇನು ನೋಡಿ
ಈ ಭಯಾನಕ ವಿಡಿಯೋ ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರು "ಪ್ರಕೃತಿಯಲ್ಲಿ ನೋಡಲು ಸಿಗುವ ಮೃಗಗಳ ಶಕ್ತಿ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು "ನಿಜವಾಗಿಯೂ ಇದು ಅಪರೂಪದ ದೃಶ್ಯ" ಎಂದು ಬರೆದಿದ್ದಾರೆ.
1/n
A rare sight @pannatigerreserve. A leopard can be seen hunting a baby monkey by jumping on the tree. pic.twitter.com/utT4h58uuF
— Panna Tiger Reserve (@PannaTigerResrv) June 28, 2022
ಹುಲಿಗಳು, ಕರಡಿಗಳು, ಭಾರತೀಯ ತೋಳಗಳು, ಪ್ಯಾಂಗೋಲಿನ್ ಗಳು, ಚಿರತೆಗಳು, ಘರಿಯಾಲ್ ಗಳು ಮತ್ತು ನರಿಗಳು ಸೇರಿದಂತೆ ಹಲವಾರು ಪ್ರಾಣಿಗಳು ಪನ್ನಾ ಹುಲಿ ಮೀಸಲು ಪ್ರದೇಶದಲ್ಲಿ ಕಂಡು ಬರುತ್ತವೆ. ಇದಲ್ಲದೆ, ಇದು ಭಾರತೀಯ ರಣಹದ್ದು, ಕೆಂಪು ತಲೆಯ ರಣಹದ್ದು, ಹೂವಿನ ತಲೆಯ ಪ್ಯಾರಾಕೀಟ್, ಕ್ರೆಸ್ಟೆಡ್ ಜೇನು ಬಝಾರ್ಡ್ ಮತ್ತು ಬಾರ್-ಹೆಡೆಡ್ ಬಾತುಕೋಳಿಗಳಂತಹ ಸುಮಾರು 200 ವಿವಿಧ ಪಕ್ಷಿ ಪ್ರಭೇದಗಳಿಗೂ ನೆಲೆಯಾಗಿದೆ ಎಂದು ಹೇಳಲಾಗುತ್ತದೆ.
ಕಾಡು ಪ್ರಾಣಿಗಳ ಛಾಯಾಚಿತ್ರಗಳನ್ನು ಸೆರೆ ಹಿಡಿಯುವಾಗ ಚಿರತೆಯಿಂದ ದಾಳಿಗೊಳಗಾದ ವ್ಯಕ್ತಿ
ಈ ವರ್ಷದ ಮೇ ತಿಂಗಳಲ್ಲಿ, ಕಾಡು ಪ್ರಾಣಿಗಳ ಛಾಯಾಚಿತ್ರಗಳನ್ನು ಸೆರೆ ಹಿಡಿಯುವಾಗ ವ್ಯಕ್ತಿಯೊಬ್ಬರು ಚಿರತೆಯಿಂದ ದಾಳಿಗೊಳಗಾದ ಮತ್ತೊಂದು ವಿಡಿಯೋ ಸಹ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಆಗಿತ್ತು. ಅಸ್ಸಾಂನ ದಿಬ್ರುಗಢದ ಖರ್ಜನ್ ಚಹಾ ಎಸ್ಟೇಟ್ ಬಳಿ ಈ ಘಟನೆ ನಡೆದಿತ್ತು.
ಇದನ್ನೂ ಓದಿ: Elephant video: ಮರಿ ಆನೆಯೊಂದು ಈ ವ್ಯಕ್ತಿಯನ್ನು ಹೇಗೆ ಮುದ್ದಾಡಿದೆ ನೋಡಿ!
ಸ್ಥಳೀಯ ನಿವಾಸಿಯೊಬ್ಬರ ಪ್ರಕಾರ, ಹತ್ತಿರದ ಚಿತ್ರವನ್ನು ತೆಗೆಯುತ್ತಿದ್ದಾಗ ಚಿರತೆ ದಾಳಿ ಮಾಡಿದ್ದರಿಂದ ವ್ಯಕ್ತಿಯ ಕಾಲಿಗೆ ಮಾತ್ರ ಗಾಯಗಳಾಗಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ