ನಾಡಿನಲ್ಲಿ ನಮ್ಮ ನಡುವೆ ವಾಸಿಸುವ ಪ್ರಾಣಿಗಳು (Animal) ಮತ್ತು ಸಾಕು ಪ್ರಾಣಿಗಳು ದಿನನಿತ್ಯದ ನಡವಳಿಕೆಗಳಿಗಿಂತ ಭಿನ್ನವಾಗಿ ಏನನ್ನಾದರೂ ಮಾಡಿದರೆ, ಅಂತಹ ದೃಶ್ಯವುಳ್ಳ ವಿಡಿಯೋಗಳು (Video) ಇಂಟರ್ನೆಟ್ನಲ್ಲಿ ಹರಿದಾಡಿ, ನೆಟ್ಟಿಗರ ಪ್ರಶಂಸೆಗಳನ್ನು ಬಾಚಿಕೊಳ್ಳುತ್ತವೆ. ಆದರೆ, ಪ್ರಾಣಿ ತಜ್ಞರು, ಅರಣ್ಯ ಇಲಾಖೆ ಅಧಿಕಾರಿಗಳ, ಕಾಡಿನ ಸಮೀಪ ವಾಸವಿರುವವರ ಅನುಭವ (experience) ಮಾತ್ರ ಭಿನ್ನವಾಗಿರುತ್ತವೆ. ಅವರುಗಳು ಸಾಮಾಜಿಕ ಮಾಧ್ಯಮಗಳಲ್ಲಿ (Social Media), ಕಾಡಿನ ಪ್ರಾಣಿಗಳ ಕುರಿತ ವಿಡಿಯೋಗಳನ್ನು ಹಂಚಿಕೊಂಡಾಗ ನಾವು ಎಲ್ಲಿಲ್ಲದ ಕುತೂಹಲದಿಂದ ವೀಕ್ಷಿಸುತ್ತೇವೆ. ನಮಗೆ ನಿತ್ಯದ ಬದುಕಿನಲ್ಲಿ ಸುಲಭವಾಗಿ ಕಾಣ ಸಿಗದ, ಕಾಡಿನ (Forest) ಪ್ರಾಣಿಗಳ ಬದುಕಿನ ರೋಚಕತೆಯ ಬಗ್ಗೆ ಪ್ರತಿಯೊಬ್ಬರಿಗೂ ಎಲ್ಲಿಲ್ಲದ ಆಸಕ್ತಿ ಇದ್ದೇ ಇರುತ್ತದೆ ಅಲ್ಲವೇ?
ಇದೀಗ ಅಂತದ್ದೇ ಒಂದು ವಿಡಿಯೋ ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಚಿರತೆಯೊಂದು ಮಂಗನನ್ನು ಬೇಟೆಯಾಡುವ ಅಪರೂಪದ ದೃಶ್ಯವುಳ್ಳ ಮತ್ತು ಹೆದರಿಕೆ ಹುಟ್ಟಿಸುವ ವಿಡಿಯೋ ಅದು. ಈ ವಿಡಿಯೋದಲ್ಲಿನ ದೃಶ್ಯವನ್ನು ಮಧ್ಯ ಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ.
ವಿಡಿಯೋದಲ್ಲಿನ ದೃಶ್ಯ ಹೀಗಿದೆ
ಹಸಿದ ಚಿರತೆಯೊಂದು ಮರವನ್ನು ಹತ್ತಿ ಮಂಗವೊಂದನ್ನು ಕೊಲ್ಲುತ್ತದೆ. ಬಳಿಕ ತನ್ನ ಆ ಬೇಟೆಯನ್ನು ಬಾಯಲ್ಲಿ ಗಟ್ಟಿಯಾಗಿ ಕಚ್ಚಿಕೊಂಡು ಮರದಿಂದ ಜಾಗರೂಕತೆಯಿಂದ ಕೆಳಗೆ ಇಳಿಯುತ್ತದೆ. ಈ ದೃಶ್ಯವನ್ನು ಪನ್ನಾ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಚಿತ್ರೀಕರಣ ಮಾಡಿದ್ದು, ಅದನ್ನು ಸ್ವತಃ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Viral Video: ಚೆಂಡನ್ನು ಕಳೆದುಕೊಂಡ ಶ್ವಾನ ಫುಲ್ ಸ್ಯಾಡ್! ಸಂತೈಸುತ್ತಿರುವ ವಿಡಿಯೋ ವೈರಲ್
“ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಂಗನನ್ನು ಬೇಟೆಯಾಡುತ್ತಿರುವ ಚಿರತೆಯೊಂದರ ಅಪರೂಪದ ಒಂದು ದೃಶ್ಯ” ಎಂದು ಈ ವಿಡಿಯೋಗೆ ಅಡಿಬರಹವನ್ನು ನೀಡಿದ್ದಾರೆ.
ವಿಡಿಯೋವನ್ನು ಕಂಡು ಭಯಗೊಂಡ ಕೆಲವು ನೆಟ್ಟಿಗರು
ಈ ವಿಡಿಯೋವನ್ನು ಪೋಸ್ಟ್ ಮಾಡಿದ ಕ್ಷಣದಿಂದ ಈವರೆಗೆ, ಸುಮಾರು 3,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ ಚಿರತೆಯ ಬೇಟೆಯ ಈ ವಿಡಿಯೋ ನೂರಕ್ಕೂ ಹೆಚ್ಚು ಮೆಚ್ಚುಗೆಗಳನ್ನು ಕೂಡ ಪಡೆದಿದೆ. ಈ ವಿಡಿಯೋವನ್ನು ಕಂಡು ಕೆಲವು ನೆಟ್ಟಿಗರು ಭಯಗೊಂಡಿದ್ದರೆ, ಇನ್ನು ಕೆಲವರು ಅತ್ಯಂತ ಕುತೂಹಲದಿಂದ ವೀಕ್ಷಿಸಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
“ಸಾಮಾನ್ಯ ಚಿರತೆಯೊಂದು ಹನುಮಾನ್ ಲಂಗೂರ್ ಅನ್ನು ಮರವೊಂದರ ಮೇಲೆ ಬೇಟೆಯಾಡುತ್ತಿರುವುದಕ್ಕೆ ಸಾಕ್ಷಿ ಇದು. ಇಂತಹ ನಿದರ್ಶನಗಳು ಕಾಣ ಸಿಗುವುದು ಮತ್ತು ದಾಖಲಿಸಲು ಸಾಧ್ಯವಾಗುವುದು ನಿಜಕ್ಕೂ ಅಪರೂಪ” ಎಂದು ಒಬ್ಬ ನೆಟ್ಟಿಗ ಪ್ರತಿಕ್ರಿಯಿಸಿದ್ದರೆ, ಇನ್ನೊಬ್ಬರು ಈ ದೃಶ್ಯವನ್ನು “ ಅದ್ಭುತ” ಎಂದು ಕರೆದಿದ್ದಾರೆ.
ಪನ್ನಾ ಹುಲಿ ಸಂರಕ್ಷಣಾ ಪ್ರದೇಶ
ಪನ್ನಾ ಹುಲಿ ಸಂರಕ್ಷಣಾ ಪ್ರದೇಶ, ಹಲವಾರು ವನ್ಯ ಜೀವಿಗಳಿಗೆ ಆಶ್ರಯ ತಾಣವಾಗಿದೆ. ಹುಲಿ, ಸ್ಲಾಥ್ ಬೇರ್, ಭಾರತೀಯ ತೋಳ, ಪ್ಯಾಂಗೋಲಿನ್, ಚಿರತೆ, ಘರಿಯಾಲ್, ಭಾರತೀಯ ನರಿ ಮತ್ತು ಇನ್ನೂ ಅನೇಕ ತರಹದ ವನ್ಯ ಜೀವಿ ಪ್ರಭೇದಗಳು ಅಲ್ಲಿ ಕಂಡು ಬರುತ್ತದೆ. ಬಾರ್ -ಹೆಡೆಡ್ ಗೂಸ್, ಕ್ರೆಸ್ಟೆಡ್ ಹನಿ ಬಜಾರ್ಡ್, ಕೆಂಪು ತಲೆಯ ರಣ ಹದ್ದು, ಬಣ್ಣದ ತಲೆಯ ಗಿಳಿ, ಚೇಂಜೆಬಲ್ ಹಾಕ್ ಈಗಲ್ ಮತ್ತು ಭಾರತೀಯ ರಣ ಹದ್ದು ಸೇರಿದಂತೆ 200 ಕ್ಕೂ ಹೆಚ್ಚು ಪ್ರಭೇದದ ಹಕ್ಕಿಗಳಿಗೂ ಪನ್ನಾ ಹುಲಿ ಸಂರಕ್ಷಣಾ ಪ್ರದೇಶ ನೆಲೆ ನೀಡಿದೆ.
ಇದನ್ನೂ ಓದಿ: Viral Video: ಕೆಣಕಿದವನ ಬೆರಳನ್ನೇ ತುಂಡರಿಸಿದ ಸಿಂಹ: ಬೆಚ್ಚಿ ಬೀಳಿಸುತ್ತದೆ ಈ ವೈರಲ್ ವಿಡಿಯೋ
1/n
A rare sight of a leopard hunting monkey in panna tiger reserve. pic.twitter.com/qHL81Pav75
— Panna Tiger Reserve (@PannaTigerResrv) May 29, 2022
ಕಳೆದ ತಿಂಗಳು, ಚಿರತೆಯೊಂದು ಮನುಷ್ಯನ ಮೇಲೆ ದಾಳಿ ಮಾಡುತ್ತಿರುವ ವಿಡಿಯೋವೊಂದು ಕೂಡ ವೈರಲ್ ಆಗಿತ್ತು. ಅಸ್ಸಾಮ್ನ ದಿಬ್ರುಘರ್ ಎಂಬಲ್ಲಿ, ಚಿರತೆಯ ಪೋಟೋ ತೆಗೆಯಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯ ಮೇಲೆ ಆ ಚಿರತೆ ದಾಳಿ ಮಾಡಿತ್ತು. ಕರ್ಜಾನ್ ಟೀ ಎಸ್ಟೇಟ್ನ ಸಮೀಪದ ನಡೆದ ದೃಶ್ಯವೊಂದರ ವಿಡಿಯೋದಲ್ಲಿ, ಬೆನ್ನಟ್ಟಿಕೊಂಡು ಬರುತ್ತಿರುವ ಚಿರತೆಯ ಭಯದಿಂದ ಜನರು ಓಡುತ್ತಿರುವ ದೃಶ್ಯವನ್ನು ಕಾಣಬಹುದು. ಬಳಿಕ ಅರಣ್ಯ ಇಲಾಖೆಯವರು ಸ್ಥಳಕ್ಕೆ ಬಂದು ಆ ಚಿರತೆಯನ್ನು ಬಂಧಿಸಿ, ಅಲ್ಲಿಂದ ತೆಗೆದುಕೊಂಡು ಹೋದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ