Leopard: ಈ ಚಿರತೆ ಏಣಿ ಹತ್ತಿ ಬಾವಿಯಿಂದ ಹೇಗೆ ಮೇಲೆ ಬಂದಿದೆ ನೋಡಿ! ಏಣಿ ಇಟ್ಟೋರು ಎಲ್ಲೋದ್ರು?

ಬಾವಿಗೆ ಬಿದ್ದ ಕಾಡು ಪ್ರಾಣಿಗಳನ್ನು ಮೇಲಕ್ಕೆ ಎತ್ತಲು ಅರಣ್ಯ ಇಲಾಖೆಯವರು ಹರ ಸಾಹಸ ಪಟ್ಟಿರುವಂತಹ ಅನೇಕ ವೀಡಿಯೋಗಳನ್ನು ನಾವು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿರುತ್ತೇವೆ. ಇಲ್ಲಿಯೂ ಸಹ ಅಂತಹದೇ ಒಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ.

ಬಾವಿಗೆ ಬಿದ್ದ ಚಿರತೆ

ಬಾವಿಗೆ ಬಿದ್ದ ಚಿರತೆ

  • Share this:
ಕೆಲವೊಂದು ಸಂದರ್ಭದಲ್ಲಿ ಈ ಕಾಡು ಪ್ರಾಣಿಗಳು (Animals) ರಾತ್ರಿ (Night) ಹೊತ್ತಿನಲ್ಲಿ ಕಾಡಿನಲ್ಲಿ (Forest) ತಮ್ಮ ಬೇಟೆಯನ್ನು (Hunting) ಹಿಂಬಾಲಿಸಿಕೊಂಡು ಜೋರಾಗಿ ಓಡಿ ಬರುವುದನ್ನು ನಾವು ಅನೇಕ ವೀಡಿಯೋಗಳಲ್ಲಿ (Video) ನೋಡಿರುತ್ತೇವೆ. ಅಂತಹ ಸಂದರ್ಭಗಳಲ್ಲಿ ಆ ಪ್ರಾಣಿಗಳು ಅಲ್ಲೇ ಇರುವ ಬಾವಿಯನ್ನು (Well) ಕತ್ತಲಲ್ಲಿ ನೋಡದೆ ಅದರಲ್ಲಿ ಬೀಳುವುದು ಸಹ ಸಾಮಾನ್ಯವಾದ ವಿಷಯವಾಗಿರುತ್ತದೆ. ಹಾಗೆ ಬಿದ್ದ ಎಷ್ಟೋ ಪ್ರಾಣಿಗಳು ಕೆಲವೊಮ್ಮೆ ಯಾರ ಗಮನಕ್ಕೂ ಬಾರದೇ ಇರಬಹುದು ಮತ್ತು ಕೆಲವೊಮ್ಮೆ ಅವುಗಳನ್ನು ಯಾರಾದರೂ ನೋಡಿ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ (Forest Department staff) ಸುದ್ದಿ ತಿಳಿಸುವುದುಂಟು.

ಒಡಿಶಾದ ಸಂಬಲ್ಪುರ ಜಿಲ್ಲೆಯಲ್ಲಿ ಬಾವಿಗೆ ಬಿದ್ದ ಚಿರತೆ

ಹೀಗೆ ಬಾವಿಗೆ ಬಿದ್ದ ಕಾಡು ಪ್ರಾಣಿಗಳನ್ನು ಮೇಲಕ್ಕೆ ಎತ್ತಲು ಅರಣ್ಯ ಇಲಾಖೆಯವರು ಹರ ಸಾಹಸ ಪಟ್ಟಿರುವಂತಹ ಅನೇಕ ವೀಡಿಯೋಗಳನ್ನು ನಾವು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿರುತ್ತೇವೆ. ಇಲ್ಲಿಯೂ ಸಹ ಅಂತಹದೇ ಒಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ. ಒಡಿಶಾದ ಸಂಬಲ್ಪುರ ಜಿಲ್ಲೆಯಲ್ಲಿ ಬಾವಿಗೆ ಬಿದ್ದ ಚಿರತೆಯನ್ನು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಹೊರ ತೆಗೆದಿದ್ದು, ಈ ದೊಡ್ಡ ಪ್ರಾಣಿಯನ್ನು ರಕ್ಷಿಸಿದ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ ನೋಡಿ.

ವಿಡಿಯೋದಲ್ಲಿ ಏನಿದೆ?
ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್ ನಲ್ಲಿ ಸುದ್ದಿ ಸಂಸ್ಥೆಯೊಂದು ಹಂಚಿಕೊಂಡಿರುವ ಕ್ಲಿಪ್ ನ ಆರಂಭದಲ್ಲಿ ನೀರಿಗೆ ಬಿದ್ದು ಮೇಲೆ ಬರಲು ದಾರಿ ಕಾಣದೆ ದಣಿದು ಸುಸ್ತಾದ ಚಿರತೆಯೊಂದು ಅಲ್ಲಿಯೇ ಹತ್ತಿರದಲ್ಲಿ ನೇತಾಡುತ್ತಿರುವ ಮರದ ದಿಮ್ಮಿಯ ಮೇಲೆ ಕುಳಿತಿರುವುದನ್ನು ನೋಡಬಹುದು. ಆನಂತರ ಅದು ನಿಧಾನವಾಗಿ, ಬಾವಿಯೊಳಗೆ ಬಿಟ್ಟಿರುವ ಮರದ ಏಣಿಯನ್ನು ಹಿಡಿಯಲು ಪ್ರಯತ್ನಿಸುತ್ತದೆ ಮತ್ತು ಮೇಲಕ್ಕೆ ನಿಧಾನವಾಗಿ ಏರುತ್ತದೆ. ಬಾವಿಯ ಮೇಲ್ಭಾಗವನ್ನು ತಲುಪಿದ ನಂತರ, ಚಿರತೆಯು ಮೇಲಕ್ಕೆ ಬಂದು ನೋಡ ನೋಡುವಷ್ಟರಲ್ಲಿಯೇ ತಕ್ಷಣ ತಪ್ಪಿಸಿಕೊಂಡು ಕಾಡಿನೊಳಕ್ಕೆ ಹೋಗುತ್ತದೆ.

ಇದನ್ನೂ ಓದಿ:  Viral Video: ಈ ಆಮೆಗಳ ವಿಡಿಯೋ 8 ಮಿಲಿಯನ್ ಜನ ನೋಡಿದ್ದಾರೆ! ನೀವಿನ್ನೂ ನೋಡಿಲ್ವಾ?

"ಸ್ಥಳೀಯ ಅರಣ್ಯ ಇಲಾಖೆಯಿಂದ ಒಂದು ಚಿರತೆ ಬಾವಿಯಲ್ಲಿ ಬಿದ್ದ ಸುದ್ದಿ ನಮಗೆ ಸಿಕ್ಕಿದೆ. ತಕ್ಷಣವೇ ನಾವು ಆ ಚಿರತೆ ಬಿದ್ದ ಬಾವಿಯಿರುವ ಸ್ಥಳಕ್ಕೆ ಹೋಗಿ ಮರದ ಏಣಿಯ ಸಹಾಯದಿಂದ ಚಿರತೆಯನ್ನು ರಕ್ಷಿಸಿದ್ದೇವೆ" ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿ ಮಿಶ್ರಾ ಕಿಶನ್ ಅವರು ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಟ್ವೀಟ್ ಮಾಡಿದ್ದಾರೆ.

ಚಿರತೆಯನ್ನು ಕಾಡಿಗೆ ಓಡಿಸಿದ್ದು ಹೀಗೆ
ಈ ಪ್ರದೇಶದ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಬಾವಿಯ ಗಡಿಗಳಿಗೆ ಒಂದು ದೊಡ್ಡ ಬಲೆಯನ್ನು ಹಾಕಲಾಯಿತು ಮತ್ತು ಚಿರತೆ ಕಾಡಿಗೆ ಪ್ರವೇಶಿಸಲು ಒಂದು ಬದಿಯನ್ನು ಮಾತ್ರ ತೆರೆದಿಡಲಾಯಿತು. ಬಾವಿಯೊಳಗೆ ಚಿರತೆ ಇರುವುದನ್ನು ಗಮನಿಸಿದ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಎಂದು ಒಡಿಶಾ ಸುದ್ದಿ ಮಾಧ್ಯಮವೊಂದು ವರದಿ ಮಾಡಿತ್ತು. ಪ್ರಾಣಿಯ ಯಾವುದೇ ದಾಳಿಯಿಲ್ಲದೆ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಅರಣ್ಯ ಅಧಿಕಾರಿಯೊಬ್ಬರು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಬಾವಿಯಲ್ಲಿ ಬಿದ್ದು ಮೇಲೆ ಹೇಗೆ ಹೋಗಬೇಕೆಂದು ಅರ್ಥವಾಗದೆ ಒದ್ದಾಡುತ್ತಿದ್ದ ಚಿರತೆಯನ್ನು ಉಳಿಸಿದ್ದಕ್ಕಾಗಿ ಇಂಟರ್ನೆಟ್ ಬಳಕೆದಾರರು ಅಧಿಕಾರಿಗಳನ್ನು ತುಂಬಾನೇ ಶ್ಲಾಘಿಸಿದರು. "ಚಿರತೆಗಳು ಸಾಮಾನ್ಯವಾಗಿ ಮರಗಳನ್ನು ಏರುತ್ತವೆ ಮತ್ತು ಸಾಮಾನ್ಯವಾಗಿ ಅವು ಮಾನವನ ಸಹಾಯಕ್ಕೆ ಪ್ರತಿಕ್ರಿಯಿಸುವುದಿಲ್ಲ. ಆದರೆ ಈ ಏಣಿ ತನಗೆ ಮೇಲಕ್ಕೆ ಹತ್ತಿಕೊಂಡು ಬರಲು ಬಿಟ್ಟಿದ್ದಾರೆ ಎಂದು ಈ ಜಾಣ ಚಿರತೆಗೆ ಅರ್ಥವಾದಂತಿದೆ" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ
ಚಿರತೆಗಳ ಬಗ್ಗೆ ಇದೊಂದೇ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದದ್ದು ಅಲ್ವೇ ಅಲ್ಲ, ಇತ್ತೀಚೆಗೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ಚಿರತೆಯೊಂದು ಸಾಕು ನಾಯಿಯ ಮೇಲೆ ದಾಳಿ ಮಾಡುವ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು. ವೀಡಿಯೋದ ಕೊನೆಯಲ್ಲಿ ಚಿರತೆ ನಾಯಿಯನ್ನು ಹಿಡಿದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ.

ಇದನ್ನೂ ಓದಿ:  Viral Video: ಈ ಆನೆ ಬಾಟಲಿಯಿಂದ ಹೇಗೆ ಹಾಲನ್ನು ಕುಡಿಯುತ್ತಿದೆ ನೋಡಿ; ನಗು ಬರಿಸೋದು ಗ್ಯಾರೆಂಟಿ

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ, ವನ್ಯಜೀವಿಗಳಿಗೆ ಸ್ಥಳಾವಕಾಶಗಳು ಕಡಿಮೆಯಾಗುತ್ತಿರುವ ಕಾರಣ ಹೀಗಾಗುತ್ತಿರಬಹುದು ಎಂಬುದರ ಬಗ್ಗೆ ಚರ್ಚೆ ಸಾಮಾಜಿಕ ಮಾಧ್ಯಮದಲ್ಲಿ ಶುರುವಾಯಿತು. ಈ ವೀಡಿಯೋ ಗಮನಿಸಿದರೆ ಮನೆಯನ್ನು ಕಾವಲು ಕಾಯುತ್ತಿರುವ ನಾಯಿಗಳನ್ನು ಸಹ ಮನೆಯೊಳಗೆ ಮಲಗಿಸಿಕೊಳ್ಳಬೇಕು ಎಂದು ಅನೇಕ ನೆಟ್ಟಿಗರು ಹೇಳಿದರು.
Published by:Ashwini Prabhu
First published: