ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಐಎಫ್‌ಎಸ್ (IFS) ಅಧಿಕಾರಿಯಾದ ಸುಸಂತ ನಂದಾ ಅವರು ರಾತ್ರಿ ಹೊತ್ತಿನಲ್ಲಿ ಕಾಡಿನಲ್ಲಿರುವ ರಸ್ತೆಯಲ್ಲಿ ತಾಯಿ ಹುಲಿ ಮತ್ತು ಅದರ ಮರಿಗಳು ಕಾಡಿನ ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗುವಾಗ ಅಲ್ಲಿಗೆ ಬಂದ ಕಾರಿನ ಲೈಟ್ ತಮ್ಮ ಮೇಲೆ ಬಿದ್ದಿದ್ದರಿಂದ ಹೇಗೆ ಬೇಗನೆ ಕಾಡಿನ ಒಳಗೆ ಓಡಿ ಹೋದವು ಎಂಬುದನ್ನು ನಾವೆಲ್ಲಾ ನೋಡಿದ್ದೆವು. ಅಲ್ಲದೆ ಈ ಅಧಿಕಾರಿ ಈ ವೀಡಿಯೋವನ್ನು ಪೋಸ್ಟ್ (Post) ಮಾಡಿ ಇದಕ್ಕೆ “ಕಾಡಿನಲ್ಲಿರುವ ರಸ್ತೆಗಳಲ್ಲಿ ನೀವು ಕಾರಿನಲ್ಲಿ ಪ್ರಯಾಣಿಸುವಾಗ ಸ್ವಲ್ಪ ನಿಧಾನವಾಗಿ ಹೋಗಿ” ಅಂತ ಸಹ ತಮ್ಮ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದರು. ಈಗ ಇವರು ಮತ್ತೊಂದು ವಿಡಿಯೋವನ್ನು(Video) ಹಂಚಿಕೊಂಡಿದ್ದಾರೆ ನೋಡಿ, ಈ ವಿಡಿಯೋ ಸಹ ವನ್ಯಜೀವಿಗಳದ್ದೆ.
ಏಷ್ಯಾ, ಆಫ್ರಿಕಾ, ದಕ್ಷಿಣ ರಷ್ಯಾ ಮತ್ತು ಭಾರತೀಯ ಉಪಖಂಡದಲ್ಲಿ ಕಂಡು ಬರುವ ಚಿರತೆಗಳ ಬಗ್ಗೆ ಜನರಲ್ಲಿ ಇನ್ನೂ ಹೆಚ್ಚಿನ ಅರಿವನ್ನು ಮೂಡಿಸಲು ಮೇ 3 ರಂದು ಅಂತರರಾಷ್ಟ್ರೀಯ ಚಿರತೆ ದಿನವನ್ನು ಆಚರಿಸಲಾಯ್ತು.
ಚಿರತೆಗಳು ನೋಡಲು ಅಷ್ಟೊಂದು ದೈತ್ಯ ಗಾತ್ರದಲ್ಲಿ ಇರದೆ ಇದ್ದರೂ ಸಹ ಅವುಗಳು ಎಂತಹದೇ ಮರವನ್ನು ಮತ್ತು ಬೆಟ್ಟವನ್ನು ಸಲೀಸಾಗಿ ಹತ್ತಬಲ್ಲವು. ಚಿರತೆಗಳು ತಮ್ಮ ಆವಾಸಸ್ಥಾನವನ್ನು ಅವಲಂಬಿಸಿ ವಿವಿಧ ಗಾತ್ರಗಳಲ್ಲಿ ಕಂಡು ಬರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಅಂಶಗಳಿಂದಾಗಿ ಚಿರತೆಗಳ ಜನಸಂಖ್ಯೆ ಕಡಿಮೆಯಾಗುತ್ತಿದೆ.
ಇದನ್ಮೂ ಓದಿ: Love ಮಾಡೋಕೆ ಈ ವಯಸ್ಸು ಪರ್ಫೆಕ್ಟ್ ಅಂತೆ! ಇಲ್ಲದಿದ್ದಲ್ಲಿ ಬ್ರೇಕಪ್ ಪಕ್ಕಾ
ಚಿರತೆಗಳ ಬಗ್ಗೆ ಪೋಸ್ಟ್ ಗಳನ್ನು ಹಂಚಿಕೊಂಡ ಅರಣ್ಯ ಅಧಿಕಾರಿಗಳು
ಐಎಫ್ಎಸ್ ಅಧಿಕಾರಿಗಳಾದ ಸುಸಂತ ನಂದಾ ಮತ್ತು ಪರ್ವೀನ್ ಕಾಸ್ವಾನ್ ಅವರು ಸದಾ ಈ ವನ್ಯಜೀವಿಗಳ ಬಗ್ಗೆ ಅನೇಕ ಆಸಕ್ತಿದಾಯಕ ವಿಡಿಯೋ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
Follow the mother…
The most prosecuted big cat & certainly gorgeous & urbanised.
Did you know that the Sanjay Gandhi National Park in Mumbai Metropolitan Region, has the highest documented density of leopards in the world, at about 26/100km2?#World leopard day pic.twitter.com/E3BNedFFuu
— Susanta Nanda (@susantananda3) May 3, 2023
ಇದನ್ನೂ ಓದಿ: Joy Alukkas ರವರ ಆಸ್ತಿ, ಪಾಸ್ತಿ, ಮೌಲ್ಯ ಕೇಳಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತೀರಾ!
ಚಿರತೆಗಳ ವಿವಿಧ ಪ್ರಭೇದಗಳ ಬಗ್ಗೆ ವಿವರ ಹಂಚಿಕೊಂಡಿರುವ ಪರ್ವೀನ್ ಕಾಸ್ವಾನ್
ಐಎಫ್ಎಸ್ ಅಧಿಕಾರಿ ಪರ್ವೀನ್ ಕಾಸ್ವಾನ್ ಸಹ ಟ್ವಿಟ್ಟರ್ ನಲ್ಲಿ ವಿವಿಧ ಪ್ರಭೇದದ ಚಿರತೆಗಳನ್ನು ತೋರಿಸುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಸಾಮಾನ್ಯ ಚಿರತೆಗಳನ್ನು ಕಪ್ಪು ಚಿರತೆಗಳು ಎಂದು ಏಕೆ ಕರೆಯಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ, ಏಕೆಂದರೆ ಅವುಗಳ ಮೈಲಿನ ಬಣ್ಣ ಸಂಪೂರ್ಣವಾಗಿ ವಿಭಿನ್ನ ಬಣ್ಣದಾಗಿರುತ್ತದೆ.
"ಜಂಗಲ್ ಬುಕ್ ನಿಂದ ನೇರವಾಗಿ ಇಲ್ಲಿಗೆ ಬಂದಿರಬೇಕು ನೋಡಿ ಈ ಕಪ್ಪು ಚಿರತೆ. ಇದನ್ನು ನಾವು ಎರಡು ವರ್ಷಗಳ ಹಿಂದೆ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆ ಹಿಡಿದಿದ್ದೇವು. ಈ ಕಪ್ಪು ಚಿರತೆಗಳು ಮೆಲನಿಸ್ಟಿಕ್ ಸಾಮಾನ್ಯ ಚಿರತೆಗಳಾಗಿವೆ. ಅವು ಭಾರತದ ಅನೇಕ ರಾಜ್ಯಗಳಲ್ಲಿ ಕಂಡು ಬರುತ್ತವೆ. ಅಮೇರಿಕಾದಲ್ಲಿ, ಮೆಲನಿಸ್ಟಿಕ್ ಜಾಗ್ವಾರ್ ಗಳನ್ನು ಕಪ್ಪು ಪ್ಯಾಂಥರ್ಸ್ ಅಂತ ಸಹ ಕರೆಯಲಾಗುತ್ತದೆ.
ಇಂದು ಅಂತರರಾಷ್ಟ್ರೀಯ ಚಿರತೆಗಳ ದಿನ" ಎಂದು ನಿನ್ನೆ ಎಂದರೆ ಮೇ 3ನೇ ತಾರೀಖು ಕಾಸ್ವಾನ್ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.ಈ ಅಧಿಕಾರಿಯವರು ಹಂಚಿಕೊಂಡ ಪೋಸ್ಟ್ ಕಾಡಿನೊಳಗೆ ಇರಿಸಲಾದ ನೈಟ್ ಕ್ಯಾಮ್ ನಲ್ಲಿ ಸೆರೆ ಹಿಡಿಯಲಾದ ಕಪ್ಪು ಚಿರತೆಯ ಫೋಟೋವನ್ನು ಒಳಗೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ