ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲ್ಲವೂ ದುಬಾರಿ ಆಗಿದೆ. ಕೊಳ್ಳುವ ತರಕಾರಿ, ಹಣ್ಣು, ರೇಷನ್, ಬಟ್ಟೆ, ಊಟ ಹೀಗೆ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದೆ. ಅದರಲ್ಲೂ ನಗರಗಳಲ್ಲಿ (City) ಬಾಡಿಗೆ ಮನೆ (Rented Home) ಮಾಡಿಕೊಂಡು ಚಿಕ್ಕ ಪುಟ್ಟ ನೌಕರಿ ಮಾಡಿಕೊಂಡು ಬದುಕುತ್ತಿರುವ ಮಧ್ಯಮ ವರ್ಗದ ಹಾಗೂ ಬಡವರ ಬದುಕು ಹೈರಾಣಾಗಿದೆ. ಯಾಕಂದ್ರೆ ತಿಂಗಳು (Month) ಪೂರ್ತಿ ದುಡಿದ ದುಡ್ಡು ತಿಂಗಳ ಪ್ರಾರಂಭದ ಮೂರು ದಿನಗಳಲ್ಲೇ ಮುಗಿದು ಹೋಗುತ್ತದೆ. ಬಾಡಿಗೆ ಕೊಡಬೇಕು, ಕರೆಂಟ್ ಬಿಲ್ ಕಟ್ಟಬೇಕು, ನೀರಿನ ಬಿಲ್, ಓಡಾಡಲು ಬಸ್, ಆಟೋ ಹಾಗು ಸ್ವಂತ ವಾಹನಕ್ಕೆ ಪೆಟ್ರೋಲ್ ಹಾಕಿಸುವುದು, ಮಕ್ಕಳಿಗೆ ಖರ್ಚು, ಆಸ್ಪತ್ರೆ ಖರ್ಚು ಹೀಗೆ ಒಂದೇ ಎರಡೇ ಖರ್ಚುಗಳಲ್ಲೇ ತಿಂಗಳು ಕೊನೆಯಾಗುತ್ತದೆ.
ಸಾಲ ಪಡೆಯುವುದು ಮತ್ತು ಅದನ್ನು ಮರಳಿಸುವ ವಿಚಾರದಲ್ಲೇ ದಿನಗಳು ಕಳೆದು ಹೋಗುತ್ತವೆ. ಈಗ್ಯಾಕಪ್ಪಾ ಇದೆಲ್ಲಾ ವಿಚಾರ ಅಂದ್ರಾ? ಯಾಕಂದ್ರೆ ಈ ದುನಿಯಾ ದುಡ್ಡಿದ್ದವರದ್ದು. ಇಲ್ಲಿ ಎಲ್ಲವೂ ಸೇಲ್‌ಗೆ ಇದೆ. ನಗರದಲ್ಲಿ ಅದರಲ್ಲೂ ಬೆಂಗಳೂರಿನಂತಹ ಬೃಹತ್ ಸ್ಮಾರ್ಟ್ ಸಿಟಿಗಳಲ್ಲಿ ವಾಸ ಮಾಡ್ಬೇಕಂದ್ರೆ ದುಡಿಯುತ್ತಲೇ ಇರಬೇಕು.
ಎಡ ಕಿಡ್ನಿ ಮಾರಾಟಕ್ಕಿದೆ!
ಇಲ್ಲಿಯ ಬಾಡಿಗೆ ಮನೆಯ ರೆಂಟ್, ಲೀಸ್ ಗೆ ತೆಗೆದುಕೊಂಡ್ರೆ ಲಕ್ಷಾನುಗಟ್ಟಲೇ ದುಡ್ಡು ಬೇಕು. ಇಷ್ಟ ಪಟ್ಟ ಏರಿಯಾದಲ್ಲಿ ಮನೆ ಬೇಕು ಅಂದ್ರೆ ತಿಂಗಳು ದುಡಿದ ದುಡ್ಡನ್ನೆಲ್ಲಾ ಅದಕ್ಕೇ ಖರ್ಚು ಮಾಡಬೇಕಾಗುತ್ತದೆ. ಇದು ತುಂಬಾ ಸೀರಿಯಸ್ ವಿಷಯ. ಇದೇ ವಿಷಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ. ಅದಕ್ಕೆ ಮುಖ್ಯವಾಗಿ ಕಾರಣವಾಗಿದ್ದು ಈ ಪೋಸ್ಟರ್ ಮತ್ತು ಟ್ವೀಟ್.
ये बंदा जो भी है, मार्केटिंग का है। दूर तक जायेगा 😂 pic.twitter.com/L4dMpU4bAu
— Arun Bothra 🇮🇳 (@arunbothra) February 26, 2023
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ವೈರಲ್
ಬೆಂಗಳೂರಿನಲ್ಲಿ ಬಾಡಿಗೆ ಮನೆಗೆ ಹಣ ಠೇವಣಿ ಇಡಲು ವ್ಯಕ್ತಿಯು ತಮ್ಮ ಎಡ ಭಾಗದ ಮೂತ್ರಪಿಂಡವನ್ನು ಮಾರಾಟ ಮಾಡುವುದಾಗಿ ಪೋಸ್ಟರ್ ನಲ್ಲಿ ತಿಳಿಸಿದ್ದಾರೆ. ಇದು ತಮಾಷೆ, ವ್ಯಂಗ್ಯ ಭರಿತ ಪೋಸ್ಟರ್ ಆಗಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಾಡಿಗೆ ಮನೆಗಾಗಿ ಡೆಪಾಸಿಟ್ ಹಣ ಪಡೆಯಲು ತನ್ನ ಎಡ ಮೂತ್ರಪಿಂಡವನ್ನು ಮಾರಾಟ ಮಾಡುವುದಾಗಿ ವ್ಯಕ್ತಿ ಪೋಸ್ಟರ್ ಅಂಟಿಸಿದ್ದಾರೆ. ರಮ್ಯಖ್ ಎಂಬ ಹೆಸರಿನ ಟ್ವಿಟರ್ ಬಳಕೆದಾರರು ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ. ಪೋಸ್ಟರ್ ನಲ್ಲಿ ಎಡ ಮೂತ್ರಪಿಂಡವನ್ನು ಮಾರಾಟಕ್ಕೆ ಇಡಲಾಗಿದೆ.
ತಮಗೆ ಮನೆ ಮಾಲೀಕರು ಕೇಳುತ್ತಿರುವಷ್ಟು ಹಣ ಕೊಡಲು ಬಾಡಿಗೆ ಮನೆಯ ಡೆಪಾಸಿಟ್ ಹಣ ಬೇಕು. ಆದರೆ ಇದು ತಮಾಷೆಗೆ ಎಂದು ಕೆಳಗೆ ಕ್ಯೂಆರ್ ಕೋಡ್ ಸಹ ಇಡಲಾಗಿದೆ. ಬೆಂಗಳೂರಿನ ಇಂದಿರಾನಗರ ಪ್ರದೇಶದಲ್ಲಿ ಬಾಡಿಗೆ ಮನೆ ಹುಡುಕುತ್ತಿರುವುದಾಗಿ ತಿಳಿಸಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಚರ್ಚೆ
ಈ ಪೋಸ್ಟರ್ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಾಡಿಗೆ ಮತ್ತು ಡೆಪಾಸಿಟ್ ಬಗ್ಗೆ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಅನಿತಾ ರಾಣೆ ಎಂಬ ಬಳಕೆದಾರರು, ಬೆಂಗಳೂರು ದೇಶ ಮತ್ತು ಪ್ರಪಂಚದ ಹಲವು ಭಾಗಗಳ ಜನರಿಗೆ ನೆಲೆಯಾಗಿದೆ. ಮಾರ್ಕೆಟಿಂಗ್ ತಂತ್ರಗಳನ್ನು ಆಶ್ರಯಿಸಬೇಕಾಗಿದೆ ಎಂದು ಬರೆದಿದ್ದಾರೆ.
ಇದನ್ನೂ ಓದಿ: ದಾರದಲ್ಲಿ ಅರಳಿದ ಮೋದಿ; ಹೇಗಿದೆ ಗೊತ್ತಾ ಗಿಫ್ಟ್ ಹೇಗಿದೆ? ಅಭಿಮಾನಿ ಹೇಳಿದ್ದೇನು?
ಅಭಿತೋಷ್ ಎಂಬ ಬಳಕೆದಾರರು, ತಾವು ಮನೆ ಹುಡುಕುವಾಗ ಮಾಲೀಕರಿಗೆ ನಿನ್ನನ್ನು ಶ್ರೀಮಂತನನ್ನಾಗಿ ಮಾಡುವ ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದೆ ಎಂದು ಬರೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ