Wedding Card- ಕೋರ್ಟ್ ಶೈಲಿಯಲ್ಲಿ ಮದುವೆ ಕರೆಯೋಲೆ; ವೈರಲ್ ಆಯ್ತು ವೆಡಿಂಗ್ ಕಾರ್ಡ್

ಸಾಮಾನ್ಯವಾಗಿ ಮದುವೆ ಕಾರ್ಡ್ ಅಂದಾಕ್ಷಣ ಜನರು ಸ್ಥಳ, ದಿನಾಂಕವನ್ನು ಓದುವುದು ವಾಡಿಕೆ, ಆದರೆ ಬರೆದಿರುವ ಉಳಿದ ವಿವರಗಳನ್ನು ಯಾರೂ ಓದುವುದಿಲ್ಲ. ಆದರೆ ನನ್ನ ಲಗ್ನ ಪತ್ರಿಕೆಯಲ್ಲಿ ಹಾಗಾಗಲು ನಾನು ಬಿಡಲಿಲ್ಲ. ಲಗ್ನ ಪತ್ರಿಕೆಯ ಮೊದಲಿನಿಂದ ಕೊನೆಯವರೆಗೂ ಜನರು ಓದುವಂತಿರಬೇಕೆಂದು ಈ ಐಡಿಯಾ ಮಾಡಲಾಯಿತು

ವೈರಲ್‌ ಆದ ಕಾರ್ಡ್

ವೈರಲ್‌ ಆದ ಕಾರ್ಡ್

  • Share this:
    ಆಧುನಿಕ ಕಾಲದಲ್ಲಿ ಮದುವೆ ಎಂಬಂದು ಭಾರಿ ಆಡಂಬರದಿಂದ ಕೂಡಿರುತ್ತದೆ. ಹೊಸ ಜೋಡಿಗಳ ಪ್ರಿವೆಡ್ಡಿಂಗ್‌ ಶೂಟ್‌, ಹಳದಿ, ಮೆಹಂದಿ ಎಂದೆಲ್ಲಾ ಭಾರಿ ಸಂಭ್ರಮದಲ್ಲಿ ಮದುವೆ ಸಮಾರಂಭವನ್ನು ಐದಾರು ಮಾಡಲಾಗುತ್ತಿದೆ. ಇಲ್ಲಿ ಮದುವೆಗಾಗಿ ನೀಡುವ ಆಮಂತ್ರಣದಲ್ಲೂ(Wedding Card) ವಿಶೇಷ ವಿಭಿನ್ನತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಈಗ ಅದೇ ಹೊಸ ವಿಶಿಷ್ಟದೊಂದಿಗೆ ʻಸಂವಿಧಾನ ಥೀಮ್ʼ (Constitution Theme)ನೊಂದಿಗೆ ಮಾಡಿರುವ ವೆಡ್ಡಿಂಗ್ ಕಾರ್ಡ್ ವೊಂದು ಸಾಮಾಜಿಕ ಜಾಲತಾಣದಲ್ಲಿ(social networking) ಗಮನ ಸೆಳೆದಿದೆ. ವಕೀಲರೋರ್ವರು(Lawyer's) ತಮ್ಮ ಮದುವೆ ಕರೆಯೋಲೆಯನ್ನು ಸಂವಿಧಾನದ ಥೀಮ್​ನೊಂದಿಗೆ ಸಿದ್ಧಪಡಿಸಿರುವ ಈ ವೆಡ್ಡಿಂಗ್ ಕಾರ್ಡ್ ದೇಶದೆಲ್ಲೆಡೆ ಭಾರಿ ವೈರಲ್‌ ಆಗಿದೆ.

    ಅಸ್ಸಾಂನ ವಕೀಲ
    ಅಸ್ಸಾಂನ ಗುವಾಹಟಿಯ ವಕೀಲರು ಹರಿದ್ವಾರದಲ್ಲಿ ಸಹಾಯಕ ಪ್ರಾಧ್ಯಾಪಕಿ ವೃತ್ತಿಯಲ್ಲಿರುವ ಪೂಜಾ ಶರ್ಮಾ ಅವರನ್ನು ವಿವಾಹವಾಗುತ್ತಿದ್ದಾರೆ. ಹಾಗಾಗಿ ವಿಶೇಷವಾಗಿ ಆಮಂತ್ರಣ ನೀಡಬೇಕೆಂದು ವಕೀಲ ಅಜಯ್ ಶರ್ಮಾ ಅವರು ತಮ್ಮ ಮದುವೆಯ ಕರೆಯೋಲೆಯನ್ನು ಸಂವಿಧಾನದ ಥೀಮ್ ​ನೊಂದಿಗೆ ತಯಾರಿಸಿ ಗಮನ ಸೆಳೆದಿದ್ದಾರೆ. ಈ ಚಿತ್ರವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಸಮಾನತೆಯನ್ನು ಪ್ರತಿನಿಧಿಸಲು ನ್ಯಾಯದ ತಕ್ಕಡಿಯ ಎರಡೂ ಬದಿಯಲ್ಲಿ ವಧು ವರರ ಹೆಸರನ್ನು ಬರೆಯಲಾಗಿದೆ. ಮದುವೆಯ ಆಮಂತ್ರಣವು ಭಾರತೀಯ ಕಾನೂನು ಮತ್ತು ಹಕ್ಕುಗಳನ್ನು ಉಲ್ಲೇಖಿಸುತ್ತದೆ. ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಬುದುಕುವ ಹಕ್ಕಿನ ಅಡಿಯಲ್ಲಿ ಮದುವೆಯಾಗುವ ಹಕ್ಕು ಇದೆ. ಹಾಗಾಗಿ 2021 ನವೆಂಬರ್ 28 ಭಾನುವಾರದಂದು ನಾನು ಈ ಮೂಲಭೂತ ಹಕ್ಕನ್ನು ಬಳಸುವ ಸಮಯವಾಗಿದೆ ಎಂದು ವೆಡ್ಡಿಂಗ್ ಕಾರ್ಡ್​ನಲ್ಲಿ ಹೇಳಿರುವುದು ಎಲ್ಲಾರನ್ನು ಆಕರ್ಷಿಸಿದೆ.

    ವೈರಲ್‌ ಆದ ಕಾರ್ಡ್


    ಓದುವಂತಿದೆ ಲಗ್ನ ಪತ್ರಿಕೆ
    ಅಜಯ್ ಅವರು ಐದು ವರ್ಷಗಳಿಂದ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಸಹೋದ್ಯೋಗಿಗಳೊಂದಿಗೆ ಮಾತನಾಡುತ್ತಾ ಈ ಹೊಸ ಶೈಲಿಯಲ್ಲಿ ವೆಡ್ಡಿಂಗ್ ಕಾರ್ಡ್ ತಯಾರಿಸುವ ಯೋಜನೆ ಹೊಳೆಯಿತ್ತು ಎಂದು ಹೇಳಿಕೊಂಡಿದ್ದಾರೆ. ಸಾಮಾನ್ಯವಾಗಿ ಮದುವೆ ಕಾರ್ಡ್ ಅಂದಾಕ್ಷಣ ಜನರು ಸ್ಥಳ, ದಿನಾಂಕವನ್ನು ಓದುವುದು ವಾಡಿಕೆ, ಆದರೆ ಬರೆದಿರುವ ಉಳಿದ ವಿವರಗಳನ್ನು ಯಾರೂ ಓದುವುದಿಲ್ಲ. ಆದರೆ ನನ್ನ ಲಗ್ನ ಪತ್ರಿಕೆಯಲ್ಲಿ ಹಾಗಾಗಲು ನಾನು ಬಿಡಲಿಲ್ಲ. ಲಗ್ನ ಪತ್ರಿಕೆಯ ಮೊದಲಿನಿಂದ ಕೊನೆಯವರೆಗೂ ಜನರು ಓದುವಂತಿರಬೇಕೆಂದು ಈ ಐಡಿಯಾ ಮಾಡಲಾಯಿತು ಎಂದು ಅಜಯ್ ಹೇಳುತ್ತಾರೆ. ಅಜಯ್ ಅವರು ಸ್ನೇಹಿತನ ಜೊತೆಗೂಡಿ ವೆಡ್ಡಿಂಗ್ ಕಾರ್ಡ್ ತಯಾರಿಸಿದ್ದಾರೆ ಮತ್ತು ಈ ಲಗ್ನ ಪತ್ರಿಕೆಯನ್ನು ತಮ್ಮ ಸಹುದ್ಯೋಗಿ ವಕೀಲರಿಗೆ ಹಂಚಿದ್ದಾರೆ.

    ಇದನ್ನೂ ಓದಿ: Anushka Sharma: ನಟಿಗೆ ಬಂತು ಅಭಿಮಾನಿಯಿಂದ ಕನ್ನಡದಲ್ಲೇ ಮದುವೆ ಕರೆಯೋಲೆ: ಶುಭ ಕೋರಿದ ಅನುಷ್ಕಾ ಶರ್ಮಾ!

    ತಂದೆಗೆ ಪೋನ್ ಕರೆಗಳು
    ಕುತೂಹಲಕಾರಿಯಾಗಿ, ಕಾರ್ಡ್ ವೈರಲ್ ಆದ ನಂತರವೇ ಅಜಯ್ ಅವರ ಕುಟುಂಬಕ್ಕೆ ಈ ಬಗ್ಗೆ ತಿಳಿದಿದೆ. "ಕಾರ್ಡ್‌ನಲ್ಲಿರುವ ಮೊದಲ ಸಂಖ್ಯೆ ನನ್ನ ತಂದೆಯದು, ಹಾಗಾಗಿ ಅವರಿಗೆ ಕರೆಗಳನ್ನು ಬರಲು ಶುರುವಾಯಿತು ಬಳಿಕಅವರು ನನ್ನನ್ನು ಕೇಳಿದರು, "ನೀನು ಯಾವ ಕಾರ್ಡ್ ಮಾಡಿದ್ದೀರಿ?" ನಾನು ಎರಡು ಕಾರ್ಡ್‌ಗಳನ್ನು ಮಾಡಿದ್ದೆ. ಮೊದಲನೆಯದು ಸಾಂಪ್ರದಾಯಿಕ ಮತ್ತು ಇನ್ನೊಂದು ಕಾನೂನು ಬಂಧುಗಳನ್ನು ಆಹ್ವಾನಿಸಲು, ಎಂದು ಅಜಯ್ ಹೇಳಿದರು.
    ಮದುವೆಯ ಕಾರ್ಡ್​ನಲ್ಲಿ ಅವರ ತಂದೆಯ ಫೋನ್​ನಂಬರ್​ ನಮೂದಿಸಿದ್ದರಿಂದ ಅಜಯ್ ಅವರ ತಂದೆಗೆ ಪೋನ್ ಕರೆಗಳು ಬರಲು ಪ್ರಾರಂಭಿಸಿದವು. ಆಗಲೇ ಅವರ ತಂದೆ ಆಶ್ಚರ್ಯಚಕಿತರಾಗಿ ನನ್ನ ಬಳಿ ಬಂದು, ಎಷ್ಟು ರೀತಿಯ ವೆಡ್ಡಿಂಗ್ ಕಾರ್ಡ್ ಮಾಡಿಸಿದ್ದೀಯಾ? ಎಂದು ಪ್ರಶ್ನಿಸಿದ್ದು. ಆಗ ಒಂದು ಸಾಂಪ್ರದಾಯಿಕವಾಗಿ ಹಾಗೂ ನನ್ನ ಸಹೋದ್ಯೋಗಿಗಳಿಗೆ ನೀಡಲು ಮತ್ತೊಂದು ರೀತಿಯ ವಿಶಿಷ್ಟ ವೆಡ್ಡಿಂಗ್ ಕಾರ್ಡ್ ಎಂದು ಹೇಳಿದೆ ಎಂದು ಮಾಹಿತಿ ಅಜಯ್ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: Royal Wedding: ಒಂದು ಆಮಂತ್ರಣ ಪತ್ರಿಕೆ 4 ಕೆಜಿ, ಬೆಲೆ 7 ಸಾವಿರ.. ಮದುವೆ ಯಾರದ್ದು ಹೇಳಿ?

    ವೈರಲ್ ಆದ ವೆಡ್ಡಿಂಗ್‌ ಕಾರ್ಡ್‌ ಕಂಡು ನೆಟ್ಟಿಗರು . ವಿವಾಹ ಕೂಡಾ ನ್ಯಾಯಾಲಯದ ಥೀಮ್​ನೊಂದಿಗೆ ನಡೆಯುತ್ತದೆಯೇ? ಎಂದು ಓರ್ವರು ಪ್ರಶ್ನಿಸಿದ್ದಾರೆ. ಇನ್ನು
    "ಇದು ನ್ಯಾಯಾಲಯದ ಸಮನ್ಸ್‌ನಂತೆ ಓದುತ್ತದೆ. ಎಂದರೆ, "ವ್ಯಕ್ತಿಯು ಇನ್ನೂ ತನ್ನ ಹೆಸರಿನ ಮುಂದೆ 'ಅಡ್ವೊಕೇಟ್' ಎಂಬ ಪೂರ್ವಪ್ರತ್ಯಯವನ್ನು ತಪ್ಪಿಸಿಕೊಂಡಿದ್ದಾನೆ. ಎಂದು ಹೇಳಿದ್ದಾರೆ. ನ್ಯಾಯಾಲಯದ ಥೀಮ್.ಅಲಂಕಾರಗಳ ಬಗ್ಗೆ ಆಶ್ಚರ್ಯವಾಗುತ್ತಿದೆ ಎಂದಿದ್ದಾರೆ.
    Published by:vanithasanjevani vanithasanjevani
    First published: