HOME » NEWS » Trend » LATEST INDIAN WORD TO ENTER OXFORD ENGLISH DICTIONARY CHUDDIES

ಆಕ್ಸ್​ಫರ್ಡ್​ ಡಿಕ್ಷನರಿಯಲ್ಲಿ ಚಡ್ಡಿಗೂ ಸಿಕ್ತು ಸ್ಥಾನ..!

ಈ ಸೀರಿಯಲ್​ನಲ್ಲಿ ಬರುವ ಹಾಸ್ಯ ಸನ್ನಿವೇಶದಲ್ಲಿ ಸಂಜೀವ್ ಕಿಸ್​ ಮೈ ಚಡ್ಡೀಸ್ ಎಂಬ ಡೈಲಾಗ್​ ಅನ್ನು ಉದುರಿಸಿದ್ದರು. ಇದರಿಂದ ಈ ಚಡ್ಡಿ ಪದದ ಚರ್ಚೆಯು ಬ್ರಿಟನ್​ನಲ್ಲಿ ಆರಂಭವಾಗಿತ್ತು ಎನ್ನಲಾಗಿದೆ.

zahir | news18
Updated:March 22, 2019, 3:36 PM IST
ಆಕ್ಸ್​ಫರ್ಡ್​ ಡಿಕ್ಷನರಿಯಲ್ಲಿ ಚಡ್ಡಿಗೂ ಸಿಕ್ತು ಸ್ಥಾನ..!
@Lifestyle
  • News18
  • Last Updated: March 22, 2019, 3:36 PM IST
  • Share this:
ಭಾರತದ ಕೆಲ ಆಡುಬಾಷೆಗಳು ಈಗಾಗಲೇ ಆಕ್ಸ್​ಫರ್ಡ್​ ಡಿಕ್ಷನರಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಕೆಲ ವರ್ಷಗಳ ಹಿಂದೆ ಆಧಾರ್ ಪದ ಈ ನಿಘಂಟುವಿನಲ್ಲಿ ಮಾನ್ಯತೆಯನ್ನು ಪಡೆದುಕೊಂಡಿತ್ತು. ಇದೀಗ ದೇಶದ ಒಳ ಉಡುಪಿಗೆ ಹಾಗೂ ಆಡು ಭಾಷೆಗೆ ಬಳಸುವ 'ಚಡ್ಡಿ'ಗೂ ಪದ ಆಕ್ಸ್​ಫರ್ಡ್​ ಡಿಕ್ಷನರಿಯಲ್ಲಿ ಸ್ಥಾನ ಸಿಕ್ಕಿದೆ.

ಚಡ್ಡಿ ಎಂಬ ಪದವು 650 ಶಬ್ದಕೋಶಗಳ ಆಕ್ಸ್​ಫರ್ಡ್​ನಲ್ಲಿ ಸೇರ್ಪಡೆಯಾಗಿದ್ದು, ಇದನ್ನು ಮಾರ್ಚ್​ನಲ್ಲಿ ಮಾಡಲಾದ ಹೊಸ ಅಪ್​ಡೇಟ್​ನಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಆಕ್ಸ್​ಫರ್ಡ್ ಬ್ಲಾಗ್​ ಪೋಸ್ಟ್​ನಲ್ಲಿ​ ತಿಳಿಸಲಾಗಿದೆ.

ಭಾರತದಲ್ಲಿ ಹೆಚ್ಚು ಬಳಕೆಯಲ್ಲಿರುವ ಈ ಪದವು 1990 ರಲ್ಲಿ ಬ್ರಿಷರನ್ನು ಸೆಳೆಯಿತು. 90 ರ ದಶಕದ ಮಧ್ಯಭಾಗದಲ್ಲಿ ಬಿಬಿಸಿ ಚಾನೆಲ್​ನಲ್ಲಿ ಪ್ರಸಾರವಾದ Goodness Gracious Me ಎಂಬ ಬ್ರಿಟಿಷ್‍-ಏಷ್ಯನ್‍ ಕಾಮಿಡಿ ಧಾರಾವಾಹಿಯ ಮೂಲಕ ಚಡ್ಡಿ ಪದ ಬ್ರಿಟನ್​ನಲ್ಲಿ ಬಳಕೆಗೆ ಬಂತು. ಈ ಧಾರಾವಾಹಿಯ ಪಾತ್ರದಲ್ಲಿ ಭಾರತದ ಬರಹಗಾರ ಮತ್ತು ನಟರಾಗಿರುವ ಸಂಜೀವ್ ಭಾಸ್ಕರ್ ನಟಿಸಿದ್ದರು.
ಈ ಸೀರಿಯಲ್​ನಲ್ಲಿ ಬರುವ ಹಾಸ್ಯ ಸನ್ನಿವೇಶದಲ್ಲಿ ಸಂಜೀವ್ ಕಿಸ್​ ಮೈ ಚಡ್ಡೀಸ್ ಎಂಬ ಡೈಲಾಗ್​ ಅನ್ನು ಉದುರಿಸಿದ್ದರು. ಇದರಿಂದ ಈ ಚಡ್ಡಿ ಪದದ ಚರ್ಚೆಯು ಬ್ರಿಟನ್​ನಲ್ಲಿ ಆರಂಭವಾಗಿತ್ತು ಎನ್ನಲಾಗಿದೆ. ಭಾರತದಲ್ಲಿ ಹಾಫ್ ಪ್ಯಾಂಟ್, ಒಳ ಒಡುಪನ್ನು ಚಡ್ಡಿ ಎಂದು ಕರೆಯುವುದು ಸಾಮಾನ್ಯ. ಆದರೆ ಇದೇ ಪದವು ಬ್ರಿಟನ್​ನಲ್ಲಿ ತಿರಸ್ಕಾರ, ಅಗೌರವದ ಸೂಚಕವಾಗಿ ಬಳಕೆ ಬಂತು. ಈ ಎರಡು ಅರ್ಥಗಳನ್ನು ನಮೂದಿಸಿ ಇದೀಗ ಆಕ್ಸ್​ಫರ್ಡ್​ ತನ್ನ ಇಂಗ್ಲಿಷ್ ನಿಘಂಟುವಿನಲ್ಲಿ ಚಡ್ಡಿ ಪದವನ್ನು ಸೇರಿಸಲಾಗಿದೆ. ಇದಲ್ಲದೆ ಜಿಬ್ಬನ್ಸ್ (ಇಂಗ್ಲಿಷ್)​, ಸಿಟೂಟೆರಿ(ಸ್ಕಾಟಿಷ್ ಪದ) , ಡೋಫ್( ಆಫ್ರಿಕನ್) ಪದಗಳನ್ನು ಆಕ್ಸ್​ಫರ್ಡ್​ ಡಿಕ್ಷನರಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.

ಇದನ್ನೂ ಓದಿ: ಎಲ್ಲರೂ ವೋಟ್ ಮಾಡಿ: ತಾನು ಯಾರ ಪರ ಎಂಬುದರ ಸುಳಿವು ನೀಡಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ
First published: March 22, 2019, 3:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories