ಆನ್​ಲೈನ್ ಕ್ಲಾಸ್​ಗೆ ಮಿಯಾ ಖಲೀಫಾ ಎಂಟ್ರಿ!; ಬೆಂಗಳೂರು ವಿದ್ಯಾರ್ಥಿಗಳ ಕೀಟಲೆಗೆ ಶಿಕ್ಷಕರು ಕಂಗಾಲು

ಜಯನಗರ ಕಾಲೇಜಿನಲ್ಲಿ ಆಗತಾನೆ ಜಾಯಿನ್​ ಆದ ಶಿಕ್ಷಕಿಯೊಬ್ಬರು ಆನ್​ಲೈನ್​ನಲ್ಲಿ ಕ್ಲಾಸ್​ ತೆಗೆದುಕೊಂಡಿದ್ದರಂತೆ. ಆದರೆ, ಮಕ್ಕಳ ಗಲಾಟೆ ತಾಳಲಾರದೆ ಅವರು ಕ್ಲಾಸ್​ ಅನ್ನು ಅರ್ಧಕ್ಕೆ ನಿಲ್ಲಿಸಿದ್ದರಂತೆ. ಈ ರೀತಿಯ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಕೊನೆಯ ಬೇಂಚ್​ ವಿದ್ಯಾರ್ಥಿಗಳು ಎಂದರೆ ಅವರು ಸದಾ ಕೀಟಲೆ ಮಾಡಿಕೊಂಡು, ಶಿಕ್ಷಕರಿಗೆ ಹಾಗೂ ಸಹ ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಾ ಕಾಲ ಕಳೆಯುತ್ತಾರೆ. ಲಾಕ್​ಡೌನ್​ ಇರುವುದರಿಂದ ಕಾಲೇಜು ಸ್ಥಗಿತಗೊಂಡಿದೆ. ಆದರೆ, ಲಾಸ್ಟ್​ ಬೇಂಚ್​ ವಿದ್ಯಾರ್ಥಿಗಳ ಕೀಟಲೆ ಮಾತ್ರ ನಿಂತಿಲ್ಲ.

  ಕೆಲ ಕಾಲೇಜಿನಲ್ಲಿ ಆನ್​ಲೈನ್​ ಮೂಲಕ ತರಗತಿ ನಡೆಸಲಾಗತ್ತಿದೆ. ಈ ವೇಳೆ ಕೊನೆಯ ಸಾಲಿನ ವಿದ್ಯಾರ್ಥಿಗಳು ಎಂದಿನಂತೆ ತಮ್ಮ ಚೇಷ್ಟೆ ಕಾರ್ಯವನ್ನು ಮಂದುವರಿಸಿದ್ದಾರೆ. ವಿಡಿಯೋ ಕಾಲ್​ಗೆ ಜಾಯಿನ್​ ಆಗುವ ಪ್ರತಿಯೊಂದು ಖಾತೆಗೂ ತಮ್ಮ ತಮ್ಮ ಹೆಸರನ್ನು ನೀಡಬೇಕು. ಆದರೆ ಕೆಲವರು, ಪಾರ್ನ್​ ಸ್ಟಾರ್​ ಮಿಯಾ ಖಲೀಫಾ, ರತಿ ಮ್ಯಾಮ್​ ಬೆಸ್ಟ್​ ಟೀಚರ್​, ಒಸಮಾ ಬಿನ್​ ಲಾಡೆನ್​ ರೀತಿಯ ಹೆಸರನ್ನು ನೀಡಿ ಎಂಟ್ರಿ ಕೊಡುತ್ತಿದ್ದಾರೆ.

  ಈ ರೀತಿಯ ಹೆಸರುಗಳನ್ನು ನೋಡಿದ ಶಿಕ್ಷಕರು ನಿಜಕ್ಕೂ ಕಂಗಾಲಾಗಿದ್ದಾರೆ. “ವಿದ್ಯಾರ್ಥಿಗಳು ಕೊರೋನಾ, ಕ್ಯೂಟ್​ ಗರ್ಲ್​ ಮೊದಲಾದ ಹೆಸರುಗಳಿಂದ ಜಾಯಿನ್​ ಆಗುತ್ತಿದ್ದಾರೆ. ಯಾವ ವಿದ್ಯಾರ್ಥಿಗಳು ಕ್ಲಾಸ್​ಗೆ ಬಂದರು, ಯಾರು ಹೋದರು ಎನ್ನುವುದನ್ನು ತಿಳಿದುಕೊಳ್ಳುವುದು ಕಷ್ಟ. ಕೆಲವೊಮ್ಮೆ ವಿದ್ಯಾರ್ಥಿಗಳ ಕುಟುಂಬದವರೂ ಜಾಯಿನ್​ ಆಗಿ ಬಿಡುತ್ತಾರೆ. ಇದು ನಿಜಕ್ಕೂ ಮುಜುಗರ ಉಂಟು ಮಾಡುತ್ತದೆ,” ಎನ್ನುತ್ತಾರೆ ಶಿಕ್ಷಕರು.

  ಇದನ್ನೂ ಓದಿ: ರಾಜ್ಯದಲ್ಲಿಂದು 8 ಕೊರೋನಾ ಕೇಸ್ ಪತ್ತೆ; ಸೋಂಕಿತರ ಸಂಖ್ಯೆ 520ಕ್ಕೆ ಏರಿಕೆ

  ಇನ್ನು, ಶಿಕ್ಷಕರು ಹೊಸಬರಾಗಿದ್ದರಂತೂ ವಿದ್ಯಾರ್ಥಿಗಳು ಅವರನ್ನು ಹುರಿದು ಮುಕ್ಕಿ ಬಿಡುತ್ತಾರಂತೆ! ಜಯನಗರ ಕಾಲೇಜಿನಲ್ಲಿ ಆಗತಾನೆ ಜಾಯಿನ್​ ಆದ ಶಿಕ್ಷಕಿಯೊಬ್ಬರು ಆನ್​ಲೈನ್​ನಲ್ಲಿ ಕ್ಲಾಸ್​ ತೆಗೆದುಕೊಂಡಿದ್ದರಂತೆ. ಆದರೆ, ಮಕ್ಕಳ ಗಲಾಟೆ ತಾಳಲಾರದೆ ಅವರು ಕ್ಲಾಸ್​ ಅನ್ನು ಅರ್ಧಕ್ಕೆ ನಿಲ್ಲಿಸಿದ್ದರಂತೆ. ಈ ರೀತಿಯ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ.

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ಕೂಡ ನಡೆಯುತ್ತಿವೆ. ಅಷ್ಟೇ ಅಲ್ಲ, ಕೆಲ ಲಾಸ್ಟ್​ ಬೇಂಚ್​ ವಿದ್ಯಾರ್ಥಿಗಳು ನಾವು ಎಲ್ಲೇ ಇದ್ದರೂ ಎಂದಿಗೂ ಬದಲಾಗುವುದಿಲ್ಲ ಎಂದಿದ್ದಾರೆ.
  First published: