ಸದ್ಯ ಬೇಸಿಗೆ ಆರಂಭವಾಗಿದ್ದು, ಎಲ್ಲೆಡೆ ಬಿಸಿಲಿನ (Summer) ತಾಪ ಜೋರಾಗಿದೆ. ಹೀಗಾಗಿ ಬಿಸಿಲಿನ ತೀವ್ರತೆ ಕಂಡು ಜನರು ತಂಪು ಪ್ರದೇಶಗಳಿಗೆ ಓಡುತ್ತಿದ್ದಾರೆ. ಯಾರೋ ನೀರಿನಲ್ಲಿ ನಡೆಯಲು ಹೋಗುತ್ತಿದ್ದಾರೆ. ಹೆಚ್ಚುತ್ತಿರುವ ಶಾಖದಿಂದಾಗಿ ಜನರು ತಂಪು ಆಹಾರ ಮತ್ತು ಪಾನೀಯಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ವಿಶೇಷವಾಗಿ ತಂಪು ಪಾನೀಯಗಳಿಗೆ ಜನರು ಮೊರೆ ಹೋಗುವುದು ಕಾಮನ್ (Common) ಆಗಿದೆ. ನೀವು ಬೇಸಿಗೆಯಲ್ಲಿ (Summer) ತುಂಬಾ ಸೆಖೆ ಎಂದು ಯಾವುದೆಲ್ಲಾ ಜ್ಯೂಸ್ಗಳನ್ನು ಕುಡಿದರೆ ನಿಮ್ಮ ಆರೋಗ್ಯ (Health) ಹಾಳಾಗೋದು ಪಕ್ಕಾ! ಹೀಗಾಗಿ ಎಳನೀರಿನಂತ ಪಾನೀಯಗಳನ್ನು ಕುಡಿಯೋದು ಉತ್ತಮ ಎಂದು ವೈದ್ಯರು (Doctor) ಸಲಹೆ ನೀಡುತ್ತಾರೆ.
ಆದರೆ ಇಲ್ಲೊಬ್ಬರು ವಿಶೇಷ ವ್ಯಕ್ತಿ ಇದ್ದಾರೆ. ಇವರ ಕಥೆ ನಿಜಕ್ಕೂ ಅದ್ಭುತ ಅಂತ ಹೇಳಿದ್ರೂ ತಪ್ಪಾಗಲಾರದು. ವಾಸ್ತವವಾಗಿ, ಜ್ಯೂಸ್ ಅತಿಯಾಗಿ ಕುಡಿದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರ ಅತಿಯಾದ ಸೇವನೆಯು ದೇಹಕ್ಕೆ ಹಾನಿ ಮಾಡುತ್ತದೆ. ಆದರೆ ಕೇವಲ ಕೋಲ್ಡಿಂಗ್ಸ್ ಕುಡಿದರೆ ಒಬ್ಬ ವ್ಯಕ್ತಿ 17 ವರ್ಷ ಬದುಕಬಹುದು ಎಂದು ಹೇಳಿದ್ರೆ ನೀವು ನಂಬುತ್ತೀರ? ನೀವು ಇದನ್ನು ನಂಬದೇ ಇರಬಹುದು. ಆದರೆ ಇತ್ತೀಚೆಗೆ ವ್ಯಕ್ತಿಯೊಬ್ಬರು ಇಂತಹ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಅಂದಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಚರ್ಚೆಯಾಗುತ್ತಿದೆ.
ಇದನ್ನೂ ಓದಿ: ಒಂದು ಗಂಟೆಯೊಳಗೆ ಇಡೀ ದೇಶವನ್ನು ಸುತ್ತಬಹುದು ಗೊತ್ತಾ! ನಂಬಿಕೆ ಬಂದಿಲ್ಲಾ ಅಂದ್ರೆ ಇಲ್ಲಿ ನೋಡಿ
ಕಳೆದ 17 ವರ್ಷಗಳಿಂದ ಕೂಲ್ಡ್ರಿಂಗ್ಸ್‌ನಲ್ಲಿ ಮಾತ್ರ ಜೀವಂತವಾಗಿದ್ದೇನೆ ಎಂದು ಓರ್ವ ವ್ಯಕ್ತಿ ಹೇಳಿಕೊಂಡಿದ್ದಾರೆ. ಅವರ ಹೇಳಿಕೆಯಿಂದ ಎಲ್ಲರೂ ಬೆಚ್ಚಿಬಿದ್ದರು. ಈ ವ್ಯಕ್ತಿ ಇರಾನ್ ಮೂಲದವರು ಎಂದು ತಿಳಿದುಬಂದಿದೆ.
ಇರಾನ್‌ನಲ್ಲಿ ವಾಸಿಸುವ ಘೋಲ್ಮರೇಜಾ ಅರ್ದೇಶಿರಿ ಎಂಬ ವ್ಯಕ್ತಿ ತಾನು 2006 ರಲ್ಲಿ ಕೊನೆಯ ಊಟವನ್ನು ಸೇವಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. ಅಂದಿನಿಂದ ಒಂದು ತುತ್ತು ಅನ್ನವನ್ನೂ ಹೊಟ್ಟೆ ಸೇರಲು ಬಿಡಲಿಲ್ಲ. ಕೇವಲ ತಂಪು ಪಾನೀಯ ಸೇವಿಸಿ 17 ವರ್ಷ ಬದುಕಿದ್ದೇನೆ ಎಂದರು. ವಿಶೇಷವಾಗಿ 7UP ಮತ್ತು ಪೆಪ್ಸಿ ಅವರನ್ನು ಇಷ್ಟು ದಿನ ಜೀವಂತವಾಗಿರಿಸಿದೆ.
ಇದನ್ನೂ ಓದಿ: ಹಾರ ಬದಲಾಯಿಸಿಕೊಳ್ಳುವಾಗ ಮದುಮಕ್ಕಳ ಹೊಡೆದಾಟ! ವಧುವನ್ನೇ ಮಂಟಪದಿಂದ ತಳ್ಳಿದ ವರ!
ಆ ವ್ಯಕ್ತಿಯ ಈ ಹೇಳಿಕೆಯನ್ನು ಕೇಳಿ ದೊಡ್ಡ ವಿಜ್ಞಾನಿಗಳೂ ಬೆಚ್ಚಿಬಿದ್ದರು. ಈ ವ್ಯಕ್ತಿಯು ತನ್ನ ಹೊಟ್ಟೆಯು ತಂಪು ಪಾನೀಯಗಳನ್ನು ಜೀರ್ಣಿಸಿಕೊಳ್ಳಲು ಮಾತ್ರ ಮಾಡಲ್ಪಟ್ಟಿದೆ ಎಂದು ಭಾವಿಸುತ್ತಾರೆ. ಈ ಕುರಿತು ಡೈಲಿ ಸ್ಟಾರ್ ಸುದ್ದಿಯೊಂದನ್ನು ಮಾಡಿದೆ.
ಫೈಬರ್ಗ್ಲಾಸ್ ರಿಪೇರಿ ಮಾಡುವ ಘೋಲಮರೆಜಾ ಅರ್ದೆಶಿರಿ ಕಾರ್ಬೊನೇಟೆಡ್ ಪಾನೀಯಗಳು ಅವನಿಗೆ ಶಕ್ತಿಯನ್ನು ನೀಡುತ್ತದೆ ಎಂದು ಹೇಳುತ್ತಾರೆ. ತಂಪು ಪಾನೀಯ ಹೊಟ್ಟೆ ತುಂಬಿಸುತ್ತದೆ. ಈ ಬಗ್ಗೆ ಅರ್ದೇಶಿ ಹಲವು ವೈದ್ಯರ ಬಳಿ ಮಾತನಾಡಿದ್ದು, ಆಹಾರ ತಿನ್ನುವಾಗ ಬಾಯಿಗೆ ಕೂದಲು ಹೋಗುತ್ತಿದೆ ಎಂದು ದೂರಿದರು. ಪ್ರತಿನಿತ್ಯ ತಂಪು ಪಾನೀಯಗಳನ್ನು ಸೇವಿಸಿದರೂ ಅರ್ದೇಶಿರಿಯವರ ದೇಹ ಸಂಪೂರ್ಣ ಆರೋಗ್ಯವಾಗಿರುತ್ತದೆ. ಆದರೆ, ಇದರ ಹಿಂದಿನ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ಆಹಾರ ತಿನ್ನುವಾಗ ಕೂದಲು ಸಿಗೋದು ಕಾಮನ್. ಹಾಗಂತ ಆಹಾರವನ್ನೇ ತ್ಯಜಿಸಿ ಜ್ಯೂಸ್ ಕುಡಿಯೋದು ಅಂದ್ರೆ ಏನು ಹೇಳ್ತೀರ ನೀವು? ಹೀಗೆ ಪ್ರಪಂಚದಲ್ಲಿ ಅನೇಕ ಜನರು ವಿಚಿತ್ರವಾಗಿ ಇರ್ತಾರೆ. ಅದಕ್ಕೆ ಮುಖ್ಯ ಉದಾಹರಣೆ ಅಂದ್ರೆ ಈ ವ್ಯಕ್ತಿನೇ ನೋಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ