Burmese Python: ಅಬ್ಬಾಬ್ಬಾ, ಈ ಹೆಬ್ಬಾವಿನ ಹೊಟ್ಟೆಯಲ್ಲಿ ಇತ್ತಂತೆ ಬರೋಬ್ಬರಿ 122 ಮೊಟ್ಟೆಗಳು!

ಈ ದೈತ್ಯ ಹೆಬ್ಬಾವಿನ ಪರೀಕ್ಷೆ ನಡೆಸಿದಾಗ, ಅದರ ಹೊಟ್ಟೆಯಲ್ಲಿ 122 ಮೊಟ್ಟೆಗಳು ಇರುವುದು ಪತ್ತೆಯಾಗಿದೆ. ಈ ಮೂಲಕ, ಸಂತಾನೋತ್ಪತ್ತಿ ಚಕ್ರದಲ್ಲಿ ಅತ್ಯಧಿಕ ಮೊಟ್ಟೆಗಳನ್ನು ಇಟ್ಟ ಹೆಣ್ಣು ಹೆಬ್ಬಾವು ಎಂಬ ದಾಖಲೆಯನ್ನು ಇದು ಸೃಷ್ಟಿಸಿದೆ!

18 ಅಡಿ ಉದ್ದದ ಬರ್ಮೀಸ್ ಹೆಬ್ಬಾವು

18 ಅಡಿ ಉದ್ದದ ಬರ್ಮೀಸ್ ಹೆಬ್ಬಾವು

  • Share this:
ವಿಷಕಾರಿ ಹಾವುಗಳನ್ನು ಕಂಡರೆ ನಮಗೆಲ್ಲಾ ಭಯ ಇದ್ದೇ ಇರುತ್ತದೆ, ಹಾಗೆಯೇ ಹೆಬ್ಬಾವನ್ನು (Python) ಕಂಡರೆ ಕೂಡ. ಸೋಮಾರಿಯಂತೆ ಒಂದೆಡೆ ಬಿದ್ದುಕೊಂಡಿರುವಂತೆ ಕಂಡರೂ, ಬಹಳಷ್ಟು ಹೆಬ್ಬಾವಿನ ಪ್ರಭೇದಗಳು ಅತ್ಯಂತ ಆಕ್ರಮಣಕಾರಿಯಾಗಿರುತ್ತವೆ. ಇತ್ತೀಚೆಗೆ ಯೂಎಸ್ ಸಂಶೋಧಕರ ತಂಡವು, ಫ್ಲೋರಿಡಾ (Florida) ರಾಜ್ಯದಲ್ಲಿ ಕಾಣಿಸಿಕೊಂಡ, ಅತ್ಯಂತ ದೊಡ್ಡದಾದ ಬರ್ಮೀಸ್ ಹೆಬ್ಬಾವನ್ನು (Burmese Python) ಸೆರೆ ಹಿಡಿದಿದೆ. ಸ್ವತಃ ಅಲ್ಲಿನ ಅಧಿಕಾರಿಗಳೇ ಈ ಸಂಗತಿಯನ್ನು ಗುರುವಾರ ಘೋಷಿಸಿದ್ದಾರೆ. ಆ ದೈತ್ಯ ಹೆಬ್ಬಾವನ್ನು ಸೆರೆ ಹಿಡಿಯಬೇಕಾದರೆ, ಸಂಶೋಧಕರು 20 ನಿಮಿಷಗಳ ಕಾಲ ಅದರ ಜೊತೆ ಸೆಣಸಾಡಬೇಕಾಯಿತಂತೆ. ಅದೊಂದು ಹೆಣ್ಣು ಹೆಬ್ಬಾವು. ನೈರುತ್ಯ ಫ್ಲೋರಿಡಾದ ಕನ್ಸರ್‍ವೆನ್ಸಿಯು ತಿಳಿಸಿರುವ ಪ್ರಕಾರ, ಸುಮಾರು 18 ಅಡಿ ಉದ್ದವಿದ್ದ ಆ ಹೆಬ್ಬಾವು 98 ಕೆಜಿ ತೂಗುತ್ತದೆ.

ಫ್ಲೋರಿಡಾದಲ್ಲಿ ಈ ಪ್ರಭೇದದ ಹೆಬ್ಬಾವನ್ನು ಆಕ್ರಮಣಕಾರಿ ಎಂದು ಪರಿಗಣಿಸಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಬಳಿಕ ಅದನ್ನು ಈ ವರ್ಷದ ಏಪ್ರಿಲ್ ವರೆಗೆ ಫ್ರೀಜರ್‍‍ನಲ್ಲಿ ಇಡಲಾಯಿತು.

ಹೆಬ್ಬಾವಿನ ಹೊಟ್ಟೆಯೊಳಗೆ 122 ಮೊಟ್ಟೆಗಳು
ಈ ದೈತ್ಯ ಹೆಬ್ಬಾವಿನ ಪರೀಕ್ಷೆ ನಡೆಸಿದಾಗ, ಅದರ ಹೊಟ್ಟೆಯಲ್ಲಿ 122 ಮೊಟ್ಟೆಗಳು ಇರುವುದು ಪತ್ತೆಯಾಗಿದೆ. ಈ ಮೂಲಕ, ಸಂತಾನೋತ್ಪತ್ತಿ ಚಕ್ರದಲ್ಲಿ ಅತ್ಯಧಿಕ ಮೊಟ್ಟೆಗಳನ್ನು ಹೆಣ್ಣು ಹೆಬ್ಬಾವು ಎಂಬ ದಾಖಲೆಯನ್ನು ಸೃಷ್ಟಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Animal Pregnancy: ಪ್ರಾಣಿ-ಪಕ್ಷಿಗಳು ಗರ್ಭಾವಸ್ಥೆಯಲ್ಲಿ ಹೇಗಿರುತ್ತೆ ಗೊತ್ತೇ? ಇಲ್ನೋಡಿ ಫೊಟೋಸ್ಹಾವಿನ ಹೊಟ್ಟೆಯೊಳಗಿತ್ತು ಬಿಳಿ ಬಾಲದ ಜಿಂಕೆ
ಸಂಶೋಧಕರಿಗೆ, ಆ ಹೆಬ್ಬಾವಿನ ಹೊಟ್ಟೆಯೊಳಗೆ ಬರೀ ಮೊಟ್ಟೆಗಳು ಮಾತ್ರವಲ್ಲ, “ಹೂಫ್ ಕೋರ್” ಕೂಡ ಕಂಡು ಬಂದಿವೆ. ಅಂದರೆ, ಆ ಹೆಬ್ಬಾವು ಕೊನೆಯದಾಗಿ ಬಿಳಿ ಬಾಲದ ಜಿಂಕೆಯೊಂದನ್ನು ಆಹಾರವಾಗಿ ಸೇವಿಸಿತ್ತು ಎಂಬುದನ್ನು ಸೂಚಿಸಿತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಗಂಡು ಹಾವುಗಳಿಗೆ ರೆಡಿಯೋ ಟ್ರಾನ್ಸ್‍ಮೀಟರ್ ಅಳವಡಿಕೆ
ವನ್ಯಜೀವಿ ಜೀವಶಾಸ್ತ್ರಜ್ಞರು, ವಿಶಿಷ್ಟ ಸಂಶೋಧನಾ ಕಾರ್ಯಕ್ರಮವೊಂದರ ಅಡಿಯಲ್ಲಿ ಕೆಲಸ ಮಾಡಿದ್ದರು, ಅದರಲ್ಲಿ ಅವರು ಗಂಡು ಹಾವುಗಳಿಗೆ ರೆಡಿಯೋ ಟ್ರಾನ್ಸ್ ಮೀಟರ್‍‍ಗಳನ್ನು ಅಳವಡಿಸಿದ್ದರು. ಇದರಿಂದಾಗಿ ಅವರು ಹೆಣ್ಣು ಹಾವುಗಳು ಸಂತಾನೋತ್ಪತ್ತಿ ಮಾಡುವ ಸ್ಥಳಗಳಿಗೆ ಸುಲಭವಾಗಿ ಪತ್ತೆ ಹಚ್ಚಿ ತೆರಳುವಂತಾಯಿತು ಮತ್ತು ಈ ಮೂಲಕ ಅವರು ದೈತ್ಯ ಹೆಣ್ಣು ಹಾವುಗಳ ಮೊಟ್ಟೆ ಒಡೆದು ಮರಿಗಳು ಅರಣ್ಯದಲ್ಲೇ ಹೊರಬರದಂತೆ ತಡೆಯಲು ಸಾಧ್ಯವಾಯಿತು.

ವನ್ಯಜೀವಿ ಜೀವ ಶಾಸ್ತ್ರಜ್ಞ ಮತ್ತು ಕನ್ಸರ್‍ವೆನ್ಸಿಯ ಪರಿಸರ ವಿಜ್ಞಾನದ ಪ್ರಾಜೆಕ್ಟ್ ಮ್ಯಾನೆಜರ್ ಇಯಾನ್ ಬಾರ್ಟೋಸ್ಜೆಕ್ ಅವರು ಮಾಧ್ಯಮವೊಂದಕ್ಕೆ ಈ ಪ್ರಕ್ರಿಯೆಯ ಬಗ್ಗೆ ತಿಳಿಸುತ್ತಾ, ನೀವು ಹುಲ್ಲಿನ ಬಣವೆಯಲ್ಲಿ ಒಂದು ಸೂಜಿಯನ್ನು ಹೇಗೆ ಕಂಡು ಹಿಡಿಯುತ್ತೀರಿ? ನೀವು ಮ್ಯಾಗ್ನೆಟ್ಟನ್ನು ಬಳಸಬಹುದು ಹಾಗೆಯೇ ಅದೇ ರೀತಿಯಲ್ಲಿ ನಮ್ಮ ಗಂಡು ಸ್ಕೌಟ್ ಹಾವುಗಳು ಸುತ್ತಮುತ್ತಲಿನ ದೈತ್ಯ ಹೆಣ್ಣು ಹೆಬ್ಬಾವುಗಳ ಕಡೆಗೆ ಆಕರ್ಷಿತವಾಗುತ್ತವೆ” ಎಂದು ಹೇಳಿದ್ದಾರೆ.

ಜಗತ್ತಿನ ಅತೀ ದೊಡ್ಡ ಹಾವುಗಳಲ್ಲಿ ಒಂದಾದ ಬರ್ಮೀಸ್ ಹೆಬ್ಬಾವುಗಳು
ಈ ದೈತ್ಯ ಹೆಣ್ಣು ಹೆಬ್ಬಾವುಗಳು ಅಲ್ಲಿನ “ಹೆಣ್ಣು ಹೆಬ್ಬಾವುಗಳನ್ನು ತೆಗೆದು ಹಾಕುವುದು, ಜೌಗು ಪ್ರದೇಶದ ಪರಿಸರ ವ್ಯವಸ್ಥೆಯ ಮೇಲೆ ವಿನಾಶವನ್ನು ಉಂಟು ಮಾಡುವ ಮತ್ತು ಇತರ ಸ್ಥಳೀಯ ಜಾತಿಗಳಿಂದ ಆಹಾರದ ಮೂಲಗಳನ್ನು ತೆಗೆದುಕೊಳ್ಳುವ ಈ ಪರಭಕ್ಷಕಗಳ ಸಂತಾನೋತ್ಪತ್ತಿ ಚಕ್ರವನ್ನು ಅಡ್ಡಿ ಪಡಿಸುವಲ್ಲಿ ನಿರ್ಣಾಯಕ ಮಾತ್ರ ವಹಿಸುತ್ತದೆ” ಎಂದು ಅವರು ಹೇಳಿದ್ದಾರೆ. “ ಇದು ದಕ್ಷಿಣ ಫ್ಲೋರಿಡಾದಲ್ಲಿ ನಮ್ಮ ಕಾಲದ ವನ್ಯಜೀವಿ ಸಮಸ್ಯೆಯಾಗಿದೆ” ಎನ್ನುತ್ತಾರೆ ಅವರು.

ಇದನ್ನೂ ಓದಿ: Simba: ಈ ಮೇಕೆ ಮರಿಯ ಕಿವಿ ಎಷ್ಟು ಉದ್ದಯಿದೆ ಅಂತಾ ಗೊತ್ತಾದ್ರೆ ನೀವು ಶಾಕ್ ಆಗೋದು ಗ್ಯಾರೆಂಟಿ

ಬರ್ಮೀಸ್ ಹೆಬ್ಬಾವುಗಳು ಜಗತ್ತಿನ ಅತೀ ದೊಡ್ಡ ಹಾವುಗಳಲ್ಲಿ ಒಂದಾಗಿವೆ ಮತ್ತು ಅವು ಆಗ್ನೇಯ ಏಷ್ಯಾಗೆ ಸೇರಿದವಾಗಿವೆ. ಟ್ವಿಟ್ಟರ್‍‍ನಲ್ಲಿ ಈ ಕುರಿತ ಫೋಟೋವನ್ನು ಹಂಚಿಕೊಳ್ಳಲಾಗಿದ್ದು, ಸಾಕಷ್ಟು ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಟ್ವೀಟ್ ಮಾಡಿದ್ದಾರೆ. “ವಾರೆವ್ಹಾ, ಇದರ ಸ್ಥಳಾಂತರದ ಬಗ್ಗೆ ನನಗೆ ಪ್ರಶ್ನೆ ಇದೆ. ಅದನ್ನು ತೆರೆದ ಜಾಗದಲ್ಲಿ ಎಲ್ಲಾದರೂ ಬಿಡಲಾಗುತ್ತದೆಯೇ ಅಥವಾ ಮುಚ್ಚಿದ ಅಭಯಾರಣ್ಯದಲ್ಲಿ ಬಿಡುವಿರಾ?" ಎಂದು ಒಬ್ಬ ನೆಟ್ಟಿಗರು ಪ್ರಶ್ನಿಸಿದ್ದರೆ, “ಅಬ್ಬಾ, ಅದರ ಗಾತ್ರ ನೋಡಿ” ಎಂದು ಇನ್ನೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
Published by:Ashwini Prabhu
First published: