Bellbottom: ಮಾಜಿ ಪ್ರಧಾನಿ ಪಾತ್ರದಲ್ಲಿ ಲಾರಾ ದತ್ತಾ: ಮೇಕೋವರ್ ವಿಡಿಯೋ ಹಂಚಿಕೊಂಡ ನಟಿ..!

ಮಾಜಿ ಪ್ರಧಾನಿ ಪಾತ್ರದಲ್ಲಿ ಲಾರಾ ದತ್ತಾ

ಮಾಜಿ ಪ್ರಧಾನಿ ಪಾತ್ರದಲ್ಲಿ ಲಾರಾ ದತ್ತಾ

ಬೆಲ್ ಬಾಟಮ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ರಾ ಏಜೆಂಟ್ ಪಾತ್ರ ನಿರ್ವಹಿಸುತ್ತಿದ್ದು, ನಟಿ ವಾಣಿ ಕಪೂರ್ ಪತ್ನಿಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಹುಮಾ ಖುರೇಷಿ ಕೂಡ ನಟಿಸಿದ್ದಾರೆ.

  • Share this:

ಅಕ್ಷಯ್​ ಕುಮಾರ್​ ಅಭಿನಯದ ಸಿನಿಮಾ ಬೆಲ್​ ಬಾಟಮ್​ ಟ್ರೇಲರ್​ ಮಂಗಳವಾರ ಸಂಜೆ ಬಿಡುಗಡೆಯಾಗಿದೆ. ಈ ಟ್ರೇಲರ್​  ನೋಡಿದ್ದರೆ, ನಿಮಗೆ ಅದರಲ್ಲಿ ಬರುವ ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಪಾತ್ರಧಾರಿ ಯಾರೆಂದು ಕಂಡುಹಿಡಿಯಲು ಆಗುತ್ತದೆಯೇ..? ಈಗ ಎಲ್ಲರೂ ಆ ನಟಿ ಯಾರೆಂದು ಹೇಳಬಲ್ಲದರು, ಆದರೆ ಟ್ರೇಲರ್ ರಿಲೀಸ್​ ಆದಾಗ ಬಹುತೇಕರಿಗೆ ಗುರುತಿಸಲು ಸಾಧ್ಯವಾಗಲಿಲ್ಲ. ಅಷ್ಟರ ಮಟ್ಟಿಗೆ  ನಟಿ ಮೇಕೋವರ್ ಆಗಿದ್ದಾರೆ. ಹೌದು. ಮಾಜಿ ಪ್ರಧಾನಿ ಪಾತ್ರದಲ್ಲಿ ನಟಿಸಿರೋದು ಖ್ಯಾತ ನಟಿ ಲಾರಾ ದತ್ತಾ. ಈ ಬಗ್ಗೆ ಖುದ್ದು ಲಾರಾ ದತ್ತಾ ಅವರು ಹೇಳಿಕೊಂಡ ನಂತರವೇ ಗೊತ್ತಾಗಿದ್ದು. 


ಇಂದಿರಾ ಗಾಂಧಿ ಅವರ ಪಾತ್ರಕ್ಕೆ ಬೇಕಾದಂತೆ ಮೇಕಪ್ ಮಾಡಲಾಗಿದ್ದು, ಲಾರಾ ದತ್ತಾ ಅವರ ಮೇಕೋವರ್​ ನೋಡಿದ ವೀಕ್ಷಕರು ಹುಬ್ಬೇರಿಸುವುದರ ಜೊತೆಗೆ ಮೆಚ್ಚುಗೆ ಸೂಚಿಸುತ್ತಾ ಕಮೆಂಟ್ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಲಾರಾ ದತ್ತಾ ತಮ್ಮ ಮೇಕೋವರ್ ವಿಡಿಯೋವನ್ನು ಈಗ ರಿಲೀಸ್ ಮಾಡಿದ್ದಾರೆ. ಇದರಲ್ಲಿ ಅವರನ್ನು ಇಂದಿರಾ ಗಾಂಧಿ ಪಾತ್ರಕ್ಕೆ ಹೇಗೆ ತಯಾರು ಮಾಡಲಾಯಿತು ಎಂದು ತೋರಿಸಲಾಗಿದೆ.







ಅಕ್ಷಯ್ ಕುಮಾರ್ ಅವರ ಬೆಲ್ ಬಾಟಮ್ ಒಂದು ಗೂಢಚಾರದ ರೋಮಾಂಚನಕಾರಿ ಚಿತ್ರವಾಗಿದ್ದು, 1984ರ ಅವಧಿಯ ಕಥೆಯನ್ನು ಹೊಂದಿದೆ. ನಟಿ ಲಾರಾ ದತ್ತಾ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರವನ್ನು ನಿರ್ವಹಿಸಿದ್ದಾರೆ.




ಬೆಲ್ ಬಾಟಮ್ ಟ್ರೇಲರ್‌ನಲ್ಲಿ 46 ವರ್ಷದ ನಟಿ ಮೊದಲ ಬಾರಿಗೆ ಮಾಜಿ ಪ್ರಧಾನಿ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ನೋಡಿದ ಟ್ವಿಟ್ಟರ್‌ ಬಳಕೆದಾರರು ವಿಸ್ಮಯಗೊಂಡಿದ್ದಾರೆ. ಮಾಜಿ ವಿಶ್ವ ಸುಂದರಿ ಲಾರಾ ದತ್ತಾರನ್ನು ಬೆಲ್ ಬಾಟಮ್‌ ಟ್ರೇಲರ್​ನಲ್ಲಿ ಸಂಪೂರ್ಣವಾಗಿ ಯಾರು ಗುರುತಿಸಲಾಗದಷ್ಟು ವಿಭಿನ್ನವಾಗಿ ಕಾಣಬಹುದಾಗಿದೆ.


ಮಂಗಳವಾರ ಸಂಜೆ ಬೆಲ್ ಬಾಟಮ್ ಟ್ರೇಲರ್‌ ಬಿಡುಗಡೆಯಾದ ನಂತರ "#ಲಾರಾ ದತ್ತಾ" ಟ್ವಿಟ್ಟರ್ ಟ್ರೆಂಡ್‌ಗಳಲ್ಲಿ ಅಗ್ರ ಸ್ಥಾನ ಪಡೆದುಕೊಂಡಿತ್ತು. ಈ ಚಿತ್ರದ ಟ್ರೇಲರ್‌ ನೋಡಿದ ನೆಟ್ಟಿಗರು "ಓ ದೇವರೇ ಇವರು ನಮ್ಮ ಮಾಜಿ ವಿಶ್ವ ಸುಂದರಿ ಲಾರಾ ದತ್ತಾ. ಗುರುತಿಸಲು ಸಾಧ್ಯವೇ ಇಲ್ಲ. ನಾನು ಈ ಚಿತ್ರವನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇನೆ" ಎಂದು ಒಬ್ಬ ನೆಟ್ಟಿಗರು ಬರೆದುಕೊಂಡಿದ್ದಾರೆ. "ಇವರು ಲಾರಾ ದತ್ತಾ ನಾ..? ಗುರುತಿಸಲು ಅಸಾಧ್ಯವಾಗಿದೆ" ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವು ನೆಟ್ಟಿಗರು ಲಾರಾ ದತ್ತಾರನ್ನು ಇಂದಿರಾ ಗಾಂಧಿಯಂತೆ ಕಾಣಲು ಮಾಡಿದಂತಹ ಮೇಕಪ್ ರಾಷ್ಟೀಯ ಪ್ರಶಸ್ತಿ ಪಡೆಯುವ ಹಂತಕ್ಕೆ ಮಾಡಿದ್ದಾರೆ" ಎಂದು ಸಹ ಹೊಗಳಿದ್ದಾರೆ.


ಬೆಲ್ ಬಾಟಮ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ರಾ ಏಜೆಂಟ್ ಪಾತ್ರ ನಿರ್ವಹಿಸುತ್ತಿದ್ದು, ನಟಿ ವಾಣಿ ಕಪೂರ್ ಪತ್ನಿಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಹುಮಾ ಖುರೇಷಿ ಕೂಡ ನಟಿಸಿದ್ದಾರೆ. ನೈಜ ಕಥೆಯನ್ನು ಆಧರಿಸಿದ ಬೆಲ್ ಬಾಟಮ್ ಚಿತ್ರದಲ್ಲಿ ಅಪಹರಣಕ್ಕೀಡಾದ ಭಾರತೀಯ ವಿಮಾನದಿಂದ 210 ಒತ್ತೆಯಾಳುಗಳನ್ನು ರಕ್ಷಿಸುವ ಕಾರ್ಯವನ್ನು ಅಕ್ಷಯ್ ಕುಮಾರ್‌ರಿಗೆ ವಹಿಸಲಾಗಿರುತ್ತದೆ.




ಬೆಲ್ ಬಾಟಮ್ ಕಳೆದ ವರ್ಷ ರಾಷ್ಟ್ರವ್ಯಾಪಿ ಲಾಕ್​ಡೌನ್ ವೇಳೆ​ ವಿದೇಶಕ್ಕೆ ತೆರೆಳಿದ ಚಿತ್ರತಂಡ ಅಲ್ಲೇ ಶೂಟಿಂಗ್​ ಪೂರ್ಣಗೊಳಿಸಿತು. ರಂಜಿತ್ ಎಂ ತಿವಾರಿ ನಿರ್ದೇಶನದ ಬೆಲ್ ಬಾಟಮ್ ಚಿತ್ರಮಂದಿರಗಳಲ್ಲಿ ಆಗಸ್ಟ್ 19ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ.

top videos
    First published: