Love Story: ಮನೆ ಕೆಲಸದವನನ್ನೇ ಮದುವೆಯಾದ ಒಡತಿ, ಪ್ರೀತಿ ಮಾಯಾಬಜಾರು!

ಇವತ್ತು ಪ್ರೇಮಿಗಳ ದಿನಾಚರಣೆ ಅಲ್ಲದೇ ಇರಬಹುದು, ಆದರೆ ಇಲ್ಲಿ ಒಬ್ಬ ಭೂ ಒಡತಿ/ಮನೆಯ ಯಜಮಾನತಿ ತನ್ನ ನೌಕರನನ್ನು ಪ್ರೀತಿಸಿದ್ದಾಳೆ. ಇದು ಈಗ ಎಲ್ಲ ಕಡೆ ಪ್ರೀತಿ ಎಲ್ಲವನ್ನು ಮೀರಿದ್ದು ಎಂಬ ವಿಷಯವನ್ನು ಚರ್ಚೆ ಮಾಡುವ ಹಾಗೆ ಆಗಿದೆ. ಹಾಗಿದ್ರೆ ಅದು ಏನು ಸುದ್ದಿ ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ

ಮನೆಕೆಲಸದವನನ್ನೇ ಮದುವೆಯಾದ ಮನೆಯೊಡತಿ

ಮನೆಕೆಲಸದವನನ್ನೇ ಮದುವೆಯಾದ ಮನೆಯೊಡತಿ

  • Share this:
ಇಸ್ಲಾಮಾಬಾದ್: ಈ ಪ್ರೀತಿ (Love) ಎಂಬುದು ಒಂದು ಮಾಯೆ, ಪ್ರೀತಿ ಯಾರ ಮೇಲೆ ಹೇಗೆ ಹುಟ್ಟುತ್ತೆ ಅನ್ನೊದು ಯಾರಿಗೂ ಕಂಡುಹಿಡಿಯುವುದಕ್ಕೆ ಸಾಧ್ಯವಿಲ್ಲ. ಈ ಪ್ರೀತಿಗೆ ವಯಸ್ಸು, ಲಿಂಗ ಅಥವಾ ಸಾಮಾಜಿಕ ಸ್ಥಾನಮಾನ ಹೇಗಿದೆ ಯಾವುದು ಬೇಕಿರುವುದಿಲ್ಲ. ಅದಕ್ಕೆ ಬೇಕಿರುವುದು ಒಂದೇ ಎರಡು ಮನಸ್ಸುಗಳು (Minds) ಒಬ್ಬರೊಬ್ಬರನ್ನು ಪ್ರೀತಿಸಿ ಆರಾಧಿಸುವುದು ಆಗಿರುತ್ತದೆ. ಈ ಅನುಭವ (Experience) ಬೇರೆ ಯಾವುದೇ ಅನುಭವಕ್ಕೆ ಸಮವಲ್ಲ. ಈ ಪ್ರೀತಿ ಎಂಬುದು ಅತ್ಯಂತ ಸುಂದರ ಅನುಭವ ಆಗಿದೆ. ಇವತ್ತು ಏನು ಪ್ರೇಮಿಗಳ ದಿನಾಚರಣೆ (Valentine's Day) ಅಲ್ಲ ಆದರೂ ಇವರು ಪ್ರೀತಿ ಪ್ರೇಮ ಎಂದು ಮಾತನಾಡುತ್ತಿದ್ದರಲ್ಲಾ ಎಂದು ಅನಿಸ್ತಾ ಇದೀಯಲ್ಲ.

ಹೌದು ಇವತ್ತು ಪ್ರೇಮಿಗಳ ದಿನಾಚರಣೆ ಅಲ್ಲದೇ ಇರಬಹುದು, ಆದರೆ ಇಲ್ಲಿ ಒಬ್ಬ ಭೂ ಒಡತಿ/ಮನೆಯ ಯಜಮಾನತಿ ತನ್ನ ನೌಕರನನ್ನು ಪ್ರೀತಿಸಿದ್ದಾಳೆ. ಇದು ಈಗ ಎಲ್ಲ ಕಡೆ ಪ್ರೀತಿ ಎಲ್ಲವನ್ನು ಮೀರಿದ್ದು ಎಂಬ ವಿಷಯವನ್ನು ಚರ್ಚೆ ಮಾಡುವ ಹಾಗೆ ಆಗಿದೆ. ಹಾಗಿದ್ರೆ ಅದು ಏನು ಸುದ್ದಿ ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಹಾಗಿದ್ರೆ ಈ ಘಟನೆ ನಡೆದಿರುವುದು ಎಲ್ಲಿ?
ಈ ಘಟನೆ ನಮ್ಮ ಪಕ್ಕದ ದೇಶವಾದ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದ ಸುಂದರ ಕಥೆಯಂತೆ, ಮನೆಯ ಯಜಮಾನತಿಯು ತನ್ನ ಮನೆಯ ನೌಕರನನ್ನು ಪ್ರೀತಿಸಿ ಅವನನ್ನೇ ಮದುವೆಯಾಗಿದ್ದಾಳೆ. ಇಸ್ಲಾಮಾಬಾದ್‌ನಲ್ಲಿ ಮನೆ ಮಾಲೀಕರಾದ ನಾಜಿಯಾ ಎಂಬ ಮಹಿಳೆ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಮನೆಯ ಯಜಮಾನತಿಗೆ ಮನೆಗೆಲಸಕ್ಕಾಗಿ ಒಬ್ಬ ನೌಕರನ ಅವಶ್ಯಕತೆಯಿತ್ತು. ಹಾಗಾಗಿ ನಾಜಿಯಾಗೆ ಅವರ ಸ್ನೇಹಿತರೊಬ್ಬರು ಮನೆಗೆಲಸಕ್ಕಾಗಿ ಸೂಫಿಯಾನ್‌ ಎಂಬ ಪುರುಷನನ್ನು ಶಿಫಾರಸು ಮಾಡಿದ್ದರು. ಅದಕ್ಕೆ ಅವನನ್ನು ತಿಂಗಳಿಗೆ 18,000 ರೂಪಾಯಿಗಳನ್ನು ಕೊಟ್ಟು ಕೆಲಸಕ್ಕೆ ನೇಮಿಸಿಕೊಂಡಳು.

ಇದನ್ನೂ ಓದಿ:  Tattoo: ಟ್ಯಾಟುಗಳಿಂದ ಈತನಿಗೆ ಕೆಲಸವೇ ಸಿಗ್ತಿಲ್ಲ! ಬ್ಲ್ಯಾಕ್ ಏಲಿಯನ್ ಬೇಸರ

ಈ ಕುರಿತು ನಾಜಿಯಾ ಏನು ಹೇಳ್ತಾಳೇ?
ನಾಜಿಯಾ, ಪಾಕಿಸ್ತಾನಿ ಬರಹಗಾರ ಮತ್ತು ಯುಟ್ಯೂಬರ್ ಸೈಯದ್ ಬಸಿತ್ ಅವರೊಂದಿಗೆ ಮಾತನಾಡುತ್ತಾ “ಅವರ ಸರಳತೆಯೇ ನನ್ನ ಮನಸ್ಸನ್ನು ಗೆದ್ದಿತು. ಆ ನಂತರ ದಿನದಿಂದ ದಿನಕ್ಕೆ ಅವರ ಎಲ್ಲಾ ಅಭ್ಯಾಸಗಳು, ನಡವಳಿಕೆ ಮತ್ತು ಅವರ ವಿಶಾಲ ದೃಷ್ಟಿಕೋನ ಎಲ್ಲವನ್ನು ನಾನು ಇಷ್ಟಪಟ್ಟೆ. ಕೊನೆಗೆ ನಾನು ಹೋಗಿ ಅವನನ್ನು ನನ್ನನ್ನು ಮದುವೆಯಾಗುತ್ತಿಯಾ ಎಂದು ಕೇಳಿದಾಗ, ಸೂಫಿಯಾನ್‌ ಮೂರ್ಚೆ ಹೋದನು. ಅದರಿಂದ ಸುಧಾರಿಸಿಕೊಂಡ ನಂತರ ಅವನು ನನ್ನ ಪ್ರೀತಿಯ ನಿವೇದನೆಯನ್ನು ಒಪ್ಪಿಕೊಂಡನು. ಅವರು ಪ್ರೇಮಿಯಾಗಿ ಮತ್ತು ಗಂಡನಾಗಿ ತಮ್ಮ ಕರ್ತವ್ಯಗಳನ್ನು ಸೂಕ್ತವಾಗಿ ನಿಭಾಯಿಸುತ್ತಿದ್ದಾರೆ. ನನಗೆ ಹುಷಾರು ಇಲ್ಲದೆ ಇದ್ದಾಗ ಅವರು ಅಡುಗೆ ಮಾಡಿ, ಮನೆಯಲ್ಲಿಯೇ ಔಷಧಿ ಮಾಡಿ ಕುಡಿಸುತ್ತಾರೆ. ನನ್ನನ್ನು ಒಂದು ಮಗುವಿನ ರೀತಿ ನೋಡಿಕೊಳ್ಳುತ್ತಾನೆ” ಎಂದು ತಮ್ಮ ಪ್ರೀತಿಯ ಬಗ್ಗೆ ಸವಿವರವಾಗಿ ವಿವರಿಸಿದರು.

ಯಕರನನ್ನು ಸಲ್ಮಾನ್ ಖಾನ್‌ಗೆ ಹೋಲಿಸಿದ ನಾಜಿಯಾ
ನಾಜಿಯಾ ತನ್ನ ಪ್ರಿಯಕರನನ್ನು ಸಲ್ಮಾನ್ ಖಾನ್‌ಗೆ ಹೋಲಿಸುತ್ತಾಳೆ, ಆದರೆ ಸೂಫಿಯಾನ್‌ಗೆ ಅವಳು ಅವನ ‘ಕತ್ರಿನಾ ಕೈಫ್’ ಆಗಿದ್ದಾಳೆ. ಇವರಿಬ್ಬರ ಪ್ರೀತಿಯು ಹಣ ಮತ್ತು ಸುಂದರತೆಕ್ಕಿಂತ ತುಂಬಾ ಆಳವಾಗಿದೆ, ಏಕೆಂದರೆ ಪ್ರೀತಿ ಎಂಬುದು ಎರಡು ಹೃದಯಗಳ ಸಂಪರ್ಕ ಸೇತುವೆ ಆಗಿದೆ. ಕುತೂಹಲಕಾರಿಯಾಗಿ, ಈ ಸುಂದರವಾದ ಪ್ರೀತಿಯ ಕಥೆಯಲ್ಲಿ ಮೊದಲು ಮಹಿಳೆ ನಾಜಿಯಾ ಪ್ರೀತಿಯಲ್ಲಿ ಬೀಳುತ್ತಾಳೆ.

ಇದನ್ನೂ ಓದಿ: Ram Setu: ನೀರಿನಲ್ಲಿ ಪತ್ತೆಯಾಯ್ತಂತೆ ತೇಲುವ ರಾಮಸೇತು ಕಲ್ಲು! ರಾಮ್ ಎಂಬ ಬರಹ ನೋಡಿ ಕೈಮುಗಿದ ಭಕ್ತರು

ಇವರಿಬ್ಬರ ಮದುವೆ ವಿಚಾರವಾಗಿ ಸಮಾಜವು ಅನೇಕ ರೀತಿಯಲ್ಲಿ ಕೆಟ್ಟದಾಗಿ ಮಾತನಾಡುತ್ತಿದ್ದರೂ, ಇವರಿಬ್ಬರೂ ಮಾತ್ರ ಯಾರ ಬಗ್ಗೆ ಹೆಚ್ಚು ತಲೆಕಡೆಸಿಕೊಳ್ಳದೆ ತಮ್ಮ ಪ್ರೀತಿ ಎಂಬ ಸ್ವರ್ಗದಲ್ಲಿ ತೇಲಾಡುತ್ತಿದ್ದಾರೆ. ಪ್ರೀತಿ ಎಂಬುದೇ ಹಾಗೇ.. ಯಾರನ್ನು ಮೆಚ್ಚಿಸುವುದಕ್ಕೆ ಯಾರು ಪ್ರೀತಿ ಮಾಡುವುದಿಲ್ಲ. ಭೂ ಒಡತಿ ಇದರ ನಂತರ ತನ್ನ ಮನೆಯ ಮಾಲೀಕತ್ವವನ್ನು ತನ್ನ ಪ್ರಿಯಕರನಿಗೆ ವರ್ಗಾಯಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.
Published by:Ashwini Prabhu
First published: