• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Wedding: ತಂಗಿಯ ಮದುವೆಗೆ ಅಣ್ಣಂದಿರು ಖರ್ಚು ಮಾಡಿದ ಹಣ ಕೇಳಿದ್ರೆ ಪಕ್ಕಾ ಶಾಕ್​ ಆಗ್ತೀರ! ಇದು ಅಂತಿಂಥಾ ಮ್ಯಾರೇಜ್​ ಅಲ್ಲ

Wedding: ತಂಗಿಯ ಮದುವೆಗೆ ಅಣ್ಣಂದಿರು ಖರ್ಚು ಮಾಡಿದ ಹಣ ಕೇಳಿದ್ರೆ ಪಕ್ಕಾ ಶಾಕ್​ ಆಗ್ತೀರ! ಇದು ಅಂತಿಂಥಾ ಮ್ಯಾರೇಜ್​ ಅಲ್ಲ

ವೈರಲ್​ ಆದ ಮದುವೆಯ ಫೋಟೋ

ವೈರಲ್​ ಆದ ಮದುವೆಯ ಫೋಟೋ

ಇಲ್ಲಿ ನಡೆದ ಮತ್ತೊಂದು ವರದಕ್ಷಿಣೆ ಪ್ರಕರಣದಲ್ಲಿ, ರಾಜಸ್ಥಾನದ ನಾಗೌರ್ ಜಿಲ್ಲೆಯ ಧಿಂಗ್ಸಾರಾ ಗ್ರಾಮದ ನಾಲ್ವರು ಸಹೋದರರು ತಮ್ಮ ಸಹೋದರಿಯ ಮದುವೆಗಾಗಿ ಖರ್ಚು ಮಾಡಿದ ಹಣ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರ!

 • Share this:
 • published by :

ನಮ್ಮಲ್ಲಿ ಇನ್ನೂ ಸಹ ಕೆಲವು ಹಳೆಯ ಪದ್ದತಿಗಳು ಚಾಲ್ತಿಯಲ್ಲಿವೆ ಅನ್ನೋದಕ್ಕೆ ಈ ಮದುವೆಯ ಸಂದರ್ಭದಲ್ಲಿ ವರನ ಕಡೆಯವರು ಈ ವಧುವಿನ (Groom) ಕಡೆಯವರಿಗೆ ವರದಕ್ಷಿಣೆ ಕೇಳುವುದು ಅಂತ ಹೇಳಬಹುದು. ಎಷ್ಟೋ ಜನರು ತಮ್ಮ ಮಕ್ಕಳು ಚೆನ್ನಾಗಿ ಓದಿ, ವಿದೇಶದಲ್ಲಿ (Foreign) ಇದ್ದರಂತೂ ಮುಗಿದೇ ಹೋಯಿತು, ಅವರು ವಧುವಿನ ಕಡೆಯವರಿಗೆ ವರದಕ್ಷಿಣೆ ಕೇಳುವುದಕ್ಕೆ ಹಿಂದೆ ಮುಂದೆ ನೋಡುವುದೇ ಇಲ್ಲ. 1961ರ ವರದಕ್ಷಿಣೆ ನಿಷೇಧ ಕಾಯ್ದೆಯ (Constitution of India) ಪ್ರಕಾರ, ವರದಕ್ಷಿಣೆ ನೀಡುವುದು ಭಾರತದಲ್ಲಿ ಕಾನೂನು ಬಾಹಿರವಾಗಿದೆ. ಭಾರತೀಯ ದಂಡ ಸಂಹಿತೆಯ ಪ್ರಕಾರ, ಯಾರಾದರೂ ವರದಕ್ಷಿಣೆ ಕೇಳಿದರೆ, ಅವರನ್ನು ಕನಿಷ್ಠ 7 ವರ್ಷಗಳ ಕಾಲ ಜೈಲಿಗೆ ಹಾಕಲಾಗುತ್ತದೆ. ಈ ದುಷ್ಕೃತ್ಯದ ವಿರುದ್ಧ ಇಂತಹ ಕಠಿಣ ಕಾನೂನುಗಳ ಹೊರತಾಗಿಯೂ, ವರದಕ್ಷಿಣೆ ಪದ್ಧತಿಯು ಇನ್ನೂ ಸಹ ನಮ್ಮ ಭಾರತ ದೇಶದ ಕೆಲವು ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಚಾಲ್ತಿಯಲ್ಲಿದೆ. 


ತಮ್ಮ ಸಹೋದರಿ ಮದುವೆಗೆ 8 ಕೋಟಿ ವರದಕ್ಷಿಣೆ ಕೊಟ್ಟ ರಾಜಸ್ಥಾನಿ ಸಹೋದರರು!


ಇಲ್ಲಿ ನಡೆದ ಮತ್ತೊಂದು ವರದಕ್ಷಿಣೆ ಪ್ರಕರಣದಲ್ಲಿ, ರಾಜಸ್ಥಾನದ ನಾಗೌರ್ ಜಿಲ್ಲೆಯ ಧಿಂಗ್ಸಾರಾ ಗ್ರಾಮದ ನಾಲ್ವರು ಸಹೋದರರು ತಮ್ಮ ಸಹೋದರಿಯ ಮದುವೆಗಾಗಿ ಒಂದಲ್ಲ, ಎರಡಲ್ಲ ಬರೋಬ್ಬರಿ 8 ಕೋಟಿ ಮತ್ತು 31 ಲಕ್ಷ ರೂಪಾಯಿಗಳನ್ನು ವರದಕ್ಷಿಣೆಯಾಗಿ ನೀಡುವುದರ ಮೂಲಕ ಸುದ್ದಿಯಲ್ಲಿದ್ದಾರೆ.


ವರದಕ್ಷಿಣೆಯ ಒಂದು ರೂಪವಾದ ಮೇರಾ ಸಂಪ್ರದಾಯಕ್ಕೆ ಈ ನಾಗೌರ್ ಜಿಲ್ಲೆ ಹೊಸತೇನಲ್ಲ. ಆದರೆ, ಈ ನಾಲ್ವರು ಸಹೋದರರು ಈ ಹಿಂದೆ ಯಾರೂ ನೀಡದ ಭಾರೀ ವರದಕ್ಷಿಣೆ ನೀಡುವ ಮೂಲಕ ಗ್ರಾಮದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ ಅಂತಾನೆ ಹೇಳಬಹುದು.


ಇದನ್ನೂ ಓದಿ: ಈ ಮಹಾನುಭಾವರು ಮಾತಾಡಿದ್ದು ಬರೋಬ್ಬರಿ 46 ಗಂಟೆ! ಇದು ಜಗತ್ತಿನ ಅತೀ ದೀರ್ಘ ಫೋನ್ ಕಾಲ್!


ಅರ್ಜುನ್ ರಾಮ್ ಮೆಹರಿಯಾ, ಭಗೀರಥ್ ಮೆಹರಿಯಾ, ಉಮೈದ್ ಜಿ ಮೆಹರಿಯಾ ಮತ್ತು ಪ್ರಹ್ಲಾದ್ ಮೆಹರಿಯಾ ಎಂಬ ನಾಲ್ವರು ಸಹೋದರರು ಮಾರ್ಚ್ 26 ರಂದು ತಮ್ಮ ಸಹೋದರಿ ಭನ್ವಾರಿ ದೇವಿ ಅವರ ಮದುವೆಗಾಗಿ ದೊಡ್ಡ ಮೊತ್ತದ ವರದಕ್ಷಿಣೆಯನ್ನು ಕೊಟ್ಟಿದ್ದಾರೆ.


ಏನೆಲ್ಲಾ ಕೊಟ್ಟಿದ್ದಾರೆ ನೋಡಿ ಈ 8 ಕೋಟಿ ವರದಕ್ಷಿಣೆಯಲ್ಲಿ?


ಸುದ್ದಿ ಮಾಧ್ಯಮದ ವರದಿಯ ಪ್ರಕಾರ, ವರದಕ್ಷಿಣೆಯಲ್ಲಿ 2.21 ಕೋಟಿ ರೂಪಾಯಿ ನಗದು, 4 ಕೋಟಿ ರೂಪಾಯಿ ಮೌಲ್ಯದ 100 ಬಿಘಾ ಭೂಮಿ, ಗುಧಾ ಭಗವಾನ್ ದಾಸ್ ಗ್ರಾಮದಲ್ಲಿ 50 ಲಕ್ಷ ರೂಪಾಯಿ ಮೌಲ್ಯದ 1 ಬಿಘಾ ಭೂಮಿ, 71 ಲಕ್ಷ ಮೌಲ್ಯದ 1 ಕೆಜಿಗೂ ಹೆಚ್ಚು ಚಿನ್ನ ಮತ್ತು 9.8 ಲಕ್ಷ ರೂಪಾಯಿ ಮೌಲ್ಯದ 14 ಕೆಜಿ ಬೆಳ್ಳಿ ಸೇರಿದೆ. ಉಳಿದ 800 ನಾಣ್ಯಗಳನ್ನು ಗ್ರಾಮಸ್ಥರಿಗೆ ವಿತರಿಸಲಾಯಿತು. 7 ಲಕ್ಷ ರೂಪಾಯಿಗಳ ವೆಚ್ಚದ ಟ್ರ್ಯಾಕ್ಟರ್ ಕೂಡ ವರದಕ್ಷಿಣೆಯ ಒಂದು ಭಾಗವಾಗಿತ್ತು.


ಇದನ್ನೂ ಓದಿ: ಈ ವಡಾಪಾವ್‌ನ ತಿನ್ನೋದಲ್ಲ, ಕೈಯಿಂದ ಎತ್ತೋದಕ್ಕೂ ಆಗಲ್ಲ! ಇದ್ರ ತೂಕ ಬರೋಬ್ಬರಿ ಎರಡೂವರೆ ಕೆಜಿ!


ಅಷ್ಟೇ ಅಲ್ಲದೇ, ನೂರಾರು ಎತ್ತುಗಳು ಮತ್ತು ಒಂಟೆ ಗಾಡಿಗಳ ಸಹಾಯದಿಂದ ಧಿಂಗ್ಸಾರಾ ಗ್ರಾಮದಿಂದ ರೈಧಾನು ಗ್ರಾಮಕ್ಕೆ ಬಂದ ವರನಿಗೆ ಸಹೋದರರು ಸ್ಕೂಟರ್ ಮತ್ತು ಇತರ ವಾಹನಗಳನ್ನು ಸಹ ಉಡುಗೊರೆಯಾಗಿ ನೀಡಿದ್ದಾರೆ.


ಈ ಮೇರಾ ಶೀಘ್ರದಲ್ಲಿಯೇ ಧಿಂಗ್ಸಾರಾ ಗ್ರಾಮದಲ್ಲಿ ಒಂದು ದೊಡ್ಡ ಚರ್ಚೆಯ ವಿಷಯವಾಯಿತು, ಈ ಭವ್ಯವಾದ ಮೆರವಣಿಗೆಯನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಮದುವೆ ಸ್ಥಳದಲ್ಲಿ ಜಮಾಯಿಸಿದರು.


top videos  ಇದಕ್ಕೂ ಮುನ್ನ ಬುರ್ಡಿ ಗ್ರಾಮದ ಭನ್ವರ್‌ಲಾಲ್ ಚೌಧರಿ ಎಂಬ ಮತ್ತೊಬ್ಬ ಗ್ರಾಮಸ್ಥ ಮೇರಾದಲ್ಲಿ 3 ಕೋಟಿ 21 ಲಕ್ಷ ರೂಪಾಯಿಯನ್ನು ಭನ್ವರ್ ಲಾಲ್ ತನ್ನ ಸಹೋದರಿಯ ವಿವಾಹ ಸಮಾರಂಭದ ಸಂದರ್ಭದಲ್ಲಿ ವರನಿಗೆ ನೀಡಿದ್ದರಂತೆ. ಆದರೆ ಈಗ ಭಗೀರಥ ಮೆಹರಿಯಾ ಅವರ ಕುಟುಂಬವು ಈ ದಾಖಲೆಯನ್ನು ಮುರಿದಿದೆ.

  First published: