Antibiotics: ಆ್ಯಂಟಿಬಯೋಟಿಕ್‌ ಬಳಕೆಯಲ್ಲಿ ಭಾರತವೇ ಮೊದಲು; ಅಜಿಥ್ರೊಮೈಸಿನ್‌ ಹೆಚ್ಚು ಮಾರಾಟವಾದ ಔಷಧ

ಭಾರತೀಯರು ತೆಗೆದುಕೊಳ್ಳುವ ಈ ಔಷಧಿಗಳಲ್ಲಿ ಹೆಚ್ಚಿನವುಗಳು ಕೇಂದ್ರ ಔಷಧ ನಿಯಂತ್ರಣ ಮಂಡಳಿಯಿಂದ ಅನುಮೋದನೆ ಪಡೆದಿಲ್ಲ. ಹಾಗಾಗಿ,ಕೇಂದ್ರ ಸರ್ಕಾರವು ತಕ್ಷಣವೇ ಸ್ಪಂದಿಸಿ ನಿಖರವಾದ ನೀತಿ ರೂಪಿಸಿ ಸುಧಾರಣೆ ತರುವ ವಿಚಾರವು ಅಧ್ಯಯನದಿಂದ ಬೆಳಕಿಗೆ ಬಂದಿದೆ. ಭಾರತದಲ್ಲಿ ಆ್ಯಂಟಿಬಯೋಟಿಕ್‌ಗಳ ಅಸಮರ್ಪಕ ಬಳಕೆಯು ಹೆಚ್ಚಿರುವ ಕಾರಣ ಈ ಅಧ್ಯಯನವು ತಿಳಿಸಿದೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸಾಂಕ್ರಾಮಿಕ ಕಾಯಿಲೆಗಳ (Infectious disease) ಇಂದಿನ ಯುಗದಲ್ಲಿ ಆ್ಯಂಟಿಬಯೋಟಿಕ್‌ಗಳು (Antibiotic) ನಮ್ಮ ಜೀವನದ ಒಂದು ಭಾಗವಾಗಿ ಮಾರ್ಪಟ್ಟಿವೆ. ಭಾರತೀಯರು (Indians) ಹೆಚ್ಚಾಗಿ ಆ್ಯಂಟಿಬಯೋಟಿಕ್‌ಗಳನ್ನು ಬಳಸುತ್ತಿರುವುದು ಇತ್ತೀಚೀನ ಅಧ್ಯಯನವೊಂದು (Study) ಬಹಿರಂಗಪಡಿಸಿದೆ. ಅಜಿಥ್ರೊಮೈಸಿನ್‌ (Azithromycin) ಆ್ಯಂಟಿಬಯೋಟಿಕ್‌ ಅನ್ನು ಎಲ್ಲಕ್ಕಿಂತ ಹೆಚ್ಚಾಗಿ ಬಳಸಲಾಗುತ್ತಿದೆ ಎಂಬ ವಿಷಯವು ಲ್ಯಾನ್ಸೆಟ್‌ ಸಂಸ್ಥೆ ನಡೆಸಿರುವ ಅಧ್ಯಯನದಿಂದ ತಿಳಿದು ಬಂದಿದೆ. ಕೋವಿಡ್‌-19 (COVID-19) ಸಾಂಕ್ರಾಮಿಕ ರೋಗವು ಜಗತ್ತನ್ನು ಆವರಿಸಿಕೊಂಡ ಸಂದರ್ಭ ಮತ್ತು ಅದಕ್ಕೂ ಮೊದಲು ಭಾರತೀಯರು ಹೆಚ್ಚಾಗಿ ಅಜಿಥ್ರೊಮೈಸಿನ್‌ನಂತಹ ಆ್ಯಂಟಿಬಯೋಟಿಕ್‌ ಗಳನ್ನು ಬಳಸಿದ್ದಾರೆ ಎಂದು ಅಧ್ಯಯನ ವರದಿಗಳಿಂದ (Study Report) ತಿಳಿದು ಬಂದಿದೆ.

ಲ್ಯಾನ್ಸೆಟ್‌ ಅಧ್ಯಯನದಲ್ಲಿ ಕಂಡುಬಂದಿರುವುದೇನು?
ಲ್ಯಾನ್ಸೆಟ್ ರೀಜನಲ್ ಹೆಲ್ತ್‌ ಸಂಸ್ಥೆಯಿಂದ ಪ್ರಕಟವಾದ ಈ ಅಧ್ಯಯನ ಸಂಶೋಧನೆಯ ಪ್ರಕಾರ, “ಭಾರತೀಯರು ತೆಗೆದುಕೊಳ್ಳುವ ಈ ಔಷಧಿಗಳಲ್ಲಿ ಹೆಚ್ಚಿನವುಗಳು ಕೇಂದ್ರ ಔಷಧ ನಿಯಂತ್ರಣ ಮಂಡಳಿಯಿಂದ ಅನುಮೋದನೆ ಪಡೆದಿಲ್ಲ. ಹಾಗಾಗಿ,ಕೇಂದ್ರ ಸರ್ಕಾರವು ತಕ್ಷಣವೇ ಸ್ಪಂದಿಸಿ ನಿಖರವಾದ ನೀತಿ ರೂಪಿಸಿ ಸುಧಾರಣೆ ತರುವ ವಿಚಾರವು ಅಧ್ಯಯನದಿಂದ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 1 ರಂದು ಪ್ರತಿಷ್ಠಿತ ಜರ್ನಲ್‌ನಲ್ಲಿ ಈ ಸಂಶೋಧನೆಯನ್ನು ಪ್ರಕಟಿಸಲಾಗಿದೆ. ಭಾರತದಲ್ಲಿ ಆ್ಯಂಟಿಬಯೋಟಿಕ್‌ಗಳ ಅಸಮರ್ಪಕ ಬಳಕೆಯು ಹೆಚ್ಚಿರುವ ಕಾರಣ ಈ ಅಧ್ಯಯನವು ಮುಖ್ಯವಾಗಿದೆ” ಎಂದು ಹೇಳಿದೆ.

“ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಏಜೆನ್ಸಿಗಳ ನಡುವಿನ ನಿಯಂತ್ರಕ ಅಧಿಕಾರಗಳಲ್ಲಿನ ಅತಿಕ್ರಮಣವು ದೇಶದಲ್ಲಿ ಆ್ಯಂಟಿಬಯೋಟಿಕ್‌ಗಳ ಲಭ್ಯತೆ, ಮಾರಾಟ ಮತ್ತು ಬಳಕೆಯನ್ನು ಸಂಕೀರ್ಣಗೊಳಿಸುತ್ತದೆ” ಎಂದು ಅಧ್ಯಯನವು ಹೇಳಿದೆ.

ಆ್ಯಂಟಿಬಯೋಟಿಕ್‌ಗಳ ಬಳಕೆಯಲ್ಲಿ ಭಾರತಕ್ಕೆ ಮೊದಲ ಸ್ಥಾನ 
"ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಆ್ಯಂಟಿಬಯೋಟಿಕ್‌ಗಳ ಬಳಕೆ ಕಡಿಮೆ ಇದ್ದರೂ ಸಹ, ಕೆಲವು ವರ್ಗಗಳು ದೊಡ್ಡ ಪ್ರಮಾಣದಲ್ಲಿ ಆ್ಯಂಟಿಬಯೋಟಿಕ್‌ಗಳನ್ನು ಬಳಕೆ ಮಾಡುತ್ತಿದೆ. ಅದನ್ನು ಮಿತವಾಗಿ ಬಳಸಬೇಕು” ಎಂಬ ಎಚ್ಚರಿಕೆಯನ್ನೂ ಅಧ್ಯಯನ ನೀಡಿದೆ.

ಇದನ್ನೂ ಓದಿ: Piles Remedy: ಪೈಲ್ಸ್​ ಸಮಸ್ಯೆಯಿಂದ ಹೈರಾಣಾಗಿದ್ರೆ ಚಿಂತೆ ಬಿಡಿ, ನಾವ್ ಹೇಳೋ ಈ ಮದ್ದು ಟ್ರೈ ಮಾಡಿ

ನವದೆಹಲಿ ಮೂಲದ ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದಿಂದ ಆಶ್ನಾ ಮೆಹ್ತಾ ಅವರು ಈ ಅಧ್ಯಯನವನ್ನು ಅಂಗೀಕರಿಸಿದೆ. ಭಾರತದಾದ್ಯಂತ ಮಾರಾಟದ ಅಂಕಿ-ಅಂಶಗಳನ್ನು ಪ್ರತಿನಿಧಿಸುವ 9,000 ಪ್ಯಾನೆಲ್‌ನಿಂದ ಸಂಗ್ರಹಿಸಲಾದ ಖಾಸಗಿ ವಲಯದ ಔಷಧ ಮಾರಾಟದ ಡೇಟಾಸೆಟ್, ಫಾರ್ಮಾಟ್ರಾಕ್‌ನಿಂದ ಡೇಟಾವನ್ನು ಸಂಗ್ರಹಿಸಿ, ವಿಶ್ಲೇಷಿಸಿ ವರದಿ ಸಿದ್ಧಪಡಿಸಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಈ ಬಗ್ಗೆ ಸಂಶೋಧಕರು ಏನು ಹೇಳಿದ್ದಾರೆ 
ಆ್ಯಂಟಿಬಯೋಟಿಕ್‌ಗಳ ಬಳಕೆಯನ್ನು ಲೆಕ್ಕ ಹಾಕಲು ಮೆಟ್ರಿಕ್ ಡಿಫೈನ್ಡ್ ಡೈಲಿ ಡೋಸ್ (ಡಿಡಿಡಿ) ಅನ್ನು ಬಳಸಲಾಗಿದೆ. 2019 ರಲ್ಲಿ ಸೇವಿಸಿದ ಒಟ್ಟು ಡಿಡಿಡಿಗಳು 5,071 ಮಿಲಿಯನ್ ಎಂದು ಸಂಶೋಧನೆಗಳು ತೋರಿಸಿವೆ. ಅಂದರೆ ಇದು ದಿನಕ್ಕೆ 1,000 ಜನಸಂಖ್ಯೆಗೆ 10.4 ಡಿಡಿಡಿ ಗೆ ಸಮವಾಗಿರುತ್ತದೆ.

"ಹನ್ನೆರಡು ಆ್ಯಂಟಿಬಯೋಟಿಕ್‌ಗಳ ಅಣುಗಳು ಒಟ್ಟು ಸೇವನೆಯ 75% ರಷ್ಟಿದೆ. ಅದರಲ್ಲಿ ಅಜಿಥ್ರೊಮೈಸಿನ್ ಹೆಚ್ಚು ಸೇವನೆ ಮಾಡುವ ಆ್ಯಂಟಿಬಯೋಟಿಕ್ (640 ಮಿಲಿಯನ್ ಡಿಡಿಡಿಗಳು, 12.6%), ನಂತರದ ಸ್ಥಾನದಲ್ಲಿ ಸೆಫಿಕ್ಸೈಮ್ (516 ಮಿಲಿಯನ್, 10.2%) ಇದೆ “ ಎಂದು ಸಂಶೋಧಕರು ಅಧ್ಯಯನದಲ್ಲಿ ತಿಳಿಸಿದ್ದಾರೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಪ್ರಕಾರ, ಮಾನವರು ಮತ್ತು ಪ್ರಾಣಿಗಳಲ್ಲಿನ ಬ್ಯಾಕ್ಟೀರಿಯಾದ ಸೋಂಕಿನ ವಿರುದ್ಧ ಹೋರಾಡಲು ಆ್ಯಂಟಿಬಯೋಟಿಕ್‌ಗಳು ಕಾರ್ಯನಿರ್ವಹಿಸುತ್ತವೆ. ಇವು ಬ್ಯಾಕ್ಟೀರಿಯಾವನ್ನು ಕೊಲ್ಲಲು ಕೆಲಸ ಮಾಡುತ್ತವೆ.

ಆ್ಯಂಟಿಬಯೋಟಿಕ್‌ ಸೇವನೆಯಿಂದ ಉಂಟಾಗುವ ಅಡ್ಡಪರಿಣಾಮಗಳು 
ಆ್ಯಂಟಿಬಯೋಟಿಕ್‌ಗಳ ಕಾರಣ ಬ್ಯಾಕ್ಟೀರಿಯಾ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಗಂಟಲೂತ, ನಾಯಿಕೆಮ್ಮು, ಮೂತ್ರನಾಳದ ಸೋಂಕಿನಂತಹ ಸಮಸ್ಯೆಗಳು ಎದುರಾದಾಗ ವೈದ್ಯರ ಸಲಹೆ ಮೇರೆಗೆ ನಾವು ಇವುಗಳನ್ನು ಸೇವಿಸುತ್ತೇವೆ. ಈ ಎಲ್ಲಾ ರೋಗಗಳು ಬ್ಯಾಕ್ಟೀರಿಯಾದ ಸೋಂಕಿನಿಂದ ಉಂಟಾಗುತ್ತವೆ. ಇದಲ್ಲದೆ, ಬ್ಯಾಕ್ಟೀರಿಯಾದ ಸೆಪ್ಸಿಸ್ ನಂತಹ ಮಾರಣಾಂತಿಕ ಪರಿಸ್ಥಿತಿಗಳಲ್ಲಿ ಆ್ಯಂಟಿಬಯೋಟಿಕ್‌ಗಳ ಸಹಾಯವನ್ನು ಸಹ ತೆಗೆದುಕೊಳ್ಳಲಾಗುತ್ತದೆ.

ಇದನ್ನೂ ಓದಿ:  Weight Loss Tips: ಈ 5 ಬದಲಾವಣೆ ಮಾಡಿದ್ರೆ ಸಾಕು ನಿಮ್ಮ ತೂಕ ಸುಲಭವಾಗಿ ಕಡಿಮೆ ಆಗುತ್ತೆ

ಆ್ಯಂಟಿಬಯೋಟಿಕ್‌ಗಳು ದದ್ದು, ವಾಂತಿ ಬರುವ ಹಾಗೆ ಆಗುವುದು, ಅತಿಸಾರ, ಯೀಸ್ಟ್ ಸೋಂಕಿನಂತಹ ಗಂಭೀರ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಈ ಕಾರಣಕ್ಕಾಗಿಯೇ ನಾವು ವೈದ್ಯರ ಸಲಹೆಯ ನಂತರವೇ ಆ್ಯಂಟಿಬಯೋಟಿಕ್ ತೆಗೆದುಕೊಳ್ಳಬೇಕು ಮತ್ತು ಯಾವುದೇ ಅಡ್ಡ ಪರಿಣಾಮಗಳಿದ್ದರೂ ಸಹ, ವೈದ್ಯರನ್ನು ಸಂಪರ್ಕಿಸಿ ಅದರ ತಡೆಗಟ್ಟುವಿಕೆಗಾಗಿ ಔಷಧಿಯನ್ನು ತೆಗೆದುಕೊಳ್ಳಬೇಕು.
Published by:Ashwini Prabhu
First published: