ಖರೀದಿಸಿದ ಇಪ್ಪತ್ತೇ ನಿಮಿಷಗಳಲ್ಲಿ ನುಚ್ಚುನೂರಾಯ್ತು 2 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಕಾರು!

ವ್ಯಕ್ತಿಯೋರ್ವ ಸುಮಾರು 2 ಕೋಟಿ ರೂಪಾಯಿ ನೀಡಿ ಲ್ಯಾಂಬೋರ್ಗಿನಿ ಹುರಾಕೇನ್​ ಖರೀದಿ ಮಾಡಿದ್ದ. ಅಷ್ಟೇ ಅಲ್ಲ ಕಾರು ಖರೀದಿಸಿದ ಖುಷಿಗೆ ವೇಗವಾಗಿ ರಸ್ತೆಯಮೇಲೆ ಚಲಾಯಿಸಿದ್ದ.

news18-kannada
Updated:June 27, 2020, 3:19 PM IST
ಖರೀದಿಸಿದ ಇಪ್ಪತ್ತೇ ನಿಮಿಷಗಳಲ್ಲಿ ನುಚ್ಚುನೂರಾಯ್ತು 2 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಕಾರು!
ನುಚ್ಚು ನೂರಾದ ಕಾರು
  • Share this:
ಲ್ಯಾಂಬೋರ್ಗಿನಿ ಕಾರನ್ನು ಕೋಟ್ಯಾಂತರ ರೂಪಾಯಿ ಕೊಟ್ಟು ಖರೀದಿ ಮಾಡುತ್ತಾರೆ. ಇಷ್ಟೆಲ್ಲ ಹಣ ಕೊಟ್ಟು ಖರೀದ ಮಾಡಿದ ನಂತರ ಕಾರಿನ ಮೇಲೆ ಒಂದು ಸಣ್ಣ ಗೀರು ಬಿದ್ದರು ತುಂಬಾನೇ ಬೇಸರವಾಗುತ್ತದೆ. ಹೀಗಿರುವಾಗ ಖರೀದಿಸದ ಇಪ್ಪತ್ತೇ ನಿಮಿಷಗಳಲ್ಲಿ ಕಾರು ಪುಡುಪುಡಿಯಾಗಿಬಿಟ್ಟರೆ?

ಹೀಗೊಂದು ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದೆ. ಶೋರೂಂನಿಂದ ಕಾರು ಖರೀದಿಸಿದ 20 ನಿಮಿಷಗಳಲ್ಲಿ ನುಚ್ಚುನೂರಾಗಿದೆ. ವ್ಯಕ್ತಿಯೋರ್ವ ಸುಮಾರು 2 ಕೋಟಿ ರೂಪಾಯಿ ನೀಡಿ ಲ್ಯಾಂಬೋರ್ಗಿನಿ ಹುರಾಕೇನ್​ ಖರೀದಿ ಮಾಡಿದ್ದ. ಅಷ್ಟೇ ಅಲ್ಲ ಕಾರು ಖರೀದಿಸಿದ ಖುಷಿಗೆ ವೇಗವಾಗಿ ರಸ್ತೆಯಮೇಲೆ ಚಲಾಯಿಸಿದ್ದ.

ದುರಾದೃಷ್ಟವಶಾತ್​ ಕಾರು ಬ್ರೆಕ್​ ಫೇಲ್​ ಆಗಿದೆ. ಈ ವೇಳೆ ಎದುರು ಹೋಗುತ್ತಿದ್ದ ವಾಹನಕ್ಕೆ ಕಾರು ಗುದ್ದಿದೆ. ಕ್ಷಣಮಾತ್ರದಲ್ಲಿ ಹಿಂಬದಿಯಿಂದ ಬರುತ್ತಿದ್ದ ವಾಹನವೊಂದು ಈ ಸ್ಪೋರ್ಟ್ಸ್​ ಕಾರಿಗೆ ಗುದ್ದಿದೆ. ನೋಡ ನೋಡುತ್ತಿದ್ದಂತೆ ಕಾರು ನುಚ್ಚು ನೂರಾಗಿದೆ.


ಈ ಫೋಟೋಗಳನ್ನು ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಫೋಟೋ ನೋಡಿದ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ಕಾರಿನಲ್ಲಿ ಕೂತಿದ್ದ ಇಬ್ಬರೂ ಬಚಾವ್​ ಆಗಿದ್ದಾರೆ. ವಾಹನಕ್ಕೆಗುದ್ದಿದ ಕಂಟೇನರ್​ ಚಾಲಕನ ತಲೆಗೆ ಗಾಯಗಳಾಗಿವೆ. ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಈ ಕಾರಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಲ್ಲದೆ, ಖರೀದಿಸಿದ ಕೆಲವೇ ಹೊತ್ತಿನಲ್ಲಿ ಈ ರೀತಿ ಆಗಿರುವ ಬಗ್ಗೆ ಅನೇಕರು ಬೇಸರ ಹೊರಹಾಕಿದ್ದಾರೆ.
First published:June 27, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading