Haircare: ಸರಿಯಾಗಿ ನಿದ್ದೆ ಮಾಡದಿದ್ರೆ ಕೂದಲು ಉದುರುತ್ತೆ, ಗಂಡಸರ ತಲೆ ಬೇಗ ಬೋಳಾಗೋಕೆ ಇದೇ ಕಾರಣವಾ?

ನೀವು ಬಹಳಷ್ಟು ಕಡಿಮೆ ಸಮಯ ನಿದ್ರೆ ಮಾಡುತ್ತಿದ್ದರೆ, ಅದು ನಿಮಗೆ ಒತ್ತಡವನ್ನು ಉಂಟುಮಾಡುತ್ತದೆ. ಈ ಒತ್ತಡ ಕೂದಲು ಉದುರುವಿಕೆಗೂ ಕಾರಣವಾಗಬಹುದು! ನೀವು ತುಂಬಾ ಒತ್ತಡದಿಂದ ಅಂತರಿಕ ನೋವನ್ನು ಅನುಭವಿಸಿದಾಗ ನಿಮ್ಮ ಕೂದಲ ಸ್ಥಗಿತ ಸ್ಥಿತಿಗೆ ತಲುಪುತ್ತದೆ ಇದನ್ನು ಟೆಲೊಜೆನ್ ಎಫ್ಲುವಿಯಮ್ ಎಂದು ಕೆರಯುತ್ತಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

Haircare Tips: ಸರಿಯಾದ ಪ್ರಮಾಣದ ನಿದ್ರೆ ದೇಹವನ್ನು ಉತ್ತಮಗೊಳಿಸುತ್ತದೆ. ಆರೋಗ್ಯಕರ ಜೀವನಕ್ಕೆ ನಿದ್ರೆ ಬಹಳ ಮುಖ್ಯ, ಆದರೆ ನಾವು ಅದನ್ನು ಲಘುವಾಗಿ ಪರಿಗಣಿಸುತ್ತೇವೆ. ಪುರುಷರ ಕೂದಲು ಉದುರುವಿಕೆಗೆ ಹಾಗೂ ಬೋಳು ತಲೆಗೆ ನಿದ್ರೆಗೆ ಕಾರಣವಾಗದಿರಬಹುದು, ಆದರೆ ಇದು ನಿಮ್ಮ ಕೂದಲ್ಲಿನ ಇತರೆ ಸಮಸ್ಯಗಳಿಗೆ ಕಾರಣವಾಗಬಹುದು ಎಂದು ನಿಮಗೆ ತಿಳಿದಿರಲಿ. 


ಒತ್ತಡ ಮತ್ತು ಕೂದಲು ಉದುರುವಿಕೆ


ನೀವು ಬಹಳಷ್ಟು ಕಡಿಮೆ ಸಮಯ ನಿದ್ರೆ ಮಾಡುತ್ತಿದ್ದರೆ, ಅದು ನಿಮಗೆ ಒತ್ತಡವನ್ನು ಉಂಟುಮಾಡುತ್ತದೆ. ಈ ಒತ್ತಡ ಕೂದಲು ಉದುರುವಿಕೆಗೂ ಕಾರಣವಾಗಬಹುದು! ನೀವು ತುಂಬಾ ಒತ್ತಡದಿಂದ ಅಂತರಿಕ ನೋವನ್ನು ಅನುಭವಿಸಿದಾಗ ನಿಮ್ಮ ಕೂದಲ ಸ್ಥಗಿತ ಸ್ಥಿತಿಗೆ ತಲುಪುತ್ತದೆ ಇದನ್ನು ಟೆಲೊಜೆನ್ ಎಫ್ಲುವಿಯಮ್ ಎಂದು ಕೆರಯುತ್ತಾರೆ.ಒತ್ತಡದಿಂದಾಗಿ ಉಂಟಾಗುವ ಕೂದಲು ಉದುರುವಿಕೆಯನ್ನು ಟ್ರೈಕೊಟಿಲೊಮೇನಿಯಾ ಎಂದು ಕರೆಯಲಾಗುತ್ತದೆ.ನಿಮ್ಮ ಸ್ವಂತ ರೋಗನಿರೋಧಕ ವ್ಯವಸ್ಥೆಯು ನಿಮ್ಮ ಕೂದಲಿನ ಉದುರುವಿಕೆಗೆ ಕಾರಣವಾಗುತ್ತದೆ ಅದನ್ನು ಅಲೋಪೆಸಿಯಾ ಅರೆಟಾ ಎಂದು ಕರೆಯುತ್ತಾರೆ, ಆದರೆ ಇದು ವಿಜ್ಞಾನಿಗಳು ಇನ್ನೂ ಅರ್ಥಮಾಡಿಕೊಳ್ಳದ ಕೂದಲಿ ಉದುರುವಿಕೆ ಸಮಸ್ಯೆಯಾಗಿದೆ!ನೀವು ಸಾಕಷ್ಟು ನಿದ್ರೆ ಮಾಡದಿರುವುದು ಮೇಲೆ ತಿಳಿಸಿರುವ ಎಲ್ಲಾ ಪರಿಸ್ಥಿತಿಗಳನ್ನು ಇನ್ನಷ್ಟು ಹದಗೆಡಿಸುತ್ತದೆ!


ಇದನ್ನೂ ಓದಿ: Healthy Heart: ದಿನಾ ಸ್ಟ್ರಾಬೆರಿ ಹಣ್ಣು ತಿಂದ್ರೆ ಹಾರ್ಟ್ ಹ್ಯಾಪಿಯಾಗಿರುತ್ತಂತೆ !

ನಿದ್ರೆ ಕೊರತೆ ಮತ್ತು ಕೂದಲು ಉದುರುವಿಕೆ


ನೀವು ಸಾಕಷ್ಟು ನಿದ್ರೆ ಮಾಡದಿದ್ದರೆ ನಿಮ್ಮ ದೇಹವು ಒತ್ತಡದ ಹಾರ್ಮೋನ್ ಕಾರ್ಟಿಸೋನ್ ಅನ್ನು ಬಿಡುಗಡೆ ಮಾಡುತ್ತದೆ.ನಿಮ್ಮ ದೇಹದಲ್ಲಿನ ನೈಸರ್ಗಿಕ ದುರಸ್ತಿ ಮತ್ತು ನಿಯಂತ್ರಣ ಪ್ರಕ್ರಿಯೆಗಳಿಗೆ ನಿಮಗೆ ನಿದ್ರೆ ಬೇಕು, ಆದರೆ ನೀವು ಈಗಾಗಲೇ ಹೊಂದಿರುವ ಒತ್ತಡದಿಂದ ನಿಮಗೆ ನಿದ್ರೆ ಕೊರತೆಯಾಗಿದೆ.ಇದು ನಿಮ್ಮ ಮನಸ್ಸು ಮತ್ತು ದೇಹದ ಮೇಲೆ ಪರಿಣಾಮನ್ನು ಬೀರುತ್ತದೆ.ಮಲುಗುವ ಸಮಯದಲ್ಲಿ ಕೆಫೀನ್ ಅನ್ನು ಸೇವಿಸಬೇಡಿ ಅದು ನಿಮ್ಮ ನಿದ್ರೆ ಕೊರತೆಗೆ ಕಾರಣವಾಗಬಹುದು. ಅಮೇರಿಕನ್ ಜರ್ನಲ್ ಆಫ್ ಪ್ಯಾಥಾಲಜಿ ಒತ್ತಡ ಮತ್ತು ಕೂದಲು ಕೋಶದ ನಡುವಿನ ಸಂಪರ್ಕಗಳನ್ನು ಪರಿಶೋಧಿಸಿದರು. ಕೂದಲಿನ ಬೆಳವಣಿಗೆಯ ಪ್ರಕ್ರಿಯೆಗೆ ಕಾರಣವಾದ ವಯಸ್ಕ ಕಾಂಡಕೋಶಗಳು ಸಕ್ರಿಯಗೊಳ್ಳಲು ಆಂತರಿಕ ಸಿರ್ಕಾಡಿಯನ್ ಬಹಳ ಮುಖ್ಯ ಆದರೆ ಇದು ಕೂದಲಿನ ಬೆಳವಣಿಗೆಯ ಚಕ್ರವನ್ನು ಅಡ್ಡಿಪಡಿಸುತ್ತದೆ ಎಂದು ಅವರ ಅಧ್ಯಯನವು ಸೂಚಿಸಿದೆ.ನೀವು ಸರಿಯಾದ ಪ್ರಮಾಣದಲ್ಲಿ ನಿದ್ರೆಯನ್ನು ಮಾಡದಿದ್ದರೆ ನಿಮ್ಮ ಕೂದಲು ಸ್ಥಗಿತ ಸ್ಥಿತಿಗೆ ತಲ್ಲುಪುತ್ತದೆ ಇದು ಸಿರ್ಕಾಡಿಯನ್ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ. ಎಂದು ಅವರ ಅಧ್ಯನದಿಂದ ತಿಳಿದುಬಂದಿದೆ.


ನಿದ್ರೆಯ ಕೊರತೆಯಿಂದ ನಿಮ್ಮ ದೇಹದಲ್ಲಿ ಆಯಿಲ್‌ ಮಟ್ಟವು ಕಡಿಮೆ ಆಗುತ್ತದೆ. "ಪ್ಲಾಟರ್, ಕಡಿಮೆ ಹೊಳೆಯುವ ಮತ್ತು ಕಡಿಮೆ ಸ್ಥಿತಿಸ್ಥಾಪಕ" ರೀತಿಯ ಇತರೆ ಕೂದಲ ಸಮಸ್ಯೆ ಮೇಲೆ ಆಯಿಲ್‌ ಮಟ್ಟವು ಪರಿಣಾಮ ಬೀರುತ್ತದೆ ಎಂದು ಟೀನ್ ವೋಗ್ ಅಧ್ಯಯನದಿಂದ ತಿಳಿದು ಬಂದಿದೆ ಹಾಗೂ ನಿದ್ರೆ ಕೊರತೆಯಿಂದ ಇತರೆ 7 ರೀತಿಯ ಸಮಸ್ಯೆಗಳನ್ನು ಉಂಟಾಗುತ್ತದೆ ಎಂದು ಟೀನ್ ಹೇಳಿದ್ದಾರೆ. ಸಾಕಷ್ಟು ನಿದ್ರೆ ಕೊರತೆಯು ನಿಮ್ಮ ಕೂದಲಿನ ಮೇಲೆ ಭಾರಿ ಪರಿಣಾಮ ಬೀರಬಹುದು, ಆದರೆ ನಿದ್ರೆ ಕೊರತೆಯಿಂದಾಗುವ ಕೂದಲು ಉದುರುವಿಕೆಯು ಆಂಡ್ರೊಜೆನೆಟಿಕ್ ಅಲೋಪೆಸಿಯಾ ಸಮಸ್ಯೆಗೆ ಕಾರಣವಾಗುವುದಿಲ್ಲ. ಪುರುಷ ಮತ್ತು ಸ್ತ್ರೀಯರ ಕೂದಲು ಬೋಳಾಗುವುದನ್ನು ಆಂಡ್ರೊಜೆನೆಟಿಕ್ ಅಲೋಪೆಸಿಯಾ ಎಂದು ಕರೆಯುತ್ತಾರೆ. 50 ದಶಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 30 ಮಿಲಿಯನ್ ಮಹಿಳೆಯರು ಬೋಳು ತಲೆಯ ಸಮಸ್ಯೆಯನ್ನು ಅನುಭವಿಸುತ್ತಾರೆ ಏಕೆಂದರೆ ಅವರು ಆನುವಂಶಿಕ ಪ್ರವೃತ್ತಿಯ ಸಮಸ್ಯೆಯನ್ನು ಹೊಂದಿದ್ದಾರೆ ಏಕೆಂದರೆ ನೆತ್ತಿಯಲ್ಲಿನ ಡಿಹೆಚ್‌ಟಿ ಉತ್ಪತ್ತಿಯು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಡಿಹೆಚ್‌ಟಿ ಡೈಹೈಡ್ರೊಟೆಸ್ಟೊಸ್ಟೆರಾನ್ ಅಂಶವನ್ನು ಹೊಂದಿದೆ. ಆಂಡ್ರೊಜೆನೆಟಿಕ್ ಅಲೋಪೆಸಿಯಾಕ್ಕೆ ನಿಮ್ಮ ಕುಟುಂಬದ ತಲೆಮಾರುಗಳಿಂದ ಬರುವಂತಹ ಸಮಸ್ಯೆ.




ಕೂದಲು ಉದುರುವಿಕೆಗೆ ನೆತ್ತಿಯ ಮೈಕ್ರೊಪಿಗ್ಮೆಂಟೇಶನ್


ನಿಮ್ಮ ಕುಟುಂಬದಲ್ಲಿನ ಬೋಳು ಆನುವಂಶಿಕತೆ ಸಮಸ್ಯೆಯಿಂದ ನಿಮಗೆ ನಿದ್ರೆ ಮಾಡಲಾಗುತ್ತಿಲ್ಲವೇ? ಚಿಂತಿಸಬೇಡಿ.ನೀವು ಮರಳಿ ಕೂದಲನ್ನು ಪಡೆಯಹುದು. ಕೂದಲನ್ನು ಫಿಕ್ಸ್ ಮಾಡುವ ವಿಧಾನವನ್ನು ನೆತ್ತಿಯ ಮೈಕ್ರೊಪಿಗ್ಮೆಂಟೇಶನ್ ಎಂದು ಕರೆಯಲಾಗುತ್ತದೆ. ಇದು ನಿಮ್ಮ ಬೋಳು ತಲೆಯ ಸಮಸ್ಯೆಯನ್ನು ಪರಿಹರಿಸುವುದು.

Published by:Soumya KN
First published: