news18-kannada Updated:May 1, 2020, 12:03 PM IST
ಸಾಂದರ್ಭಿಕ ಚಿತ್ರ
ವಿಶ್ವದಾದ್ಯಂತ ಮೇ 1ರಂದು ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ಮೂಲಕ ದೇಶದ ಪ್ರಮುಖ ಭಾಗವಾಗಿರುವ ಕಾರ್ಮಿಕರಿಗೆ ಗೌರವ ಸಲ್ಲಿಸಲಾಗುತ್ತಿದೆ. ಅಂದಹಾಗೆ, ಈ ಕಾರ್ಮಿಕರ ದಿನಾಚರಣೆ ಆರಂಭವಾಗಿದ್ದು ಹೇಗೆ ಎನ್ನುವ ಇತಿಹಾಸ ಇಲ್ಲಿದೆ.
ಅದು ಕ್ರಿ.ಶ 1,800ರ ಸಮಯ. ಅಮೆರಿಕದಲ್ಲಿ ಕೈಗಾರಿಕಾ ಕ್ರಾಂತಿ ಆರಂಭವಾಗಿತ್ತು. ಈ ವೇಳೆ ಪ್ರತಿ ಕಾರ್ಮಿಕನಿಂದ 12-16 ಗಂಟೆ ದುಡಿಸಿಕೊಳ್ಳಲಾಗುತ್ತಿತ್ತು. ವಾರದಲ್ಲಿ ಒಂದೇ ಒಂದು ದಿನವೂ ಕಾರ್ಮಿಕರಗೆ ರಜೆ ನೀಡುತ್ತಿರಲಿಲ್ಲ.
ಇದನ್ನೂ ಓದಿ: ಒಂದೇ ದಿನ ಅತಿಹೆಚ್ಚು ವೀಕ್ಷಣೆ ಕಂಡು ವಿಶ್ವದಾಖಲೆ ನಿರ್ಮಿಸಿದ ರಾಮಾಯಣ
ಇದರ ವಿರುದ್ಧ ಅಮೆರಿಕದಲ್ಲಿ ದಂಗೆಗಳು ಆರಂಭವಾದವು. 1882ರ ಸೆಪ್ಟೆಂಬರ್ನಲ್ಲಿ ನ್ಯೂಯಾರ್ಕ್ಅಲ್ಲಿ 10 ಸಾವಿರ ಕಾರ್ಮಿಕರು ಪ್ರತಿಭಟನಾ ಮಾರ್ಚ್ ನಡೆಸಿದರು. ಇದು ಕಾರ್ಮಿಕರ ದಿನಾಚರಣೆಯ ಮೊದಲ ಪರೇಡ್ ಆಗಿದೆ. ಇನ್ನು, ಭಾರತದಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಕಾರ್ಮಿಕ ದಿನಾಚರಣೆಯನ್ನು 1923ರಲ್ಲಿ. ಲೇಬರ್ ಕಿಸಾನ್ ಪಾರ್ಟಿ ಆಫ್ ಅಡಿಯಲ್ಲಿ ಕಾರ್ಮಿಕ ದಿನವನ್ನು ಆಚರಿಸಲಾಯಿತು. ಆ ಸಮಯದಲ್ಲಿ ಇದನ್ನು 'ಮದ್ರಾಸ್ ಡೆ' ಎಂದು ಕರೆಯಲಾಗುತ್ತಿತು.
First published:
May 1, 2020, 12:03 PM IST