ಹಗ್ಗಜಗ್ಗಾಟ: ರಾಯಲ್​ ಎನ್​ಫೀಲ್ಡ್​ನ್ನು ಉರುಳಿಸಿದ KTM RC390


Updated:April 17, 2018, 5:28 PM IST
ಹಗ್ಗಜಗ್ಗಾಟ: ರಾಯಲ್​ ಎನ್​ಫೀಲ್ಡ್​ನ್ನು ಉರುಳಿಸಿದ KTM RC390
Image: (Youtube)

Updated: April 17, 2018, 5:28 PM IST
ಪಂಜಾಬ್​: ರಾಯಲ್​ ಎನ್​ಫೀಲ್ಡ್​ ಹಾಗೂ ಕೆಟಿಎಂ ಬೈಕ್​ಗಳ ನಡುವೆ ಹಗ್ಗಜಗ್ಗಾಟ ಏರ್ಪಡಿಸಿದರೆ ಯಾವ ಬೈಕ್​ ಗೆಲ್ಲಬಹುದು? ಹೀಗೋಂದು ಪ್ರಶ್ನೆ ನಿಮಗೆ ಮೂಡಿ ನಿಮ್ಮ ಉತ್ತರ ಎನ್​ಫೀಲ್ಡ್​ ಎಂದು ಆಗಿದ್ದರೆ ಖಂಡಿತಾ ತಪ್ಪು.

ಹೌದು! ಇತ್ತೀಚೆಗೆ ನಡೆದ ರಾಯಲ್​ ಎನ್​ಫೀಲ್ಡ್​ ಹಾಗೂ ಕೆಟಿಎಂ ಬೈಕ್​ಗಳ ನಡುವಿನ ಟಗ್​ ಆಫ್​ ವಾರ್​ ಅಥವಾ ಹಗ್ಗಜಗ್ಗಾಟದಲ್ಲಿ ಬುಲ್ಲೆಟ್​ ಬೈಕ್​ ಕೆಟಿಎಂ ಆರ್​ಸಿ 390 ಎದುರು ಪರಾಭವಗೊಂಡಿದೆ. ಪಂಜಾಬ್​ನ ಗ್ರಾಮವೊಂದರಲ್ಲಿ ಈ ವೀಡಿಯೋ ಚಿತ್ರೀಕರಿಸಲಾಗಿದ್ದು ಈ ಪಂದ್ಯದಲ್ಲಿ ಬುಲ್ಲೆಟ್​ ಪರಾಭವಗೊಂಡಿದರೆ, ಸಧ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.ದೇಶದ ದ್ವಿಚಕ್ರ ವಾಹನ ವಿಭಾಗದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನುಂಟು ಮಾಡಿರುವ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಕ್ಲಾಸಿಕ್ ಮತ್ತು ಅಡ್ವೆಂಚರ್ ವಿಭಾಗದಲ್ಲಿ ತನ್ನದೇ ಆದ ಜನಪ್ರಿಯತೆ ಹೊಂದಿವೆ. ಹೀಗಾಗಿ ರಾಯಲ್​ ಎನ್​ಫೀಲ್ಡ್​ ಬೈಕ್​ ಈ ಪಂದ್ಯದಲ್ಲಿ ಪಕ್ಕಾ ಗೆಲ್ಲುತ್ತದೆ ಎಂದು ಎಲ್ಲರೂ ಊಹಿಸಿದ್ದರು. ಆದರೆ ಅಲ್ಲಿ ನಡೆದಿದ್ದೇ ಬೇರೆ, ಆಸ್ಟ್ರೇಲಿಯಾ ಎಂಜಿನ್​ 373 ಸಿಸಿ ಸಾಮರ್ಥ್ಯದ ಕೆಟಿಎಂ ಒಂದೇ ಏಟಿಗೆ ಬುಲ್ಲೆಟ್​ನ್ನು ಎಳೆದು ಬಿಟ್ಟಿದೆ. ಅದರ ವೀಡಿಯೋ ಇಲ್ಲಿದೆ ನೋಡಿ

ಇತ್ತೀಚೆಗೆ ಬಜಾಜ್​ ತನ್ನ ನೂತನ ಡಾಮಿನಾರ್​ 400 ಬೈಕ್​ನ ಜಾಹೀರಾತಿನಲ್ಲಿ ಹಾತಿ ಮತ್​ ಫಾಲೊ ಎನ್ನು ಜಾಹೀರಾತಿನಲ್ಲಿ ರಾಯಲ್​ ಎನ್​ಫೀಲ್ಡ್​ ಬೈಕ್​ನ್ನು ಅಣುಕಿಸುವ ಪ್ರಯತ್ನ ಮಾಡಿತ್ತು. ಪ್ರತಿ ಜಾಹೀರಾತಿನಲ್ಲೂ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಆನೆಗೆ ಹೋಲಿಸಿ ಜಾಹೀರಾತುಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು. ಈ ವೀಡಿಯೋ ಕೂಡಾ ಭಾರೀ ಸಂಚಲನ ಮೂಡಿಸಿತ್ತು.
First published:April 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ