ಯುವ ಜೋಡಿಗಳ ಫೋಟೋ ಶೂಟ್​ಗೆ ಈಗ ಕೆಎಸ್​ಆರ್​ಟಿಸಿ ಡಬ್ಬಲ್​ ಡೆಕ್ಕರ್​ ಬಸ್​ ಲಭ್ಯ; ಅದು ಡಿಸ್ಕೌಂಟ್​ ಆಫರ್​​ನಲ್ಲಿ

ಸರ್ಕಾರದ ಬಸ್​ಗಳಲ್ಲಿ ಇನ್ಮುಂದೆ ಯುವ ಜೋಡಿ ಫೋಟೋ ಶೂಟ್​ ನಡೆಸಬಹುದು. ರಸ್ತೆ ಮಧ್ಯದಲ್ಲಿ ಡಬ್ಬಲ್​ಡೆಕ್ಕರ್​ ಬಸ್​ನಲ್ಲಿ ಜೋಡಿಗಳು ಫೋಸ್​ ನೀಡಲು ಸರ್ಕಾರ ಅನುಮತಿ ನೀಡಿದೆ.

ಬಸ್​ನಲ್ಲಿ ಕುಳಿತು ಫೋಸ್​ ನೀಡಿದ ಜೋಡಿ

ಬಸ್​ನಲ್ಲಿ ಕುಳಿತು ಫೋಸ್​ ನೀಡಿದ ಜೋಡಿ

 • Share this:
  ಇತ್ತೀಚಿನ ದಿನಗಳಲ್ಲಿ ಮದುವೆಗೆ ಮುಂಚೆ ಜೋಡಿಗಳ ಫ್ರಿವೆಡ್ಡಿಂಗ್​ ಶೂಟ್​ ಕಡ್ಡಾಯ ಎಂಬ ಅಲಿಖಿತ ನಿಯಮ ಜಾರಿಗೆ ಬಂದಿದೆ. ವಿಭಿನ್ನವಾಗಿ ಎಲ್ಲರ ಗಮನಸೆಳೆಯುವಂತೆ ಮದುವೆಗೆ ಮುಂಚೆ ಫೋಟೋಗೆ ಫೋಸ್​ ನೀಡದಿದ್ದರೆ, ಮದುವೆಯೇ ಸಂಪೂರ್ಣಗೊಂಡಿಲ್ಲ ಎಂಬ ಭಾವನೆ ಈಗಿನ ಯುವ ಜೋಡಿಗಳದ್ದು. ಇದರಿಂದಲೇ ಇತ್ತೀಚೆಗೆ ಫ್ರಿವೆಡ್ಡಿಂಗ್​ ಫೋಟೋಗ್ರಾಫಿಗೆ ಡಿಮ್ಯಾಂಡ್​ ಹೆಚ್ಚಿದೆ. ಅದರಲ್ಲಿಯೂ ಕ್ರಿಯಾತ್ಮಕವಾಗಿ ಜೋಡಿಗಳ ಫೋಟೋ ತೆಗೆಯುವ ಯೋಜನೆ ರೂಪಿಸುವುದನ್ನೇ ಅನೇಕರು ಕಸುಬು ಮಾಡಿಕೊಂಡಿದ್ದಾರೆ. ಯಾವ ಮಟ್ಟಿಗೆ ಈ ಕ್ರಿಯಾತ್ಮಕ ಯೋಜನೆ ಮುಂದಾಗಿದೆ ಎಂಬುದನ್ನು ಇತ್ತೀಚೆಗೆ ಕೇರಳದ ಜೋಡಿಯ ಹನಿಮೂನ್​ ಥೀಮ್​ನ ಫೋಟೋ ಶೂಟ್​ ತೋರಿಸಿತ್ತು. ಕೇರಳದಲ್ಲಿ ಯಥೇಚ್ಛವಾಗಿ ನಡೆಯುತ್ತಿರುವ ಈ ಫೋಟೋ ಶೂಟ್​ಗೆ ಈಗ ಕೇರಳ ಸರ್ಕಾರವೇ ಮತ್ತೊಂದು ಐಡಿಯಾ ಜೊತೆಗೆ ಉತ್ತೇಜನ ನೀಡಿದೆ.

  ಅಚ್ಚರಿಯಾದರೂ ಹೌದು. ಕೇರಳ ಸರ್ಕಾರದ ಬಸ್​ಗಳಲ್ಲಿ ಇನ್ಮುಂದೆ ಯುವ ಜೋಡಿ ಫೋಟೋ ಶೂಟ್​ ನಡೆಸಬಹುದು. ರಸ್ತೆ ಮಧ್ಯದಲ್ಲಿ ಡಬ್ಬಲ್​ಡೆಕ್ಕರ್​ ಬಸ್​ನಲ್ಲಿ ಜೋಡಿಗಳು ಫೋಸ್​ ನೀಡಲು ಸರ್ಕಾರ ಅನುಮತಿ ನೀಡಿದೆ. ಆದರೆ, ಇದಕ್ಕೆ ಇಂತಿಷ್ಟು ದರ ಎಂದು ನಿಗದಿ ಮಾಡಿದೆ. ಇದರಿಂದ ಯುವ ಜೋಡಿಗೆ ವಿಶೇಷವಾಗಿ ಫೋಟೋ ತೆಗೆದುಕೊಂಡ ಖುಷಿ ಸಿಕ್ಕರೆ, ಸರ್ಕಾರಕ್ಕೆ ಆದಾಯದ ಮೂಲವಾಗುತ್ತದೆ ಎಂಬುದು ಸಾರಿಗೆ ಸಂಸ್ಥೆಯ ಯೋಜನೆ.

  ಕೇರಳದ ಕೆಎಸ್​ಆರ್​ಟಿಸಿ (ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಡಬ್ಬಲ್​ ಟೆಕ್ಕರ್​ ಬಸ್​ನ್ನು ಈ ಫೋಟೋಶೂಟ್​ಗೆ ಸಾರಿಗೆ ಸಂಸ್ಥೆ ನೀಡುತ್ತಿದೆ. ಸದ್ಯ 50 ಕಿ.ಮೀಗೆ 4 ಸಾವಿರದಂತೆ ದರ ನಿಗದಿಸಲಾಗಿದೆ. ರಾಜಧಾನಿಯಲ್ಲಿ ಏಂಟು ಗಂಟೆಗಳ ಕಾಲ ಶೂಟ್​ ಮಾಡಿಕೊಳ್ಳಲು ಬಾಡಿಗೆ ಪಡೆಯಬಹುದು.

  ಸದ್ಯ ಈ ಸೇವೆಯನ್ನು ಗಣೇಶ್​ ಲಕ್ಷ್ಮೀ ಎಂಬ ಜೋಡಿ ಬಳಸಿಕೊಂಡಿದ್ದಾರೆ. ಮುಂದಿನ ಜನವರಿಯಲ್ಲಿ ಹಸೆಮಣೆ ಏರುತ್ತಿರುವ ಈ ಜೋಡಿ ಫೋಟೋಶೂಟ್​ಗೆ ಸಾರಿಗೆ ಸಂಸ್ಥೆಯ ಬಸ್​ಬಲ್ಲಿ ಫೋಸ್​ ನೀಡಲು ಆಪೇಕ್ಷಿಸಿದ್ದರು. ಈ ಕುರಿತು ವಿಚಾರಿಸಿದಾಗ ಸಂಸ್ಥೆಯಿಂದ ಗ್ರೀನ್​ ಸಿಗ್ನಲ್​ ಸಿಕ್ಕಿದೆ. ಅ.21ರಂದು ನಗರದಲ್ಲಿ ಬಸ್​ ಏರಿ ಇವರು ಫೋಸ್​ ನೀಡಿದ್ದಾರೆ.
  ಡಬ್ಬಲ್​ ಡೆಕ್ಕರ್​ ಬಸ್​ನಿಂದ ಈ ರೀತಿ ಆದಾಯ ಸಿಗುತ್ತಿರುವುದನ್ನು ಗಮನಿಸಿದ ಸಂಸ್ಥೆ ಇದಕ್ಕಾಗಿ ವಿಶೇಷ ರಿಯಾಯತಿ ನೀಡಲು ಕೂಡ ಮುಂದಾಗಿದೆ. ಡಿಸೆಂಬರ್​ವರೆಗೂ ಡಿಸ್ಕೌಂಟ್​ ನೀಡಲಾಗುತ್ತಿದ್ದು, ಬುಕ್ಕಿಂಗ್​ ಆರಂಭಿಸಿದೆ.
  Published by:Seema R
  First published: