Fishermen: ಸಮುದ್ರದಲ್ಲಿ ಮುಳುಗುತ್ತಿದ್ದ ಎಮ್ಮೆಯನ್ನು ರಕ್ಷಿಸಿದ ಮೀನುಗಾರರ ಸಾಹಸಕ್ಕೆ ಎಲ್ಲೆಡೆ ಪ್ರಶಂಸೆ..!

Buffalo: ಮೀನುಗಾರರು ಸಮುದ್ರದಲ್ಲಿ ಇನ್ನೇನು ಮುಳುಗಿ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತದೆ ಎಂಬ ಎಮ್ಮೆಯನ್ನು ರಕ್ಷಿಸಿ, ದಡಕ್ಕೆ ತಂದು ಅದರ ಮಾಲೀಕರಿಗೆ ಒಪ್ಪಿಸಿದರು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಈಗಂತೂ ನಮ್ಮಲ್ಲಿ ರಸ್ತೆಯ ಮೇಲೆ ಯಾವುದಾದರೂ ವಾಹನಗಳ (Vehicle) ಮಧ್ಯೆ ಅಪಘಾತವಾಗಿ (Accidentally) ಮನುಷ್ಯರು ಗಾಯಗೊಂಡಿದ್ದರೆ ಅಥವಾ ತಮ್ಮ ಪ್ರಾಣವನ್ನು ಕಳೆದುಕೊಳ್ಳುವ ಅಂಚಿನಲ್ಲಿದ್ದಾರೆ ಎಂದರೂ ಸಹ ಅವರ ಸಹಾಯಕ್ಕೆ ಮುಂದೆ ಬರುವವವರು ತುಂಬಾನೇ ಕಡಿಮೆ. ಅಪಘಾತದಲ್ಲಿ ಗಾಯಗೊಂಡಿರುವವರನ್ನು (Injured) ಹಿಂದೆ ಮುಂದೆ ಯೋಚಿಸದೆ ಕೂಡಲೇ ಅವರನ್ನು ಎತ್ತಿಕೊಂಡು ಹೋಗಿ ಆಸ್ಪತ್ರೆಗೆ (Hospital) ಸೇರಿಸಿ ಅವರನ್ನು ರಕ್ಷಿಸುವ ಜನರಿಗಿಂತಲೂ ನಮ್ಮಲ್ಲಿ ರಸ್ತೆಯ (Road) ಮೇಲೆ ನಿಂತು ತಮ್ಮ ಮೊಬೈಲ್ ಫೋನ್‌ನಲ್ಲಿ (Mobile) ಅಪಘಾತದ ವಿಡಿಯೋ (Video) ಅಥವಾ ಫೋಟೋ (Photo) ತೆಗೆಯುವ ಜನರೇ ಹೆಚ್ಚಾಗಿದ್ದಾರೆ.

ಕೋಯಿಕ್ಕೋಡ್‌ನಲ್ಲಿ ಘಟನೆ

ಇಂತಹದರಲ್ಲಿ ಒಂದು ಮೂಕ ಪ್ರಾಣಿಯನ್ನು ರಕ್ಷಣೆ ಮಾಡುವವರು ತುಂಬಾನೇ ಕಡಿಮೆ ಎಂದು ಹೇಳಬಹುದು. ಆದರೆ ಇಲ್ಲಿ ಒಂದು ಘಟನೆ ನಡೆದಿದ್ದು, ಮೀನುಗಾರರು ಹೇಗೆ ಒಂದು ಮೂಕ ಪ್ರಾಣಿಯನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ ನೀವೇ ನೋಡಿ. ಈ ಘಟನೆಯು ಕೇರಳ ರಾಜ್ಯದಲ್ಲಿರುವ ಕೋಯಿಕ್ಕೋಡ್‌ನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಮೀನುಗಾರರು ಕೋಯಿಕ್ಕೋಡ್‌ನಲ್ಲಿರುವ ಕೋಠಿ ಪ್ರದೇಶದ ಸಮುದ್ರದಲ್ಲಿ ಗುರುವಾರ ಮಧ್ಯರಾತ್ರಿ 1 ಗಂಟೆಗೆ ಒಂದು ವಿಚಿತ್ರವಾದ ದೃಶ್ಯವನ್ನು ನೋಡಿದ್ದಾರೆ. ಸಮುದ್ರ ದಡದಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿ ಸಮುದ್ರದಲ್ಲಿ ನೀರಿನ ಮೇಲೆ ತೇಲುತ್ತಿರುವ ವಸ್ತುವೊಮದನ್ನು ನೋಡಿದ್ದಾರೆ. ಆರಂಭದಲ್ಲಿ ಅದನ್ನು ಗುರುತಿಸಲು ಕಷ್ಟವಾದಾಗ ಅವರು ಸೂಕ್ಷ್ಮವಾಗಿ ಅದನ್ನು ಪರಿಶೀಲಿಸಿ ನೋಡಿದಾಗ ಒಂದು ಎಮ್ಮೆ ಅಸಹಾಯಕ ಪರಿಸ್ಥಿತಿಯಲ್ಲಿ ಸಮುದ್ರದಲ್ಲಿ ಇರುವುದನ್ನು ಕಂಡರು. ನಂತರ ಅವರು ತಡ ಮಾಡದೇ ಅದರ ರಕ್ಷಣೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: 3ನೇ ಬಾರಿ Lockdown ಆದ್ರೆ ಕಸುಬನ್ನೇ ಬಿಟ್ಟು ಬಿಡ್ತೀವಿ.. ಮೀನುಗಾರರ ನೋವಿನ ನುಡಿ..!

2 ಗಂಟೆಗಳ ಸತತ ಪ್ರಯತ್ನ

2 ಗಂಟೆಗಳ ಸತತ ಪ್ರಯತ್ನದ ನಂತರ, ಮೀನುಗಾರರು ಸಮುದ್ರದಲ್ಲಿ ಇನ್ನೇನು ಮುಳುಗಿ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತದೆ ಎಂಬ ಎಮ್ಮೆಯನ್ನು ರಕ್ಷಿಸಿ, ದಡಕ್ಕೆ ತಂದು ಅದರ ಮಾಲೀಕರಿಗೆ ಒಪ್ಪಿಸಿದರು ಎಂದು ಹೇಳಲಾಗುತ್ತಿದೆ. ಸಮುದ್ರದಿಂದ ಒಂದು ವಿಲಕ್ಷಣ ಶಬ್ದವನ್ನು ನಾವು ಕೇಳಿಸಿಕೊಂಡೆವು, ನಾವು ಟಾರ್ಚ್ ಬಳಸಿ ಸುತ್ತಲೂ ನೋಡಿದೆವು, ನಮಗೆ ಏನು ಕಾಣಿಸಲಿಲ್ಲ. ಆಗ ನಾವು ಇನ್ನೂ ಸೂಕ್ಷ್ಮವಾಗಿ ನೋಡಿದಾಗ ದೂರದಲ್ಲಿ ಒಂದು ಎಮ್ಮೆ ತೇಲುತ್ತಿರುವುದನ್ನು ಗುರುತಿಸಿದೆವು.

ಅದು ತುಂಬಾನೇ ಅಸಹಾಯಕವಾಗಿತ್ತು. ನಾವು ನಮ್ಮ ದಿನದ ಕೆಲಸವನ್ನು ಅಲ್ಲಿಯೇ ನಿಲ್ಲಿಸಿ ಅದನ್ನು ರಕ್ಷಿಸಬೇಕೆಂದು ನಿರ್ಧರಿಸಿದೆವು" ಎಂದು ಎ.ಟಿ. ಜಾಕಿರ್ ಮತ್ತು ಟಿ. ಪಿ. ಪುವದ್ ಅವರೊಂದಿಗೆ ಈ ಎಮ್ಮೆಯನ್ನು ಸಾವಿನ ದವಡೆಯಿಂದ ಪಾರು ಮಾಡಿದ ಎ. ಟಿ. ಫಿರೋಜ್ ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.

ಈ ಘಟನೆಯ ಬಗ್ಗೆ ಮಾತನಾಡುತ್ತಾ “ಆ ಎಮ್ಮೆ ಸಮುದ್ರದಲ್ಲಿ ಅಷ್ಟು ದೂರ ಹೇಗೆ ತಲುಪಿತು ಎಂದು ನಮಗೆ ಅರ್ಥವೇ ಆಗಲಿಲ್ಲ, ನಮ್ಮ ಕೆಲಸದ ಸಮಯದಲ್ಲಿ ಅಂತಹ ಪ್ರಾಣಿಯನ್ನು ಅಂತಹ ಸ್ಥಿತಿಯಲ್ಲಿ ನೋಡಿದ್ದು ಇದೇ ಮೊದಲನೆಯ ಸಲ ಮತ್ತು ಇಂತಹ ಅನುಭವ ಆಗಿದ್ದು ಸಹ ಇದೇ ಮೊದಲನೆಯ ಬಾರಿ" ಎಂದು ಎಮ್ಮೆಯನ್ನು ರಕ್ಷಿಸಿದ ಮೀನುಗಾರರು ಹೇಳಿದರು.

ಇದನ್ನೂ ಓದಿ: Floating Jetty: ಮಂಗಳೂರಿನಲ್ಲಿ ನಿರ್ಮಾಣವಾಗಲಿದೆ ರಾಜ್ಯದ ಮೊದಲ ತೇಲುವ ಜೆಟ್ಟಿ!

ಮೀನುಗಾರರ ಸಹಾಯಕ್ಕೆ ಶ್ಲಾಘನೆ

“ಸಮುದ್ರದಲ್ಲಿ 8 ಕಿಲೋ ಮೀಟರ್ ದೂರದಲ್ಲಿ ಸಿಲುಕಿಕೊಂಡಿರುವ ಎಮ್ಮೆಯನ್ನು ನಮ್ಮ ದೋಣಿಯ ಕಡೆಗೆ ಎಳೆಯುವುದು ತುಂಬಾನೇ ಕಷ್ಟವಾದ ಕೆಲಸವಾಗಿತ್ತು. ಆದ್ದರಿಂದ ನಾವು ಕೋಠಿಯಿಂದ ಮತ್ತೊಂದು ದೋಣಿಯನ್ನು ವ್ಯವಸ್ಥೆ ಮಾಡಿದೆವು. ಆ ಸಿಲುಕಿರುವ ಎಮ್ಮೆ ಮುಳುಗದಂತೆ ತಡೆಯಲು ನಾವು ಆ ಎಮ್ಮೆಗೆ ಎರಡು ದೊಡ್ಡ ಪ್ಲಾಸ್ಟಿಕ್ ಕ್ಯಾನ್‌ಗಳನ್ನು ಕಟ್ಟಿ ಬೆಳಗ್ಗೆ 8 ಗಂಟೆಯ ವೇಳೆಗೆ ಅದನ್ನು ದಡಕ್ಕೆ ಎಳೆದುಕೊಂಡೆವು ಎಂದು ಅವರು ಹೇಳಿದರು. ಈ ಎಮ್ಮೆಯನ್ನು ರಕ್ಷಣೆ ಮಾಡಿದ್ದಕ್ಕಾಗಿ ಸ್ಥಳೀಯರು ಈ ಮೂವರು ಮೀನುಗಾರರ ಸಹಾಯಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.
Published by:vanithasanjevani vanithasanjevani
First published: