• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Video: ಪಂಜಾಬಿ ಹಾಡು, ಡೋಲ್ ಸದ್ದಿಗೆ ಕೊರಿಯನ್ ವರನ ಸಖತ್ ಡ್ಯಾನ್ಸ್! ವೈರಲ್ ಆಯ್ತು ವಿಡಿಯೋ

Viral Video: ಪಂಜಾಬಿ ಹಾಡು, ಡೋಲ್ ಸದ್ದಿಗೆ ಕೊರಿಯನ್ ವರನ ಸಖತ್ ಡ್ಯಾನ್ಸ್! ವೈರಲ್ ಆಯ್ತು ವಿಡಿಯೋ

ಪಂಜಾಬಿ ಬೋಲಿಗೆ ಕೊರಿಯನ್ ವರನ ಡ್ಯಾನ್ಸ್

ಪಂಜಾಬಿ ಬೋಲಿಗೆ ಕೊರಿಯನ್ ವರನ ಡ್ಯಾನ್ಸ್

ದಕ್ಷಿಣ ಕೊರಿಯಾದ ವರನೊಬ್ಬನಿಗೆ ನಮ್ಮ ದೇಶದ ಪಂಜಾಬಿ ಹಾಡು, ಮಾತು ಕೇಳಿ ಮತ್ತು ಅದರ ಹಿನ್ನಲೆಯಲ್ಲಿರುವ ಡೋಲ್ ಬೀಟ್ ಗಳಿಗೆ ಡ್ಯಾನ್ಸ್ ಮಾಡುವಂತೆ ಮಾಡಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

  • Share this:

ನಮ್ಮ ಭಾರತೀಯ ಮದುವೆಗಳು (Indian Marriage) ಅಂದ್ರೆನೆ ಒಂದು ರೀತಿಯ ಸಂಭ್ರಮ, ಸಡಗರ, ವಿವಿಧ ರೀತಿಯ ಸಿಹಿ ತಿನಿಸುಗಳು (Sweets), ಭರ್ಜರಿ ಲೈಟಿಂಗ್ಸ್, ಸಂಗೀತ, ಡ್ಯಾನ್ಸ್ ಅಂತ ಹೀಗೆ ಈ ಪಟ್ಟಿ ಮುಗಿಯೋದೆ ಇಲ್ಲ. ಹೌದು.. ಮದುವೆ ಇನ್ನೂ ಶುರುವಾಗುವುದಕ್ಕೂ ಕೆಲವು ದಿನಗಳು ಬಾಕಿ ಇರುವಂತೆಯೇ ಮನೆಯಲ್ಲಿ ಮದುವೆ  ಅನೇಕ ಕಾರ್ಯಕ್ರಮಗಳಾದ ಮೆಹಂದಿ, ಅರಿಶಿನ ಹಚ್ಚುವುದು ಹೀಗೆ ಎಲ್ಲದರಲ್ಲೂ ಮದುವೆ ಮನೆಯವರು ಸಂಗೀತ ಕಾರ್ಯಕ್ರಮ ಮತ್ತು ಡ್ಯಾನ್ಸ್ ಮಾಡುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಸಂಗೀತ ಮತ್ತು ಡ್ಯಾನ್ಸ್ (Dance) ಇಲ್ಲದೆ ನಮ್ಮ ಭಾರತೀಯ ಮದುವೆಗಳು ಅಪೂರ್ಣ ಅಂತಾನೆ ಹೇಳಬಹುದು.


ಅದರಲ್ಲೂ ಮದುವೆ ಮಂಟಪಕ್ಕೆ ವರನನ್ನು ಕರೆತರುವ ಆಚರಣೆಯಂತೂ ತುಂಬಾನೇ ಭರ್ಜರಿಯಾಗಿರುತ್ತದೆ. ಆ ಸಂದರ್ಭದಲ್ಲಿ ಕುದುರೆ ಏರಿ ಬರುವ ವರನನ್ನು ಸ್ವಾಗತಿಸಿಕೊಳ್ಳುವುದಕ್ಕೆ ವಧುವಿನ ಮನೆಯವರು ಭರ್ಜರಿಯಾಗಿ ಡ್ಯಾನ್ಸ್ ಮಾಡುವುದನ್ನು ನಾವೆಲ್ಲಾ ಅನೇಕ ಬಾರಿ ನೋಡಿರುತ್ತೇವೆ. ಮದುವೆ ಮನೆಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರರವರೆಗೆ ಎಲ್ಲರೂ ಒಂದೆರಡು ಸ್ಟೆಪ್ಸ್ ಹಾಕುವವರೇ ಆಗಿರುತ್ತಾರೆ.


ಪಂಜಾಬಿ ಮಾತುಗಳನ್ನು ಕೇಳಿಸಿಕೊಂಡು ಜೋಶ್ ನಲ್ಲಿ ಡ್ಯಾನ್ಸ್ ಮಾಡಿದ ಕೊರಿಯನ್ ವರ


ಇಲ್ಲೊಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಫುಲ್ ವೈರಲ್ ಆಗುತ್ತಿದೆ. ಇಲ್ಲಿ ದಕ್ಷಿಣ ಕೊರಿಯಾದ ವರನೊಬ್ಬನಿಗೆ ನಮ್ಮ ದೇಶದ ಪಂಜಾಬಿ ಹಾಡು, ಮಾತು (ಬೋಲಿ) ಕೇಳಿ ಮತ್ತು ಅದರ ಹಿನ್ನಲೆಯಲ್ಲಿರುವ ಡೋಲ್ ಬೀಟ್ ಗಳಿಗೆ ಡ್ಯಾನ್ಸ್ ಮಾಡುವಂತೆ ಮಾಡಿದೆ. ಮದುವೆಯಲ್ಲಿ ಬಂದಿರುವ ಬರಾತಿಗಳು ಅವರನ್ನು ಪಂಜಾಬಿ ಭಾಷೆಯಲ್ಲಿ ಕೊರಿಯನ್ ಭಾವ ಅಂತೆಲ್ಲಾ ಹೇಳಿದ್ದಕ್ಕೆ ವರ ಜೋಶ್ ನಲ್ಲಿ ಕುದುರೆ ಮೇಲೆಯೇ ಕೂತು ಡ್ಯಾನ್ಸ್ ಮಾಡಿದ್ದಾರೆ.


ಇದನ್ನೂ ಓದಿ: ಮೆಕ್ಸಿಕನ್ ಹುಡುಗಿಯ ಮನಗೆದ್ದ ತಮಿಳುನಾಡು ಯುವಕ, ಭಾರತೀಯ ಸಂಪ್ರದಾಯದಂತೆ ಹಸೆಮಣೆ ಏರಿದ ಜೋಡಿ


ಇನ್‌ಸ್ಟಾಗ್ರಾಮ್ ಬಳಕೆದಾರರಾದ 'ಕರ್ರಿ ಆಂಡ್ ಕಿಮ್ಚಿ' ದಕ್ಷಿಣ ಕೊರಿಯಾದ ವರ ಜಿಮಿನ್ ತನ್ನ ಭಾರತೀಯ ಮದುವೆಯ ಸಮಯದಲ್ಲಿ ಅತಿಥಿಯೊಬ್ಬರು ತಮ್ಮನ್ನು ಪಂಜಾಬಿ ಭಾಷೆಯಲ್ಲಿ ಹಾಡಿ ಹೊಗಳಿದ್ದಕ್ಕೆ ಮತ್ತು ಡೋಲ್ ಬೀಟ್‌ಗೆ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕ್ಲಿಪ್ ನಲ್ಲಿ ಸಾಂಪ್ರದಾಯಿಕ 'ಶೇರ್ವಾನಿ' ಧರಿಸಿದ ಜಿಮಿನ್, ಕುದುರೆಯ ಮೇಲೆ ಕುಳಿತಿರುವುದನ್ನು ನಾವು ನೋಡಬಹುದು. ಅವರ ಪಕ್ಕದಲ್ಲಿಯೇ ನಿಂತಿದ್ದ ವ್ಯಕ್ತಿಯೊಬ್ಬ ತನ್ನ ಪಂಜಾಬಿ ಭಾಷೆಯಲ್ಲಿ ಅವರನ್ನು ಹೊಗಳಲು ಕೆಲವು ಮಾತುಗಳನ್ನು ಆಡಿದ್ದಾರೆ ಮತ್ತು ಅದಕ್ಕೆ ತಕ್ಕಂತೆ ಹಿಂದೆ ಡೊಲ್ ಬೀಟ್‌ಗಳು ಸಹ ಬಂದಿವೆ. ಇದರಿಂದ ತುಂಬಾನೇ ಖುಷಿಪಟ್ಟ ವರ ಕೂತಲ್ಲಿಯೇ ಡ್ಯಾನ್ಸ್ ಮಾಡಿದ್ದಾರೆ.


ಪಂಜಾಬಿ ಬೋಲಿಗೆ ಕೊರಿಯನ್ ವರನ ಡ್ಯಾನ್ಸ್


ಈ ವಿಡಿಯೋಗೆ ಏನಂತ ಶೀರ್ಷಿಕೆ ಬರೆದಿದ್ದಾರೆ ನೋಡಿ


"ಜಿಮಿನ್ ಅವರಿಗೆ ಆ ವ್ಯಕ್ತಿ ಮಾತುಗಳನ್ನು ಮುಗಿಸುತ್ತಿದ್ದಂತೆ ಡೋಲ್ ಬೀಟ್ ಗೆ ಡ್ಯಾನ್ಸ್ ಮಾಡಬೇಕೆಂದು ತಿಳಿದಿತ್ತು. ಪಂಜಾಬಿ ಭಾಷೆಯಲ್ಲಿ ಮಾತುಗಳನ್ನು ತುಂಬಾನೇ ಸ್ವೀಟ್ ಆಗಿ ಹೇಳಿದ ಅಮನ್ ಒಬೆರಾಯ್ ಅವರಿಗೆ ತುಂಬಾನೇ ಧನ್ಯವಾದಗಳು ಮತ್ತು ಆ ಸಂದರ್ಭವನ್ನು ಇನ್ನಷ್ಟು ಜೋಶ್ ಭರಿತವನ್ನಾಗಿ ಮಾಡಿದ್ದಕ್ಕೆ ನನ್ನ ಸಹೋದ್ಯೋಗಿಗಳಿಗೆ ಸ್ಪೆಷಲ್ ಥ್ಯಾಂಕ್ಸ್" ಎಂದು ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಸಖತ್ ವೈರಲ್ ಆಗಿದೆ ಈ ಕೊರಿಯನ್ ವರನ ಡ್ಯಾನ್ಸ್


ಈ ವಿಡಿಯೋವನ್ನು ಕೆಲವೇ ದಿನಗಳ ಹಿಂದೆ ಪೋಸ್ಟ್ ಮಾಡಲಾಯಿತು ಮತ್ತು ಅಂದಿನಿಂದ ಇದು 4 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 513,000 ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ಕಾಮೆಂಟ್ ವಿಭಾಗದಲ್ಲಂತೂ ಹಲವಾರು ಬಳಕೆದಾರರು ದಕ್ಷಿಣ ಕೊರಿಯಾದ ಈ ವರನನ್ನು ತನ್ನ ಹೆಂಡತಿಯ ಸಂಸ್ಕೃತಿ, ಭಾಷೆ ಮತ್ತು ಸಂಪ್ರದಾಯವನ್ನು ಖುಷಿಯಾಗಿ ಸ್ವೀಕರಿಸಿದ್ದಕ್ಕಾಗಿ ತುಂಬಾನೇ ಹೊಗಳಿದರು.


"ಜಿಮಿನ್ ಜಿಜು ಎಷ್ಟು ಒಳ್ಳೆಯವರು ಎಂದರೆ ಅವರು ನಮ್ಮ ಆಚರಣೆಗಳನ್ನು ತುಂಬಾನೇ ಹುರುಪಿನಿಂದ ಸ್ವೀಕರಿಸಿದರು ಮತ್ತು ಅದನ್ನು ಆನಂದಿಸಿದರು ಕೂಡ" ಎಂದು ಇನ್ನೊಬ್ಬ ಬಳಕೆದಾರರೊಬ್ಬರು ಬರೆದಿದ್ದಾರೆ.
ದಕ್ಷಿಣ ಕೊರಿಯಾದ ವರ ಜಿಮಿನ್ ತನ್ನ ಭಾರತೀಯ ವಧು ಶಿವಾಂಗಿಯನ್ನು ವಿವಾಹವಾದರು. ಇಬ್ಬರೂ ತಮ್ಮ ಮದುವೆಯ ಹಲವಾರು ವಿಡಿಯೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ದಂಪತಿಗಳು ಹಿಟ್ ಕೊರಿಯನ್ ಹಾಡು 'ಗಂಗ್ನಮ್ ಸ್ಟೈಲ್' ಗೆ ಡ್ಯಾನ್ಸ್ ಮಾಡುತ್ತಿರುವುದನ್ನು ಕಾಣಬಹುದು.

top videos
    First published: