• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • School Garden: ಕಿಚನ್ ಗಾರ್ಡನ್ ಶುರು ಮಾಡಿದ ಶಾಲೆಗಳು, ಮಧ್ಯಾಹ್ನದ ಊಟಕ್ಕೆ ತರಕಾರಿಗೆ ಕೊರತೆ ಇಲ್ಲ

School Garden: ಕಿಚನ್ ಗಾರ್ಡನ್ ಶುರು ಮಾಡಿದ ಶಾಲೆಗಳು, ಮಧ್ಯಾಹ್ನದ ಊಟಕ್ಕೆ ತರಕಾರಿಗೆ ಕೊರತೆ ಇಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೆಚ್ಚಿನ ಸಂಖ್ಯೆಯ ಶಾಲೆಗಳು ತರಕಾರಿಗಳನ್ನು ಬೆಳೆಸಲು ತಮ್ಮ ಶಾಲೆಯ ಆವರಣದಲ್ಲಿ ಚಿಕ್ಕ-ಪುಟ್ಟ ಉದ್ಯಾನಗಳನ್ನು ಸ್ಥಾಪಿಸುತ್ತಿವೆ, ನಂತರ ಮಧ್ಯಾಹ್ನದ ಊಟದ ಜೊತೆಗೆ ಬಡಿಸಬೇಕಾದ ಹೆಚ್ಚುವರಿ ತರಕಾರಿಯನ್ನು ಇಲ್ಲಿ ಬೆಳೆಸಲಾಗುತ್ತಿದೆ.

  • Trending Desk
  • 4-MIN READ
  • Last Updated :
  • Share this:

ಸಾಮಾನ್ಯವಾಗಿ ಮೊದಲೆಲ್ಲಾ ಶಾಲೆಗಳು (School) ಎಂದರೆ ಅದರ ಎದುರಿಗೆ ಅಥವಾ ಹಿಂಬದಿಯಲ್ಲಿ ಒಂದು ದೊಡ್ಡ ಆಟದ ಮೈದಾನ ಇರುತ್ತಿತ್ತು. ಆದರೆ ಈಗೆಲ್ಲಾ ನಗರೀಕರಣದಿಂದಾಗಿ ಆ ವಿಶಾಲವಾದ ಆಟದ (Game) ಮೈದಾನಗಳಲ್ಲಿಯೂ ಸಹ ಬೇರೆ ಬೇರೆ ರೀತಿಯ ಬಿಲ್ಡಿಂಗ್ ಗಳು ತಲೆ ಎತ್ತಿವೆ ಎಂತ ಹೇಳಬಹುದು. ಆದರೂ ಅಲ್ಪ ಸ್ವಲ್ಪ ಸ್ಥಳ ಶಾಲೆಯ ಅವರಣದಲ್ಲಿದ್ದರೆ, ಅದನ್ನು ಬೇರೆ ರೀತಿಯ ಉಪಯೋಗಕ್ಕೆ ಬಳಸಿಕೊಳ್ಳುವ ಈ ದಿನಗಳಲ್ಲಿ ಅಪರೂಪ ಎಂಬಂತೆ ಕೋಲ್ಕತ್ತಾ (Kolkata) ನಗರದಲ್ಲಿರುವ ಶಾಲೆಗಳು ತಮ್ಮ ಶಾಲೆಯ ಅವರಣದಲ್ಲಿದ್ದರುವ ಅಲ್ಪ ಸ್ವಲ್ಪ ಸ್ಥಳವನ್ನು ತುಂಬಾನೇ ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಶಾಲೆಯ ಅವರಣದಲ್ಲಿ ತರಕಾರಿಗಳನ್ನು ಬೆಳೆಸುತ್ತಿವೆ ಈ ಶಾಲೆಗಳು..


ಹೆಚ್ಚಿನ ಸಂಖ್ಯೆಯ ಶಾಲೆಗಳು ತರಕಾರಿಗಳನ್ನು ಬೆಳೆಸಲು ತಮ್ಮ ಶಾಲೆಯ ಆವರಣದಲ್ಲಿ ಚಿಕ್ಕ-ಪುಟ್ಟ ಉದ್ಯಾನಗಳನ್ನು ಸ್ಥಾಪಿಸುತ್ತಿವೆ, ನಂತರ ಮಧ್ಯಾಹ್ನದ ಊಟದ ಜೊತೆಗೆ ಬಡಿಸಬೇಕಾದ ಹೆಚ್ಚುವರಿ ತರಕಾರಿಯನ್ನು ಇಲ್ಲಿ ಬೆಳೆಸಲಾಗುತ್ತಿದೆ.


ತಮ್ಮ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಉದ್ಯಾನಗಳನ್ನು ಉತ್ಸಾಹದಿಂದ ನೋಡಿಕೊಳ್ಳುತ್ತಿದ್ದಾರೆ, ಈ ಚಟುವಟಿಕೆಯು ಮಕ್ಕಳಿಗೆ ಉತ್ತಮ ಕಲಿಕೆಯ ಪ್ರಕ್ರಿಯೆಯಾಗಿದೆ ಎಂದು ಅವರು ಹೇಳುತ್ತಾರೆ.


ಈ ರೀತಿಯ ಪ್ರವೃತ್ತಿಯು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಇದನ್ನು ಅರಿತ ರಾಜ್ಯ ಸರ್ಕಾರ ಇತ್ತೀಚೆಗೆ ಕಿಚನ್ ಗಾರ್ಡನ್ ಗಳನ್ನು ಸ್ಥಾಪಿಸಿದ ಶಾಲೆಗಳಿಗೆ 9.7 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ಬಂಗಾಳದಾದ್ಯಂತ ಒಟ್ಟು 19,535 ಸರ್ಕಾರಿ ಶಾಲೆಗಳು ತಮ್ಮ ಉದ್ಯಾನಗಳ ನಿರ್ವಹಣೆಗಾಗಿ ತಲಾ 5,000 ರೂಪಾಯಿಗಳನ್ನು ಪಡೆದಿವೆ.


ಚಳಿಗಾಲದಲ್ಲಿ ಈ ಶಾಲೆಗಳು ಯಾವೆಲ್ಲಾ ತರಕಾರಿಗಳನ್ನು ಬೆಳೆದಿದ್ದಾರೆ ನೋಡಿ..


ಈ ಚಳಿಗಾಲದಲ್ಲಿ ನಗರದ ಕನಿಷ್ಠ ಒಂದು ಡಜನ್ ಶಾಲೆಗಳಲ್ಲಿ ಎಲೆಕೋಸು, ಬೀನ್ಸ್, ಕ್ಯಾರೆಟ್, ಹೂಕೋಸು, ಟೊಮೆಟೊ ಮತ್ತು ಮೆಣಸಿನಕಾಯಿಗಳಂತಹ ಕಾಲೋಚಿತ ತರಕಾರಿಗಳ ಸಮೃದ್ಧ ಸುಗ್ಗಿ ಕಂಡು ಬಂದಿದೆ.


ಕೆಲವು ಶಾಲೆಗಳು ಸಾಮಾನ್ಯ ಸೊಪ್ಪುಗಳ ಜೊತೆಗೆ ಬ್ರೊಕೋಲಿಗಳು, ಬಣ್ಣದ ಹೂಕೋಸುಗಳು ಮತ್ತು ಅಣಬೆಗಳಂತಹ ವಿಲಕ್ಷಣ ಪ್ರಭೇದಗಳನ್ನು ಸಹ ಉತ್ಪಾದಿಸಿವೆ.


ಈ ಯೋಜನೆಯ ಬಗ್ಗೆ ಏನಂತಾರೆ ಶಾಲೆಯ ಮುಖ್ಯೋಪಾಧ್ಯಾಯರು?


ಸಂತೋಷ್ಪುರ ರಿಷಿ ಅರಬಿಂದೋ ಬಾಲಿಕಾ ವಿದ್ಯಾಪೀಠ ಅವರು ಕೋವಿಡ್ ಬರುವ ಮೊದಲು ಉದ್ಯಾನವನ್ನು ಸ್ಥಾಪಿಸಿದ್ದರು ಮತ್ತು ಲಾಕ್ಡೌನ್ ಸಮಯದಲ್ಲಿಯೂ ಅದನ್ನು ಹಾಗೆಯೇ ಚೆನ್ನಾಗಿಯೇ ನಿರ್ವಹಿಸಿದ್ದರು.


ತರಕಾರಿಗಳ ಜೊತೆಗೆ, ಅವರು ಈಗ ಅಣಬೆಗಳನ್ನು ಸಹ ಅಲ್ಲಿ ಬೆಳೆಯುತ್ತಿದ್ದಾರೆ. "ಸ್ಟಾಕ್ ಮುಗಿಯುವವರೆಗೂ ನಾವು ಅಣಬೆ ಮತ್ತು ಸೋಯಾಬೀನ್ ಪಲ್ಯವನ್ನು ತಯಾರಿಸುತ್ತೇವೆ ಮತ್ತು ವಾರಕ್ಕೆ ಎರಡು ಬಾರಿ ಈ ಖಾದ್ಯವನ್ನು ಬಡಿಸಲು ಪ್ರಯತ್ನಿಸುತ್ತೇವೆ.




ನಾವು ಸರ್ಕಾರ ನೀಡುವ ಮೆನುವನ್ನು ಅನುಸರಿಸುತ್ತೇವೆ ಆದರೆ ಅದರ ಜೊತೆಗೆ ವಿದ್ಯಾರ್ಥಿಗಳ ಮಧ್ಯಾಹ್ನದ ಊಟದಲ್ಲಿ ಹೆಚ್ಚಿನ ಪ್ರೋಟೀನ್ ಅಂಶವಿರುವ ಆಹಾರ ಪದಾರ್ಥಗಳನ್ನು ಸೇರಿಸಲು ಹೀಗೆ ಮಾಡಿದ್ದೇವೆ" ಎಂದು ಮುಖ್ಯೋಪಾಧ್ಯಾಯಿನಿ ಸರ್ಬಾನಿ ಸೇನ್ ಹೇಳಿದರು.


ಇದನ್ನೂ ಓದಿ: ಈ ಚಿತ್ರದಲ್ಲಿ ಒಂದು ಪ್ರಾಣಿ ಇದೆ! ಬುದ್ಧಿವಂತರಾಗಿದ್ರೆ ಹತ್ತೇ ಸೆಕೆಂಡ್‌ನಲ್ಲಿ ಕಂಡು ಹಿಡಿಯಿರಿ!


ಕಿಚನ್ ಗಾರ್ಡನ್ ವಿದ್ಯಾರ್ಥಿಗಳಿಗೆ ಸಸ್ಯಗಳನ್ನು ಹೇಗೆ ನೋಡಿಕೊಳ್ಳುವುದು ಅಂತ ಅರ್ಥ ಮಾಡಿಸುತ್ತಿವೆ..


ಚಿಲ್ಡ್ರನ್ಸ್ ವೆಲ್ಫೇರ್ ಅಸೋಸಿಯೇಷನ್ ಶಾಲೆಯು ಎಲೆಕೋಸು, ನೇರಳೆ ಮತ್ತು ಕಿತ್ತಳೆ ಹೂಕೋಸು, ಬ್ರೊಕೋಲಿ, ಕ್ಯಾರೆಟ್, ಬೀನ್ಸ್ ಮತ್ತು ಇತರ ಹಸಿರು ತರಕಾರಿಗಳನ್ನು ಈ ಚಳಿಗಾಲದಲ್ಲಿ ಉತ್ಪಾದಿಸಿದೆ.


"ನಾವು ಶಾಲೆಯ ಛಾವಣಿಯ ಮೇಲೆ ಕಾಲೋಚಿತ ಹಸಿರು ತರಕಾರಿಗಳನ್ನು ಬೆಳೆಯುತ್ತಿದ್ದೇವೆ ಮತ್ತು ನಮ್ಮ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ಈ ಉದ್ಯಾನವನ್ನು ನೋಡಿಕೊಳ್ಳುತ್ತಿದ್ದಾರೆ.


ನಾವು ಉತ್ಪಾದಿಸುವ ಎಲ್ಲವೂ ಇಡೀ ಶಾಲೆಗೆ ಸಾಕಾಗುವುದಿಲ್ಲ, ಆದ್ದರಿಂದ ನಾವು ನಮ್ಮ ಸ್ವಂತ ತರಕಾರಿಗಳಿಂದ ತಯಾರಿಸಿದ ವಿಶೇಷ ಖಾದ್ಯವನ್ನು ಪ್ರತಿದಿನ ಕನಿಷ್ಠ ಒಂದು ತರಗತಿಗೆ ಬಡಿಸಲು ಪ್ರಯತ್ನಿಸುತ್ತೇವೆ" ಎಂದು ಮುಖ್ಯೋಪಾಧ್ಯಾಯಿನಿ ಸರ್ಬರಿ ಸೇನ್ ಗುಪ್ತಾ ಹೇಳಿದರು.


ಬೆಹಲಾ ಬಾಲಕಿಯರ ಶಾಲೆಯು ತನ್ನ ಶಾಲೆಯ ಛಾವಣಿಯ ಮೇಲೆ ಕಿಚನ್ ಗಾರ್ಡನ್ ಅನ್ನು ಸ್ಥಾಪಿಸಿದೆ, ಆದರೆ ಅದು ಮಧ್ಯಾಹ್ನದ ಊಟದ ಅಡುಗೆಮನೆಯನ್ನು ಹೊಂದಿಲ್ಲ ಮತ್ತು ಸಮುದಾಯ ಶಾಲೆಯಿಂದ ಊಟವನ್ನು ಪಡೆಯುತ್ತದೆ.


"ಸಸ್ಯಗಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ನಮ್ಮ ವಿದ್ಯಾರ್ಥಿಗಳಿಗೆ ಕಲಿಸಲು ನಾವು ಇದನ್ನು ಮಾಡುತ್ತಿದ್ದೇವೆ. ನಾವು ಟೊಮೆಟೊ, ಬದನೆಕಾಯಿ, ಮೆಣಸಿನಕಾಯಿ ಮತ್ತು ಸೋರೆಕಾಯಿಗಳನ್ನು ಸಣ್ಣ ಪ್ರಮಾಣದಲ್ಲಿ ಉತ್ಪಾದಿಸಿದ್ದೇವೆ" ಎಂದು ಮುಖ್ಯೋಪಾಧ್ಯಾಯಿನಿ ಕಬೇರಿ ಚಟರ್ಜಿ ಹೇಳಿದರು.


ಮಧ್ಯಾಹ್ನದ ಊಟದಲ್ಲಿ ಚಿಕನ್ ಮತ್ತು ಹಣ್ಣುಗಳನ್ನು ಸೇರಿಸಲಾಗಿದೆಯಂತೆ..


ಜನವರಿ 2023 ರಿಂದ, ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಊಟದಲ್ಲಿ ಚಿಕನ್ ಮತ್ತು ಹಣ್ಣುಗಳನ್ನು ಸೇರಿಸಲಾಗಿದೆ ಮತ್ತು ಏಪ್ರಿಲ್ 2023 ರವರೆಗೆ ಮಕ್ಕಳಿಗೆ ಹೆಚ್ಚುವರಿ ಪೌಷ್ಠಿಕಾಂಶವನ್ನು ಒದಗಿಸಲು ಪಿಎಂ ಪೋಷಣ್ ಯೋಜನೆಯಡಿ ಸುಮಾರು 372 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ.


ಇದನ್ನೂ ಓದಿ: ನಿಮ್ಮ ಲೈಫ್​ಸ್ಟೈಲ್​ ಹೀಗಿದ್ರೆ ತ್ವಚೆ ಫಳಫಳ ಅಂತ ಹೊಳೆಯುತ್ತದೆ


ಬಂಗಾಳದ ಹಲವಾರು ಶಾಲೆಗಳಿಗೆ ಭೇಟಿ ನೀಡಿದ ಕೇಂದ್ರ ತಂಡವು ತಮ್ಮ ಸ್ವಂತ ಬಳಕೆಗಾಗಿ ಆಹಾರವನ್ನು ಉತ್ಪಾದಿಸಲು ಶಾಲೆಗಳಿಗೆ ಅಧಿಕಾರ ನೀಡುವ ಅಗತ್ಯವನ್ನು ಅಧಿಕಾರಿಗಳೊಂದಿಗೆ ಚರ್ಚಿಸಿತು.


"ಹೆಚ್ಚಿನ ಕೋಲ್ಕತಾ ಶಾಲೆಗಳು ಸಮುದಾಯ ಅಡುಗೆಮನೆಯಿಂದ ಮಧ್ಯಾಹ್ನದ ಊಟವನ್ನು ಪಡೆಯುತ್ತವೆ, ಆದರೆ ಕೆಲವು ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಸಂದೇಶವನ್ನು ಹರಡಲು ಕಿಚನ್ ಗಾರ್ಡನ್ ಗಳನ್ನು ಸ್ಥಾಪಿಸಿವೆ" ಎಂದು ರಾಜ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Published by:Sandhya M
First published: