Viral Photo: ಈ ವಿದ್ಯಾರ್ಥಿ ನೋಡಿ..ಹೇಗೆ ವಿಭಿನ್ನವಾಗಿ ಕಾಣಿಸಿಕೊಂಡು ವೈರಲ್ ಆಗಿದ್ದಾರೆ..!

ಮೂಲತಃ ಕೋಲ್ಕತ್ತಾದ ನಿವಾಸಿಯಾಗಿರುವ ಫ್ಯಾಷನ್ ಮಾರ್ಕೆಟಿಂಗ್ ಮತ್ತು ಸಂವಹನದ ವಿದ್ಯಾರ್ಥಿ ಪುಷ್ಪಕ್ ಸೇನ್ ಇತ್ತೀಚಿನ ಫೋಟೋಶೂಟ್‌ನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹೊಸದಾದ ಅಲೆಯೊಂದನ್ನು ಸೃಷ್ಟಿಸಿದ್ದಾರೆ. ಕೋಲ್ಕತ್ತಾ ಮೂಲದ ಸೇನ್ ಇತ್ತೀಚೆಗೆ ಪ್ರಮುಖ ಫ್ಯಾಷನ್ ಹಬ್‌ಗಳಲ್ಲಿ ಒಂದಾದ ಇಟಲಿಯ ಮಿಲಾನ್‌ನ ಬೀದಿಗಳಲ್ಲಿ ಒಂದು ವಿಭಿನ್ನವಾದ ಪೋಸ್ ನೀಡಿದ್ದಾರೆ.

ಪುಷ್ಪಕ್ ಸೇನ್

ಪುಷ್ಪಕ್ ಸೇನ್

 • Share this:
  ಇತ್ತೀಚೆಗೆ ಈ ಸಾಮಾಜಿಕ ಮಾಧ್ಯಮಗಳಲ್ಲಿ ತಾವು ವಿಭಿನ್ನವಾಗಿ ಫೋಟೋ ತೆಗೆಸಿಕೊಂಡು ನಂತರ ಅದನ್ನು ಪೋಸ್ಟ್ ಮಾಡಿ ಅನೇಕ ಜನರಿಂದ ಲೈಕ್ ಪಡೆಯುವುದು, ನಂತರ ವೈರಲ್ (Viral) ಆಗುವುದು ಎಲ್ಲವೂ ಸಾಮಾನ್ಯವಾಗಿದೆ. ಅದಕ್ಕಾಗಿ ಜನರು ಹಾಕುವುದು ಒಂದಲ್ಲ, ಎರಡಲ್ಲ, ಅನೇಕ ವಿಭಿನ್ನವಾದ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಈಗೇಕೆ ಇದೆಲ್ಲಾ ಹೇಳುತ್ತಿದ್ದೇವೆ ಎಂದು ನಿಮಗೆ ಅನ್ನಿಸಿರಬಹುದಲ್ಲವೇ..?ಏಕೆಂದರೆ ಇಲ್ಲಿಯೂ ಒಬ್ಬ ವಿದ್ಯಾರ್ಥಿ (Student) ಇದ್ದಾರೆ ನೋಡಿ, ಹೇಗೆ ವಿಭಿನ್ನವಾಗಿ ಫೋಟೋ ತೆಗೆಸಿಕೊಂಡು ನಂತರ ತಮ್ಮ ಸಾಮಾಜಿಕ ಮಾಧ್ಯಮಗಳ (Social Media) ಖಾತೆಗಳಲ್ಲಿರುವ  ತಮ್ಮ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ.

  ಮೂಲತಃ ಕೋಲ್ಕತ್ತಾದ (Kolkata) ನಿವಾಸಿಯಾಗಿರುವ ಫ್ಯಾಷನ್ ಮಾರ್ಕೆಟಿಂಗ್ ಮತ್ತು ಸಂವಹನದ ವಿದ್ಯಾರ್ಥಿ ಪುಷ್ಪಕ್ ಸೇನ್ (Pushpak Sen) ಇತ್ತೀಚಿನ ಫೋಟೋಶೂಟ್‌ನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹೊಸದಾದ ಅಲೆಯೊಂದನ್ನು ಸೃಷ್ಟಿಸಿದ್ದಾರೆ. ಕೋಲ್ಕತ್ತಾ ಮೂಲದ ಸೇನ್ ಇತ್ತೀಚೆಗೆ ಪ್ರಮುಖ ಫ್ಯಾಷನ್ ಹಬ್‌ಗಳಲ್ಲಿ ಒಂದಾದ ಇಟಲಿಯ ಮಿಲಾನ್‌ನ ಬೀದಿಗಳಲ್ಲಿ ಒಂದು ವಿಭಿನ್ನವಾದ ಪೋಸ್ ನೀಡಿದ್ದಾರೆ.

  ಇಷ್ಟೇ ಅಲ್ಲದೆ ಸೇನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈಗ ವೈರಲ್ ಆಗಿರುವ ಚಿತ್ರಗಳಲ್ಲಿ ಬ್ಲೇಜರ್‌ನೊಂದಿಗೆ ವಿನ್ಯಾಸಗೊಳಿಸಲಾದ ಕಪ್ಪು ಬಣ್ಣದ ಕೂದಲನ್ನು ಸಹ ಧರಿಸಿದ್ದರು. ಅವರು ಫೋಟೋದಲ್ಲಿ ಕೆಂಪು ಬಿಂದಿ ಮತ್ತು ಚಮತ್ಕಾರಿ ಸನ್ ಗ್ಲಾಸ್‌ಗಳನ್ನು ಧರಿಸಿದ್ದರು.

  ಇವರು ತಮ್ಮ ಫೋಟೋ ಹಂಚಿಕೊಳ್ಳುವುದರೊಂದಿಗೆ "ಒಬ್ಬ ವ್ಯಕ್ತಿಯಾಗಿ ಸೀರೆ ಉಟ್ಟಿರುವುದರಿಂದ ನನಗೇನೂ ಅನ್ನಿಸುವುದಿಲ್ಲ. ವಿಶ್ವದ ಪ್ರಮುಖ ಫ್ಯಾಷನ್ ಬೀದಿಗಳಲ್ಲಿ ಒಂದಾಗಿರುವ ಬೀದಿಯಲ್ಲಿ ಯಾರು ನಡೆಯುತ್ತಿದ್ದಾರೆ ಎಂದು ಊಹಿಸಿ?" ಎಂದು ಸೇನ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

  Read Also: Puneeth Rajkumarರ ಕೊನೆಯ ಕ್ಷಣಗಳ ಬಗ್ಗೆ ವೈದ್ಯ ರಮಣ ರಾವ್​ ಹೇಳಿದ್ದು ಹೀಗೆ: ಆಗಿದ್ದಾದರೂ ಏನು ಗೊತ್ತಾ..?

  ಈ ಫೋಟೋ ಅನೇಕ ಪ್ರತಿಕ್ರಿಯೆಗಳನ್ನು ಮತ್ತು ನೆಟ್ಟಿಗರಿಂದ ಟನ್‌ಗಟ್ಟಲೆ ಮೆಚ್ಚುಗೆಯ ಕಾಮೆಂಟ್‌ಗಳನ್ನು ಗಳಿಸಿದೆ. ಕೆಂಪು ಬಿಂದಿ ಒಟ್ಟಾರೆ ಸೌಂದರ್ಯವನ್ನು ಹೇಗೆ ಹೆಚ್ಚಿಸಿದೆ ಎಂಬುದರ ಬಗ್ಗೆ ಅನೇಕರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

  ನ್ಯೂಸ್ 18 ಅವರೊಂದಿಗೆ ನಡೆದ ಸಂಭಾಷಣೆಯಲ್ಲಿ ಸೇನ್ ಮಾತನಾಡುತ್ತಾ "ನಾನು ನನ್ನ ಸ್ನಾತಕೋತ್ತರ ಪದವಿಗಾಗಿ ಇಟಲಿಗೆ ಬರಲು ನಿರ್ಧರಿಸಿದಾಗ, ಇಟಲಿ ತನ್ನ ಫ್ಯಾಷನ್‌ಗೆ ಹೆಸರುವಾಸಿಯಾಗಿರುವುದರಿಂದ, ಜನರು ಇಲ್ಲಿ ಯಾವ ರೀತಿಯ ಬಟ್ಟೆಗಳನ್ನು ಹಾಕಿಕೊಳ್ಳುತ್ತಾರೆ ಎಂದು ನಾನು ಗಮನಿಸಿದೆ. ಇಲ್ಲಿ ಬಹಳಷ್ಟು ಭಾರತೀಯರಿದ್ದರೂ, ಯಾರು ಸೀರೆ ಉಡದೇ ಇರುವುದು ನನಗೆ ತುಂಬಾನೇ ಅಸಮಾಧಾನಗೊಳಿಸಿತು ಮತ್ತು ನಾನು ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಏಕೆ ಪ್ರತಿನಿಧಿಸಬಾರದು ಎಂದು ಯೋಚಿಸುವಂತೆ ಮಾಡಿತು. ನಂತರ ನಾನು ಮಿಲನ್‌ನ ಬೀದಿಗಳಲ್ಲಿ ನಮ್ಮ ಸಂಸ್ಕೃತಿಯನ್ನು ಹೆಮ್ಮೆಯಿಂದ ಪ್ರದರ್ಶಿಸಲು ನನಗೆ ಸ್ಫೂರ್ತಿ ಆಯಿತು" ಎಂದು ಹೇಳಿದರು.


  View this post on Instagram


  A post shared by Pushpak Sen (@thebongmunda)


  Read Also: Puneeth Rajkumar: ಅಪ್ಪು ಬರ್ತಡೇ 17ನೇ ತಾರೀಖಿಗೆ, ಈ ದಿನಾಂಕದ ಬಗ್ಗೆ ಆ ಜನರಿಗೆ ಎಲ್ಲಿಲ್ಲದ ಭಯ! 17ಕ್ಕೂ ಸಾವಿಗೂ ನಂಟು ಇದ್ಯಾ?

  ಇಟಲಿಯ ಜನರು ಮತ್ತು ಅವರ ಸಹಪಾಠಿಗಳು ತಮ್ಮ ಬಟ್ಟೆಯ ಬಗ್ಗೆ ಹೇಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ ಎಂಬುದನ್ನು ಸೇನ್ ಹಂಚಿಕೊಳ್ಳುತ್ತಾ "ನಾನು ಕಾಲೇಜಿಗೆ ಹೋದಾಗಲೆಲ್ಲಾ ಸೀರೆಯನ್ನು ಉಟ್ಟಿಕೊಂಡು ಹೋಗುತ್ತಿದ್ದೆ. ಕೆಲವೊಮ್ಮೆ ನನಗೆ ಸಮಯ ಸಿಗದಿದ್ದಾಗ, ನಾನು ಏಕೆ ಸೀರೆ ಹಾಕಿಕೊಂಡು ಬಂದಿಲ್ಲ ಎಂದು ಜನರು ನನ್ನನ್ನು ಕೇಳುತ್ತಾರೆ. ಇಟಲಿಯ ಜನರು ನನ್ನ ಸಂಸ್ಕೃತಿ ಪ್ರೀತಿಸಲು ಮತ್ತು ಸ್ವೀಕರಿಸಲು ಪ್ರಾರಂಭಿಸಿದ್ದು, ಕೋಲ್ಕತ್ತಾ ಮತ್ತು ಮಿಲಾನ್‌ನಲ್ಲಿ ಫ್ಯಾಷನ್ ಮನೋಭಾವವು ಪರಸ್ಪರ ಸಮಾನವಾಗಿದೆ" ಎಂದು ಅವರು ಹೇಳಿದರು.

  ಸೇನ್ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಉಡುಪಿನ ಬಗ್ಗೆ ಅನೇಕ ಬಾರಿ ಹಾಸ್ಯಗಳಿಗೆ ಒಳಗಾಗಿದ್ದರೂ, ಅವರು ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. "ನಾನು ಆನ್‌ಲೈನ್ ನಲ್ಲಿ ಎಲ್ಲವನ್ನೂ ಇಷ್ಟಪಡಬೇಕಾಗಿಲ್ಲ. ಸಾಮಾಜಿಕ ಮಾಧ್ಯಮವು ನನ್ನನ್ನು ವ್ಯಾಖ್ಯಾನಿಸುವುದಿಲ್ಲ. ನಾನು ಯಾರಿಗೂ ನೋವುಂಟು ಮಾಡದೆ ನಮ್ಮ ಜೀವನವನ್ನು ನಮಗೆ ಇಷ್ಟವಾದ ರೀತಿಯಲ್ಲಿ ಬದುಕುತ್ತೇವೆ" ಎಂದು ಹೇಳಿದ್ದಾರೆ.
  First published: