Kali Temple: ಈ ದೇವಸ್ಥಾನದಲ್ಲಿ ಪ್ರಸಾದದ ರೂಪದಲ್ಲಿ ಸಿಗುತ್ತೆ ನೂಡಲ್ಸ್, ಫ್ರೈಡ್ ರೈಸ್ ನಂತರ ಚೈನಿಸ್ ಫುಡ್​

ಇದಲ್ಲದೇ tourmyindia.com ಹೆಸರಿನ ವೆಬ್‌ ಸೈಟ್‌ ನಲ್ಲಿ ಈ ಕಾಳಿ ದೇವಸ್ಥಾನದ ಬಗ್ಗೆ 60 ವರ್ಷಗಳಷ್ಟು ಹಳೆಯದು ಮತ್ತು ಹಿಂದೂ-ಚೀನೀ ಸಂಸ್ಕೃತಿಯ ಸಮ್ಮಿಲನಕ್ಕೆ ಸಾಕ್ಷಿಯಾಗಿದೆ ಎಂಬ ಮಾಹಿತಿಯನ್ನು ಉಲ್ಲೇಖಿಸಲಾಗಿದೆ.

ಕಾಳಿ ಮಂದಿರ

ಕಾಳಿ ಮಂದಿರ

  • Share this:
Chinese Kali Mandir in Kolkata: ಯಾವುದೇ ಹಬ್ಬ ಇರಲಿ ಅಥವಾ ಇರದಿರಲಿ ದೇವರಿಗೆ ನೈವೇದ್ಯ (Naivedya) ಅಂದ್ರೆ ಅದನ್ನ ಅತ್ಯಂತ ಭಕ್ತಿ ಭಾವದಿಂದ ಶುಚಿಯಾದ ಸ್ಥಳದಲ್ಲಿ ಸಿದ್ಧಪಡಿಸಲಾಗುತ್ತದೆ. ಇನ್ನೂ ನೈವೇದ್ಯ ಸಿದ್ಧಪಡಿಸುವವರು ಸಹ ಸ್ನಾನ ಮಾಡಿ, ಶುಭ್ರವಾದ ಬಟ್ಟೆ ಧರಿಸಿ ಪ್ರಸಾದ (Prasada) ತಯಾರಿಸುತ್ತಾರೆ. ಸಾಮಾನ್ಯವಾಗಿ ನೈವೇದ್ಯ ಅಂದ್ರೆ  ಅಲ್ಲಿ ಭಾರತೀಯ ಸಂಪ್ರದಾಯದಂತೆ ಸಿಹಿ ತಿನಿಸು ಇರಲೇಕು. ಹೋಳಿಗೆ, ಕಡಬು, ಪಾಯಸ, ಹಣ್ಣುಗಳು ಸೇರಿದಂತೆ ಹೀಗೆ ಅನೇಕ ಬಗೆಯ ತಿನಿಸುಗಳನ್ನು ಸಿದ್ಧಪಡಿಸಲಾಗುತ್ತದೆ. ಸಿಹಿ ತಿನಿಸುಗಳು (Sweet) ಆಯಾ ಭಾಗಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ. ಆದ್ರೆ ಪಶ್ಚಿಮ ಬಂಗಾಳದಲ್ಲಿರುವ (West Bangal) ಈ ದೇವಸ್ಥಾನದಲ್ಲಿ (Temple) ದೇವರಿಗೆ ಚೈನಿಸ್ ಫುಡ್ (Chinese Food) ನೈವೇದ್ಯವಾಗಿ ನೀಡಲಾಗುತ್ತದೆ.

ದೇವಸ್ಥಾನದಲ್ಲಿ ಚೈನೀಸ್ ಫುಡ್ ನ್ನ ನೈವೇದ್ಯವಾಗಿ (Kali Mandir Noodles Bhog) ಇರಿಸೋದನ್ನು ನಮ್ಮ ರಾಜ್ಯದಲ್ಲಿ ನೋಡಿರಿಲ್ಲ. ಪಶ್ಚಿಮ ಬಂಗಾಳದಲ್ಲಿರುವ ಕಾಳಿ ದೇವಾಲಯದಲ್ಲಿ ಈ ರೀತಿಯ ಆಹಾರವನ್ನ ದೇವಿಗೆ ಸಮರ್ಪಿಸಲಾಗುತ್ತದೆ. ಕಾಳಿ ತಾಯಿಗೆ ವಿವಿಧ ಬಗೆಯ ಚೈನಿಸ್ ಫುಡ್ ಗಳನ್ನು ಭಕ್ತರು ನೀಡುತ್ತಾರೆ.

ಕಾಳಿ ಮಾತೆ ಚೈನೀಸ್ ಫುಡ್ ನೀಡೋದು ಯಾಕೆ?

ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ತಂಗ್ರಾ ಎಂಬ ಹೆಸರಿನ ಸ್ಥಳವಿದೆ. ಇದನ್ನು ಚೀನಾ ಟೌನ್ (China Town in Kolkata) ಎಂದೂ ಕರೆಯುತ್ತಾರೆ. ಇಲ್ಲಿ 1930ರ ವೇಳೆಯಲ್ಲಿ ಚೀನಾದ ಅಂತರ್ಯುದ್ಧದ ಸಮಯದಲ್ಲಿ ಗಡಿಪಾರು ಆಗಿದ್ದ ಜನರು ಇಲ್ಲಿಗೆ ಬಂದು ವಾಸವಾಗಿದ್ದಾರೆ. ಇಲ್ಲಿ ಆಶ್ರಯ ಪಡೆದುಕೊಂಡ ಜನರು, ಇಂಡೋ-ಚೈನಿಸ್ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡಿದ್ದರು. ಈ ಸ್ಥಳದಲ್ಲಿಯೇ ಕಾಳಿ ಮಾತೆಯ ದೇವಸ್ಥಾನವಿದೆ.

ಇದನ್ನೂ ಓದಿ:  Coffee Painting: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಈ ಕಾಫಿ! ಏನಿದರ ಅಸಲಿ ಕಥೆ?

ಈ ದೇವಸ್ಥಾನಕ್ಕೆ ಬರುವ ಚೀನಾ ಮೂಲದ ಭಕ್ತರು ಆರಂಭದಲ್ಲಿ  ತಮ್ಮ ಶೈಲಿಯ ಆಹಾರಗಳನ್ನೇ ಸಿದ್ಧಪಡಿಸಿಕೊಂಡು ನೈವೇದ್ಯವಾಗಿ ಇರಿಸುತ್ತಿದ್ದರು. ಇದೀಗ ಅದೇ ಸಂಪ್ರದಾಯ ಮುಂದುವರಿದಿದ್ದು, ಭಕ್ತರು ನೂಡಲ್ಸ್, ಚಾಪ್ಸ್, ಫ್ರೈಡ್ ರೈಸ್ ನಂತಹ ಆಹಾರಗಳನ್ನು ತರುತ್ತಾರೆ. ಇದನ್ನೇ ಇಲ್ಲಿ ಪ್ರಸಾದವಾಗಿ ಭಕ್ತರಿಗೆ ವಿತರಿಸಲಾಗುತ್ತದೆ.

ದೇವಸ್ಥಾನದ ಫೋಟೋಗಳು ವೈರಲ್

ಈ ದೇವಾಲಯದ ಬಗ್ಗೆ ಮಾಹಿತಿಯನ್ನು 201 ರಲ್ಲಿಯೇ ವರ್ಲ್ಡ್ ಆಫ್ ಕೋಲ್ಕತ್ತಾ ಹೆಸರಿನ ಫೇಸ್‌ಬುಕ್ ಪುಟದಿಂದ ನೀಡಲಾಗಿದೆ. ಪ್ರವಾಸಿಗರು ಮತ್ತು ಭಕ್ತರು ಭೇಟಿ ಮಾಡಲೇಬೇಕಾದ ಸ್ಥಳ ಎಂದು ಫೇಸ್ ಬುಕ್ ನಲ್ಲಿ ವಿವರಿಸಲಾಗಿದೆ.

ಇದಲ್ಲದೇ tourmyindia.com ಹೆಸರಿನ ವೆಬ್‌ ಸೈಟ್‌ ನಲ್ಲಿ ಈ ಕಾಳಿ ದೇವಸ್ಥಾನದ ಬಗ್ಗೆ 60 ವರ್ಷಗಳಷ್ಟು ಹಳೆಯದು ಮತ್ತು ಹಿಂದೂ-ಚೀನೀ ಸಂಸ್ಕೃತಿಯ ಸಮ್ಮಿಲನಕ್ಕೆ ಸಾಕ್ಷಿಯಾಗಿದೆ ಎಂಬ ಮಾಹಿತಿಯನ್ನು ಉಲ್ಲೇಖಿಸಲಾಗಿದೆ.

ದೇವಾಲಯದ ಬಗ್ಗೆ ಹಲವು ಕತೆಗಳು

ಇಲ್ಲಿಗೆ ಬಂದ ಚೀನಿಯರೊಬ್ಬರ ಮಗುವಿನ ಆರೋಗ್ಯ ಹದಗೆಟ್ಟಿದ್ದು, ಈ ಸ್ಥಳದಲ್ಲಿದ್ದ ಮರದ ಕೆಳಗೆ ಮಲಗಿಸಿದ ನಂತರ ಆ ಮಗು ಪವಾಡಸದೃಶವಾಗಿ ಗುಣಮುಖವಾಯ್ತು ಎಂದು ಕೆಲವರು ಹೇಳುತ್ತಾರೆ. ಅಂದಿನಿಂದ ಇಲ್ಲಿ ಕಾಳಿ ಮಾತೆಯ ದೇವಾಲಯವನ್ನು ನಿರ್ಮಿಸಲಾಗಿದೆ. ಈಗ ದೇವಾಲಯದ ನಿರ್ಮಾಣಕ್ಕೆ ಕಾರಣ ಏನೇ ಇರಲಿ, ಅದರ ವಿಶಿಷ್ಟ ಸಂಸ್ಕೃತಿಯಿಂದಾಗಿ ಇದು ಪ್ರಸಿದ್ಧವಾಗಿದೆ.

ಇದನ್ನೂ ಓದಿ:  Viral News: ಕಪ್ಪು ಕುದುರೆ ಅಂತ ಲಕ್ಷ ಲಕ್ಷ ಕೊಟ್ಟು ಖರೀದಿಸಿದ್ರು, ಮನೆಗೆ ಬರೋ ಅಷ್ಟ್ರಲ್ಲಿ ಕಲರ್​ ಚೇಂಜ್​!

ಇನ್ನೂ ಇದೇ ರೀತಿ ಈ ಕಾಳಿ ದೇವಾಲಯದ ಬಗ್ಗೆ ಇಲ್ಲಿನ ಸ್ಥಳೀಯರು ಹಲವು ಕತೆಗಳನ್ನು ಹೇಳುತ್ತಿರುತ್ತಾರೆ. ಚೈನಿಸ್ ದೇವಾಲಯ ಅಂತಾನೇ ಇಲ್ಲಿನ ಜನರು ಗುರುತಿಸುತ್ತಾರೆ. ನೀವು ಏನಾದ್ರೂ ಕೋಲ್ಕತ್ತಾ ನಗರಕ್ಕೆ ತೆರಳುತ್ತಿದ್ರೆ ಚೀನಾ ಟೌನ್ ನಲ್ಲಿರುವ ಕಾಳಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆಯಿರಿ.
Published by:Mahmadrafik K
First published: