ಕೊಹ್ಲಿ, ಮೆಕಲಮ್​ ಮತ್ತು ಚಹಲ್​ ಡ್ಯಾನ್ಸ್​ ನೋಡಿ!

news18
Updated:April 4, 2018, 1:30 PM IST
ಕೊಹ್ಲಿ, ಮೆಕಲಮ್​ ಮತ್ತು ಚಹಲ್​ ಡ್ಯಾನ್ಸ್​ ನೋಡಿ!
news18
Updated: April 4, 2018, 1:30 PM IST
ಮುಂಬೈ: ಪ್ರಸಕ್ತ ಸಾಲಿನ ಇಂಡಿಯನ್‌ ಪ್ರೀಮಿಯರ್‌‌ ಲೀಗ್‌ ಟೂರ್ನಿ ಆರಂಭಗೊಳ್ಳಲು ಕೆಲ ದಿನ ಮಾತ್ರ ಬಾಕಿ ಉಳಿದಿದ್ದು, ಎಲ್ಲ ತಂಡಗಳು ಈಗಾಗಲೇ ಭರ್ಜರಿ ತಯಾರಿಯಲ್ಲಿ ಮಗ್ನವಾದರೆ ಆರ್​ಸಿಬಿಯ ನಾಯಕ ವಿರಾಟ್​ ಕೊಹ್ಲಿ, ಯಜುವೇಂದ್ರ ಚಹಲ್​ ಹಾಗೂ ಬ್ರಾಂಡೆನ್​ ಮೆಕ ಲಮ್​ ಸೇರಿ ಡ್ಯಾನ್ಸ್​ ತಾಲೀಮು ಮಾಡುವಲ್ಲಿ ಬ್ಯುಸಿ ಆಗಿದ್ದಾರೆ.

ಬೆಂಗಳೂರು ತಂಡದ ಬೌಲರ್​ ಚಹಲ್​ ಮಂಗಳವಾರದಂದು ತಮ್ಮ ಟ್ವಿಟರ್​ ಖಾತೆಯಲ್ಲಿ ವೀಡಿಯೋ ಪೋಸ್ಟ್​ ಮಾಡಿದ್ದು, ಈ ವೀಡಿಯೋದಲ್ಲಿ ನಾಯಕ ಕೊಹ್ಲಿ, ಮೆಕ್ಕಲಮ್​ ಮತ್ತು ಚಹಲ್​ ಡ್ಯಾನ್ಸ್​ ಪ್ರಾಕ್ಟಿಸ್​ ಮಾಡುವ ದೃಶ್ಯವಿದೆ. 'ಐಪಿಎಲ್​ಗೆ ಲೆಜೆಂಡ್​ಗಳೊಂದಿಗೆ ಪೂರ್ವ ಸಿದ್ಧತೆ' ಎಂಬ ಶೀರ್ಷಿಕೆಯಡಿ ಈ ವೀಡಿಯೋವನ್ನು ಹರಿಬಿಟ್ಟ ಚಹಲ್​ ಈ ಸಲ ಕಪ್​ ನಮ್ದೆ ಎಂಬ ಟ್ರೆಂಡಿಂಗ್​ ಕೀವರ್ಡ್​ ಕೂಡಾ ಬಳಸಿದ್ದಾರೆ.


Loading...

ಈ ವರೆಗೆ ನಡೆದ 10 ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆರ್​ಸಿಬಿ ತಂಡ ಇಲ್ಲಿಯವರೆಗೆ ಯಾವುದೇ ಸೀಸನ್‌‌ನಲ್ಲಿ ಟ್ರೋಫಿಗೆ ಮಾತ್ರ ಮುತ್ತಿಕ್ಕಿಲ್ಲ. ಆದರೆ ವಿಶ್ವದೆಲ್ಲೆಡೆ ತಮ್ಮದೇ ಆದ ಗರಿಷ್ಠ ಅಭಿಮಾನಿಗಳನ್ನು ಸಂಪಾಧಿಸಿಕೊಂಡಿದೆ. ಈ ಬಾರಿಯೂ ಸವಾಲುಗಳಿಗೆ ಸಜ್ಜುಗೊಂಡಿರುವ ಕೊಹ್ಲಿ ನೇತೃತ್ವದ ಪಡೆ ಕಪ್​ ಪಡೆದುಕೊಳ್ಳಲು ಸಕಲ ತಯಾರಿ ನಡೆಸಿದೆ.

ಆರ್​ಸಿಬಿ ತಂಡ: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ಬ್ರೆಂಡನ್ ಮೆಕಲಮ್, ಕ್ವಿಂಟನ್ ಡಿ ಕೊಕ್, ಪಾರ್ಥಿವ್ ಪಟೇಲ್, ಸರ್ಫರಾಜ್ ಖಾನ್, ಮನ್​ದೀಪ್ ಸಿಂಗ್, ಮನನ್ ವೊಹ್ರಾ, ಪವನ್ ದೇಶ್​ಪಾಂಡೆ, ಕೋರೆ ಆಂಡರ್ಸನ್, ಕ್ರಿಸ್ ವೋಕ್ಸ್, ಕಾಲಿನ್ ಡೆ ಗ್ರಾಂಡ್‌ಹೋಮ್, ಮೊಯಿನ್ ಅಲಿ, ಅನಿರುದ್​ ಜೋಶಿ , ಪವನ್ ನೇಗಿ, ಉಮೇಶ್ ಯಾದವ್, ಟಿಮ್ ಸೌಥಿ, ನವದೀಪ್ ಸೈನಿ, ಅನಿಕೆತ್ ಚೌಧರಿ, ಮೊಹಮ್ಮದ್ ಸಿರಾಜ್, ಕುಲ್‌ವಂತ್ ಕೆಜ್ರೋಲಿಯಾ ಯಜುವೇಂದ್ರ ಚಹಲ್, ವಾಷಿಂಗ್ಟನ್ ಸುಂದರ್, ಮುರುಗನ್ ಅಶ್ವಿನ್
First published:April 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ