Cheque: ಚೆಕ್ ಬರೀತಿದ್ದೀರಾ? RBI ಮಾಡಿರುವ ಈ ಹೊಸಾ ರೂಲ್ಸ್ ಬಗ್ಗೆ ತಪ್ಪದೇ ತಿಳಿದುಕೊಳ್ಳಿ, ಮಿಸ್ ಆದ್ರೆ ಹಣ ಕಳ್ಕೊಳ್ತೀರಾ ಜೋಕೆ!

Cheque New Rules: ಆಗಸ್ಟ್ 1ರಿಂದಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚೆಕ್ ವಿಚಾರದಲ್ಲಿ ಒಂದಷ್ಟು ಹೊಸಾ ನಿಯಮಗಳನ್ನು ಜಾರಿ ಮಾಡಿದೆ. ಹೆಚ್ಚು ಚೆಕ್​ಗಳನ್ನು ದಿನವಿಡೀ ಬೇಗನೇ ಕ್ಲಿಯರ್ ಆಗುವ ವ್ಯವಸ್ಥೆಯೊಂದು ಜಾರಿಯಾಗಿದ್ದು ಆ ಹಿನ್ನೆಲೆಯಲ್ಲಿ ಕೆಲವು ನಿಯಮಗಳು ಬದಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆರ್​ಬಿಐ (RBI) ನಾನಾ ಕಾರಣಗಳಿಗೆ ಆಗಾಗ ನಿಯಮಗಳನ್ನು ಬದಲಿಸುತ್ತಲೇ ಇರುತ್ತದೆ. ಅನೇಕ ಬಾರಿ ಅದು ಬ್ಯಾಂಕ್ ವಹಿವಾಟಿನ ಭದ್ರತೆ ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಮಾಡಿರುವಂಥದ್ದಾಗಿರುತ್ತದೆ. ನೀವು ಚೆಕ್ (Cheque) ಮೂಲಕ ಮತ್ತೊಬ್ಬರಿಗೆ ಹಣ ನೀಡುವ (Money Transfer) ಆಲೋಚನೆಯಲ್ಲಿದ್ದರೆ ಬಹಳ ಎಚ್ಚರಿಕೆಯಿಂದ ಜಾಗರೂಕರಾಗಿ ಚೆಕ್ ಬರೆಯಿರಿ. ಆಗಸ್ಟ್ 1ರಿಂದಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚೆಕ್ ವಿಚಾರದಲ್ಲಿ ಒಂದಷ್ಟು ಹೊಸಾ ನಿಯಮಗಳನ್ನು ಜಾರಿ ಮಾಡಿದೆ. ಹೆಚ್ಚು ಚೆಕ್​ಗಳನ್ನು ದಿನವಿಡೀ ಬೇಗನೇ ಕ್ಲಿಯರ್ ಆಗುವ ವ್ಯವಸ್ಥೆಯೊಂದು ಜಾರಿಯಾಗಿದ್ದು ಆ ಹಿನ್ನೆಲೆಯಲ್ಲಿ ಕೆಲವು ನಿಯಮಗಳು ಬದಲಾಗಿದೆ. ಆಟೋಮ್ಯಾಟಿಕ್ ಆಗಿ ದಿನದ 24 ಗಂಟೆಗಳೂ ಚೆಕ್​ಗಳ ಕ್ಲಿಯರೆನ್ಸ್ ಆಗುವಂತೆ ಮಾಡಲು ಈ ನೂತನ ವ್ಯವಸ್ಥೆ ಸಹಾಯ ಮಾಡಲಿದೆ. ಹಾಗಾಗಿ ನೀವೇನಾದರೂ ಚೆಕ್ ಬರೆಯುವಾಗ ಸ್ವಲ್ಪ ಯಡವಟ್ಟು ಮಾಡಿದ್ದರೂ ಸಮಸ್ಯೆಯಾಗುತ್ತದೆ. ಬ್ಯಾಂಕಿನ ರಜಾ ದಿನಗಳಲ್ಲೂ ಚೆಕ್​ಗಳು ತಾನಾಗೇ ಕ್ಲಿಯರ್ ಆಗುವ ನೂತನ ವ್ಯವಸ್ಥೆ ಇದಾಗಿದೆ.

ಮೊದಲಿಗೆ ನೀವು ಬರೆಯುವ ಚೆಕ್​ನಲ್ಲಿ ನಮೂದಿಸಿರುವಷ್ಟು ಹಣ ನಿಮ್ಮ ಬ್ಯಾಂಕ್ ಅಕೌಂಟ್​ನಲ್ಲಿ ಇದೆ ಎನ್ನುವುದನ್ನು ದೃಢಪಡಿಸಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ಚೆಕ್ ಬೌನ್ಸ್ ಆಗಿಬಿಡುವ ಅಪಾಯವಿದೆ. ನಿಮ್ಮ ಚೆಕ್ ಬೌನ್ಸ್ ಆದರೆ ನೀವು ಅದಕ್ಕೆ ದಂಡ ತೆರಬೇಕಾಗುತ್ತದೆ. ಸಂಬಳ, ಬಡ್ಡಿ ಮುಂತಾದ ಒಮ್ಮೆಗೇ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆಯಾಗುವ ಸಂಬಂಧಿತ ಚೆಕ್ ಗಳ ವಿಚಾರದಲ್ಲಿ ನೀವು ಇನ್ನೂ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ವಿದ್ಯುತ್, ಗ್ಯಾಸ್, ಟೆಲಿಫೋನ್, ಲೋನ್ ಕಂತು, ವಿಮೆ ಪ್ರೀಮಿಯಂ ಮುಂತಾದವುಗಳಿಗೂ ಇದು ಅನ್ವಯವಾಗುತ್ತದೆ. ಹೆಚ್ಚು ಹಣವನ್ನು ನಮೂದಿಸಿರುವ ಚೆಕ್​ಗಳಿಗೆ ಈ ಹೊಸಾ ನಿಯಮಗಳು ಅನ್ವಯವಾಗುತ್ತದೆ. ಅಂದರೆ 50 ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಮುಖಬೆಲೆಯ ಚೆಕ್​ಗಲನ್ನು ಬರೆಯುವಾಗ ಈ ಬಗ್ಗೆ ಗಮನಹರಿಸಬೇಖಿದೆ. ಇದರನ್ವಯ ಚೆಕ್ ಸಂಖ್ಯೆ, ಚೆಕ್ ಮೇಲಿನ ಹೆಸರು, ಹಣ ಮುಂತಾದ ಅಗತ್ಯ ವಿವರಗಳನ್ನು ಒಂದಕ್ಕೆರಡು ಬಾರಿ ಪರೀಕ್ಷಿಸುವುದು ಅತ್ಯಂತ ಅವಶ್ಯಕ ಎಂದು ಆರ್​ಬಿಐ ತಿಳಿಸಿದೆ.

ಇದನ್ನೂ ಓದಿ: Trip to Mars: ಭೂಮಿ ಬೇಜಾರಾಯ್ತಾ? ಮಂಗಳ ಗ್ರಹದಲ್ಲಿ 1 ವರ್ಷ ಇರೋ ಆಸಕ್ತಿ ಇರುವವರ ಅರ್ಜಿ ಸ್ವೀಕರಿಸ್ತಿದೆ NASA!

ಒಂದು ವೇಳೆ ನೀವು ಸಣ್ಣ ತಪ್ಪು ಮಾಡಿದ್ದರೂ ಬ್ಯಾಂಕ್​ ಗೆ ತೆರಳಿ ಅದನ್ನು ಸರಿಪಡಿಸುವಷ್ಟು ಕಾಲಾವಕಾಶ ಸಿಗದೇ ಹೋಗಬಹುದು. ಆಟೊಮ್ಯಾಟಿಕ್ ಆಗಿ ಚೆಕ್​ಗಳು ಕ್ಲಿಯರ್ ಆಗೋದ್ರಿಂದ ನೀವು ಬ್ಯಾಂಕ್ ತಲುಪುವ ಮುನ್ನವೇ ಚೆಕ್ ಟ್ರಾನ್ಸಫರ್ ಮುಗಿದು ಹೋಗುವ ಅಪಾಯ ಇರುತ್ತದೆ. ಆಗ ನಿಮ್ಮ ಸಣ್ಣ ತಪ್ಪಿನಿಂದ ಅಷ್ಟೂ ಹಣವನ್ನು ಕಳೆದುಕೊಳ್ಳುವ ಅಪಾಯ ಇರುತ್ತದೆ ಎಂದು ಆರ್​ಬಿಐ ಎಚ್ಚರಿಸಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: