Is Ketchup Healthy: ನಿಮ್ಮ ದೇಹಕ್ಕೆ ಕೆಚಪ್ ಮಾಡುತ್ತಿರುವ 7 ಹಾನಿಗಳ ಬಗ್ಗೆ ತಿಳಿದರೆ ಗಾಬರಿ ಬೀಳ್ತಿರ..!

ketchup is not good for health: ಟೆಮೆಟೋ ಕೆಚಪ್​​​ ನಲ್ಲಿ ಅನೇಕ ಹಾನಿಕಾರಕ ಅಂಶಗಳಿದ್ದು ಅತಿಯಾದ ಸೇವನೆಯಿಂದ ಕ್ಯಾನ್ಸರ್​​ ಸಹ ಆಗಬಹುದು ಎನ್ನುತ್ತಾರೆ ತಜ್ಞರು.

ಕೆಚಪ್​​​

ಕೆಚಪ್​​​

 • Share this:
  ಕೆಲವರಿಗೆ ಕೆಚಪ್ ಅಂದರೆ ಪಂಚಪ್ರಾಣ. ಎಷ್ಟೆಂದರೆ ಮ್ಯಾಗಿಯಿಂದ ಹಿಡಿದು ಪಿಜ್ಜಾದವರೆಗೂ.. ಪರಾಟಾ, ಚಪಾತಿ, ದೋಸೆ ಹೀಗೆ ಪ್ರತಿಯೊಂದೂ ಪದಾರ್ಥಕ್ಕೂ ಕೆಚಪ್ ಹಾಕಿಕೊಳ್ಳುತ್ತಾರೆ. ಆದರೆ ಯಥೇಚ್ಛ ಸೇವನೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎನ್ನುತ್ತಾರೆ ಪೌಷ್ಟಿಕತಜ್ಞರು. ಕೇವಲ ಮಕ್ಕಳಿಗೆ ಮಾತ್ರವಲ್ಲ ಹದಿಹರೆಯದ ಯುವಕರು ಸೇರಿದಂತೆ ಎಲ್ಲಾ ವಯೋಮಾನದವರಲ್ಲೂ ಅಡ್ಡ ಪರಿಣಾಮಗಳು ಸಂಭವಿಸುತ್ತದೆ.

  ಜೆನ್ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ಪೌಷ್ಟಿಕ ತಜ್ಞರಾದ ಪ್ರಿಯಾ ಪಾಲನ್ ಪ್ರಕಾರ, ಕೆಚಪ್‍ಗಳಲ್ಲಿ ಪ್ರೋಟೀನ್ ಅಥವಾ ಫೈಬರ್ ಇರುವುದಿಲ್ಲ. ವಾಸ್ತವವಾಗಿ, ಅವುಗಳು ಸಕ್ಕರೆ, ಉಪ್ಪು, ಮಸಾಲೆಗಳು ಮತ್ತು ಫ್ರಕ್ಟೋಸ್ ಕಾರ್ನ್ ಸಿರಪ್‍ನಿಂದ ಮಾಡಲಾಗಿರುತ್ತದೆ.
  ಫ್ರಕ್ಟೋಸ್ ಕಾರ್ನ್ ಸಿರಪ್ ಹೊಂದಿರುವ ಆಹಾರಗಳ ಅತಿಯಾದ ಸೇವನೆಯು ಸ್ಥೂಲಕಾಯತೆ, ಇನ್ಸುಲಿನ್ ಪ್ರತಿರೋಧ, ಅಧಿಕ ಟ್ರೈಗ್ಲಿಸರೈಡ್‍ಗಳು (ಟ್ರೈಗ್ಲಿಸರೈಡ್‍ಗಳು ಗ್ಲಿಸರಾಲ್ ಮತ್ತು ಮೂರು ಫ್ಯಾಟಿ ಆಸಿಡ್ ಗುಂಪುಗಳಿಂದ ರೂಪುಗೊಂಡಿದೆ. ನೈಸರ್ಗಿಕ ಕೊಬ್ಬುಗಳು ಮತ್ತು ಎಣ್ಣೆಗಳ ಮುಖ್ಯ ಅಂಶಗಳಾಗಿವೆ ಮತ್ತು ರಕ್ತದಲ್ಲಿನ ಹೆಚ್ಚಿನ ಸಾಂದ್ರತೆಯು ಪಾಶ್ರ್ವವಾಯುವಿನ ಅಪಾಯವನ್ನು ಸೂಚಿಸುತ್ತದೆ.)

  ಇದನ್ನೂ ಓದಿ: Reduce Face Fat: ಫೇಸ್ ದಪ್ಪದಾಗಿ ಕಾಣುತ್ತಿದೆಯಾ..ಮುಖದ ಕೊಬ್ಬು ಇಳಿಸಲು 5 ವಿಧಾನ ಇಲ್ಲಿದೆ

  ಪಿತ್ತಜನಕಾಂಗದ ಕಾಯಿಲೆಗಳ ಅಪಾಯಕ್ಕೆ ಸಂಬಂಧಿಸಿದೆ. ಕೆಚಪ್ ಸೇರಿಸುವ ಮೊದಲು ಪದಾರ್ಥಗಳ ಪಟ್ಟಿ ಮತ್ತು ಪೌಷ್ಠಿಕಾಂಶದ ಅಂಶಗಳನ್ನು ಚೆನ್ನಾಗಿ ಓದಿ. ಏಕೆಂದರೆ ಇದು ಅಧಿಕ ರಕ್ತದೊತ್ತಡ ಮತ್ತು ಖನಿಜ ಅಸಮತೋಲನದಂತಹ ಆರೋಗ್ಯ ಸಂಬಂಧಿಸಿದ ಕಾಯಿಲೆಗಳನ್ನು ಉಂಟುಮಾಡಬಹುದು ಎಂದು ಪಾಲನ್ ಎಚ್ಚರಿಸಿದ್ದಾರೆ. ಸಂಸ್ಕರಿಸಿದ ಮತ್ತು ಸಂರಕ್ಷಿಸಿದ ಆಹಾರಗಳು ಉರಿಯೂತವನ್ನು ಉಂಟುಮಾಡುವ ಅಪಾಯ ಇರುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಕೆಚಪ್ ಸೇರಿಸುವ ಮೊದಲು ಯೋಚಿಸುವುದು ಉತ್ತಮ ಎನ್ನುತ್ತಾರೆ ಪಾಲನ್.

  ಕೆಚಪ್‍ನಿಂದ ಉಂಟಾಗುವ 7 ಆರೋಗ್ಯ ಸಮಸ್ಯೆಗಳು ಇಲ್ಲಿವೆ

  1. ಕಡಿಮೆ ಪೌಷ್ಟಿಕ ಸಾಂದ್ರತೆಪೌಷ್ಟಿಕ, ದಟ್ಟವಾದ ಆಹಾರವು ರಕ್ಷಣಾತ್ಮಕ ಸೂಕ್ಷ್ಮ ಪೆÇೀಷಕಾಂಶಗಳನ್ನು ಒದಗಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಮತ್ತೊಂದೆಡೆ, ಕೆಚಪ್ ಕಡಿಮೆ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದೆ ಮತ್ತು ಪ್ರೊಟೀನ್ ಮತ್ತು ಫೈಬರ್ ಅನ್ನು ಹೊಂದಿರುವುದಿಲ್ಲ.

  2. ಹೃದಯ ರೋಗಫ್ರಕ್ಟೋಸ್ ಕಾರ್ನ್ ಸಿರಪ್ ಇರುವ ಆಹಾರಗಳ ಅತಿಯಾದ ಸೇವನೆಯು ಅಧಿಕ ಟ್ರೈಗ್ಲಿಸರೈಡ್‍ಗಳು ಮತ್ತು ಹೃದಯದ ಸಮಸ್ಯೆಗಳಿಗೆ ಸಂಬಂಧಿಸಿದೆ.

  3. ಬೊಜ್ಜು ಮತ್ತು ಇನ್ಸುಲಿನ್ ಪ್ರತಿರೋಧ ,ಅಧಿಕ ಸಕ್ಕರೆ ಅಂಶ , ಫ್ರಕ್ಟೋಸ್ ಕಾರ್ನ್ ಸಿರಪ್ ಬೊಜ್ಜು ಮತ್ತು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗಬಹುದು.

  4. ಆಮ್ಲೀಯತೆ ಮತ್ತು ಎದೆಯುರಿ"ಟೊಮೆಟೊ ಕೆಚಪ್, ಆಮ್ಲೀಯ ಆಹಾರವಾಗಿರುವುದರಿಂದ, ಮಲಿಕ್ ಆಸಿಡ್ ಮತ್ತು ಸಿಟ್ರಿಕ್ ಆಸಿಡ್ ನಂತಹ ಆಮ್ಲಗಳು ಇರುವುದರಿಂದ ಆಮ್ಲೀಯತೆ ಮತ್ತು ಎದೆಯುರಿ ಸಂಭವಿಸಬಹುದು. ಹೀಗಾಗಿ, ಜೀರ್ಣಕಾರಿ ಒತ್ತಡ ಅಥವಾ ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ (ಜಿಇಆರ್‍ಡಿ) ಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ಹೊಂದಿರುವವರು ಟೊಮೆಟೊ ಕೆಚಪ್ ಅನ್ನು ತ್ಯಜಿಸಬೇಕು

  5. ಸಂಧಿ ನೋವುಗಳುಸಂಸ್ಕರಿಸಿದ ಮತ್ತು ಸಂರಕ್ಷಿಸಿದ ಆಹಾರಗಳು ಉರಿಯೂತಕ್ಕೆ ಕಾರಣವಾಗುತ್ತದೆ. ಅಂದರೆ ಇದು ಸಂಧಿ ನೋವನ್ನು ತಂದೊಡ್ಡುವ ಅಪಾಯ ಇರುತ್ತದೆ.

  6. ಮೂತ್ರಪಿಂಡದ ಸಮಸ್ಯೆಗಳುಸಂಸ್ಕರಿಸಿದ ಮತ್ತು ಅಧಿಕ ಸೋಡಿಯಂ ಅಂಶವಿರುವ ಆಹಾರಗಳು ಮೂತ್ರದಲ್ಲಿ ಕ್ಯಾಲ್ಸಿಯಂ ಅನ್ನು ಹೆಚ್ಚಿಸುತ್ತದೆ, ಇದು ಮೂತ್ರಪಿಂಡದ ಕಲ್ಲುಗಳನ್ನು ಬೆಳೆಸುವ ಸಾಧ್ಯತೆಯು ಅಧಿಕವಾಗಿರುತ್ತದೆ.

  7. ಅಲರ್ಜಿಗಳುಕೆಚಪ್‍ನಲ್ಲಿರುವ ಟೊಮೆಟೊಗಳು ಹಿಸ್ಟಮೈನ್‍ಗಳಿಂದ ಸಮೃದ್ಧವಾಗಿವೆ ಮತ್ತು ಸೀನುವಿಕೆ ಮತ್ತು ಉಸಿರಾಟದ ತೊಂದರೆಯಂತಹ ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು.
  Published by:Kavya V
  First published: