Phoebe Gates- ಅಪ್ಪ ಶ್ರೀಮಂತರಲ್ಲೇ ಶ್ರೀಮಂತನಾದರೂ ದೌಲತ್ತು ತೋರಿಸದ ರೂಪವತಿ

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಮೊದಲ ಮಗಳ ಮದುವೆ ಇತ್ತೀಚೆಗೆ ನಡೆಯಿತು. ಅವರ ಕೊನೆಯ ಮಗಳು ಫೋಬೆ ಗೇಟ್ಸ್ ಈಗ ಗಮನ ಸೆಳೆಯುತ್ತಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟಿವ್ ಇಲ್ಲದ ಫೋಬೆಯ ಹವ್ಯಾಸಗಳೇ ವಿಭಿನ್ನ.

ಫೋಬೆ ಗೇಟ್ಸ್

ಫೋಬೆ ಗೇಟ್ಸ್

  • Share this:
ವಿಶ್ವದ ಶ್ರೀಮಂತ ವ್ಯಕ್ತಿಗಳಾದ ಬಿಲ್ ಗೇಟ್ಸ್ (Bill Gates) ಹಾಗೂ ಮೆಲಿಂಡಾ ಗೇಟ್ಸ್ (Melinda Gates) ದಂಪತಿ ತಾವು ಮಾಡುವ ಸಾಮಾಜಿಕ ಕೆಲಸಗಳಿಂದಲೇ ಚಿರಪರಿಚಿತರು. ಇದೀಗ ವಿಚ್ಛೇದನ ಪಡೆದುಕೊಂಡು ಬೇರೆ ಬೇರೆಯಾಗಿದ್ದರೂ ವ್ಯಾನಿಟಿ ಫೇರ್‌ಗೆ ಮಿಲಿಂಡಾ ನೀಡಿದ ಸಂದರ್ಶನದಲ್ಲಿ ತಮ್ಮ ಮೂವರೂ ಮಕ್ಕಳನ್ನು ಉತ್ತಮ ಮೌಲ್ಯಗಳೊಂದಿಗೆ ಪಾಲನೆ ಪೋಷಣೆ ಮಾಡಿರುವುದು ತಮ್ಮ ಶ್ರೇಷ್ಠ ಸಾಧನೆಯಾಗಿದೆ ಎಂದು ಪರಿಗಣಿಸಿರುವುದಾಗಿ ಹೇಳಿಕೊಂಡಿದ್ದಾರೆ. ಹಿರಿಯ ಮಗಳು ಜೆನ್ನಿಫರ್ ಈಜಿಪ್ಟ್‌ನ ಆಶ್ವಾರೋಹಿ (Equestrian) ನಯೆಲ್ ನಾಸರ್ ಅವರೊಂದಿಗೆ ಅದ್ಧೂರಿಯಾಗಿ ವಿವಾಹವಾದರು. ಆದರೆ ದಂಪತಿಯ ಕಿರಿಯ ಮಗಳ ಬಗ್ಗೆ ಕೂಡ ಸಾಕಷ್ಟು ಆಸಕ್ತಿಕರ ಅಂಶಗಳಿದ್ದು ಈಕೆಯ ಹೆಸರು ಫೋಬೆ (Phoebe) ಎಂದಾಗಿದೆ.

ಗೇಟ್ಸ್ ಮಕ್ಕಳ ಬಾಲ್ಯ:

ಫೋಬೆ ವಾಷಿಂಗ್ಟನ್‌ನ ಸಿಯಾಟಲ್‌ ಉಪನಗರವಾದ ಬೆಲ್ಲೆವ್ಯೂನಲ್ಲಿ ಸೆಪ್ಟೆಂಬರ್ 14, 2002 ರಂದು ಜನಿಸಿದರು. 19ರ ಹರೆಯದ ಫೋಬೆ ತಮ್ಮ ಪೋಷಕರ 124 ಅಮೆರಿಕ ಮಿಲಿಯನ್ ಡಾಲರ್ ಬೆಲೆಯ ಲೇಕ್‌ಫ್ರಂಟ್ ಪರಿಸರ ಭವನ (Lakefront Eco Mansion) ಕ್ಸಾನಾಡು 2.0 (Xanadu 2.0) ದಲ್ಲಿ ವಾಸಿಸುತ್ತಿದ್ದಾರೆ. ಕೃತಕ ಬೀಚಿನಲ್ಲಿ ನೈಸರ್ಗಿಕ ಕೆರಿಬಿಯನ್ ಮರಳು, ನಿಜವಾದ ಮೀನುಗಳಿರುವ ಕೃತಕ ಜಲಧಾರೆ, ಒಳಾಂಗಣ ಈಜುಕೊಳ ಹೀಗೆ ಎಲ್ಲಾ ರೀತಿಯ ಸವಲತ್ತುಗಳನ್ನು ಗೇಟ್ಸ್ ಮಕ್ಕಳು ತಮ್ಮ ಮನೆಯಲ್ಲಿ ಹೊಂದಿದ್ದರು. ಸವಲತ್ತುಗಳು ಹಾಗೂ ಸೌಲಭ್ಯಗಳಿದ್ದರೂ ಗೇಟ್ಸ್ ಮಕ್ಕಳು ಸಂಪತ್ತಿನ ದೌಲತ್ತಿನಿಂದ ಮೆರೆಯಲಿಲ್ಲ. ಏಕೆಂದರೆ ಪೋಷಕರು ಉತ್ತಮ ಮೌಲ್ಯಗಳನ್ನು ಅವರಲ್ಲಿ ಅಳವಡಿಸಿ ಪಾಲಿಸಿ ಪೋಷಿಸಿದ್ದಾರೆ. ಮನೆಗೆಲಸಗಳನ್ನು ಹಂಚಿಕೊಳ್ಳುವುದು, ಪಾತ್ರೆಗಳನ್ನು ತೊಳೆಯುವುದು ಹೀಗೆ ಸಾಮಾನ್ಯ ಮಕ್ಕಳು ಮಾಡುವಂತೆಯೇ ಗೇಟ್ಸ್ ದಂಪತಿಯ ಮಕ್ಕಳು ಕೂಡ ಕೆಲಸ ಮಾಡಿಯೇ ಬೆಳೆದವರು.

ನರ್ತಕಿ ಆಗುವಾಸೆ:

ಬಿಲ್ ಗೇಟ್ಸ್ ಬಾಲ್ಯದಲ್ಲಿ ಓದಿದ್ದ ಸಿಯಾಟಲ್‌ನ ಲೇಕ್‌ಸೈಡ್ ಹೈಸ್ಕೂಲ್‌ನಲ್ಲಿಯೇ ಅವರ ಮಕ್ಕಳು ವ್ಯಾಸಂಗ ಮಾಡಿದರು. ನರ್ತಕಿಯಾಗುವ ಅದಮ್ಯ ಆಸೆ ಹೊತ್ತ ಫೋಬೆ ನ್ಯೂಯಾರ್ಕ್ ನಗರದಲ್ಲಿನ ವೃತ್ತಿಪರ ಮಕ್ಕಳ ಶಾಲೆಗೆ ಸೇರಿಕೊಂಡರು. ತದನಂತರ ಅವರು ಪ್ರಸಿದ್ಧ ಲಿಂಕನ್ ಸೆಂಟರ್ ಫಾರ್ ದಿ ಪರ್ಫಾರ್ಮಿಂಗ್ ಆರ್ಟ್ಸ್ ಮತ್ತು ಪ್ರತಿಷ್ಠಿತ ಜೂಲಿಯಾರ್ಡ್ ಸ್ಕೂಲ್‌ನಲ್ಲಿ ದಿ ಸ್ಕೂಲ್ ಆಫ್ ಅಮೆರಿಕನ್ ಬ್ಯಾಲೆಟ್‌ನಲ್ಲಿ ಅಧ್ಯಯನ ಮಾಡಿದರು.

ತಂದೆಯಂತೆಯೇ ಮಗಳು:

ಫೋಬೆ ಚಿಕ್ಕ ವಯಸ್ಸಿನಿಂದಲೂ ತಾಯಿಯ ಒಡನಾಟದಲ್ಲಿ ಬೆಳೆದಿದ್ದರೂ, ತಂದೆ ಬಿಲ್ ಪಾತ್ರ ಆಕೆಯ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದೆ. ತಂದೆ ಮಗಳು ಹೆಚ್ಚಾಗಿ ಒಂದೇ ರೀತಿಯ ಚಟುವಟಿಕೆಗಳಲ್ಲಿ ಸಮಾನ ಆಸಕ್ತರಾಗಿದ್ದರು. ಇದರಲ್ಲಿ ಓದುವಿಕೆಯೂ ಒಂದಾಗಿದೆ. ಈ ಕುರಿತಾಗಿ ಬಿಲ್ ಗೇಟ್ಸ್ ಹೃದಯಸ್ಪರ್ಶಿ ಹೇಳಿಕೆಯೊಂದನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದು ನನ್ನ ಮಗಳು ಫೋಬೆ ಕೂಡ ನನ್ನಂತೆ ಎಲ್ಲಾ ರೀತಿಯ ಪುಸ್ತಕಗಳನ್ನು ಓದಲು ಇಷ್ಟಪಡುತ್ತಾಳೆ ಆಕೆಗೆ ಓದುವ ಹುಚ್ಚು ನನ್ನಂತೆಯೇ ಇದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ವರ್ಷಗಳಿಂದಲೂ ನಾನು ಜಾನ್ ಗ್ರೀನ್ ಅಭಿಮಾನಿಯಾಗಿದ್ದು ಪ್ರಯಾಣಿಸುವಾಗ, ಕಾಫಿ ಶಾಪ್‌ಗಳಲ್ಲಿ, ಹಾಸಿಗೆಯಲ್ಲಿ ಬೆಚ್ಚಗೆ ಮಲಗಿರುವಾಗ ಓದುತ್ತಲೇ ಇರುತ್ತೇನೆ. ಅದರಂತೆಯೇ ನನ್ನ ಮಗಳಿಗೂ ನನ್ನ ಮೆಚ್ಚಿನ ಲೇಖಕರು ಇಷ್ಟವಾಗುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: Dangerous Disease: ದಿನಕ್ಕೆ 70 ಬಾರಿ ವಾಂತಿ ಮಾಡುತ್ತಾಳೆ ಈಕೆ! ಇದೊಂದು ಭಯಾನಕ ಕಾಯಿಲೆ!

ಸಹೋದರಿ ಜೆನ್ನಿಫರ್‌ನೊಂದಿಗೆ ಆಕೆಯ ಬಾಂಧವ್ಯ:

ಜೆನ್ನಿಫರ್ ವಿವಾಹಿತರಾಗಿ ಪ್ರತ್ಯೇಕವಾಗಿ ವಾಸವಾಗಿದ್ದರೂ, ಆಕೆಯ ಬಾಂಧವ್ಯ ಅತ್ಯಂತ ನಿಕಟವಾಗಿದೆ. ಇಬ್ಬರೂ ಸಹೋದರಿಯರು ಹೊರಗೆ ಸುತ್ತಾಡಿದ ಫೋಟೋಗಳು, ಜೊತೆಯಾಗಿ ಮೋಜು ನಡೆಸಿದ ಚಿತ್ರಗಳನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಜೆನ್ನಿಫರ್ ತನ್ನ ಸಹೋದರಿ ಫೋಬೆಯ 18ನೇ ಹುಟ್ಟುಹಬ್ಬಕ್ಕೆ ಪ್ರೀತಿಯಿಂದ ಶುಭಾಶಯ ಕೋರಿದ್ದಾರೆ. ಅತ್ಯಂತ ತೇಜಸ್ವಿ, ವರ್ಚಸ್ಸುಳ್ಳ ಹಾಗೂ ಮುದ್ದಿನ ಸಹೋದರಿ ಹೊಂದಿರುವ ನಾನು ತುಂಬಾ ಅದೃಷ್ಟಶಾಲಿ!

ಆಕೆಯ ಗೆಳೆಯ ಚಾಜ್ ಫ್ಲಿನ್:

ಫೋಬೆ ಹಾಗೂ ಚಾಜ್ 2019ರ ಮಧ್ಯದಲ್ಲಿ ಡೇಟಿಂಗ್ ಆರಂಭಿಸಿದ್ದು ಫೋಬೆ ತನ್ನ ಗೆಳೆಯನೊಂದಿಗೆ ಕಳೆಯುವ ಸುಂದರ ಕ್ಷಣಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಸಿಯಾಟಲ್ ಮೂಲದ ಫ್ಲಿನ್ ಲೇಕ್‌ಸೈಡ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಇಬ್ಬರಿಗೂ ಹೊರಗೆ ಸುತ್ತಾಡುವುದೆಂದರೆ ಬಲು ಪ್ರೀತಿ ಎಂಬುದು ಅವರ ಫೋಟೋಗಳಿಂದ ತಿಳಿಯುತ್ತದೆ. ಇವರಿಬ್ಬರ ಪ್ರೀತಿಗೆ ಗೇಟ್ಸ್ ದಂಪತಿಗಳ ಅನುಮತಿ ಇರುವುದೂ ಕೂಡ ಅವರ ಫೋಟೋಗಳಿಂದ ತಿಳಿದುಬರುತ್ತದೆ.

ಬಿಲ್ ಹಾಗೂ ಮೆಲಿಂಡಾ ಗೇಟ್ಸ್ ವಿಚ್ಛೇದನ:

ಫೋಬೆ ತಮ್ಮ ಪೋಷಕರ ವಿಚ್ಛೇದನದ ವಿಷಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ತಮ್ಮ ಎಲ್ಲಾ ಮಕ್ಕಳು ವಯಸ್ಕರಾಗುವವರೆಗೆ ದಂಪತಿ ಬೇರ್ಪಡಲಿಲ್ಲ. ತಮ್ಮ ಕಿರಿಯ ಮಗಳು ಫೋಬೆ 18ನೇ ಹರೆಯಕ್ಕೆ ಕಾಲಿಡುವವರೆಗೆ ಅವರು ಕಾದಿದ್ದು ನಂತರವಷ್ಟೇ ವಿಚ್ಛೇದನ ಪಡೆದರು ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: Little Brazil: ಬೆಂಗಳೂರಿನಲ್ಲಿದೆ ಲಿಟಲ್ ಬ್ರೆಜಿಲ್; ಇದಕ್ಕಿರುವ ಇತಿಹಾಸದ ಬಗ್ಗೆ ನಿಮಗೆ ಗೊತ್ತೇ?

ಸಾಹಸಮಯ ರಜಾದಿನಗಳಿಗೆ ಹೋಗುವುದು ಎಂದರೆ ಫೋಬೆಗೆ ತುಂಬಾ ಇಷ್ಟ:

ಫೋಬೆ ತಮ್ಮ ಗೆಳತಿಯೊಂದಿಗೆ ಸಾಹಸಮಯ ಪ್ರವಾಸಗಳಿಗೆ ಹೋಗುವುದನ್ನು ಇಷ್ಟಪಡುತ್ತಾರೆ. ಸಹೋದರಿ ಜೆನ್ನಿಫರ್‌ನೊಂದಿಗೆ ಆಕೆ ಸಾಹಸಮಯ ಪ್ರವಾಸಗಳಿಗೆ ಹೋಗುತ್ತಾರೆ.

ಲಕ್ಷಾಂತರ ಸಂಪತ್ತಿನ ಉತ್ತರಾಧಿಕಾರಿ:

ಶತಕೋಟಿ ಸಂಪತ್ತಿನ ಒಡೆಯರಾದರೂ ಬಿಲ್ ತಮ್ಮ ಮಕ್ಕಳಿಗೆ ಅತ್ಯಲ್ಪ ಪ್ರಮಾಣದ ಸಂಪತ್ತನ್ನು ಹಂಚಿದ್ದಾರೆ. ಮಕ್ಕಳು ದೊಡ್ಡ ಪ್ರಮಾಣದ ಸಂಪತ್ತನ್ನು ಹೊಂದಿದ್ದರೂ ತಮ್ಮದೇ ಆದ ಹಾದಿಯಲ್ಲಿ ಮಕ್ಕಳು ಮುನ್ನಡೆಯಬೇಕು ಎಂದು ತಿಳಿಸುತ್ತಾರೆ. ವಿಚ್ಛೇದನದ ನಂತರ ದಂಪತಿಯ ಶತಕೋಟಿ ಆಸ್ತಿಗೆ ಫೋಬೆ ಉತ್ತರಾಧಿಕಾರಿಯಾಗಿರಬಹುದು ಎಂಬ ಸುದ್ದಿ ಕೂಡ ಇದೆ.

ಭಾಷಾಂತರ ನೆರವು: ಏಜೆನ್ಸಿ
Published by:Vijayasarthy SN
First published: