ಎಲ್ಲೆಂದರಲ್ಲಿ ಇರುವೆಗಳು ಓಡಾಡುತ್ತಿದ್ದರೆ ಒಂದು ರೀತಿಯ ಕಿರಿಕಿರಿ ಉಂಟಾಗುತ್ತಿರುತ್ತದೆ. ಸಿಹಿ ಪದಾರ್ಥ ಏನೇ ಇರಲಿ ಅದಕ್ಕೆ ಮುತ್ತಿಗೆ ಹಾಕುವುದರಲ್ಲಿ ಕೂಡ ಇರುವೆಗಳದ್ದೇ ಸಿಂಹಪಾಲು. ಹೀಗೆ ಬಂದಂತಹ ಇರುವೆಗಳು ಎಷ್ಟೋ ಬಾರಿ ಬಟ್ಟೆಬರೆಗಳನ್ನು, ವಸ್ತುಗಳನ್ನು, ಪುಸ್ತಕದ ಹಾಳೆಗಳನ್ನು ಹಾಳುಗೆಡವುತ್ತವೆ. ಅದರಲ್ಲೂ ಕಚ್ಚುವ ಇರುವೆಗಳು ನಮಗೆ ಗೊತ್ತಿಲ್ಲದೆ ನಮಗೆ ಕಚ್ಚಿ ನೋವಿನ ಅನುಭವವನ್ನು ಉಂಟುಮಾಡಿಸುತ್ತವೆ. ಇರುವೆಗಳು ಬ್ಯಾಕ್ಟೀರಿಯಾವನ್ನು ತರುತ್ತವೆ. ಹೆಚ್ಚು ಕಡಿಮೆ ಸುಮಾರು 12,000 ಇರುವೆ ಪ್ರಭೇದಗಳಿವೆ. ಬೇಸಿಗೆಯಲ್ಲಿ ಇರುವೆಗಳು ಹೆಚ್ಚಾಗಿ ಮನೆಯೊಳಕ್ಕೆ ಪ್ರವೇಶ ಮಾಡುತ್ತವೆ. ತಮ್ಮದೇ ಸ್ಥಳವೆನ್ನುವಂತೆ ಮನೆಯಲ್ಲಿ ವಾಸಿಸತೊಡಗುತ್ತವೆ.
ಹಾಗಿದ್ದರೆ ಈ ಇರುವೆಗಳಿಂದ ಮುಕ್ತಿ ಪಡೆಯುವುದು ಹೇಗೆ ಎಂಬುದು ನಿಮಗೆ ತಲೆನೋವಿನ ಸಂಗತಿಯಾಗಿದ್ದರೆ ಇಂದಿನ ಲೇಖನದಲ್ಲಿ ಇರುವೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುತ್ತಿದ್ದೇವೆ. ಮನೆಯನ್ನು ಸ್ವಚ್ಛಗೊಳಿಸುವುದರಿಂದ ಇರುವೆಯನ್ನು ನಿವಾರಿಸಿಕೊಳ್ಳಬಹುದು. ಹಾಗಿದ್ದರೆ ಇರುವೆಗಳನ್ನು ನಿವಾರಿಸಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಚಾಕ್
ಚಾಕ್ ಬಳಸಿ ಇರುವೆಗಳನ್ನು ದೂರಮಾಡಿಕೊಳ್ಳಬಹುದು. ಚಾಕ್ನಲ್ಲಿ ಕ್ಯಾಲ್ಶಿಯಂ ಕಾರ್ಬನೇಟ್ ಇದೆ ಇದು ಇರುವೆಗಳನ್ನು ದೂರವಾಗಿಸುತ್ತವೆ. ಪೌಡರ್ ಚಾಕ್ ಅನ್ನು ಸ್ಪ್ರೇ ಮಾಡಿ ನಂತರ ಇರುವೆಗಳು ಬರುವ ಸ್ಥಳದಲ್ಲಿ ಚಾಕ್ನಿಂದ ಬರೆಯಿರಿ. ಅವುಗಳು ಪ್ರವೇಶಿಸುವ ಸ್ಥಳದಲ್ಲಿ ಚಾಕ್ನಿಂದ ಬರೆಯಿರಿ.
ಲಿಂಬೆ ಹಣ್ಣು
ನಿಂಬೆ ಹಣ್ಣನ್ನು ಹಿಂಡಿ ಇಲ್ಲದಿದ್ದರೆ ಇರುವೆಗಳು ಪ್ರವೇಶಿಸುವ ಸ್ಥಳದಲ್ಲಿ ಲಿಂಬೆಯ ಸಿಪ್ಪೆಯನ್ನಿರಿಸಿ. ಲಿಂಬೆ ರಸ ಸೇರಿಸಿರುವ ನೀರಿನಿಂದ ಇರುವೆಗಳು ಬರುವ ಜಾಗವನ್ನು ಸ್ವಚ್ಛಗೊಳಿಸಿ. ಇರುವೆಗಳು ಬರುವ ಜಾಗದಲ್ಲಿ ಸಿಹಿಯನ್ನಿರಿಸಬೇಡಿ.
ಕಿತ್ತಳೆ
ಲಿಂಬೆಯಂತೆ ಕಿತ್ತಳೆಯೂ ಸಮಾನವಾಗಿದೆ. ಇರುವೆಗಳು ಒಳಬರುವುದನ್ನು ಇದು ತಡೆಯುತ್ತದೆ. ಕಿತ್ತಳೆ ಸಿಪ್ಪೆ ಮತ್ತು ಉಗುರ ಬೆಚ್ಚಗಿನ ನೀರು ಬಳಸಿಕೊಂಡು ಪೇಸ್ಟ್ ತಯಾರಿಸಿ. ಇರುವೆಗಳು ಬರುವಲ್ಲಿ ಈ ಪೇಸ್ಟ್ ಅನ್ನು ಹಚ್ಚಿ. ಅಡುಗೆಮನೆಯ ಕಟ್ಟೆ ಅಥವಾ ಇರುವೆಗಳು ಬರುವ ಸ್ಥಳದಲ್ಲಿ ಈ ಪೇಸ್ಟ್ ಅನ್ನು ಹಚ್ಚಿ.
ಕಾಳುಮೆಣಸು
ಸಿಹಿಗೆ ಇರುವೆಗಳು ಮುತ್ತಿದರೂ ಕಾಳುಮೆಣಸಿನ ಖಾರವನ್ನು ಇರುವೆಗಳು ಇಷ್ಟಪಡುವುದಿಲ್ಲ. ಇರುವೆಗಳು ಮನೆಗೆ ಬರುವಲ್ಲಿ ಕಾಳುಮೆಣಸಿನ ಹುಡಿಯನ್ನು ಚೆಲ್ಲಿ. ನೀರು ಮತ್ತು ಕಾಳುಮೆಣಸಿನ ಹುಡಿಯನ್ನು ಬಳಸಿಕೊಂಡು ಸ್ಪ್ರೇ ತಯಾರಿಸಿ ಅದನ್ನು ಕೂಡ ಇರುವೆಗಳು ಬರುವಲ್ಲಿಗೆ ಸಿಂಪಡಿಸಬಹುದು.
ಉಪ್ಪು
ಇರುವೆಗಳು ಬರುವ ಜಾಗದಲ್ಲಿ ಅಥವಾ ಅವುಗಳು ಗೂಡುಕಟ್ಟಿರುವ ಸ್ಥಳದಲ್ಲಿ ಸ್ವಲ್ಪ ಉಪ್ಪು ಚೆಲ್ಲಿ. ಇದು ನೈಸರ್ಗಿಕವಾಗಿ ಕಡಿಮೆ ಬೆಲೆಯಲ್ಲಿ ಇರುವೆಗಳನ್ನು ನಿವಾರಿಸುವ ವಿಧಾನವಾಗಿದೆ. ಸಾಮಾನ್ಯ ಹುಡಿಯಪನ್ನು ಬಳಸಿ ಇರುವೆಗಳನ್ನು ಮನೆಯಿಂದ ದೂರಮಾಡಿ.
ಬಿಳಿ ವಿನೇಗರ್
ಬಿಳಿ ವಿನೇಗರ್ನ ವಾಸನೆ ಇರುವೆಗಳಿಗೆ ರುಚಿಸುವುದಿಲ್ಲ. ಸ್ವಲ್ಪ ನೀರು ಮತ್ತು ವಿನೇಗರ್ ಅನ್ನು ಬೆರೆಸಿ ದ್ರಾವಣವನ್ನು ಸಿದ್ಧಪಡಿಸಿ. ಇದಕ್ಕೆ ಎಸನ್ಶಿಯಲ್ ಆಯಿಲ್ ಅನ್ನು ಮಿಶ್ರ ಮಾಡಿಕೊಳ್ಳಿ. ದಿನಕ್ಕೆ ಒಂದು ಬಾರಿ ಇದನ್ನು ಪುನರಾವರ್ತಿಸಿ.
ದಾಲ್ಚಿನ್ನಿ
ದಾಲ್ಚಿನ್ನಿ ಮತ್ತು ಲವಂಗವನ್ನು ಬಳಸಿಕೊಂಡು ಇರುವೆಗಳ ಕಾಟಕ್ಕೆ ಮಂಗಳ ಹಾಡಬಹುದು. ಇದು ಮನೆಯನ್ನು ಕೂಡ ಸುವಾಸನೆಯಿಂದ ಇರಿಸುತ್ತವೆ. ಇರುವೆಗಳನ್ನು ನಿವಾರಿಸಲು ದಾಲ್ಚಿನ್ನಿ ಮತ್ತು ಲವಂಗ ನೈಸರ್ಗಿಕ ವಸ್ತುಗಳಾಗಿವೆ.
ಪುದೀನ
ಇರುವೆಗಳಿಗೆ ಪುದೀನ ಕೂಡ ಅಷ್ಟುಇಷ್ಟವಾಗುವುದಿಲ್ಲ. ಇದರ ವಾಸನೆ ಇರುವೆಗಳಿಗೆ ಅಷ್ಟೊಂದು ಪ್ರಿಯವಾಗಿರುವುದಿಲ್ಲ. 10 ಡ್ರಾಪ್ ಪುದೀನ ಎಣ್ಣೆ ಮತ್ತು ನೀರು ಮಿಶ್ರ ಮಾಡಿಕೊಂಡು ಇರುವೆಗಳು ಇರುವ ಜಾಗಕ್ಕೆ ಸಿಂಪಡಿಸಿ.
ಮೇಲೆ ತಿಳಿಸಿದ ಎಲ್ಲಾ ವಸ್ತುಗಳು ನೈಸರ್ಗಿಕವಾಗಿದ್ದು ಸುಲಭವಾಗಿ ಲಭ್ಯವಾರುವಂತಹದ್ದು. ಇದರಿಂದ ಯಾರಿಗೂ ದೋಷವುಂಟಾಗುವುದಿಲ್ಲ. ಇರುವೆಗಳಿಗೆ ಈ ವಸ್ತುಗಳು ಮಾರಕವಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ