Kitchen Tricks: ಧಾನ್ಯಗಳು, ಪ್ರಮುಖವಾಗಿ ಅಕ್ಕಿಯನ್ನು ಗಾಳಿಯಾಡದ ಕಂಟೇನರ್ಗಳಲ್ಲಿ ತಂಪಾದ ಮತ್ತು ಶುಷ್ಕ ಸ್ಥಳದಲ್ಲಿ ಸಂಗ್ರಹಿಸಲು ಸೂಚಿಸಲಾಗುತ್ತದೆ. ಆದರೆ, ಎಲ್ಲಾ ಪ್ರಯತ್ನಗಳು ಮತ್ತು ಮುನ್ನೆಚ್ಚರಿಕೆಗಳನ್ನು ಅನುಸರಿಸಿದರೂ, ಧಾನ್ಯಗಳಲ್ಲಿ ಕೀಟಗಳನ್ನು ಕಾಣಬಹುದು. ಮಳೆಗಾಲದಲ್ಲಿ ತೇವಾಂಶದಿಂದಾಗಿ ಕೀಟಗಳು ಧಾನ್ಯಗಳಲ್ಲಿ ಮತ್ತು ಅಕ್ಕಿಯಲ್ಲಿ ಹೆಚ್ಚಾಗುತ್ತದೆ. ಆದ್ದರಿಂದ, ಕೀಟಗಳನ್ನು ನೋಡಿದವರು ಅನ್ನ ತಿನ್ನಲು ಬಯಸುವುದಿಲ್ಲ. ನೀವು ಅದನ್ನು ಎಷ್ಟು ಕ್ಲೀನ್ ಮಾಡಿದರೂ ಕೀಟಗಳು ಅಕ್ಕಿಯಿಂದ ದೂರ ಹೋಗುವುದು ಕಷ್ಟ ಹಾಗೂ ಸ್ವಚ್ಛಗೊಳಿಸಲು ಬಯಸಿದರೂ, ಆದರಿಂದ ಹೆಚ್ಚಿನ ಸಮಯ ವ್ಯರ್ಥವಾಗುತ್ತದೇ ಹೊರೆತು ಕೀಟಗಳು ದೂರ ಹೋಗುವುದಿಲ್ಲ. ಈ ಸಮಸ್ಯೆಗೆ ನಾವು ಕೆಲವು ಸುಲಭ ಪರಿಹಾರವನ್ನು ನೀಡುತ್ತೇವೆ. ಬನ್ನಿ ಆ ಸುಲಭ ಪರಿಹಾರ ಯಾವುದು ಎಂದು ನೋಡೋಣ. ಈ ಸರಳ ಸಲಹೆಗಳು ಮಹಿಳೆಯರಿಗೆ ತುಂಬಾ ಸಹಾಯಕವಾಗುತ್ತವೆ. ಇದು ಸಾಕಷ್ಟು ಸಮಯ ತೆಗೆದುಕೊಳ್ಳುವುದಿಲ್ಲ ಮತ್ತು ತುಂಬಾ ಸುಲಭ ಹಾಗೂ ಕಡಿಮೆ ವೆಚ್ಚದಲ್ಲಿ ಧಾನ್ಯಗಳನ್ನು ರಕ್ಷಿಸಿಕೊಳ್ಳಬಹುದು.
ಈ ಸಮಸ್ಯೆ ತೊಡೆದುಹಾಕಲು ನಾವು ಕೆಳಗೆ ಸೂಚಿಸಿರುವ ಸಲಹೆಗಳನ್ನು ಅನುಸರಿಸಬಹುದು:
ಬೆಂಕಿ ಪೊಟ್ಟಣ:ಕೀಟಗಳಿಂದ ಅಕ್ಕಿಯನ್ನು ರಕ್ಷಿಸಲು, ಅಕ್ಕಿ ಪೆಟ್ಟಿಗೆಯ ಅಥವಾ ಪಾತ್ರೆಗಳ ಬಳಿ ಬೆಂಕಿ ಕಡ್ಡಿ ತುಂಬಿದ ಬೆಂಕಿ ಪೊಟ್ಟಣ ಇರಿಸಿ. ಬೆಂಕಿ ಕಡ್ಡಿ ಸಲ್ಫರ್ ಅನ್ನು ಹೊಂದಿರುತ್ತದೆ, ಇದು ಕೀಟಗಳಿಂದ ಅಕ್ಕಿಯನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಅಕ್ಕಿಗೆ ಮಾತ್ರವಲ್ಲ, ಇತರ ರೀತಿಯ ಧಾನ್ಯಗಳನ್ನು ಕೀಟಗಳಿಂದ ರಕ್ಷಿಸಲೂ ನೀವು ಈ ವಿಧಾನ ಅಳವಡಿಸಿಕೊಳ್ಳಬಹುದು.
ಲವಂಗ:ಕೀಟಗಳಿಂದ ಅಕ್ಕಿಯನ್ನು ರಕ್ಷಿಸಲು, ನೀವು ಲವಂಗ ಬಳಸಬಹುದು. ಇದಕ್ಕಾಗಿ, 10-15 ಲವಂಗವನ್ನು ಅಕ್ಕಿ ಪಾತ್ರೆಗೆ ಹಾಕಿ. ಲವಂಗ ಎರಡು ಪ್ರಯೋಜನಗಳನ್ನು ಹೊಂದಿರುತ್ತದೆ, ಅಕ್ಕಿಯಲ್ಲಿ ಕೀಟಗಳು ಕಂಡುಬಂದರೆ, ಲವಂಗ ಕೀಟಗಳನ್ನು ಓಡಿಸುತ್ತದೆ, ಮತ್ತು ಅಕ್ಕಿಯಲ್ಲಿ ಯಾವುದೇ ಹುಳುಗಳು ಇಲ್ಲದಿದ್ದರೆ, ಕೀಟಗಳು ಅಕ್ಕಿಗೆ ಬರದಂತೆ ಸಹ ನೋಡಿಕೊಳ್ಳುತ್ತದೆ ಹಾಗೂ ಕೀಟಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಬೇವಿನ ಎಲೆಗಳು:ಅಕ್ಕಿಯನ್ನು ಕೀಟಗಳಿಂದ ರಕ್ಷಿಸಲು, ಅಕ್ಕಿ ಬಾಕ್ಸ್ನಲ್ಲಿ 10-15 ಬೇವಿನ ಎಲೆಗಳನ್ನು ಹಾಕಿ ಅಥವಾ ನೀವು ಕೊಲ್ಲಿ ಎಲೆಗಳನ್ನು ಹಾಕಬಹುದು. ಕೊಲ್ಲಿ ಎಲೆಗಳು ಹಲವು ಅರೋಗ್ಯಕರ ಗುಣಗಳನ್ನು ಹೊಂದಿದೆ. ನೀವು ಬೇವಿನ ಎಲೆಗಳನ್ನು ಅಕ್ಕಿ ಹೊರತಾಗಿ ಧಾನ್ಯಗಳನ್ನು ರಕ್ಷಿಸಲು ಬಳಸಬಹುದು. ಕೊಲ್ಲಿ ಎಲೆಗಳು ಹಾಗೂ ಬೇವಿನ ಎಲೆಗಳು ಎರಡೂ ಕೀಟಗಳು ಅಕ್ಕಿಗೆ ಪ್ರವೇಶಿಸುವುದನ್ನು ತಡೆಯುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಅಕ್ಕಿಯನ್ನು ಗಾಳಿಯಾಡದ ಕಂಟೇನರ್ನಲ್ಲಿ ಸಂಗ್ರಹಿಸಿ.
ನೀವು ಬೇರೆ ಕೆಲವು ವಿಧಾನಗಳನ್ನು ಪ್ರಯತ್ನಿಸಬಹುದು. ಆದರೆ ಈ ಮಾರ್ಗಗಳು ಅನುಸರಿಸಲು ತುಂಬಾ ಸುಲಭವಾಗಿವೆ ಮತ್ತು ಕಡಿಮೆ ವೆಚ್ಚ ಹೊಂದಿದೆ. ಈ ಸರಳ ಸಲಹೆಗಳು ಸಣ್ಣ ಅಡುಗೆಮನೆಗೆ ಮಾತ್ರವಲ್ಲದೆ ಪೂರ್ಣ ದೊಡ್ಡ ಹೋಟೆಲ್ಗಳಿಗೂ ಸಹಾಯಕವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ