Viral Video: ಅಬ್ಬಾ..ಈ ಕಾಳಿಂಗ ಸರ್ಪ ಮಾಡಿದ್ದು ನೋಡಿದರೆ, ಬೆಚ್ಚಿ ಬೀಳುವುದು ಗ್ಯಾರಂಟಿ..!

Viral Video of King Cobra in Karnataka: ಕರ್ನಾಟಕದ ಬೆಳ್ತಂಡಗಿಯಲ್ಲಿರುವಂತಹ ಒಂದು ಮನೆಯ ಸ್ನಾನಗೃಹದಲ್ಲಿ ಕಳೆದ ವಾರ ನಡೆದ ಒಂದು ಘಟನೆ ನಿಜಕ್ಕೂ ಎಂತವರಿಗಾದರೂ ಭಯ ಹುಟ್ಟಿಸುತ್ತದೆ.14 ಅಡಿ ಉದ್ದದ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಾಗ ಮನೆಯವರು ಹಾವು ಹಿಡಿಯುವವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ

ಬೆಳ್ತಂಗಡಿಯಲ್ಲಿ ಕಂಡ ಕಾಳಿಂಗ ಸರ್ಪ

ಬೆಳ್ತಂಗಡಿಯಲ್ಲಿ ಕಂಡ ಕಾಳಿಂಗ ಸರ್ಪ

  • Share this:
    Viral Video of King Cobra: ಹಾವುಗಳು ಎಂದರೇನೆ ನಮ್ಮಲ್ಲಿ ಒಂದು ತರಹದ ಭಯ ಹುಟ್ಟಿಕೊಳ್ಳುವುದು ಸಹಜ. ಅದರಲ್ಲಿಯೂ ಈ ಹಾವುಗಳಲ್ಲಿಯೇ ಕಾಳಿಂಗ ಸರ್ಪವು ನೋಡಲು ತುಂಬಾ ಭಯ ಹುಟ್ಟಿಸುವಂತೆ ಇರುತ್ತದೆ.ಅದನ್ನು ರಕ್ಷಿಸಲು ಹೋದಾಗ ಆ ಕಾಳಿಂಗ ಸರ್ಪವು ಮಾಡಿದ್ದು ನೀವು ನೋಡಿದರೆ ಬೆಚ್ಚಿ ಬೀಳುವುದು ಖಚಿತ. ನೋಡುವುದಕ್ಕೂ ಮುಂಚೆ ಸ್ವಲ್ಪ ಹುಷಾರು.

    ಕರ್ನಾಟಕದ ಬೆಳ್ತಂಡಗಿಯಲ್ಲಿರುವಂತಹ ಒಂದು ಮನೆಯ ಸ್ನಾನಗೃಹದಲ್ಲಿ ಕಳೆದ ವಾರ ನಡೆದ ಒಂದು ಘಟನೆ ನಿಜಕ್ಕೂ ಎಂತವರಿಗಾದರೂ ಭಯ ಹುಟ್ಟಿಸುತ್ತದೆ.14 ಅಡಿ ಉದ್ದದ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಾಗ ಮನೆಯವರು ಹಾವು ಹಿಡಿಯುವವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

    ಕೂಡಲೇ ಸ್ಥಳಕ್ಕೆ ಆಗಮಿಸಿದಂತಹ ಹಾವು ರಕ್ಷಕ ಅಶೋಕ್ ಅದನ್ನು ಹಾವಿನ ಬಾಲದಿಂದ ಹಿಡಿದು ಎಳೆಯಲು ಹೋದಾಗ ಅದು ತಕ್ಷಣವೇ ಹೊರಕ್ಕೆ ಬಂದು ತನ್ನ ಕಾಲುಭಾಗ ದೇಹವನ್ನು ಮೇಲಕ್ಕೆ ಎತ್ತಿ ನಿಂತಿರುವಂತಹ ಘಟನೆಯು ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

    ಹಾವು ಹಿಡಿಯುವವರು ಈ ಕಾಳಿಂಗ ಸರ್ಪದ ಕೋಪ ನೋಡಿ ಒಂದು ಕ್ಷಣ ಹೆದರಿದ್ದು ಮಾತ್ರ ನಿಜ. ಯಾವುದೇ ಹಾವನ್ನು ಹಿಡಿಯಬೇಕಾದರೆ ಈ ರೀತಿಯಾಗಿ ಹಿಡಿಯಲು ಹೋದರೆ ಯಾವಾಗ ಹೇಗೆ ಈ ಹಾವುಗಳು ಪ್ರತಿಕ್ರಿಯಿಸುತ್ತವೆ ಹೇಳಲು ಅಸಾಧ್ಯ.

    ಇದರಿಂದ ಹಾವು ಹಿಡಿಯುವವರಿಗೂ ತೊಂದರೆ ಆಗಬಹುದು. ಈ 8 ಸೆಕೆಂಡುಗಳ ವಿಡಿಯೋ ತುಣುಕಿನಲ್ಲಿ ಹಾವು ಹಿಡಿಯುವವರೊಬ್ಬರು ಬಾಗಿಲ ಹೊರಗೆ ನಿಂತು ಕಟ್ಟಿಗೆಯಿಂದ ಹಾವಿನ ಬಾಲ ಹಿಡಿದು ಕೈಹಾಕಿ ಅದನ್ನು ಹೊರಕ್ಕೆ ಎಳೆಯಲು ಹೋಗುತ್ತಾರೆ.

    Never Judge a snake by it's tail ?@Pendrive_Baba pic.twitter.com/ytet6ps7bg



    ತಕ್ಷಣಕ್ಕೆ ಕೋಪಗೊಂಡ ಸರ್ಪ ಒಮ್ಮಿಂದೊಮ್ಮೆಲೆ ಹೊರಕ್ಕೆ ಬಂದು ತನ್ನ ದೇಹವನ್ನು ಸುಮಾರು 4 ಅಡಿವರೆಗೆ ಮೇಲಕ್ಕೆ ಎತ್ತಿಕೊಂಡು ನಿಂತಿರುವುದನ್ನು ನೋಡಿದರೆ ಎಂತವರಿಗೂ ಭಯ ಬೀಳುವಂತೆ ಮಾಡುತ್ತದೆ.

    ಇದನ್ನೂ ಓದಿ: ಹಾವನ್ನು ಮಗುವಿನಂತೆ ಮಾತನಾಡಿಸಿ ಮನೆಯಿಂದ ಹೊರಗೆ ಕಳುಹಿಸಿದ ಮಹಿಳೆ; ವಿಡಿಯೋ ವೈರಲ್

    ಹಾವು ರಕ್ಷಕ ಸಹ ಹಾವು ಹಿಡಿಯಲು ಬಳಸುತ್ತಿದ್ದಂತಹ ಕಟ್ಟಿಗೆಯನ್ನು ಹಾವು ಹೊರಕ್ಕೆ ದಿಢೀರನೆ ಬಂದದ್ದನ್ನು ನೋಡಿ ದೂರಕ್ಕೆ ಎಸೆದಿರುವುದನ್ನೂ ವಿಡಿಯೋದಲ್ಲಿ ನಾವು ಕಾಣಬಹುದಾಗಿದೆ. ಅಬ್ಬಾ ಎಂತಹ ಭಯ ಬೀಳಿಸುವಂತಹ ದೃಶ್ಯ ಅದು.

    ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಾಸ್ವಾನ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಶೀರ್ಷಿಕೆಯಲ್ಲಿ “ಹಾವನ್ನು ಹೇಗೆ ಹಿಡಿಯಬಾರದು, ಅದರಲ್ಲಿಯೂ ಅದು ಕಾಳಿಂಗ ಸರ್ಪವಾಗಿದ್ದರೆ ಹೇಗೆ ಹಿಡಿಯಬಾರದು” ಎಂದು ಬರೆದಿದ್ದಾರೆ.

    ಇದನ್ನೂ ಓದಿ: Viral Video : ‘ರಿಪ್ಪರ್’ ಎಂಬ ಹೆಸರಿನ ಬಾತು ಕೋಳಿ ಮನುಷ್ಯರ ಮಾತನ್ನು ಅನುಕರಣೆ ಮಾಡುತ್ತವೆ; ಅಧ್ಯಯನ

    ಕೊನೆಗೂ ಈ ಕಾಳಿಂಗ ಸರ್ಪವನ್ನು ಹಿಡಿದು ಮರಳಿ ಕಾಡಿನಲ್ಲಿ ಬಿಡಲಾಯಿತು ಎಂದು ಸ್ಥಳೀಯರು ಹೇಳಿದ್ದಾರೆ. ಈ ಭಯ ಬೀಳುವಂತಹ ವಿಡಿಯೋ ನೋಡಿದ ನೆಟ್ಟಿಗರು ಸಹ “ಈ ಹಾವು ಹಿಡಿಯುವವನು ನಿಜಕ್ಕೂ ಅದೃಷ್ಟವಂತ” ಎಂದು ಒಪ್ಪಿಕೊಂಡಿದ್ದಾರೆ.

    ಕಾಳಿಂಗ ಸರ್ಪವು ತನ್ನ ದೇಹದ ಕಾಲುಭಾಗವನ್ನು ಮೇಲಕ್ಕೆ ಎತ್ತಬಹುದು ಮತ್ತು ತುಂಬಾ ಆಕ್ರಮಣಕಾರಿಯೂ ಆಗಬಹುದು ಎಂದು ತಜ್ಞರು ಹೇಳಿದ್ದಾರೆ.
    Published by:Sharath Sharma Kalagaru
    First published: