King Cobra: ಅಬ್ಬಬ್ಬಾ! 1 ವಾರ ಕಾರಿನಲ್ಲಿಯೇ ಅಡಗಿ ಕುಳಿತಿತ್ತಂತೆ ಈ ಕಾಳಿಂಗ ಸರ್ಪ

ಈ ಹಿಂದೆ ಸಹ ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆದಂತಹ ಕೆಲವು ವಿಡಿಯೋಗಳಲ್ಲಿ ಈ ಹಾವುಗಳು ಬಂದು ಅಕ್ಟಿವಾ ಹೊಂಡಾದ ಮಧ್ಯೆ ಇರುವ ಡಿಕ್ಕಿಯಲ್ಲಿ ಬಂದು ಕುಳಿತಿರುವುದನ್ನು ಮತ್ತು ಬೈಕ್ ನ ಹಿಂದಿನ ಚಕ್ರಕ್ಕೆ ಸುತ್ತಿಕೊಂಡಿದ್ದು ನೋಡಿರುತ್ತೇವೆ. ಹೀಗೆ ದ್ವಿಚಕ್ರ ವಾಹನಗಳಲ್ಲಿ ಮತ್ತು ನಾಲ್ಕು ಚಕ್ರಗಳ ವಾಹನಗಳಲ್ಲಿ ಹಾವು ಬಂದು ಕೂತಿರುವುದನ್ನು ನಾವು ನೋಡಿರುತ್ತೇವೆ. ಇಲ್ಲಿಯೂ ಸಹ ಇಂತಹದೇ ಒಂದು ಘಟನೆ ನಡೆದಿದೆ ನೋಡಿ.

ಕಾಳಿಂಗ ಸರ್ಪ

ಕಾಳಿಂಗ ಸರ್ಪ

  • Share this:
ಕೆಲವೊಮ್ಮೆ ನಾವು ನಮ್ಮ ಕಾರನ್ನು (Car) ಇಡೀ ರಾತ್ರಿ ಮನೆಯ ಕಾಂಪೌಂಡಿನ ಹೊರಗೆ ನಿಲ್ಲಿಸಿದಾಗ ಮರುದಿನ ಬೆಳಿಗ್ಗೆ ಅದರಲ್ಲಿ ಏನಾದರೂ ಹೊಕ್ಕಿರಬಹುದೇ ಎಂಬ ಒಂದು ಯೋಚನೆ ನಮ್ಮೆಲ್ಲರ ತಲೆಯಲ್ಲಿ ಸದಾ ಸುತ್ತಾಡುತ್ತಾ ಇರುತ್ತದೆ. ಅದೇನೆಂದರೆ ಕಾರು ಇಡೀ ರಾತ್ರಿಯೆಲ್ಲಾ ಹೊರಗಡೆ ಗಿಡ ಮರಗಳ ಮಧ್ಯೆ ಇಟ್ಟಿದ್ದೇವೆ, ಹಾವುಗಳು (Snakes), ದೊಡ್ಡ ದೊಡ್ಡ ಇಲಿಗಳು, ಹೆಗ್ಗಣಗಳು ಕಾರಿನ ಎಂಜಿನ್ ನಲ್ಲಿ (Engine) ಮತ್ತು ಇನ್ನಿತರೆ ಸ್ಥಳಗಳಲ್ಲಿ ಹೋಗಿ ಕೂತು ಅಲ್ಲಿರುವ ವೈರ್ ಗಳನ್ನು (Wire) ಕಡಿದಿರಬಹುದಾ? ಏನಾದರೂ ನಾಶ ಮಾಡಿರಬಹುದಾ? ಹಾವು ಅವಿತು ಕೂತರೆ ಏನು ಮಾಡೋದು? ಹೀಗೆ ಅನೇಕ ಯೋಚನೆಗಳು ಬಹುತೇಕರ ತಲೆಯಲ್ಲಿ ಬಂದಿರುತ್ತವೆ. 

ಈ ಹಿಂದೆ ಸಹ ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆದಂತಹ ಕೆಲವು ವಿಡಿಯೋಗಳಲ್ಲಿ ಈ ಹಾವುಗಳು ಬಂದು ಅಕ್ಟಿವಾ ಹೊಂಡಾದ ಮಧ್ಯೆ ಇರುವ ಡಿಕ್ಕಿಯಲ್ಲಿ ಬಂದು ಕುಳಿತಿರುವುದನ್ನು ಮತ್ತು ಬೈಕ್ ನ ಹಿಂದಿನ ಚಕ್ರಕ್ಕೆ ಸುತ್ತಿಕೊಂಡಿದ್ದು ನೋಡಿರುತ್ತೇವೆ. ಹೀಗೆ ದ್ವಿಚಕ್ರ ವಾಹನಗಳಲ್ಲಿ ಮತ್ತು ನಾಲ್ಕು ಚಕ್ರಗಳ ವಾಹನಗಳಲ್ಲಿ ಹಾವು ಬಂದು ಕೂತಿರುವುದನ್ನು ನಾವು ನೋಡಿರುತ್ತೇವೆ. ಇಲ್ಲಿಯೂ ಸಹ ಇಂತಹದೇ ಒಂದು ಘಟನೆ ನಡೆದಿದೆ ನೋಡಿ.

ಕಾರಿನ ಎಂಜಿನ್ ನಲ್ಲಿ ಅವಿತು ಕುಳಿತಿದ್ದ ಕಾಳಿಂಗ ಸರ್ಪ
ಒಂದು ಉದ್ದನೆಯ ಕಾಳಿಂಗ ಸರ್ಪವೊಂದು ಕಾರಿನ ಎಂಜಿನ್ ನಲ್ಲಿ ಬಂದು ಕೂತಿದೆ ನೋಡಿ. ಅಷ್ಟೇ ಅಲ್ಲದೆ ಆ ಸರ್ಪವು ಸುಮಾರು 200 ಕಿಲೋ ಮೀಟರ್ ಗೂ ಹೆಚ್ಚು ದೂರ ಕಾರಿನಲ್ಲಿ ಪ್ರಯಾಣಿಸಿ ಒಂದು ವಾರಗಳ ಕಾಲ ಎಂಜಿನ್ ನಲ್ಲಿ ವಾಸಿಸಿದೆ, ತದ ನಂತರ ಅಂತಿಮವಾಗಿ ಕೇರಳದ ವನ್ಯಜೀವಿ ಸಿಬ್ಬಂದಿಯಿಂದ ಈ ಕಾಳಿಂಗ ಸರ್ಪವು ರಕ್ಷಿಸಲ್ಪಟ್ಟಿದೆ ಎಂದು ವಾಹನದ ಮಾಲೀಕರು ತಿಳಿಸಿದ್ದಾರೆ. ಕೇರಳದ ಅರ್ಪೂಕರದಲ್ಲಿ ಈ ಘಟನೆ ವರದಿಯಾಗಿದೆ.

ಇದನ್ನೂ ಓದಿ:  Viral Video: ಕಾಡಿನಿಂದ ನಾಡಿಗೆ ಬಂದ ಗಜರಾಜ, ರಸ್ತೆಯಲ್ಲಿ ರಾಜಾರೋಷವಾಗಿ ಸುತ್ತಾಟ!

10 ಅಡಿ ಉದ್ದದ ಹಾವನ್ನು ವನ್ಯಜೀವಿ ಸಿಬ್ಬಂದಿಗಳು ಬುಧವಾರ ಇಲ್ಲಿನ ವ್ಯಕ್ತಿಯೊಬ್ಬನ ಮನೆಯ ಕಾಂಪೌಂಡ್ ನಿಂದ ರಕ್ಷಿಸಿದ್ದಾರೆ ಮತ್ತು ನಂತರ ಅದನ್ನು ಸುರಕ್ಷಿತವಾದ ಸ್ಥಳದಲ್ಲಿ ಬಿಡುವುದಾಗಿ ಹೇಳಿದ್ದಾರೆ.

ಘಟನೆಯ ಬಗ್ಗೆ ಕಾರಿನ ಮಾಲೀಕರು ಏನು ಹೇಳಿದ್ದಾರೆ 
ವಿಷಪೂರಿತ ಸರೀಸೃಪವು ಮಲಪ್ಪುರಂನ ಅರ್ಪೂಕರದ ನಿವಾಸಿ ಸುಜಿತ್ ಅವರ ಕಾರಿನ ಬಳಿ ತೆವಳಿಕೊಂಡು ಹೋಗಿತ್ತು. ಅಲ್ಲಿನ ವಜಿಕಡವು ಚೆಕ್ ಪೋಸ್ಟ್ ಬಳಿ ಕಾರನ್ನು ನಿಲ್ಲಿಸಿದಾಗ ಹಾವು ಅವರ ಕಾರಿನಲ್ಲಿ ಹೋಗುತ್ತಿರುವುದನ್ನು ಕೆಲವು ಸ್ಥಳೀಯರು ನೋಡಿ ತನಗೆ ತಿಳಿಸಿದ್ದರು ಎಂದು ಅವರು ಹೇಳಿದರು.

ಆದರೆ, ಕಾರಿನ ಮಾಲೀಕ ಎಷ್ಟು ಹುಡುಕಿದರೂ ಸಹ ಆ ಹಾವು ಎಲ್ಲಿ ಅಡಗಿ ಕುಳಿತಿದೆ ಅಂತ ಅವರಿಗೆ ಗೊತ್ತಾಗಲೇ ಇಲ್ಲ.  ಭಾನುವಾರ ಕಾರಿನಿಂದ ಹೊರಗೆ ನೇತಾಡುತ್ತಿದ್ದ ಹಾವಿನ ಚರ್ಮವನ್ನು ನೋಡುತ್ತಿದ್ದಂತೆ ಅವರಲ್ಲಿ ಒಂದು ರೀತಿಯ ಆತಂಕ ಶುರುವಾಗಿದೆ. ಮತ್ತೊಮ್ಮೆ ಅವರು ತಮ್ಮ ಕಾರನ್ನು ಪೂರ್ತಿಯಾಗಿ ತಪಾಸಣೆ ಮಾಡಿಸಿದ್ದಾರೆ, ಆದರೂ ಈ ಹಾವು ಎಲ್ಲಿ ಅಡಗಿ ಕುಳಿತಿದೆ ಎನ್ನುವುದು ಮಾತ್ರ ಅವರಿಗೆ ಗೊತ್ತೇ ಆಗಲಿಲ್ಲವಂತೆ.

ಇದನ್ನೂ ಓದಿ:  Viral Video: ಬರೋಬ್ಬರಿ 14 ಸಿಂಹಗಳ ಬಾಯಿಯಿಂದ ತಪ್ಪಿಸಿಕೊಂಡ ಆನೆ! ಸಾವು ಗೆದ್ದ ಗಜರಾಜನ ವಿಡಿಯೋ ಇಲ್ಲಿದೆ ನೋಡಿ

ಬದಲಾಗಿ, ಒಂದು ದಿನ ಬೆಳಿಗ್ಗೆ ಅವರ ಮನೆಯ ಕಾಂಪೌಂಡ್ ನಲ್ಲಿ ಅದು ಪತ್ತೆಯಾಗಿದೆ. ತನ್ನ ಕಾರಿನಲ್ಲಿ ಹಾವಿರುವ ಶಂಕೆಯ ಬಗ್ಗೆ ಸುಜಿತ್ ಹಂಚಿಕೊಂಡಿರುವ ಅನುಮಾನದ ಬಗ್ಗೆ ನೆರೆಹೊರೆಯವರಿಗೂ ತಿಳಿದಿದ್ದರಿಂದ, ಅವರು ಶೀಘ್ರದಲ್ಲಿಯೇ ವನ್ಯಜೀವಿ ಸಿಬ್ಬಂದಿಗೆ ಮಾಹಿತಿ ನೀಡಿದರು.

ಕಾಳಿಂಗ ಸರ್ಪದ ರಕ್ಷಣೆ 
ಕಾಳಿಂಗ ಸರ್ಪಗಳು ಸಾಮಾನ್ಯವಾಗಿ ಕಂಡುಬರದ ಸ್ಥಳದಲ್ಲಿ ಹಾವಿನ ಉಪಸ್ಥಿತಿಯು ಸ್ಥಳೀಯ ನಿವಾಸಿಗಳಲ್ಲಿ ಕುತೂಹಲ ಮತ್ತು ಕಳವಳವನ್ನು ಉಂಟು ಮಾಡಿತು. ಇದು ವಾಹನದ ಅಡಿಯಲ್ಲಿದ್ದು ಇವತ್ತು ಸುರಕ್ಷಿತವಾಗಿ ಇಲ್ಲಿಗೆ ತಲುಪಿರಬಹುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಅದನ್ನು ಅರಣ್ಯ ಕಚೇರಿಗೆ ಸ್ಥಳಾಂತರಿಸಲಾಯಿತು ಮತ್ತು ಸುರಕ್ಷಿತ ಸ್ಥಳದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.
Published by:Ashwini Prabhu
First published: