ಕಿಕಿ ಡ್ಯಾನ್ಸ್ ಮಾಡಿದ್ದಕ್ಕೆ ರೈಲು ನಿಲ್ದಾಣ ಶುಚಿಗೊಳಿಸುವ ಶಿಕ್ಷೆ !


Updated:August 10, 2018, 7:25 PM IST
ಕಿಕಿ ಡ್ಯಾನ್ಸ್ ಮಾಡಿದ್ದಕ್ಕೆ ರೈಲು ನಿಲ್ದಾಣ ಶುಚಿಗೊಳಿಸುವ ಶಿಕ್ಷೆ !

Updated: August 10, 2018, 7:25 PM IST
ಜೀವಕ್ಕೆ ಅಪಾಯ ತರುವ 'ಕಿಕಿ ಚಾಲೆಂಜ್​' ವಿಶ್ವದೆಲ್ಲೆಡೆ ಹೊಸ ಸಂಚಲನವನ್ನೇ ಮೂಡಿಸಿದೆ, ಭಾರತದಲ್ಲಿ ಪೊಲೀಸ್​ ಇಲಾಖೆ ಇಂತಹ ಅಪಾಯಕಾರಿ ಸ್ಟಂಟ್​ ಚಾಲೆಂಜ್​ ಮಾಡದಂತೆ ಎಷ್ಟೇ ಎಚ್ಚರಿಕೆ ನೀಡಿದ್ದರೂ ಅದನ್ನು ಪಾಲಿಸಿವಂತೆ ಕಾಣಿಸುತ್ತಿಲ್ಲ. ಇದಕ್ಕೆ ಪೂರಕ ಎಂಬಂತೆ ರೈಲು ನಿಲ್ದಾಣದಲ್ಲಿ 'ಕಿಕಿ ಚಾಲೆಂಜ್​' ಮಾಡಲು ಹೋಗಿ ಮುಂಬೈ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಮೂವರಿಗೆ ಸ್ಥಳೀಯ ನ್ಯಾಯಾಲಯ ರೈಲು ನಿಲ್ದಾಣವನ್ನು ಶುಚಿಗೊಳಿಸುವಂತೆ ಆದೇಶಿಸಿದೆ.

ಹೌದು! ಕೆಲ ದಿನಗಳ ಹಿಂದೆ ಯೂಟ್ಯೂಬರ್​ ಶ್ಯಾಮ್​ ಶರ್ಮಾ, ಧೃವ್​ ಶಾ, ನಿಶಾಂತ್​ ಶಾ ಮಹಾರಾಷ್ಟ್ರದ ಪಲ್ಘರ್​ ಜಿಲ್ಲೆಯ ವಸೈ ರೈಲು ನಿಲ್ದಾಣದಲ್ಲಿ 'ಕಿಕಿ ಡ್ಯಾನ್ಸ್'​ ಮಾಡಿ ಯೂಟ್ಯೂಬ್​ಗೆ ಅಪ್ಲೋಡ್​ ಮಾಡಿದ್ದಾರೆ. ಈ ವಿಡಿಯೋ ಸುಮಾರು ಎರಡು ಮಿಲಿಯನ್​ಗೂ ಅಧಿಕ ವೀಕ್ಷಣೆಗೆ ಒಳಪಟ್ಟಿತ್ತು. ಇದಾದ ಬಳಿಕ ಇವರನ್ನು ರೈಲ್ವೇ ಪೊಲೀಸರು ಈ ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಇವರ ವಿಚಾರಣೆ ನಡೆಸಿದ ನ್ಯಾಯಾಲಯ ಮೂವರಿಗೂ ವಸೈ ರೈಲು ನಿಲ್ದಾಣವನ್ನು ಮೂರು ದಿನಗಳ ಕಾಲ ಶುಚಿಗೊಳಿಸುವ ಶಿಕ್ಷೆ ನೀಡಿ ಆದೇಶ ಪ್ರಕಟಿಸಿದೆ. ಮೂರು ದಿನಗಳ ಕಾಲ ಮಂಜಾನೆ 11 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಮತ್ತು ಸಂಜೆ 3 ರಿಂದ 5 ಗಂಟೆವೊಳಗೆ ನಿಲ್ದಾಣವನ್ನು ಶುಚಿಗೊಳಿಸಬೇಕು, ಈ ರೀತಿ ಮಾಡುವುದರಿಂದ ನಾವು ಜನರಿಗೂ ಜಾಗೃತಿಯನ್ನು ಮೂಡಿಸಬಹುದು ಎಂದು ನ್ಯಾಯಾಲಯವೂ ಅಭಿಪ್ರಾಯ ಪಟ್ಟಿದೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ರೈಲಿನಿಂದ ಯುವಕನೊಬ್ಬ ಇಳಿದು ಕಿಕಿ ಹಾಡಿಗೆ ಡ್ಯಾನ್ಸ್​ ಮಾಡುವ ವಿಡಿಯೋವನ್ನು Funcho Entertainment ಎಂಬ ಯೂಟ್ಯೂಬ್​ ಚಾಲೆಂಜ್​ ಅಪ್ಲೋಡ್​ ಮಾಡಿತ್ತು. ಇದರಲ್ಲಿ ಮತ್ತೋರ್ವ ವ್ಯಕ್ತಿ ಯುವಕನ ಡ್ಯಾನ್ಸ್​ನ್ನು ವಿಡಿಯೋ ಮಾಡುತ್ತಿದ್ದ ಹಾಗೂ ಮೂರನೇ ವ್ಯಕ್ತಿ ರೈಲು ಬೋಗಿಯ ಮತ್ತೋಂದು ಬಾಗಿಲಿನಲ್ಲಿ ನಿಂತು ಡ್ಯಾನ್ಸ್​ ವೀಕ್ಷಿಸುತ್ತಿದ್ದ. ಈ ವಿಡಿಯೋ ಭಾರೀ ವೈರಲ್​ ಆಗಿತ್ತು.
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...