80ರ ದಶಕದಲ್ಲೇ 'ಕಿಕಿ' ಸವಾಲಿಗೆ ನಾಂದಿ ಹಾಡಿದ್ದ ಶಂಕರ್​ ನಾಗ್​..!

news18
Updated:August 1, 2018, 7:02 PM IST
80ರ ದಶಕದಲ್ಲೇ 'ಕಿಕಿ' ಸವಾಲಿಗೆ ನಾಂದಿ ಹಾಡಿದ್ದ ಶಂಕರ್​ ನಾಗ್​..!
news18
Updated: August 1, 2018, 7:02 PM IST
ಅನಿತಾ ಈ, ನ್ಯೂಸ್​ 18 ಕನ್ನಡ 

ಕೆಲವೊಂದು ವಿಷಯಗಳಲ್ಲಿ ನಮ್ಮ ಸ್ಯಾಂಡಲ್​ವುಡ್​ ಮಂದಿ ಎಲ್ಲರಿಗಿಂತ ಮುಂದಿರುತ್ತಾರೆ ಅನ್ನೋದು ಸಾಕಷ್ಟು ಬಾರಿ ಸಾಬೀತಾಗಿದೆ. ಈಗ ಟ್ರೆಂಡ್​ ಆಗಿರುವ 'ಕಿಕಿ' ಚಾಲೆಂಜ್​ ಅನ್ನು ನಮ್ಮವರು 80ರ ದಶಕದಲ್ಲೇ ಮಾಡಿ ಬಿಟ್ಟಿದ್ದಾರೆ.

ಕಳೆದ ಕೆಲವ ವಾರಗಳಿಂದ ಎಲ್ಲೆಡೆ ಸದ್ದು ಮಾಡುತ್ತಿರುವ 'ಕಿಕಿ' ಚಾಲೆಂಜ್​ ನಮ್ಮ ಸ್ಯಾಂಡಲ್​ವುಡ್​ಗೆ ಹೊಸತೇನಲ್ಲ. ಚಂದನವನದ ನಟರೊಬ್ಬರು 80ರ ದಶಕದಲ್ಲೇ  ಚಲಿಸುವ ರೈಲು ಹಾಗೂ ವಾಹನದಿಂದ ಇಳಿದು ನೃತ್ಯ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಸದ್ಯ ಸದ್ದು ಮಾಡುತ್ತಿರುವ 'ಕಿಕಿ' ಸವಾಲಿಗೆ ಶಂಕರ್​ ನಾಗ್​ 80ರ ದಶಕದಲ್ಲೇ ಚಾಲನೆ ನೀಡಿದ್ದರು. 1981ರಲ್ಲೇ ತೆರೆಕಂಡ 'ಗೀತಾ' ಸಿನಿಮಾದಲ್ಲಿ 'ಏನೇ ಕೇಳು ಕೊಡುವೆ ನಾನು ನಿನಗೀಗ' ಹಾಡಿನಲ್ಲಿ ಚಲಿಸುವ ರೈಲಿನಿಂದ ಇಳಿದು ಡಾನ್ಸ್​ ಮಾಡುತ್ತಾರೆ. ಅವರ ಆ ಸ್ಟೈಲ್​ಗೆ ಆಗಲೇ ಸಾವಿರಾರು ಮಂದಿ ಫಿದಾ ಆಗಿದ್ದರು.1984ರಲ್ಲಿ ತೆರೆ ಕಂಡ 'ಅಪೂರ್ವ ಸಂಗಮ' ಸಿನಿಮಾದಲ್ಲಿ ರಾಜ್​ಕುಮಾರ್​ ಅವರ ಜತೆ ಮಾಡಿರುವ 'ಭಾಗ್ಯ ಎನ್ನಲೆ...' ಹಾಡಿನಲ್ಲಿ ಅವರು ಚಲಿಸುವ ಜೀಪ್​ನಿಂದ ಇಳಿದು ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.


Loading...

ಶಂಕರ್​ನಾಗ್​ ಕೇವಲ 'ಕಿಕಿ' ಸವಾಲೊಂದೇ ಅಲ್ಲದೆ ಸಾಕಷ್ಟು ವಿಷಯಗಳಲ್ಲಿ ಮುಂದಿದ್ದರು. ಉದಾಹರಣೆಗೆ ಬೆಂಗಳೂರಿಗೆ ಮೆಟ್ರೊ ತರುವ ಕನಸು ಕಂಡ ಮೊದಲ ವ್ಯಕ್ತಿ ಅವರು. ಹೀಗೆ ಶಂಕರ್​ ದಶಗಳ ಹಿಂದೆ ಮಾಡಿದ್ದು ಈಗ ಟ್ರೆಂಡ್​ ಆಗುತ್ತಿದೆ.

ಇನ್ನೂ ಈ 'ಕಿಕಿ' ಜ್ವರ ಚಂದನವನದ ನಟಿ ಪ್ರಣಿತಾರನ್ನೂ ಬಿಟ್ಟಿಲ್ಲ. ಹೌದು ನಮ್ಮ ಪ್ರಣಿತಾ ನಿಂತ ಕಾರಿನಿಂದ ಇಳಿದ ನಂತರ ಚಲಿಸುವ ಕಾರಿನ ಪಕ್ಕದಲ್ಲಿ ಡಾನ್ಸ್​ ಮಾಡುತ್ತಾರೆ. ಆದರೆ ಅವರು ಡಾನ್ಸ್​ ಮಾಡುವುದರಲ್ಲಿ ಮೈ ಮರೆತು, ಮತ್ತೆ ಕಾರಿನ ಹಿಂದೆ ಓಡುವ ವಿಡಿಯೋ ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತದೆ. 
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ