• Home
  • »
  • News
  • »
  • trend
  • »
  • Kidnap Video: ಹಾಡಹಗಲೇ ಮಹಿಳೆಯನ್ನು ಕಿಡ್ನಾಪ್​ ಮಾಡಲು ಯತ್ನ! ಮುಂದೇನಾಯ್ತು?

Kidnap Video: ಹಾಡಹಗಲೇ ಮಹಿಳೆಯನ್ನು ಕಿಡ್ನಾಪ್​ ಮಾಡಲು ಯತ್ನ! ಮುಂದೇನಾಯ್ತು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಾಡಹಗಲೇ ಮಹಿಳೆಯನ್ನು ಕಿಡ್ನಾಪ್​ ಮಾಡಲು ರೌಡಿಗಳು ಪ್ರಯತ್ನ ಪಟ್ಟಿದ್ದಾರೆ. ಆದರೆ ಮಹಿಳೆ ಏನು ಮಾಡಿದರು ಗೊತ್ತಾ? ನೀವೇ ನೋಡಿ ವಿಡಿಯೋ

  • News18 Kannada
  • Last Updated :
  • Hariyawan, India
  • Share this:

ನಾವು ಸಣ್ಣವರಿದ್ದಾಗ ಜಾಸ್ತಿಯಾಗೆ ಹೊರಗಡೆ ಆಡಲು ಹೋಗುತ್ತೇವೆ ಅಥವಾ ಹೇಳದೇ ಕೇಳದೇ ಆಚೆ ಈಚೆ ಓಡುತ್ತೇವೆ ಅಂತ ನಿಮ್ಮನ್ನ ಯಾರದರೂ ಬಂದು ಕಿಡ್ನಪ್ (Kidnap)​ ಮಾಡ್ತಾರೆ ಹೀಗೆ ಹೋಗಬಾರದು ಅಂತ ನಮ್ಮ ಪೋಷಕರು ನಮ್ಮನ್ನು ಹೆದರಿಸುತ್ತಾ ಇದ್ದರು ಅಲ್ವಾ? ಆಗ ನಾವು ಸುಮ್ಮನೆ ನಮ್ಮ ಪಾಡಿಗೆ ನಾವು ಇರುತ್ತಾ ಇದ್ದೆವು. ಇದೊಂದು ನಮ್ಮನ್ನ ಭಯ (Fear) ಬೀಳಿಸಲು ಮತ್ತು ಎಚ್ಚರದಿಂದ ಇರಲು ನಮ್ಮ ಪೋಷಕರು ಮಾಡ್ತಾ ಇದ್ದ ಪ್ಲಾನ್​ ಅಷ್ಟೇ. ಆದರೆ, ಬರ್ತಾ ಬರ್ತಾ ಇದು ನಿಜ ಆಗಲು ಆರಂಭವಾಯ್ತು. ಕಿಡ್ನಪ್​ ಕೇಸ್​ಗಳು ಆರಂಭವಾಯ್ತು. ಕೇಳ್ತಾ ನಿಜಕ್ಕೂ ಶಾಕ್ (Shock)​  ಆಗ್ತಾ ಇದ್ವಿ. ಅದರಲ್ಲೂ ಮಕ್ಕಳನ್ನು ಹಿಡಿಯುವ ಕಳ್ಳರು ಎಲ್ಲಾ ಹೆಚ್ಚಾಗ್ತಾ ಇದ್ದಾರೆ ಅಂದಾಗಂತೂ, ಎದೆಯಲ್ಲಿ ಪುಕ ಪುಕ ಅಂತ ಭಾಸವಾಗ್ತಾ ಇತ್ತು.


ಅದೇ ರೀತಿಯಾಗಿ ಒಂದಷ್ಟು ದಿನಗಳ ಕಾಲ ಈ ಕಿಡ್ನಪ್​ ಕೇಸ್​ಗಳು ಕಮ್ಮಿ ಆಗಿದ್ವು. ಆದರೆ ಇತ್ತೀಚಿನ ಕಾಲದಲ್ಲಿ ಮತ್ತೇ ಈ ಕೇಸ್​ಗಳು ಹೆಚ್ಚಾಗ್ತಾ ಇದೆ. ಯೆಸ್​, ಇಂತದ್ದೇ ಒಂದು ಘಟನೆ ಇದೀಗ ನಡೆದಿದೆ. ಹರಿಯಾಣದ ಯಮುನಾ ನಗರದಲ್ಲಿ ಮಹಿಳೆಯೊಬ್ಬರು ಶನಿವಾರ ಅಪಹರಣ ಯತ್ನದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ಸಂಪೂರ್ಣ ಘಟನೆ ಸಮೀಪದಲ್ಲೇ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.


ದೃಢೀಕರಿಸದ ವರದಿಗಳ ಪ್ರಕಾರ, ಮಹಿಳೆ ಕಿರುಚಿಕೊಂಡು ಹೋರಾಡಿದ ನಂತರ ನಾಲ್ವರು ತಮ್ಮ ಅಪಹರಣ ಪ್ರಯತ್ನವನ್ನು ಕೈಬಿಟ್ಟರು ಮತ್ತು ಓಡಿಹೋದರು. ಆದಾಗ್ಯೂ, ಆಪಾದಿತ ಅಪರಾಧದ ಹಿಂದಿನ ಸತ್ಯವನ್ನು ಪತ್ತೆಹಚ್ಚಲು ಮತ್ತು ನಿಖರವಾಗಿ ಏನಾಯಿತು ಎಂಬುದನ್ನು ಕಂಡುಹಿಡಿಯಲು ಪೊಲೀಸರು ಈ ವಿಷಯವನ್ನು ತನಿಖೆ ಮಾಡುತ್ತಿದ್ದಾರೆ.


ಇದನ್ನೂ ಓದಿ: ಈ ವಿಷ್ಯ ಗೊತ್ತಾದ್ರೆ ನೀವು ಸೆಲ್ಫಿ ತೆಗ್ಯೋದನ್ನೇ ಸ್ಟಾಪ್​ ಮಾಡ್ತೀರ!


ವೀಡಿಯೊದಲ್ಲಿ,ಇಬ್ಬರು ವ್ಯಕ್ತಿಗಳು ನಿಲ್ಲಿಸಿದ ಕಾರಿನ ಬಳಿಗೆ ನಡೆದು ನಂತರ ಅದನ್ನು ಪ್ರವೇಶಿಸಿ ಬಾಗಿಲು ಮುಚ್ಚುವುದನ್ನು ಕಾಣಬಹುದು. ಸ್ವಲ್ಪ ಸಮಯದ ನಂತರ ಅವರು ಕಾರಿನಿಂದ ಹೊರದಬ್ಬುವುದು ಮತ್ತು ಓಡಿಹೋಗುವುದು ಕಂಡುಬರುತ್ತದೆ. ಯಮುನಾನಗರ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಡಿಎಸ್ಪಿ) ಪ್ರಕಾರ, ನಾಲ್ವರು ಮಹಿಳೆಯ ಕಾರಿಗೆ ನುಗ್ಗಿ ಆಕೆಯನ್ನು ಅಪಹರಿಸಲು ಪ್ರಯತ್ನಿಸಿದರು.


 ಜಿಮ್‌ ಮುಗಿಸಿ ಕಾರಿನೊಳಗೆ ಕುಳಿತಾಗ ನಾಲ್ವರು ಆಕೆಯನ್ನು ಅಪಹರಿಸಲು ಯತ್ನಿಸಿದರು. ಒಬ್ಬ ಆರೋಪಿ ಸಿಕ್ಕಿಬಿದ್ದಿದ್ದಾನೆ ಎಂದು ಡಿಎಸ್‌ಪಿ ತಿಳಿಸಿದ್ದಾರೆ.

ತನಿಖೆ ಮುಗಿದ ನಂತರವೇ ಆರೋಪಿಗಳ ಉದ್ದೇಶ ಸ್ಪಷ್ಟವಾಗಲಿದೆ ಎಂದು ಹೇಳಿದರು.
ಈ ಕುರಿತು ತನಿಖೆ ನಡೆಯುತ್ತಿದೆ.


ಅಬ್ಬಬ್ಬಾ ಈ ವಿಡಿಯೋ ನೋಡ್ತಾ ಇದ್ರೆ   ಎಂಥವರಿಗಾದ್ರೂ ಭಯ ಆಗುತ್ತೆ. ಯಾಕಂದ್ರೆ ಸುಮ್ಮನೆ ಪಾರ್ಕಿಂಗ್​ ಮಾಡಿದ್ದ ಸ್ಥಳಕ್ಕೆ ಬಂದು ಕಿಡ್ನಾಪ್​ ಮಾಡ್ತಾರೆ ಅದೂ ಕೂಡ ಹಾಡುಹಗಲೇ ಮಾಡ್ತಾರೆ ಅಂದ್ರೆ ನಂಬಲು ಆಗದೇ ಇರುವ ವಿಚಾರ ಅಂತ ಹೇಳಬಹುದು. ಸಾಮಾನ್ಯವಾಗಿ ಕಿಡ್ನಾಪ್​ ಮಾಡುವುದು ಹಣಕ್ಕಾಗಿ, ಇಲ್ಲದಿದ್ದಲ್ಲಿ ದ್ವೇಷಕ್ಕಾಗಿದೆ. ಈ ಕೇಸ್​ನಲ್ಲಿ ಏನಾಗಿದೆ ಎಂದು ಸಧ್ಯದಲ್ಲೇ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. 


First published: