ಅಡುಗೆ ಮನೆ (Kitchen) ಈಗಲೂ ವಿಶ್ವದಾದ್ಯಂತ ಹೆಣ್ಣುಮಕ್ಕಳಿಗೆ (Ladies) ಮೀಸಲು ಎಂಬಂತೆಯೇ ಇದೆ. ಈ ಕೋಣೆಯಲ್ಲಿ ಗಂಟೆಗಟ್ಟಲೆ ಸಂಬಳರಹಿತವಾಗಿ ದುಡಿಯುವ ಮಹಿಳೆಯರ ಪಾಲಿಗೆ ಅಡುಗೆ (cooking) ಕೆಲಸ ಕೃತಜ್ಞತೆ ಇಲ್ಲದ ಕೆಲಸವಾಗಿಯೇ ಉಳಿದುಕೊಂಡು ಬಂದಿದೆ. ಇದು ಸಮಾಜದ ಎದುರಾಗಿರುವ ಅತಿ ದೊಡ್ಡ ದುರಂತ ಇದು ಎನ್ನಬಹುದು.ಆದರೆ, ಇಲ್ಲೊಬ್ಬ ಪೋರ ತನ್ನ ತಾಯಿ ಅಡುಗೆ ಮನೆಯಲ್ಲಿ ಬಿಡುವಿಲ್ಲದ ಕೆಲಸದಲ್ಲಿ ತೊಡಗಿಕೊಂಡಿರುವುದರಿಂದ ಬೇಸರ ಪಟ್ಟುಕೊಂಡು ಮನೆಗೆ ಬಂದ ಅತಿಥಿಗಳಿಗೆ ನೇರ ಅವರ ಮನೆ ದಾರಿ ತೋರಿಸುವ ಮೂಲಕ ನೆಟ್ಟಿಗರಿಂದ ಭಾರಿ ಪ್ರಶಂಸೆಗೆ ಒಳಗಾಗಿದ್ದಾನೆ. ಈ ಮೂಲಕ ಮಕ್ಕಳು ತಮ್ಮ ಪೋಷಕರ ಬಗ್ಗೆ ಇಟ್ಟುಕೊಂಡಿರುವ ಅಭಿಮಾನ, ಪ್ರೀತಿಯನ್ನು ನಾವ್ಯಾರು ಉಡಾಫೆಯಾಗಿ ನೋಡಬಾರದು ಎಂಬ ಸಂದೇಶ ರವಾನಿಸಿದ್ದಾನೆ.
ಈ ಕತೆಯು ಪೋರನೊಬ್ಬ ತನ್ನ ತಾಯಿ ತನ್ನ ತಂದೆಯ ಗೆಳೆಯರಿಗೆ ವಿರಾಮವಿಲ್ಲದಂತೆ ಅಡುಗೆ ಮಾಡುತ್ತಿರುವುದನ್ನ ಹಾಗೂ ಬಿಡುವಿಲ್ಲದಂತೆ ಕೆಲಸದಲ್ಲಿ ತೊಡಗಿಕೊಂಡಿರುವುದನ್ನು ನೋಡಿದ ಪೋರನೊಬ್ಬ ತೀವ್ರ ಕ್ಷೋಭೆಗೊಳಗಾಗಿ, ಮನೆಗೆ ಬಂದಿದ್ದ ಅತಿಥಿಗಳಿಗೆ "ಊಟ ಮುಗಿಸಿ ನೇರ ಮನೆಗೆ ತೆರಳಿ" ಎಂದು ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಮನೆಗೆ ಬಂದ ಅತಿಥಿಗಳ ಕಾರಣಕ್ಕೆ ತನ್ನ ತಾಯಿ ಅಡುಗೆ ಕೋಣೆಯಲ್ಲಿ ಮತ್ತಷ್ಟು ಕಾಲ ಬಿಡುವಿಲ್ಲದ ಕೆಲಸಗಳಲ್ಲಿ ತೊಡಗಿಕೊಳ್ಳಬೇಕಾದೀತು ಎಂಬ ಕಾಳಜಿ ಆ ಪೋರನ ಅಂತಹ ನಿಲುವಿಗೆ ಕಾರಣವಾದಂತಿದೆ. ಹೆಣ್ಣುಮಕ್ಕಳು ಎಲ್ಲ ಕಡೆಯೂ ತಮ್ಮ ಸಂಬಳ ರಹಿತ ಅಡುಗೆ ಕೆಲಸ ಮಾಡುತ್ತಿರುವುದು ಮತ್ತು ಅವರಿಗೆ ಗೌರವ ಸಿಗದಿರುವುದು ಗುಟ್ಟಿನ ಸಂಗತಿಯೇನಲ್ಲ. ಇತ್ತೀಚಿನ ಘಟನೆಯೊಂದರಲ್ಲಿ ಹೆಣ್ಣು ಮಗಳೊಬ್ಬಳು ತನ್ನ ಪತಿಯ ಸ್ನೇಹಿತರಿಗಾಗಿ ಅಡುಗೆ ಕೊಣೆ ಕೆಲಸದಲ್ಲಿ ಬಿಡುವಿಲ್ಲದಂತೆ ತೊಡಗಿಸಿಕೊಂಡು, ವಿವಿಧ ಬಗೆಯ ಆಹಾರ ಖಾದ್ಯಗಳನ್ನು ತಯಾರಿಸುತ್ತಿದ್ದಳು.
ಇದನ್ನೂ ಓದಿ: ತಲೆ ಕೂದಲಿನ ಮೇಲೆ ಅದೇನು ಪ್ರೀತಿ.. 30 ವರ್ಷದಿಂದ ಕೂದಲೇ ಕತ್ತರಿಸಿಲ್ಲವಂತೆ ಈಕೆ
ತನ್ನ ಗೆಳೆಯನ ಮಗನೊಬ್ಬ ಅಡುಗೆ ಕೋಣೆಯಿಂದ ಭೋಜನದ ಮೇಜಿಗೆ ಆಹಾರ ಖಾದ್ಯಗಳನ್ನು ತರುತ್ತಿರುವ ವಿಡಿಯೋ ಮಾಡಿದ್ದು, ಈ ವಿಡಿಯೋ ಟ್ವಿಟ್ಟರ್ ವೇದಿಕೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಸಂದರ್ಭದಲ್ಲಿ ವಿಡಿಯೋ ಮಾಡುತ್ತಿದ್ದ ವ್ಯಕ್ತಿ, "ಓ ದೇವರೇ ಈ ಮಕ್ಕಳು ತನ್ನ ತಂದೆಗೆ ನೆರವಾಗುತ್ತಿದ್ದಾರೆ" ಎಂದು ಹೇಳಿದ್ಧಾನೆ.
ಆ ಮಾತಿನಿಂದ ಕೆರಳಿರುವ ಪುಟ್ಟ ಪೋರ, "ಯಾರು ಅತಿಥಿಗಳು?" ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಅತಿಥಿಗಳ ಪೈಕಿ ಒಬ್ಬಾತ "ನಾನೇ ಅತಿಥಿ" ಎಂದು ಉತ್ತರಿಸಿದ್ದಾನೆ. ಈ ಮಾತಿನಿಂದ ಸಿಟ್ಟು ಮಾಡಿಕೊಂಡ ಹುಡುಗ , "ನಿಮಗೆ ಸ್ವಾಗತವಿಲ್ಲ" ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾನೆ. ಇದನ್ನ ವಿಡಿಯೋ ಮಾಡುತ್ತಿದ್ದ ವ್ಯಕ್ತಿ, "ಯಾಕೆ?" ಎಂದು ಪ್ರಶ್ನಿಸಿದ್ದಾನೆ. ಈ ಪ್ರಶ್ನೆಯಿಂದ ಮತ್ತಷ್ಟು ಕೆರಳಿರುವ ಆ ಪೋರ, "ನನ್ನ ತಾಯಿ ನಿನ್ನೆಯಿಂದ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ನೀವೆಲ್ಲ ಊಟ ಮಾಡಿ, ನೇರ ನಿಮ್ಮ ಮನೆಗೆ ತೆರಳಿ" ಎಂದು ಹೇಳಿದ್ದು, ಭೋಜನದ ಮೇಜಿನ ಮುಂದೆ ಸೇರಿದ್ದ ಎಲ್ಲರನ್ನೂ ಒಂದು ಕ್ಷಣ ದಿಗ್ಭ್ರಮೆಗೊಳಿಸಿದೆ.
ತನ್ನ ಪುತ್ರನ ಈ ಆಕ್ರೋಶವನ್ನು ನೋಡಿ ಸ್ವತಃ ಅತನ ತಂದೆಯ ನಗುವಿನ ಕಟ್ಟೆಯೊಡೆದಿದ್ದು, ಆತನನ್ನು ಶಾಂತಗೊಳಿಸಲು ಮುಂದಾಗಿದ್ದಾನೆ.
ಇನ್ನು ಮುಂದೆ ನೀವು ನಿಮ್ಮ ಪತ್ನಿಯರನ್ನು ಅಡುಗೆ ಕೋಣೆಯಲ್ಲಿ ಬಿಡುವಿಲ್ಲದ ಕೆಲಸ ಮಾಡಿಸುವ ಮುನ್ನ ನಿಮ್ಮ ಸೂಕ್ಷ್ಮ ಮನಸ್ಸಿನ ಮಕ್ಕಳು ತನ್ನ ತಾಯಿ ಅಡುಗೆ ಕೋಣೆಯಲ್ಲಿ ಹೈರಾಣಾಗುವುದನ್ನು ಕಂಡು ಹೇಗೆ ಪ್ರತಿಕ್ರಿಯಿಸಬಹುದು ಎಂಬ ಕುರಿತು ಎಚ್ಷರವಾಗಿರಿ. ಅದರಲ್ಲೂ ಮಕ್ಕಳು ತಮ್ಮ ತಾಯಿಯು ಅಡುಗೆ ಕೋಣೆಯಲ್ಲಿ ಪಡುತ್ತಿರುವ ಕಷ್ಟವನ್ನು ಕಂಡು ಮನೆಗೆ ಬಂದ ಅತಿಥಿಗಳ ಎದುರು ಸಿಟ್ಟು ಮಾಡಿಕೊಂಡರೆ ಎಂತಹ ಮುಜುಗರಕ್ಕೀಡಾಗಬೇಕಾಗುತ್ತದೆ ಎಂಬ ಎಚ್ಚರಿಕೆ ನಿಮಗಿರಲಿ.
ಇದನ್ನೂ ಓದಿ: ಈರುಳ್ಳಿ ಕತ್ತರಿಸುವ ಹೆಣ್ಣು ಮಕ್ಕಳೇ ಕೇಳಿ.. ಮಾರುಕಟ್ಟೆಗೆ ಬಂದಿದೆ ಹೊಸ ತಳಿಯ ಕಣ್ಣೀರು ತರಿಸದ ಈರುಳ್ಳಿ!
ಪುಟ್ಟ ಮಕ್ಕಳು ತನ್ನ ತಾಯಿ ಅಡುಗೆ ಕೋಣೆಯಲ್ಲಿ ಪಡುವ ಪಾಡು ಕಂಡು ಸಿಟ್ಟು ಮಾಡಬಾರದು ಎಂದರೆ, ನಿಮ್ಮ ಪತ್ನಿಯೊಂದಿಗೆ ಅಡುಗೆ ಕೆಲಸದಲ್ಲಿ ನೀವೂ ಸಹಕರಿಸಿ. ಸಾಧ್ಯವಾದಷ್ಟೂ ಆಹಾರ ಖಾದ್ಯಗಳು ಮನೆಗೆ ಅತಿಥಿಗಳು ಬರುವ ಮುನ್ನವೇ ಭೋಜನದ ಮೇಜನ್ನು ಅಲಂಕರಿಸಿರುವಂತೆ ಜಾಗ್ರತೆ ವಹಿಸಿ. ಆಗ ನೀವು ಪುಟ್ಟ ಮಕ್ಕಳಿಂದ ಮನೆಗೆ ಬಂದ ಅತಿಥಿಗಳ ಎದುರು ಮೇಲಿನಂತೆ ಮುಜುಗರಕ್ಕೀಡಾಗುವುದು ತಪ್ಪುತ್ತದೆ. ಅಲ್ಲದೆ ಇಂತಹ ಘಟನೆಗಳಿಂದ ನೀವು ಹಾಗೂ ನಿಮ್ಮ ಮಕ್ಕಳಿಬ್ಬರೂ ಮಾನಸಿಕ ಒತ್ತಡ, ಆಘಾತಕ್ಕೆ ಒಳಗಾಗುವುದು ತಪ್ಪುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ