Kotigobba-3 Release Date: ಕಿಚ್ಚನ ಬಹುನಿರೀಕ್ಷಿತ ಸಿನಿಮಾ ಕೋಟಿಗೊಬ್ಬ-3 ರಿಲೀಸ್ ಡೇಟ್ ಅನೌನ್ಸ್

ಬಹುನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾ ಬಿಡುಗಡೆಯ ದಿನಾಂಕವನ್ನ ಚಿತ್ರತಂಡ ಅನೌನ್ಸ್ ಮಾಡಿದೆ. ಚಿತ್ರ ಇದೇ ಅಕ್ಟೋಬರ್ 14ರಂದು ಬೆಳ್ಳಿ ಪರದೆಗೆ ಎಂಟ್ರಿ ಕೊಡಲಿದೆ.

ಕೋಟಿಗೊಬ್ಬ 3 ಪೋಸ್ಟರ್​

ಕೋಟಿಗೊಬ್ಬ 3 ಪೋಸ್ಟರ್​

 • Share this:
  ಚಂದನವನದ ಸ್ವಾತಿಮುತ್ತು ಅಂದ್ರೆ ಅದು ಅಭಿನಯ ಚಕ್ರವರ್ತಿ ಸುದೀಪ್ (Sudeep). ಕೊರೊನಾ ಮತ್ತು ಲಾಕ್ಡೌನ್ ನಿಂದ ತೆರೆಗೆ ಅಪ್ಪಳಿಸಬೇಕಿದ್ದ ಸುದೀಪ್ ಚಿತ್ರಗಳು ತಡವಾಗುತ್ತಿವೆ. ಆದರೆ ಇಂದು ಕಿಚ್ಚನ ಅಭಿಮಾನಿ ಬಳಗಕ್ಕೆ ಗುಡ್ ನ್ಯೂಸ್ ಸಿಕ್ಕಿದೆ. ಬಹುನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾ ಬಿಡುಗಡೆಯ ದಿನಾಂಕವನ್ನ ಚಿತ್ರತಂಡ ಅನೌನ್ಸ್ ಮಾಡಿದೆ. ಚಿತ್ರ ಇದೇ ಅಕ್ಟೋಬರ್ 14ರಂದು ಬೆಳ್ಳಿ ಪರದೆಗೆ ಎಂಟ್ರಿ ಕೊಡಲಿದೆ. ಇನ್ನೂ ರಿಲೀಸ್ ಡೇಟ್ ಕೇಳುತ್ತಿದ್ದಂತೆ ಪೈಲ್ವಾನ್ ನ ಅಭಿಮಾನಿಗಳ ಬಳಗ ದಿನಾಂಕವನ್ನ ಮೊಬೈಲ್ ಗಳಲ್ಲಿ ಸೇವ್ ಮಾಡಿಕೊಂಡ್ರೆ, ಕೆಲವರು ಟಿಕೆಟ್ ಸಿಗುತ್ತಾ ಅಂತ ಗೂಗಲ್ ಜಾಲಾಡುತ್ತಿದ್ದಾರೆ.

  ಜೂನ್ ನಲ್ಲಿಯೇ ಸುಳಿವು ನೀಡಿದ್ದ ಕಿಚ್ಚ

  ಜೂನ್ 21ರಂದು ಟ್ವೀಟ್ ಮಾಡಿದ್ದ ಸುದೀಪ್​​ ಚಿತ್ರ ಬಿಡುಗಡೆಯ ದಿನಾಂಕವನ್ನ ಶೀಘ್ರದಲ್ಲಿಯೇ ಘೋಷಿಸುವ ಸುಳಿವು ನೀಡಿದ್ದರು. ಅಂದು ಚಿತ್ರದ ತಮ್ಮ ಪಾತ್ರಕ್ಕೆ ಧ್ವನಿ ನೀಡುತ್ತಿರುವ ಸಿಹಿ ಸುದ್ದಿಯನ್ನು ಸುದೀಪ್ ಹಂಚಿಕೊಂಡಿದ್ದರು. ಕೋಟಿಗೊಬ್ಬ-3 ಚಿತ್ರದ ವಾಯ್ಸ್ ಗಾಗಿ ಮತ್ತೊಮ್ಮೆ ಮೈಕ್ ಮುಂದೆ ಬಂದಿದ್ದೇನೆ. ಬಹು ದಿನಗಳ ನಂತರ ಸತ್ಯ ಹಾಗೂ ಶಿವನಾಗಿ ಜೀವಿಸುತ್ತಿದ್ದೇನೆ. ಈಗಾಗಲೇ ಚಿತ್ರದ ಎಲ್ಲ ಕಲಾವಿದರು ಕಂಠದಾನ ಮಾಡಿದ್ದು, ಇಂದು ನಾನು ಡಬ್ಬಿಂಗ್ ಮಾಡುತ್ತಿದ್ದೇನೆ ಎಂದು ತಿಳಿಸಿದ್ದರು.

  ಸತ್ಯ, ಶಿವ ಪಾತ್ರದಲ್ಲಿ ಸುದೀಪ್

  ಕೋಟಿಗೊಬ್ಬ (Kotigobba) ಮೊದಲ ಮತ್ತು ಎರಡನೇ ಭಾಗದಲ್ಲಿ ಸುದೀಪ್ ಸತ್ಯ ಹಾಗೂ ಶಿವ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮನರಂಜನೆ ನೀಡಿದ್ದರು. ಈಗ ಮೂರನೇ ಭಾಗದಲ್ಲಿ ಇದೇ ಎರಡು ಪಾತ್ರದಲ್ಲಿ ಬರುತ್ತಿರುವ ಸುದೀಪ್ ಕಣ್ತುಂಬಿಕೊಳ್ಳಲು ಅಭಿಮಾನಿ ಗಣ ಕಾತುರದಿಂದ ಕಾಯುತ್ತಿದೆ. ಚಿತ್ರದ ಪೋಸ್ಟರ್ ಮತ್ತು ಟೀಸರ್ ಪ್ರೇಕ್ಷಕರ ಮುಂದೆ ಬಂದಿದ್ದು, ಔಟ್ ಆಫ್ ಔಟ್ ಮಾಕ್ರ್ಸ್ ತೆಗೆದುಕೊಂಡಿವೆ.

  ಬಹುತಾರಾಗಣದ ಕೋಟಿಗೊಬ್ಬ 3

  ಶಿವ ಕಾರ್ತಿಕ್ ಆಕ್ಷನ್ ಕಟ್ ಹೇಳಿರುವ ಕೋಟಿಗೊಬ್ಬ-3 ಸಿನಿಮಾದಲ್ಲಿ ಸುದೀಪ್ ಗೆ ನಾಯಕಿಯಾಗಿ ಮಡೋನಾ ಸೆಬಾಸ್ಟಿಯನ್ (Madonna Sebastian) ನಟಿಸಿದ್ದಾರೆ. ಶ್ರದ್ಧಾ ದಾಸ್ (Shraddha Das), ಅಫ್ತಾಬ್ ಶಿವದಾಸನಿ, ರವಿ ಶಂಕರ್, ಆಶಿಕಾ ರಂಗನಾಥ್ (Ashika Ranganath) ಸೇರಿದಂತೆ ದೊಡ್ಡ ತಾರಾ ಬಳಗವನ್ನು ಹೊಂದಿದೆ. ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಮೊದಲ ಬಾರಿಗೆ ಕನ್ನಡಕ್ಕೆ ಬಂದಿದ್ದಾರೆ. ಶಿವದಾಸನಿ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ.  ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತವಿದೆ.

  ಇದನ್ನೂ ಓದಿ: Sandalwood: ಒಂದೇ ದಿನ ಸಲಗ, ಕೋಟಿಗೊಬ್ಬ 3 ಬಿಡುಗಡೆ; ಸ್ಟಾರ್ ವಾರ್ ಆತಂಕ, ಈ ಬಗ್ಗೆ ಕಿಚ್ಚ ಸುದೀಪ್, ದುನಿಯಾ ವಿಜಯ್ ಹೇಳಿದ್ದೇನು?

  ಶೇ.100ರಷ್ಟು ಆಸನ ಭರ್ತಿಗೆ ಅವಕಾಶ

  ಕೊರೊನಾ ಹಿನ್ನೆಲೆ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಮಾತ್ರ ಆಸನ ಭರ್ತಿಗೆ ಸರ್ಕಾರ ಅವಕಾಶ ನೀಡಿತ್ತು. ಶುಕ್ರವಾರ ಸಭೆ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ರಾಜ್ಯದಲ್ಲಿ ಕೋವಿಡ್ ಸೋಂಕು ಹರಡುವಿಕೆ ಪ್ರಮಾಣ ಕಡಿಮೆಯಾದ ಹಿನ್ನೆಲೆ ಕೆಲವು ನಿರ್ಬಂಧಗಳೊಂದಿಗೆ ಚಿತ್ರಮಂದಿರ ತೆರೆಯಲು ಅನುಮತಿ ನೀಡಿದ್ದಾರೆ. ಇತ್ತೀಚೆಗಷ್ಟೇ ಸ್ಯಾಂಡಲ್ವುಡ್ ನಿರ್ಮಾಪಕರು ಶೇ.100ರಷ್ಟು ಆಸನಭರ್ತಿಗೆ ಅನುಮತಿ ನೀಡಬೇಕೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (K Sudhakar) ಬಳಿ ಮನವಿ ಮಾಡಿಕೊಂಡಿದ್ದರು. ಶೇ.100 ಆಸನ ಭರ್ತಿಗೆ ಅವಕಾಶ ನೀಡಿದ ಬೆನ್ನಲ್ಲೇ ಭಜರಂಗಿ 2, ಸಲಗ, ಅರ್ಜುನ್ ಗೌಡ, ವಿಕ್ರಾಂತ್ ರೋಣ, ಕೆಜಿಎಫ್ ಚಾಪ್ಟರ್-2 ಬಿಡುಗಡೆಗೆ ತಯಾ ನಡೆಸಿವೆ.

  ವರದಿ: ಮಹ್ಮದ್​ ರಫೀಕ್​ ಕೆ
  Published by:Kavya V
  First published: