ಪೊಲೀಸರು ಎಂದರೆ ನಮ್ಮ ಕಣ್ಮುಂದೆ ಬರುವಂತಹ ಚಿತ್ರಣವೆಂದರೆ ಖಾಕಿ ಬಟ್ಟೆ, ಕೈಯಲ್ಲಿ ಲಾಠಿ ಮತ್ತು ಯಾರಿಗಾದರೂ ಭಯ ಹುಟ್ಟಿಸುವ ಅವರ ಧ್ವನಿ. ಆದರೆ ಯಾವತ್ತಾದರೂ ಪೊಲೀಸ್ ವಾದ್ಯವೃಂದ ಸಂಗೀತ ನುಡಿಸುವುದನ್ನು ಕೇಳಿದ್ದೀರಾ.ಈ ವಿಡಿಯೋದಲ್ಲಿ ಪೊಲೀಸರು ಸಂಗೀತ ವಾದ್ಯಗಳೊಂದಿಗೆ ಕಾಣಿಸಿಕೊಂಡಿದ್ದು, ಎಷ್ಟು ಚೆನ್ನಾಗಿ ಯಾವ ಸಂಗೀತ ನುಡಿಸಿದ್ದಾರೆ ಅಂತ ನೀವೇ ಒಮ್ಮೆ ನೋಡಿ.ಅದರಲ್ಲೂ, ಏನಾದರೊಂದು ವಿನೂತನ ಪ್ರಯತ್ನದಿಂದ ಸುದ್ದಿಯಲ್ಲಿರುವ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಸಕ್ರಿಯೆಯಾಗಿರುವ ಮುಂಬೈ ಪೊಲೀಸ್ ಇಲಾಖೆ ಇತ್ತೀಚೆಗೆ ತಮ್ಮ ಪೊಲೀಸ್ ಬ್ಯಾಂಡ್ ವಿನೂತನವಾಗಿ ನುಡಿಸಿದ ಒಂದು ವಿಡಿಯೋವನ್ನು ನೋಡಿದರೆ ನೀವು ಭೇಷ್ ಎನ್ನದೆ ಇರಲು ಸಾಧ್ಯವೇ ಇಲ್ಲ.
ಮುಂಬೈ ಪೊಲೀಸ್ ಇಲಾಖೆಯ ಅಧಿಕಾರಿಗಳು ತಮ್ಮ ಕೆಲಸದಲ್ಲಿ ಉತ್ತಮವಲ್ಲದೆ ದೇಶದ ಉನ್ನತ ಬ್ಯಾಂಡ್‌ಗಳಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಮುಂಬೈ ಪೊಲೀಸ್ ಇಲಾಖೆ ತಮ್ಮ ಟ್ವಿಟ್ಟರ್ ಮತ್ತು ಯೂಟ್ಯೂಬ್‌ನಲ್ಲಿ 2 ನಿಮಿಷಗಳ ಮಾಂಟಿ ನಾರ್ಮನ್ ಅವರ ‘ಜೇಮ್ಸ್ ಬಾಂಡ್ ಥೀಮ್’ ನುಡಿಸಿದ್ದು, ಕೇಳಿದರೆ ರೋಮಾಂಚನ ಆಗುತ್ತದೆ.
ವಿಡಿಯೋದಲ್ಲಿ ಪೊಲೀಸರು ಖಾಕಿ ಸಮವಸ್ತ್ರ ಧರಿಸಿದ್ದು, ನಾನಾ ಬಗೆಯ ಸಂಗೀತ ವಾದ್ಯಗಳನ್ನು ನುಡಿಸುತ್ತಿರುವುದನ್ನು ಕಾಣಬಹುದಾಗಿದೆ. 'ಜೇಮ್ಸ್ ಬಾಂಡ್ ಥೀಮ್' ಅನ್ನು ಸಹ ಈ ವಿಡಿಯೋದ ಮಧ್ಯದಲ್ಲಿ ಕಾಣಬಹುದಾಗಿದೆ.
ಮುಂಬೈ ಪೊಲೀಸರ ಅಧಿಕೃತ ಟ್ವಿಟರ್ ಖಾತೆಯ ಪುಟದಲ್ಲಿ "ಬ್ಯಾಂಡ್, ಮುಂಬೈ ಪೋಲಿಸ್ ಬ್ಯಾಂಡ್! ನಿಮಗೆ ಪ್ರಸ್ತುತಪಡಿಸುತ್ತಿದೆ, ‘ಖಾಕಿ ಸ್ಟುಡಿಯೋ’ - ಮಾಂಟಿ ನಾರ್ಮನ್ ಅವರ ‘ಜೇಮ್ಸ್ ಬಾಂಡ್ ಥೀಮ್’ಗೆ ನಮ್ಮ ಕಡೆಯಿಂದ ಗೌರವ ಸಲ್ಲಿಸುತ್ತಿದ್ದೇವೆ. ಥೀಮ್ ಅನ್ನು ಹೆಡ್ ಕಾನ್ಸ್ಟೇಬಲ್ ಜಮೀರ್ ಶೇಖ್ ನಾಯಕತ್ವದಲ್ಲಿ ನಡೆಸಿ ಕೊಡಲಾಗಿದೆ", ಎಂದು ವಿಡಿಯೋ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
Band, Mumbai Police's Band!
Presenting to you, ‘Khaki Studio’ - A Tribute to Monty Norman’s ‘James Bond Theme’
Theme, arranged by Head Constable Zameer Shaikh. #KhakiStudio #MusicalMonday#MumbaiPoliceBand #JamesBond007 #JamesBondTheme https://t.co/hKThMhcxTP
— Mumbai Police (@MumbaiPolice) August 23, 2021
ವಿಡಿಯೋದಲ್ಲಿ ಪೊಲೀಸ್ ಅಧಿಕಾರಿಗಳು ಹಲವಾರು ಸಂಗೀತ ವಾದ್ಯಗಳೊಂದಿಗೆ ಐತಿಹಾಸಿಕ ಥೀಮ್ ಅನ್ನು ಸುಲಲಿತವಾಗಿ ನುಡಿಸಿರುವುದನ್ನು ಕಾಣಬಹುದು. ಈ ಥೀಮ್ 1962ರಲ್ಲಿ ಬಿಡುಗಡೆಯಾದ ಡಾ. ನೋ ನಂತರ ಪ್ರತಿ ಬಾಂಡ್ ಚಿತ್ರದಲ್ಲಿ ಇದನ್ನು ನಾವು ಕೇಳಬಹುದಾಗಿದೆ.
ವಿಡಿಯೋಗೆ ಪ್ರತಿಕ್ರಿಯಿಸಿದ ಟ್ವಿಟ್ಟರ್ ಬಳಕೆದಾರರು ತಮ್ಮ ಕಾರ್ಯಕ್ಷಮತೆಗಾಗಿ ಮುಂಬೈ ಪೊಲೀಸ್ ಅಧಿಕಾರಿಗಳನ್ನು ಶ್ಲಾಘಿಸಿದರು ಮತ್ತು ಇನ್ನೂ ಅನೇಕ ಬಾರಿ ಇಂತಹ ವೀಡಿಯೊಗಳಿಗೆ ಬೇಡಿಕೆ ಇಟ್ಟಿದ್ದನ್ನು ಕಾಣಬಹುದಾಗಿದೆ.
ಒಬ್ಬರು ಈ ವಿಡಿಯೋ ನೋಡಿ “ಹುಷಾರಾಗಿರಿ ಈ ಸಂಗೀತ ಈಗ ತುಂಬಾ ಕಡೆ ಕೇಳಲು ಸಿಗುತ್ತದೆ, ಮುಂಬೈ ಪೊಲೀಸ್ ಭಾರತದ ನಿಜವಾದ ಬಾಂಡ್” ಎಂದು ಬರೆದಿದ್ದಾರೆ. ಇನ್ನೊಬ್ಬರು ಇದನ್ನು ನೋಡಿ “ತುಂಬಾ ಅದ್ಬುತವಾಗಿದೆ ಸಂಗೀತ, ಮುಂಬೈ ಪೊಲೀಸರ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ” ಎಂದು ಬರೆದಿದ್ದಾರೆ.
ಯೂಟ್ಯೂಬ್‌ನಲ್ಲಿ ಹಾಕಿದಾಗಿನಿಂದಲೂ ಈ ವಿಡಿಯೋವನ್ನು ಐದು ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, ವೈರಲ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ